twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಕ್ಕೊಂದು ಅಮೆಜಾನ್, ನೆಟ್‌ಫ್ಲಿಕ್ಸ್ ಮಾದರಿ ಓಟಿಟಿ, ಸದ್ದಿಲ್ಲದೆ ನಡೆಯುತ್ತಿದೆ ಪ್ರಯತ್ನ

    |

    ಅಮೆಜಾನ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, ಸನ್‌ಎಕ್ಸ್‌ ಹೀಗೆ ಹಲವು ಓಟಿಟಿಗಳು ವಿಶ್ವದಾದ್ಯಂತ ಖ್ಯಾತವಾಗಿವೆ. ಸಿನಿಮಾ ಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವರಿಗಿಂತಲೂ ಹೆಚ್ಚಿನ ಮಂದಿ ಈ ಓಟಿಟಿಗಳಲ್ಲಿ ಸಿನಿಮಾ ನೋಡುತ್ತಿದ್ದಾರೆ.

    ಆದರೆ ಈ ಓಟಿಟಿಗಳಲ್ಲಿ ಕನ್ನಡದ ಕಂಟೆಂಟ್ ಹೆಚ್ಚಿಗೆ ಇಲ್ಲ. ಅಥವಾ ಕನ್ನಡದ ಎಲ್ಲಾ ಸಿನಿಮಾಗಳು, ಧಾರವಾಹಿಗಳು ಇಲ್ಲಿ ಲಭ್ಯವಿಲ್ಲ. ಕನ್ನಡದ ಎಲ್ಲಾ ಒಳ್ಳೆಯ ಸಿನಿಮಾ, ಧಾರವಾಹಿ, ವೆಬ್‌ಸೀರೀಸ್‌ ಒಂದೇ ಓಟಿಟಿ ಅಡಿಯಲ್ಲಿ ದೊರಕುವಂತಾದರೆ??

    ಯೋಚನೆಯೇ ಅದ್ಭುತವಾಗಿದೆಯಲ್ಲವೇ! ಈ ನಿಟ್ಟಿನಲ್ಲಿ ಪ್ರಯತ್ನ ಈಗಾಲಗೇ ಆರಂಭವಾಗಿಬಿಟ್ಟಿದೆ. ಅಮೆಜಾನ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್ ಮಾದರಿಯಲ್ಲಿ ಕನ್ನಡದ ಕಂಟೆಂಟ್‌ಗಳಿಗಾಗಿಯೇ ಪ್ರತ್ಯೇಕ ಓಟಿಟಿ ನಿರ್ಮಾಣದ ಬಗ್ಗೆ ಚರ್ಚೆ ಆರಂಭವಾಗಿದ್ದು, ಕೆಲವೇ ತಿಂಗಳಲ್ಲಿ ಕನಸು ನನಸಾಗುವ ಸಂಭವ ಇದೆ.

    ಆನ್‌ಲೈನ್ ಸಮೀಕ್ಷೆ ನಡೆದಿದೆ

    ಆನ್‌ಲೈನ್ ಸಮೀಕ್ಷೆ ನಡೆದಿದೆ

    ಭಿನ್ನಮಾದರಿಯ ಸಿನಿಮಾಗಳಿಂದ ಈಗಾಗಲೇ ಗಮನಸೆಳೆದಿರುವ ನಿರ್ದೇಶಕ ಪವನ್ ಕುಮಾರ್, ಕನ್ನಡಕ್ಕೆ ಪ್ರತ್ಯೇಕ ಓಟಿಟಿಯ ಅಗತ್ಯತೆಯ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಬರೆದಿದ್ದು, ವಿಡಿಯೋಗಳನ್ನು ಸಹ ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾ-ಧಾರವಾಹಿ ವೀಕ್ಷಣೆ ಕುರಿತ ಆನ್‌ಲೈನ್ ಸಮೀಕ್ಷೆಯನ್ನೂ ಅವರು ಮಾಡಿದ್ದಾರೆ.

    ಪ್ರಸಿದ್ಧ ಮಾದರಿಯ ಕತೆಗಳನ್ನೇ ಕೇಳುತ್ತಾರೆ

    ಪ್ರಸಿದ್ಧ ಮಾದರಿಯ ಕತೆಗಳನ್ನೇ ಕೇಳುತ್ತಾರೆ

    ಈಗಾಗಲೇ ಖ್ಯಾತವಾಗಿರುವ ಕ್ರೈಂ, ಆಕ್ಷನ್, ಥ್ರಿಲ್ಲರ್ ಮಾದರಿಯ ಕತೆಗಳುಳ್ಳ ಸಿನಿಮಾ, ವೆಬ್ ಸೀರೀಸ್ ಅನ್ನೇ ಕನ್ನಡದಲ್ಲಿ ಮಾಡಿಕೊಡುವಂತೆ ನೆಟ್‌ಫ್ಲಿಕ್ಸ್, ಅಮೆಜಾನ್‌ಗಳು ಕೇಳುತ್ತಿವೆ. ಹೀಗಾದಾಗ ಕನ್ನಡದ ಮೂಲ ಕತೆಗಳಿಗೆ ಸ್ಥಳವೇ ಇಲ್ಲದಾಗುತ್ತದೆ. ಹಾಗಾಗಿ ಕನ್ನಡಕ್ಕೆ ಅದರದ್ದೇ ಆದ ಪ್ರತ್ಯೇಕ ಓಟಿಟಿ ಬೇಕೆನ್ನುತ್ತಾರೆ ಪವನ್ ಕುಮಾರ್.

