ಈ ವೀಕೆಂಡ್‌ಗೆ ಒಟಿಟಿಯಲ್ಲಿ ರಿಲೀಸ್‌ ಆಗ್ತಿರೊ ಸಿನಿಮಾಗಳಿವು!

ಇತ್ತೀಚೆಗಿನ ದಿನಗಳಲ್ಲಿ ಸಿನಿ ಪ್ರೀಯರು ಥಿಯೇಟರ್‌ನಲ್ಲಿ ಯಾವ ಸಿನಿಮಾಗಳು ಬರುತ್ತೆ ಅಂತ ನೋಡುವುದರ ಜೊತೆಗೆ ಒಟಿಟಿನಲ್ಲಿ ಯಾವ ಚಿತ್ರಗಳು ಈ ವಾರ ತೆರೆಗೆ ಬರುತ್ತೆ ಅನ್ನೋದನ್ನು ಚಾಚು ತಪ್ಪದೇ ಗಮನಿಸುತ್ತಾರೆ. ಅದರಂತೆ ಒಟಿಟಿಯಲ್ಲಿ ಸಿನಿಮಾಗಳನ್ನು ನೋಡಿ ಸಮಯ ಕಳೆಯುತ್ತಾರೆ.

ಕೋರೊನಾ ಲಾಕ್‌ಡೌನ್ ಶುರುವಾದ ನಂತರದಲ್ಲಿ ಒಟಿಟಿಗೆ ಹೆಚ್ಚಿನ ಬೇಡಿಕೆ ಬಂದಿದ್ದು, ಜನ ಹೆಚ್ಚಾಗಿ ಈಗ ಒಟಿಟಿ ಸಿನಿಮಾಗಳನ್ನೆ ಮನೋರಂಜನೆಗೆ ಅವಲಂಬಿಸಿದ್ದಾರೆ. ಹೀಗಾಗಿ ಒಟಿಟಿಯಲ್ಲು ಸಾಲು ಸಾಲು ಸಿನಿಮಾಗಳು ಪ್ರತೀ ವಾರವೂ ರಿಲೀಸ್ ಆಗುತ್ತಿದೆ. ಜೊತೆಗೆ ಒಟಿಟಿ ವ್ಯಾಪ್ತಿಯೂ ದಿನದಿಂದ ದಿನಕ್ಕೆ ಹಿರಿದಾಗುತ್ತಿದೆ.

ಅಂತೆಯೇ ಈ ವಾರ ಕೂಡ ಒಟಿಟಿಯಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿದೆ. ಕನ್ನಡ, ಹಿಂದಿ ಸೇರಿದಂತೆ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ತುದಿಗಾಲಲ್ಲಿ ನಿಂತಿದ್ದೆ. ಹಾಗಿದ್ರೆ ಈ ವಾರ ರಿಲೀಸ್ ಆಗುತ್ತಿರುವ ಸಿನಿಮಾ ಯಾವುವು ಬನ್ನಿ ನೊಡೋಣ..

'ಲವ್ ಮಾಕ್ಟೆಲ್ 2' ಚಿತ್ರ ಒಟಿಟಿಯಲ್ಲಿ

'ಲವ್ ಮಾಕ್ಟೆಲ್ 2' ಚಿತ್ರ ಒಟಿಟಿಯಲ್ಲಿ

ಒಟಿಟಿಯಲ್ಲಿ ಕನ್ನಡ ಸಿನಿಮಾಗಳಿಗೆ ಮಾರ್ಕೆಟ್ ಕಮ್ಮಿ ಅನ್ನುವ ದಿನಗಳು ಇದ್ದವು. ಆದರೆ ಈಗ ಈ ಮಾತು ಬದಲಾಗಿದೆ. ಕನ್ನಡ ಸಿನಿಮಾಗಳು ಕೂಡ ಒಟಿಟಿಯಲ್ಲಿ ರಿಲೀಸ್ ಆಗಿ ವೀಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಅಂತೆಯೇ ಈ ಸೋಮವಾರ (ಮಾರ್ಚ್ 14) ಅಮೇಜಾನ್ ಪ್ರೈಮ್‌ನಲ್ಲಿ ಕನ್ನಡದ ಸೂಪರ್ ಹಿಟ್ ಸಿನಿಮಾ 'ಲವ್ ಮಾಕ್ಟೆಲ್ 2' ತೆರೆಕಂಡಿದೆ. ಡಾರ್ಲಿಂಗ್ ಕೃಷ್ಣ ನಿರ್ದೇಶನ ಮತ್ತು ಮಿಲನ ನಾಗರಾಜ್ ನಿರ್ಮಾಣದ ಈ ಚಿತ್ರ ಫೆಬ್ರವರಿ 11ಕ್ಕೆ ಥಿಯೇಟರ್‌ನಲ್ಲಿ ತೆರೆಕಂಡು ಒಳ್ಳೆ ಕಲೆಕ್ಷನ್ ಮಾಡಿತ್ತು. ಅದಾದ ಕೆಲವೇ ದಿನಗಳಲ್ಲಿ ಈಗ ಒಟಿಟಿಯಲ್ಲಿ ತೆರೆಕಂಡಿರುವ ಈ ಸಿನಿಮಾಗೆ ಒಟಿಟಿ ಆಡಿಯನ್ಸ್ ಕೂಡ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. 'ಲವ್ ಮಾಕ್ಟೆಲ್ 2' ಹೊರತು ಪಡಿಸಿ ಮತ್ಯಾವ ಕನ್ನಡ ಸಿನಿಮಾಗಳು ಈ ವಾರ ಒಟಿಟಿಯಲ್ಲಿ ತೆರೆಕಾಣುತ್ತಿಲ್ಲ.

