ಈ ವಾರ ಒಟಿಟಿಯಲ್ಲಿ ಬಿಡುಗಡೆ ಆದ ಸಿನಿಮಾಗಳು
ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ. ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ.
ಸಿನಿಮಾಗಳು ಚಿತ್ರಮಂದಿರ ದಾಟಿಕೊಂಡು ಒಟಿಟಿಗೆ ಬಂದಾಗಲಷ್ಟೆ ಕಾದು ನೋಡುವ ವೀಕ್ಷಕರ ಒಂದು ವರ್ಗವೂ ಇದೀಗ ಹುಟ್ಟಿಕೊಂಡಿದೆ. ಒಟಿಟಿ ನೀಡುವ ಆಯ್ಕೆಯ ಸ್ವಾತಂತ್ರ್ಯದ ಪ್ರತಿಫಲ ಇದು.
ಅಂತೆಯೇ ಒಟಿಟಿಗಳು ಸಹ ನಾ ಮುಂದು ತಾ ಮುಂದು ಎಂದು ತನ್ನ ಸಬ್‌ಸ್ಕ್ರೈಬರ್‌ಗಳಿಗೆ ಹೊಸ-ಹೊಸ ಸಿನಿಮಾಗಲು, ವೆಬ್ ಸರಣಿಗಳನ್ನು ನೀಡುತ್ತಿವೆ. ಇತ್ತೀಚೆಗಂತೂ ಈ ಸ್ಪರ್ಧೆ ಹೆಚ್ಚಾಗಿದೆ. ಸ್ಪರ್ಧೆ ಹೆಚ್ಚಾದಷ್ಟು ವೀಕ್ಷಕ ಪ್ರಭುವಿಗೆ ಒಳ್ಳೆಯ ಸಿನಿಮಾಗಳು ಬೆರಳ ತುದಿಯಲ್ಲಿಯೇ ಸಿಗುವಂತಾಗಿದೆ. ಇದೀಗ ಮತ್ತೊಂದು ವಾರಾಂತ್ಯ ಬಂದಿದ್ದು, ಒಟಿಟಿಗಳಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗುತ್ತಿವೆ. ಇಲ್ಲಿದೆ ಪಟ್ಟಿ...

ತೆಲುಗು ಭಾಷೆಯ ಸಿನಿಮಾಗಳು
ತೆಲುಗು ಭಾಷೆಯ ಎರಡು ಸಿನಿಮಾಗಳು ಈ ವಾರ ಒಟಿಟಿಗೆ ಬಂದಿವೆ. 'ಒಕೆ ಒಕ ಜೀವಿತಂ' ಸಿನಿಮಾ ಕೆಲವು ದಿನಗಳ ಹಿಂದೆ ಸೋನಿ ಲಿವ್‌ನಲ್ಲಿ ಬಿಡುಗಡೆ ಆಗಿದೆ. ಕಿರಣ್ ಅಬವರಾಮ್ ನಟನೆಯ 'ನೇನು ಮೀಕು ಬಾಗ ಕಾವಾಲ್ಸಿನೋಡ್ನಿ' ಸಿನಿಮಾ 'ಆಹಾ' ಒಟಿಟಿಯಲ್ಲಿ ತೆರೆಗೆ ಬಂದಿದೆ. ಶ್ರೀಧರ್ ಗದೆ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ 'ಅನ್‌ಸ್ಟಾಪೆಬಲ್ 2' ಟಾಕ್ ಶೋ ಸಹ ಈ ವಾರ ಆಹಾನಲ್ಲಿ ಬಿಡುಗಡೆ ಆಗಿದೆ. ಈ ಟಾಕ್ ಶೋ ಅನ್ನು ಬಾಲಕೃಷ್ಣ ನಡೆಸಿಕೊಡುತ್ತಿದ್ದಾರೆ.

