ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ನೋಡಬೇಕಾದ ಸಿನಿಮಾಗಳಿವು

ಕೊರೊನಾ ನಿಯಂತ್ರಣ ಮಾಡುವ ಸಲುವಾಗಿ ಸರ್ಕಾರವು ವೀಕೆಂಡ್ ಲಾಕ್‌ಡೌನ್ ಹೇರಿದೆ. ಹೊರಗೆ ಬಹುತೇಕ ಅಂಗಡಿ, ಮುಂಗಟ್ಟುಗಳು, ಮನರಂಜನಾ ಕೇಂದ್ರಗಳು ಬಂದ್ ಆಗಿವೆ. ಬಾರ್-ರೆಸ್ಟೊರೆಂಟ್‌ಗಳಲ್ಲಿಯೂ ಕುಳಿತುಕೊಳ್ಳಲಷ್ಟೆ ಅವಕಾಶ ಹೀಗಿದ್ದಾಗ ವಾರಾಂತ್ಯವನ್ನು ಮನೆಯಲ್ಲಿಯೇ ಕಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ವಾರಾಂತ್ಯದಲ್ಲಿ ಚಿತ್ರಮಂದಿರಗಳು ಬಂದ್ ಆಗಿವೆ. ಕೊರೊನಾ ಭೀತಿಯ ನಡುವೆ ಹೊಸ ಸಿನಿಮಾಗಳು ಸಹ ಬಿಡುಗಡೆ ಆಗುತ್ತಿಲ್ಲ. ಹಾಗಾಗಿ ಸಿನಿಮಾ ಮನರಂಜನೆಗಾಗಿ ಎಲ್ಲರೂ ಮತ್ತೆ ಒಟಿಟಿ ಅಥವಾ ಟಿವಿಗಳತ್ತ ತಿರುಗಿ ನೋಡಬೇಕಾಗಿದೆ. ಟಿವಿಗಳಲ್ಲಿ ಕೊರೊನಾ ಅಬ್ಬರವೇ ಜೋರಾಗಿದೆ. ಅಲ್ಲದೆ ಟಿವಿಗಳಲ್ಲಿ ನಮ್ಮಿಷ್ಟದ ಸಿನಿಮಾ, ವೆಬ್ ಸರಣಿ ವೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ಮನರಂಜನೆಗೆ ಸೂಕ್ತವಾದ ಸ್ಥಳ ಒಟಿಟಿ.

ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ನೋಡಬಹುದಾದ, ನೋಡಬೇಕಾದ ಕೆಲವು ಸಿನಿಮಾಗಳ ಪಟ್ಟಿ ಇಲ್ಲಿದೆ. ಹೊಸ ಸಿನಿಮಾಗಳ ಜೊತೆಗೆ ಕೆಲವು ಹಳೆಯ ಸಿನಿಮಾಗಳ ಪಟ್ಟಿಯನ್ನೂ ಇಲ್ಲಿ ನೀಡಲಾಗಿದೆ. ನೋಡಿಲ್ಲವಾದರೆ ವೀಕ್ಷಿಸಿ...

ಜೀನಲ್ಲಿ 'ಭಜರಂಗಿ 2'

ಜೀನಲ್ಲಿ 'ಭಜರಂಗಿ 2'

ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಜೀ5 ಕನ್ನಡದಲ್ಲಿ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆ ಆದ ದಿನ ಪುನೀತ್ ರಾಜ್‌ಕುಮಾರ್ ನಿಧನ ಹೊಂದಿದ್ದರು. ಇದು ಸಿನಿಮಾಕ್ಕೆ ಬಹಳ ದೊಡ್ಡ ಪೆಟ್ಟು ಕೊಟ್ಟಿತ್ತು. ಸಿನಿಮಾ ಚಿತ್ರಮಂದಿರದಲ್ಲಿ ಓಡಿರಲಿಲ್ಲ. ಆದರೆ ಇದೀಗ ಇದೇ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆಗಿದ್ದು, ಈಗಾಗಲೇ 3 ಕೋಟಿಗೂ ಹೆಚ್ಚು ಮಂದಿ ಒಟಿಟಿಯಲ್ಲಿ ಸಿನಿಮಾ ವೀಕ್ಷಿಸಿದ್ದಾರೆ.

