ಒಟಿಟಿ ಅವಾರ್ಡ್ಸ್ 2023: ರಾಷ್ಟ್ರೀಯ ಪ್ರಶಸ್ತಿ ಬಳಿಕ ಮತ್ತೊಂದು ಗರಿ ಮುಡಿಗೇರಿಸಿಕೊಂಡ '777 ಚಾರ್ಲಿ'
ಸಿನಿಮಾ ರಂಗ, ಕಿರುತೆರೆಗಳಿಗೆ ಪ್ರಶಸ್ತಿಗಳಿರುವಂತೆ ಒಟಿಟಿ ವೇದಿಕೆಗೂ ಪ್ರಶಸ್ತಿಯಿದ್ದು, ಒಟಿಟಿ ಅವಾರ್ಡ್ಸ್ 2023 ರ ವಿಜೇತರನ್ನು ಭಾನುವಾರ ಘೋಷಿಸಲಾಗಿದೆ. ಈ ಬಾರಿ ಪ್ರಶಸ್ತಿಗಳಲ್ಲಿ ಬಾಚಿಕೊಂಡಿರುವುದರಲ್ಲಿ ಫರ್ಜಿ, ಡಾರ್ಲಿಂಗ್ಸ್, ಮೋನಿಕಾ ಓ ಮೈ ಡಾರ್ಲಿಂಗ್ ಮತ್ತು 777 ಚಾರ್ಲಿ ಕೂಡ ಸೇರಿಕೊಂಡಿದೆ.
ಅತ್ಯುತ್ತಮ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದ ಕನ್ನಡದ 777 ಚಾರ್ಲಿ ಮತ್ತೆ ಒಟಿಟಿಯಲ್ಲೂ ಹೊಸ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಒಟಿಟಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಆಲಿಯಾ ಭಟ್ ಮತ್ತು ಶೆಫಾಲಿ ಶಾ ಅವರ 'ಡಾರ್ಲಿಂಗ್ಸ್' ಪಡೆದರೆ, ಅತ್ಯುತ್ತಮ ವೆಬ್ ಸರಣಿ ಪ್ರಶಸ್ತಿಯನ್ನು 'ಅಯಾಲಿ' ಪಡೆದುಕೊಂಡಿದೆ.

ಗನ್ಸ್ & ಗುಲಾಬ್ಸ್ ಮತ್ತು ಮೋನಿಕಾ ಓ ಮೈ ಡಾರ್ಲಿಂಗ್ ಸಿನಿಮಾಗಾಗಿ ರಾಜ್‌ಕುಮಾರ್ ರಾವ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. ತಾಜ್: ಡಿವೈಡೆಡ್ ಬೈ ಬ್ಲಡ್ ಅಂಡ್ ಜುಬಿಲಿ ವೆಬ್ ಸೀರಿಸ್‌ನಲ್ಲಿನ ನಟನೆಗಾಗಿ ಮಹಿಳಾ ವಿಭಾಗದಲ್ಲಿ ಅದಿತಿ ರಾವ್ ಹೈದರಿ ಅತ್ಯುತ್ತಮ ನಟಿ ಪ್ರಸಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಒಟಿಟಿ ಪ್ರಶಸ್ತಿ ಪಡೆದ ಸಂಪೂರ್ಣ ವಿಜೇತರ ಪಟ್ಟಿ ಇಲ್ಲಿದೆ
ಅತ್ಯುತ್ತಮ ಚಿತ್ರ: ಡಾರ್ಲಿಂಗ್ಸ್
ಅತ್ಯುತ್ತಮ ವೆಬ್ ಸರಣಿ: ಅಯಾಲಿ