ತಮಿಳಿನ ಹೊಸ ಸಿನಿಮಾಗಳು
ಸಿಂಭು ನಟಿಸಿ ಗೌತಮ್ ಮೆನನ್ ನಿರ್ದೇಶನ ಮಾಡಿರುವ ಸೂಪರ್ ಹಿಟ್ ಸಿನಿಮಾ 'ವೆಂದು ತನಿದೆತ್ತು ಕಾಡು' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಈ ವಾರ ಬಿಡುಗಡೆ ಆಗಿದೆ. ತಮಿಳು ಗ್ಯಾಂಗ್‌ಸ್ಟರ್ ಸಿನಿಮಾ ಇದಾಗಿದ್ದು, ಚಿತ್ರಮಂದಿರದಲ್ಲಿ ಸೂಪರ್ ಹಿಟ್ ಆಗಿದೆ. ತಮಿಳಿನ 'ಟ್ರಿಗರ್' ಸಿನಿಮಾ 'ಆಹಾ'ನಲ್ಲಿ ಬಿಡುಗಡೆ ಆಗಿದೆ. ಆಕ್ಷನ್ ಕಾಮಿಡಿ ಸಿನಿಮಾ 'ಬಫೂನ್' ನೆಟ್‌ಫ್ಲಿಕ್ಸ್‌ನಲ್ಲಿ ತೆರೆಗೆ ಬಂದಿದೆ. ಸಿನಿಮಾಕ್ಕೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿವೆ.

ಹಿಂದಿಯಲ್ಲಿ 'ದುಬಾರ' ಹಾಗೂ ಇತರೆ ಸಿನಿಮಾಗಳು
ತಾಪ್ಸಿ ಪನ್ನು ನಟಿಸಿ ಅನುರಾಗ್ ಕಶ್ಯಪ್ ನಿರ್ದೇಶಿಸಿರುವ 'ದೊಬಾರ' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಗೆ ಬಂದಿದೆ. ಫ್ರೆಂಚ್ ಸಿನಿಮಾದ ರೀಮೇಕ್ ಇದಾಗಿದ್ದು, ಮೂಲ ಸಿನಿಮಾ ಸಹ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ಹಿಂದಿಯ 'ಗುಡ್ ಬ್ಯಾಡ್ ಗರ್ಲ್' ಸಿನಿಮಾ ಸೋನಿ ಲಿವ್‌ನಲ್ಲಿ, 'ಕಹಾನಿ ರಬ್ಬರ್ ಬ್ಯಾಂಡ್ ಕೀ' ಸಿನಿಮಾ ಜೀ5 ನಲ್ಲಿ ತೆರೆಗೆ ಬಂದಿದೆ. ಅದರ ಹೊರತಾಗಿ ವೆಬ್ ಸರಣಿಗಳಾದ 'ಆಶಿಖಾನಾ 2', 'ಮಿಸ್ ಮ್ಯಾಚ್ಡ್ 2', 'ದಿ ಜರ್ನಿ ಆಫ್ ಇಂಡಿಯಾ' ಇನ್ನಿತರೆ ವೆಬ್ ಸರಣಿ, ಡಾಕ್ಯುಮೆಂಟರಿಗಳು ವಿವಿಧ ಒಟಿಟಿಗಳಲ್ಲಿ ಬಿಡುಗಡೆ ಆಗಿವೆ.

ಮಲಯಾಳಂ ಹಾಗೂ ಇತರೆ ಭಾಷೆ
ಮಲಯಾಳಂನ 'ಫಾಲ್ತು ಜಾನ್ವರ್' ಸಿನಿಮಾ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ತೆರೆಗೆ ಬಂದಿದೆ. ಪಶುವೈದ್ಯನೊಬ್ಬನ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಈಗಾಗಲೇ ವ್ಯಕ್ತವಾಗಿವೆ. ಗುಜರಾತಿನ 'ತೂ ರಾಜಾ ರೀ' ಗುಜರಾತಿ ಸಿನಿಮಾ ಜಿಯೋ ಸಿನಿಮಾ ಒಟಿಟಿಯಲ್ಲಿ ತೆರೆಗೆ ಬಂದಿದೆ. 'ಬ್ಯೂಮಕೇಶ್ ಹಾತ್ಯೊಮಂಚ' ಬೆಂಗಾಲಿ ಸಿನಿಮಾ ಹೈಚೋಯಿ ಒಟಿಟಿಯಲ್ಲಿ ಇದೇ ವಾರ ಬಿಡುಗಡೆ ಆಗಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಕತೆಯನ್ನು ಒಳಗೊಂಡಿದೆ. ಜೊತೆಗೆ ನೆಕ್ಟಲೈಟ್ ಕತೆಯೂ ಸಿನಿಮಾದಲ್ಲಿದೆ.


Click it and Unblock the Notifications