ಮಡ್‌ರೇಸ್ ರೋಚಕತೆಯ 'ಮಡ್ಡಿ'

ಮಡ್‌ರೇಸ್ ರೋಚಕತೆಯ 'ಮಡ್ಡಿ'

ಮಡ್ ರೇಸ್‌ ಕತೆಯುಳ್ಳ ಕನ್ನಡ ಸಿನಿಮಾ 'ಮಡ್ಡಿ' ಕಳೆದ ತಿಂಗಲೇ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಸಿನಿಮಾದ ಟ್ರೇಲರ್ ಬಹುವಾಗಿ ಸೆಳೆದಿತ್ತು. ಸಿನಿಮಾದಲ್ಲಿ ಮೊದಲ ಬಾರಿಗೆ ಮಡ್ ರೇಸ್‌ನ ಕತೆಯನ್ನು ರೋಚಕವಾಗಿ ಹೇಳಲಾಗಿದೆ. ಡಾ ಪ್ರಗಬಾಲ್ ನಿರ್ದೇಶನದ ಈ ಸಿನಿಮಾದಲ್ಲಿ ಯುವನ್ ಕೃಷ್ಣ, ರಿಧನ್ ಕೃಷ್ಣ, ಸುರೇಶ್ ಅನುಶಾ ಇನ್ನೂ ಹಲವರು ನಟಿಸಿದ್ದಾರೆ. ರವಿ ಬಸ್ರೂರು ಸಂಗೀತ ಸಿನಿಮಾದ ಕಲಶ. ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ.

ಸಂಚಾರಿ ವಿಜಯ್‌ರ 'ಪುಗ್ಸಟ್ಟೆ ಲೈಫು'

ಸಂಚಾರಿ ವಿಜಯ್‌ರ 'ಪುಗ್ಸಟ್ಟೆ ಲೈಫು'

ದಿವಂಗತ ನಟ ಸಂಚಾರಿ ವಿಜಯ್ ನಟನೆಯ 'ಪುಗ್ಸಟ್ಟೆ ಲೈಫು' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಸಾಧಾರಾಣ ಮಟ್ಟದ ಪ್ರದರ್ಶನ ಕಂಡಿತ್ತು. ಸಿನಿಮಾದ ಬಗ್ಗೆ ಬಹಳ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿದ್ದವು. ಆದರೆ ಸಿನಿಮಾ ಚಿತ್ರಮಂದಿರದಲ್ಲಿ ಹಿಟ್ ಆಗಲಿಲ್ಲ. ಆದರೆ ಇದೀಗ ಇದೇ ಸಿನಿಮಾ ಜೀ5 ಒಟಿಟಿಯಲ್ಲಿದ್ದು, ಸಿನಿಮಾವನ್ನು ಕುಟುಂಬದೊಡನೆ ವೀಕ್ಷಿಸಬಹುದಾಗಿದೆ. ಸಿನಿಮಾದಲ್ಲಿ ಸಂಚಾರಿ ವಿಜಯ್ ನಟನೆ ಅದ್ಭುತ, ಸಿನಿಮಾದ ನಿರ್ದೇಶನ ಮಾಡಿರುವುದು ಅರವಿಂದ ಕುಪ್ಲಿಕರ್. ಸಿನಿಮಾದಲ್ಲಿ ಅಚ್ಯುತ್ ಕುಮಾರ್, ರಂಗಾಯಣ ರಘು ನಟಿಸಿದ್ದಾರೆ.