    ರಾಜ್ಯದ ಜನಸಂಖ್ಯೆ 0.2% ಮಂದಿ 1000 ಕೊಟ್ಟರೆ ಸಾಕು

    ರಾಜ್ಯದ ಜನಸಂಖ್ಯೆ 0.2% ಮಂದಿ 1000 ಕೊಟ್ಟರೆ ಸಾಕು

    ಪವನ್ ಕುಮಾರ್ ಮುಂದಿಟ್ಟಿರುವ ಐಡಿಯಾ ಪ್ರಕಾರ ರಾಜ್ಯದ ಒಟ್ಟು ಜನಸಂಖ್ಯೆಯ 0.2% ಮಂದಿ ವರ್ಷಕ್ಕೆ 1000 ನೀಡಿದರೆ ವರ್ಷಕ್ಕೆ 12 ಸಿನಿಮಾ ತಯಾರಿಸಿ ಉಚಿತವಾಗಿ ಜನರಿಗೆ ನೋಡಲು ನೀಡಬಹುದು. ಹಣ ಗಳಿಸುವ ಸಾಧ್ಯತೆಯೂ ಇದೆ. ಅದರಿಂದ ಹಣ ಸಂಪಾದಿಸುವ ಸಾಧ್ಯತೆಯೂ ಇದೆ. 12 ಹೊಸ, ಭಿನ್ನ ಮಾದರಿಯ, ಉತ್ತಮ ಸಿನಿಮಾಗಳು ತಯಾರಾಗುತ್ತವೆ. ಅವು ಕನ್ನಡತನವನ್ನು ಹೊಂದಿದ ಸಿನಿಮಾಗಳಾಗಿರುತ್ತವೆ. ಹೊಸ ಪ್ರತಿಭೆಗಳು ಹೊರಬರಲು ಸಹ ಅವು ಸಹಾಯ ಮಾಡುತ್ತವೆ. ಹೀಗೆ ಸಾಗುತ್ತದೆ ಪವನ್ ಕುಮಾರ್ ವಿಶ್ಲೇಷಣೆ.

    ಪವನ್ ಕುಮಾರ್ ಐಡಿಯಾಕ್ಕೆ ಮೆಚ್ಚುಗೆ

    ಪವನ್ ಕುಮಾರ್ ಐಡಿಯಾಕ್ಕೆ ಮೆಚ್ಚುಗೆ

    ಪವನ್ ಕುಮಾರ್ ಅವರ ಐಡಿಯಾಕ್ಕೆ ಹಲವು ಮಂದಿ ಮೆಚ್ಚುಗೆ ಸೂಚಿಸಿದ್ದು, ತಾವು ಹಣ ಹೂಡುವುದಾಗಿ ಮುಂದೆ ಬಂದಿದ್ದಾರೆ. ಕನ್ನಡಕ್ಕೆ ಪ್ರತ್ಯೇಕ ಓಟಿಟಿ ಮಾಡುವ ಪ್ರಯತ್ನದ ಮುಂದಾಳತ್ವವನ್ನು ತಾವೇ ವಹಿಸುವುದಾಗಿ ಪವನ್ ಹೇಳಿದ್ದಾರೆ ಆದಷ್ಟು ಶೀಘ್ರದಲ್ಲಿ ಈ ಪ್ರಯತ್ನ ಆರಂಭವಾಗಬಹುದು.

    ಆರ್‌.ಜೆ.ಪ್ರದೀಪ್ ಸಹ ಈ ಬಗ್ಗೆ ಮಾತನಾಡಿದ್ದರು

    ಆರ್‌.ಜೆ.ಪ್ರದೀಪ್ ಸಹ ಈ ಬಗ್ಗೆ ಮಾತನಾಡಿದ್ದರು

    ಇನ್ನು ಆರ್‌.ಜೆ.ಪ್ರದೀಪ್ ಸಹ ಕೆಲವು ದಿನಗಳ ಹಿಂದೆ ಕನ್ನಡಕ್ಕಾಗಿ ಪ್ರತ್ಯೇಕ ಓಟಿಟಿ ಅವಶ್ಯಕತೆ ಕುರಿತು ಮಾತನಾಡಿದ್ದರು. ಕನ್ನಡಕ್ಕೆ ಪ್ರತ್ಯೇಕ ಓಟಿಟಿ ಬಂದರೆ ಕನ್ನಡದ ಗುಣಮಟ್ಟದ ಕಂಟೆಂಟ್ ಸುಲಭವಾಗಿ ಮೊಬೈಲ್‌ಗೆ ಧಕ್ಕುವಂತಾಗುತ್ತದೆ.

    English summary
    Amazon, Netflix like OTT for Kannada content only. Talks are happening about this. Director Pawan Kumar pitched idea f Kannada OTT and people loving it.
    Monday, May 18, 2020, 17:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X