ಅತ್ಯುತ್ತಮ ನಿರ್ದೇಶಕ (ಚಲನಚಿತ್ರ): ಅರಿಯಿಪ್ಪು - ಮಹೇಶ್ ನಾರಾಯಣನ್
ಅತ್ಯುತ್ತಮ ನಿರ್ದೇಶಕ (ಸರಣಿ): ರಾಜ್ ಮತ್ತು ಡಿಕೆ (ಫರ್ಜಿ) ಮತ್ತು ದಯಾ ಚಿತ್ರಕ್ಕಾಗಿ ಪವನ್ ಸಾದಿನೇನಿ
ಸತ್ಯ ಘಟನೆಗಳ ಮೇಲಿನ ಅತ್ಯುತ್ತಮ ಚಲನಚಿತ್ರ: ಸಿರ್ಫ್ ಏಕ್ ಬಂದಾ ಕಾಫಿ ಹೈ
ಅತ್ಯುತ್ತಮ ಚಿತ್ರಕಥೆ: ಮೋನಿಕಾ ಓ ಮೈ ಡಾರ್ಲಿಂಗ್ (ಲೇಖಕ ಯೋಗೇಶ್ ಚಂಡೇಕರ್)

ಅತ್ಯುತ್ತಮ ಚಿತ್ರಕಥೆ - (ವೆಬ್ ಸೀರಿಸ್) : ಕೊಹ್ರಾ (ಬರಹಗಾರರು ಡಿಗ್ಗಿ ಸಿಸೋಡಿಯಾ ಮತ್ತು ಗುಂಜಿತ್ ಚೋಪ್ರಾ)
ಅತ್ಯುತ್ತಮ ಖಳನಟ - (ವೆಬ್ ಸೀರಿಸ್ ): ಶೈತಾನ್- ರಿಷಿ
ಕಾಮಿಕ್ ಪಾತ್ರದಲ್ಲಿ ಅತ್ಯುತ್ತಮ ನಟ - ಸೀರಿಸ್: ಎಕೆನ್ ಬಾಬು S6 ಗಾಗಿ ಅನಿರ್ಬನ್ ಚಕ್ರವರ್ತಿ
ಒಟಿಟಿ ಅತ್ಯಂತ ಭರವಸೆಯ ನಟ - ರಾಣಾ ನಾಯ್ಡು- ರಾಣಾ ದಗ್ಗುಬಾಟಿ
ಒಟಿಟಿ ಅತ್ಯಂತ ಭರವಸೆಯ ನಟಿ : ಸ್ಕೂಪ್- ಕರಿಷ್ಮಾ ತನ್ನಾ
ಅತ್ಯುತ್ತಮ ಪೋಷಕ ನಟ (ಸಿನಿಮಾ): ಶರೀಬ್ ಹಶ್ಮಿ - ತರ್ಲಾ
ಅತ್ಯುತ್ತಮ ಪೋಷಕ ನಟಿ (ಸಿನಿಮಾ): ಗ್ಯಾಸ್‌ಲೈಟ್- ಚಿತ್ರಾಂಗದಾ ಸಿಂಗ್
ಅತ್ಯುತ್ತಮ ಪೋಷಕ ನಟ (ವೆಬ್ ಸೀರಿಸ್): ಫರ್ಜಿಗಾಗಿ ಭುವನ್ ಅರೋರಾ ಮತ್ತು ಜುಬಿಲಿಗಾಗಿ ಪ್ರೊಸೆನ್‌ಜಿತ್ ಚಟರ್ಜಿ
ಅತ್ಯುತ್ತಮ ಪೋಷಕ ನಟಿ (ವೆಬ್ ಸೀರಿಸ್): ಮೋನಾ ಸಿಂಗ್ - ಮೇಡ್ ಇನ್ ಹೆವೆನ್
ಅದ್ಭುತ ನಟ - ಜುಬಿಲಿ- ಸಿಧಂತ್ ಗುಪ್ತಾ
ಅದ್ಭುತ ನಟಿ- ಟ್ರಯಲ್ ಬೂ ಫೈಯರ್- ರಾಜಶ್ರೀ ದೇಶಪಾಂಡೆ
ಬಹುಮುಖ ನಟ: ಬ್ಲರ್- ಅಭಿಲಾಷ್ ಥಪ್ಲಿಯಾಲ್
ಬಹುಮುಖ ನಟಿ: ಮಾಡರ್ನ್ ಲವ್ ಚೆನ್ನೈ ಮತ್ತು ಜುಬಿಲಿ- ವಾಮಿಕಾ ಗಬ್ಬಿ
ಹೊಸ ಅಲೆ ಸಿನಿಮಾ: 777 ಚಾರ್ಲಿ- ರಕ್ಷಿತ್ ಶೆಟ್ಟಿ