'ನಮ್ಮ ಫ್ಲಿಕ್ಸ್' ನಲ್ಲಿ ಪ್ರಿಯಾಂಕಾ ಉಪೇಂದ್ರ

'ನಮ್ಮ ಫ್ಲಿಕ್ಸ್' ನಲ್ಲಿ ಪ್ರಿಯಾಂಕಾ ಉಪೇಂದ್ರ

ನಟಿ ಪ್ರಿಯಾಂಕಾ ಉಪೇಂದ್ರ ಪ್ರಧಾನ ಪಾತ್ರದಲ್ಲಿ ನಟಿಸಿರುವ '1980' ಸಿನಿಮಾ 'ನಮ್ಮ ಫ್ಲಿಕ್ಸ್' ಒಟಿಟಿಯಲ್ಲಿ ಅಕ್ಟೋಬರ್‌ನಲ್ಲಿಯೇ ಬಿಡುಗಡೆ ಆಗಿದೆ. 'ನಮ್ಮ ಫ್ಲಿಕ್ಸ್' ಕನ್ನಡಕ್ಕೇ ಒಟಿಟಿ ಆಗಿದ್ದು, ಉಪೇಂದ್ರ ಅವರೇ ಈ ಹಿಂದೆ ಒಟಿಟಿಯನ್ನು ಲಾಂಚ್ ಮಾಡಿದ್ದರು. ಇದೇ ಒಟಿಟಿ ಮೂಲಕ ಇದೀಗ '1980' ಸಿನಿಮಾ ಬಿಡುಗಡೆ ಆಗಿದೆ.

ಅಮೆಜಾನ್‌ನಲ್ಲಿ 'ಸೀತಾರಾಮ್ ಬಿನೋಯ್'

ಅಮೆಜಾನ್‌ನಲ್ಲಿ 'ಸೀತಾರಾಮ್ ಬಿನೋಯ್'

ವಿಜಯ ರಾಘವೇಂದ್ರ ನಟನೆಯ 'ಸೀತಾರಾಮ್ ಬಿನೋಯ್' ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ಸಿನಿಮಾವು ಅಪರಾಧ ಮತ್ತು ತನಿಖೆಯ ಕತೆಯನ್ನು ಹೊಂದಿದ್ದು, ಚಿತ್ರಮಂದಿರ ಹಾಗೂ ಟಿವಿಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಿತ್ತು. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಕೇಳಿ ಬಂದಿದ್ದವು. ಸಿನಿಮಾದಲ್ಲಿ ವಿಜಯ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅಮೆಜಾನ್‌ ಪ್ರೈಂನಲ್ಲಿ ವಿಜಯ ರಾಘವೇಂದ್ರ ಅವರ ಸಹೋದರ ಶ್ರೀಮುರಳಿಯ 'ಮದಗಜ' ಸಿನಿಮಾ ಸಹ ಇದೆ.

'ಪುಷ್ಪ' ಸಿನಿಮಾ ಬಿಡುಗಡೆ ಆಗಿದೆ

'ಪುಷ್ಪ' ಸಿನಿಮಾ ಬಿಡುಗಡೆ ಆಗಿದೆ

ಡಿಸೆಂಬರ್ 7 ರಂದು ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಬಿಡುಗಡೆ ಆಗಿದೆ. ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದ್ದು, ತೆಲುಗು ಮಾತ್ರವೇ ಅಲ್ಲದೆ ಕನ್ನಡ, ಹಿಂದಿ, ತಮಿಳು ಮಲಯಾಳಂ ಭಾಷೆಗಳಲ್ಲಿ ವೀಕ್ಷಣೆಗೆ ಲಭ್ಯವಿದೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಡಾಲಿ ಧನಂಜಯ್, ಸುನಿಲ್ ಹಾಗೂ ಫಹಾದ್ ಫಾಸಿಲ್ ಅವರುಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸುಕುಮಾರ್ ಈ ಸಿನಿಮಾ ನಿರ್ದೇಶನ ಮಾಡಿದ್ದು ಡಿಸೆಂಬರ್ 17 ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ.

More from Filmibeat

English summary
Here is the list of some good movies which are streaming on OTT. Movies list to watch this weekend on OTT.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X