ವಿದ್ಯಾಬಾಲನ್ ಅಭಿನಯದ ಸಿನಿಮಾ 'ಜಲ್ಸಾ'

ವಿದ್ಯಾಬಾಲನ್ ಅಭಿನಯದ ಸಿನಿಮಾ 'ಜಲ್ಸಾ'

ಬಾಲಿವುಡ್ ನಟಿ ವಿದ್ಯಾ ಬಾಲನ್ ಸಾಕಷ್ಟು ಮಹಿಳಾ ಪ್ರಧಾನ ಸಿನಿಮಾವನ್ನು ಈಗಾಗಲೇ ಮಾಡಿದ್ದಾರೆ. ಅದರಂತೆ ಅವರು ಅಭಿನಯಿಸಿರುವ ಮತ್ತೊಂದು ಮಹಿಳಾ ಪ್ರಧಾನ ಸಿನಿಮಾ 'ಜಲ್ಸಾ'. 'ಜಲ್ಸಾ' ಸಿನಿಮಾ ಥ್ರಿಲ್ಲರ್ ಕಥೆಯನ್ನು ಹೊತ್ತು ಬರುತ್ತಿದ್ದು, ವಿದ್ಯಾ ಬಾಲನ್ ಜೊತೆಗೆ ಶೆಫಾಲಿ ಶಾ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸುರೇಶ್ ತ್ರಿವೇಣಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದ್ದು, ಈ ಚಿತ್ರವು ಮಾರ್ಚ್ 18 ರಂದು ಒಟಿಟಿ ಫ್ಲಾಟ್ ಫಾರಮ್ ಅಮೆಜಾನ್ ಪ್ರೈಮ್ ನಲ್ಲಿ ತೆರೆಗೆ ಬರುತ್ತಿದೆ.

ಸಿನಿಮಾ ನೋಡಲು ಕಾತುರರಾಗಿರುವ ವೀಕ್ಷಕರು

ಸಿನಿಮಾ ನೋಡಲು ಕಾತುರರಾಗಿರುವ ವೀಕ್ಷಕರು

ಹಾಲಿವುಡ್‌ನ 'ಡೀಪ್ ವಾಟರ್' ಸಿನಿಮಾ ಕೂಡ ಒಟಿಟಿಯಲ್ಲಿ ತೆರೆಕಾಣುತ್ತಿದೆ. 'ಡೀಪ್ ವಾಟರ್' ಚಿತ್ರವೂ ಕೌಟುಂಬಿಕ ಕಥೆಯನ್ನು ಹೊತ್ತು ಬರ್ತಿದೆ. ಒಂದು ಕುಟುಂಬದಲ್ಲಿ ಗಂಡ ಹೆಂಡತಿ ನಡುವೆ ನಡೆಯುವ ಮನಸ್ತಾಪ ಹೇಗೆ ನೀರಿನಲ್ಲಿ ಮುಳುಗಿದಾಗ ಉಸಿರುಗಟ್ಟುವ ಅನುಭವ ಆಗುತ್ತೆ ಅನ್ನೋದನ್ನ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಬೆನ್ ಅಫ್ಲೆಕ್ ಮತ್ತು ಅನಾ ಡಿ ಅರ್ಮಾಸ್ ನಟಿಸಿದ್ದಾರೆ. ಈ ಸಿನಿಮಾ ಮಾರ್ಚ್ 18 ರಂದು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಪ್ರೀಮಿಯರ್ ಆಗುತ್ತಿದೆ.