ಬೆಸ್ಟ್ ಡೆಬ್ಯೂ ನಟ (ವೆಬ್ ಸೀರಿಸ್): ದಯಾ- ಜೆಡಿ ಚಕ್ರವರ್ತಿ
ಬೆಸ್ಟ್ ಡೆಬ್ಯೂ ನಟಿ (ವೆಬ್ ಸೀರಿಸ್) : ದಿ ಟ್ರಯಲ್ - ಕಾಜೋಲ್
ವರ್ಷದ ಒಟಿಟಿ ಅತ್ಯುತ್ತಮ ನಟ: ಗನ್ಸ್ ಮತ್ತು ಗುಲಾಬ್ಸ್ ಮತ್ತು ಮೋನಿಕಾ ಓ ಮೈ ಡಾರ್ಲಿಂಗ್ ಸಿನಿಮಾಗಾಗಿ ರಾಜ್‌ಕುಮಾರ್ ರಾವ್
ವರ್ಷದ ಒಟಿಟಿ ಅತ್ಯುತ್ತಮ ನಟಿ: ತಾಜ್ ಮತ್ತು ಜುಬಿಲಿ ಅಭಿನಯಕ್ಕಾಗಿ ಅದಿತಿ ರಾವ್ ಹೈದರಿ
ಬೆಸ್ಟ್ ಡೆಬ್ಯೂ ನಟಿ (ಸಿನಿಮಾ): ಫ್ರೆಡ್ಡಿ - ಅಲಯಾ ಎಫ್
ಬೆಸ್ಟ್ ಡೆಬ್ಯೂ ನಟ (ಸಿನಿಮಾ) ಕ್ವಾಲಾ- ಬಾಬಿಲ್ ಖಾನ್
ಅತ್ಯುತ್ತಮ ನಟ( ಚಲನಚಿತ್ರ) - ಎಡಿಟರ್ ಚಾಯ್ಸ್: ಹಡ್ಡಿ- ನವಾಜುದ್ದೀನ್ ಸಿದ್ದಿಕಿ
ಅತ್ಯುತ್ತಮ ನಟಿ (ಚಲನಚಿತ್ರ): ಎಡಿಟರ್ ಚಾಯ್ಸ್: ಕಥಲ್- ಸನ್ಯಾ ಮಲ್ಹೋತ್ರಾ ಮತ್ತು ಅಮ್ಮು - ಐಶ್ವರ್ಯ ಲಕ್ಷ್ಮಿ
ಅತ್ಯುತ್ತಮ ನಟ (ವೆಬ್ ಸೀರಿಸ್) ಎಡಿಟರ್ ಚಾಯ್ಸ್: ರಾಕೆಟ್ ಬಾಯ್ಸ್ - ಜಿಮ್ ಸರ್ಭ್
ಅತ್ಯುತ್ತಮ ನಟ (ವೆಬ್ ಸೀರಿಸ್) ಜನಪ್ರಿಯ ಆಯ್ಕೆ: ದಿ ನೈಟ್ ಮ್ಯಾನೇಜರ್- ಅನಿಲ್ ಕಪೂರ್
ಅತ್ಯುತ್ತಮ ನಟಿ (ವೆಬ್ ಸೀರಿಸ್) - ಎಡಿಟರ್ ಚಾಯ್ಸ್: ದಿ ನೈಟ್ ಮ್ಯಾನೇಜರ್ ಮತ್ತು ಮೇಡ್ ಇನ್ ಹೆವೆನ್‌ಗಾಗಿ ಸೋಭಿತಾ ಧೂಳಿಪಾಲ
ಅತ್ಯುತ್ತಮ ನಟಿ (ವೆಬ್ ಸೀರಿಸ್) ಜನಪ್ರಿಯ ಆಯ್ಕೆ: ದಹಾಡ್- ಸೋನಾಕ್ಷಿ ಸಿನ್ಹಾ
ಅತ್ಯುತ್ತಮ ನಟ (ಚಲನಚಿತ್ರ) ಜನಪ್ರಿಯ ಆಯ್ಕೆ: ಕಾರ್ತಿಕ್ ಆರ್ಯನ್ - ಫ್ರೆಡ್ಡಿ
ಅತ್ಯುತ್ತಮ ನಟಿ (ಚಲನಚಿತ್ರ) ಜನಪ್ರಿಯ ಆಯ್ಕೆ: ಛತ್ರಿವಾಲಿ- ರಾಕುಲ್ ಪ್ರೀತ್ ಸಿಂಗ್


Click it and Unblock the Notifications