ಥಿಯೇಟರ್‌ನಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದ ಚಿತ್ರ

ಥಿಯೇಟರ್‌ನಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದ ಚಿತ್ರ

'ಸೆಬಾಸ್ಟಿಯನ್ ಪಿಸಿ 524' ಒಂದು ಆಕ್ಷನ್ ಡ್ರಾಮಾ ಸಿನಿಮಾವಾಗಿದ್ದು, ಕಿರಣ್ ಅಬ್ಬಾವರಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಸೆಬಾಸ್ಟಿಯನ್ ಪಿಸಿ 524' ಚಿತ್ರದಲ್ಲಿ ಕಿರಣ್ ರಾತ್ರಿ ಅಂಧ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ಕಿರಣ್ ಅಬ್ಬಾವರಂ ಒಬ್ಬ ಪೊಲೀಸ್ ಅಧಿಕಾರಿಯಾಗಿ ಸವಾಲನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನೋದೇ ಈ ಸಿನಿಮಾದ ಇಂಟ್ರಸ್ಟಿಂಗ್ ಕಥೆ. 'ಸೆಬಾಸ್ಟಿಯನ್ ಪಿಸಿ 524' ಸಿನಿಮಾ ಕೂಡ ಮಾರ್ಚ್ 18 ರಂದು ಆಹಾ ವೀಡಿಯೊದಲ್ಲಿ ತೆರೆಕಾಣುತ್ತಿದೆ. ಇದು ಥಿಯೇಟರ್‌ನಲ್ಲಿ ಮಾರ್ಚ್ 4ರಂದು ಬಿಡುಗಡೆಯಾಗಿತ್ತು. ಕೇವಲ 2 ವಾರಗಳಲ್ಲೆ ಚಿತ್ರ ಒಟಿಟಿಗೆ ಎಂಟ್ರಿ ಕೊಡಲಿದೆ.

ಒಟಿಟಿಯಲ್ಲಿ ತೆರೆಕಾಣುತ್ತಿದೆ ಮಲಯಾಳಂನ 'ಸೆಲ್ಯೂಟ್'

ಒಟಿಟಿಯಲ್ಲಿ ತೆರೆಕಾಣುತ್ತಿದೆ ಮಲಯಾಳಂನ 'ಸೆಲ್ಯೂಟ್'

'ಸೆಲ್ಯೂಟ್' ಮಲಯಾಳಂನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಕ್ರೈಮ್ ಥ್ರಿಲ್ಲರ್ ಜಾನರ್‌ನ ಕಥೆಯನ್ನು ಹೊತ್ತು ಈ ಸಿನಿಮಾ ತಯಾರಾಗಿದ್ದು, ರೋಶನ್ ಆಂಡ್ರ್ಯೂಸ್ ನಿರ್ದೇಶನ ಈ ಸಿನಿಮಾಗಿದೆ. ದುಲ್ಕರ್ ಸಲ್ಮಾನ್ ಪೋಲೀಸ್ ಪಾತ್ರದಲ್ಲಿ ನಟಿಸಿರುವ ಸಿನಿಮಾ ಇದಾಗಿದ್ದು, ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವೇಫೇರರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ದುಲ್ಕರ್ ಸಲ್ಮಾನ್ ನಿರ್ಮಿಸಿದ ಈ ಚಿತ್ರಕ್ಕೆ ಅಸ್ಲಂ ಕೆ ಪುರೈಲ್ ಅವರ ಛಾಯಾಗ್ರಹಣವಿದೆ, ಎ. ಶ್ರೀಕರ್ ಪ್ರಸಾದ್ ಸಂಕಲನವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಸಂತೋಷ್ ನಾರಾಯಣನ್ ಅವರು ಮೂಲ ಹಿನ್ನೆಲೆ ಸಂಗೀತ ಸಂಯೋಜನೆ ಇದೆ. ಈ ಚಿತ್ರವು ಮಾರ್ಚ್ 18 ರಂದು ಸೋನಿ ಲಿವ್ ನಲ್ಲಿ ಪ್ರಸಾರವಾಗಲಿದೆ.

ಸುಂದರ ಪ್ರೇಮ ಕಥೆ ಹೊತ್ತು ಬರ್ತಿದೆ ಸಿನಿಮಾ!

ಸುಂದರ ಪ್ರೇಮ ಕಥೆ ಹೊತ್ತು ಬರ್ತಿದೆ ಸಿನಿಮಾ!

'ಲಲಿತಂ ಸುಂದರಂ' ಮಲಯಾಳಂ ಸಿನಿಮಾವಾಗಿದ್ದು,ಲವ್, ಹಾಸ್ಯ ಪ್ರಧಾನ ಚಿತ್ರ ಇದಾಗಿದೆ. ಬಿಜು ಮೆನನ್, ಮಂಜು ವಾರಿಯರ್ ಮತ್ತು ಇತರರು ಪ್ರಮುಖ ಪಾತ್ರಗಳದಲ್ಲಿ ನಟಿಸಿದ್ದು,ಈ ಸಿನಿಮಾ ಕೂಡ ಮಾರ್ಚ್ 18 ರಂದು ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ತೆರೆಕಾಣುತ್ತಿದೆ.

More from Filmibeat

English summary
Here’s the list of titles premiering on top OTT platforms like Netflix, Amazon Prime, Disney Hotstar, and others this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X