OTT Releases This Week : 'ಜೇಮ್ಸ್' ಜೊತೆಗೆ Ott ಯಲ್ಲಿ ರಿಲೀಸ್ ಆಗುತ್ತಿರುವ ಚಿತ್ರಗಳು!

ವಾರಾಂತ್ಯ ಬಂದು ಅಂದ್ರೆ ಸಾಕು, ಮನೋರಂಜನೆಗಾಗಿ ಜನರು ಹೊಸ ಸಿನಿಮಾಗಳು ಮತ್ತು ಸೀರಿಸ್ ಯಾವುದು ರಿಲೀಸ್ ಇದೆ ಎನ್ನುವುದನ್ನು ಹುಡುಕುತ್ತಾರೆ. ಶುಕ್ರವಾರ ಚಿತ್ರಮಂದಿರದಲ್ಲಿ ಸಿನಿಮಾಗಳು ರಿಲೀಸ್ ಆದರೆ, ಓಟಿಟಿಯಲ್ಲೂ ಒಂದಷ್ಟು ಚಿತ್ರಗಳು ತೆರೆಗೆ ಬರುತ್ತವೆ.

ಒಟಿಟಿಯಲ್ಲಿ ರಿಲೀಸ್ ಆಗುವ ಚಿತ್ರಗಳ ಸಂಖ್ಯೆ ಹೆಚ್ಚಾಗಿದೆ. ವಾರಾಂತ್ಯ ಬಂತೂ ಅಂದರೆ ಒಂದಲ್ಲ ಒಂದು ಚಿತ್ರಗಳು ಒಟಿಟಿಯಲ್ಲಿ ರಿಲೀಸ್ ಆಗುತ್ತವೆ. ಇನ್ನು ಒಟಿಟಿಯಲ್ಲಿ ಬಂದ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸು ಕೂಡ ಕಾಣುತ್ತಿವೆ. ಸಿನಿಮಾವನ್ನು ಥಿಯೇಟರ್‌ನಲ್ಲಿ ಹೋಗಿಯೇ ನೋಡಬೇಕು ಎನ್ನುವ ಕಾನ್ಸೆಪ್ಟ್ ಈಗ ಉಳಿದಿಲ್ಲ. ಒಟಿಟಿಯಲ್ಲಿ ಸಿನಿಮಾಗಳನ್ನು ನೋಡಲು ಜನ ಅಭ್ಯಾಸ ಮಾಡಿಕೊಂಡಿದ್ದಾರೆ. ಹಾಗಾಗಿ ಸಿನಿಮಾ ನಿರ್ಮಾಪಕರು ಕೂಡ ಒಟಿಟಿಗಾಗಿಯೇ ಸಿನಿಮಾಗಳನ್ನು ಮಾಡುತ್ತಿದ್ದಾರೆ.

ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ತೆರೆಗೆ ಬರುತ್ತಾ ಇರುವ ಚಿತ್ರಗಳ ಪಟ್ಟಿ ಇಲ್ಲಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಚಿತ್ರದ ಒಟಿಟಿಯಲ್ಲಿ ನಿಮ್ಮ ಮನೆ, ಮನಕ್ಕೆ ಬರಲು ಸಜ್ಜಾಗಿದೆ. ಇದರ ಜೊತೆಗೆ ಯಾವೆಲ್ಲ ಚಿತ್ರಗಳು ಈ ವಾರ ರಿಲೀಸ್ ಆಗುತ್ತಿವೆ ಎನ್ನುವ ಬಗ್ಗೆ ಡೀಟೈಲ್ಸ್ ಇಲ್ಲಿದೆ. ಮುಂದೆ ಓದಿ...

Ottಯಲ್ಲಿ 'ಜೇಮ್ಸ್' ರಿಲೀಸ್!

Ottಯಲ್ಲಿ 'ಜೇಮ್ಸ್' ರಿಲೀಸ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಜೇಮ್ಸ್' ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡವರು, ಈಗ ಓಟಿಟಿಯಲ್ಲಿ ನೋಡ ಬಹುದು. ಇದೆ ಏಪ್ರಿಲ್ 14ಕ್ಕೆ ಜೇಮ್ಸ್ ಸೋನಿ ಲೈವ್‌ನಲ್ಲಿ ತೆರೆಗೆ ಬರಲಿದೆ. ಮಾರ್ಚ್ 17ರಂದು ಪುನೀತ್‌ ರಾಜ್‌ಕುಮಾರ್ ಹುಟ್ಟು ಹಬ್ಬಕ್ಕೆ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಕನ್ನಡ ಪ್ರೇಕ್ಷಕರು ತಮ್ಮ ನೆಚ್ಚಿನ ಸ್ಟಾರ್‌ಗೆ ಗೌರವ ಸಲ್ಲಿಸುವ ಮೂಲಕ ಚಿತ್ರವನ್ನು ಗಲ್ಲಾಪೆಟ್ಟಿಗೆಯಲ್ಲಿ ಗೆಲ್ಲಿಸಿದ್ದಾರೆ. ಚೇತನ್ ಕುಮಾರ್, ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾ ಆನಂದ್, ಪುನೀತ್ ರಾಜ್ ಕುಮಾರ್‌ಗೆ ನಾಯಕಿಯಾಗಿ ನಟಿಸಿದ್ದಾರೆ.

ಏಪ್ರಿಲ್ 14ಕ್ಕೆ ರಶ್ಮಿಕಾ ಮಂದಣ್ಣ ಚಿತ್ರ!

ಏಪ್ರಿಲ್ 14ಕ್ಕೆ ರಶ್ಮಿಕಾ ಮಂದಣ್ಣ ಚಿತ್ರ!

ನಟಿ ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಚಿತ್ರ 'ಆಡವಾಳು ಮೀಕು ಜೋಹರ್ಲು' ಕೂಡ ಈ ವಾರಾಂತ್ಯಕ್ಕೆ ತೆರೆಗೆ ಬರಲಿದೆ. ಈ ಚಿತ್ರ ಬಾಕ್ಸಾಫೀಸ್‌ನಲ್ಲಿ ಅಷ್ಟಾಗಿ ಸದ್ದು ಮಾಡಲಿಲ್ಲ. ಈಗ ಒಟಿಟಿ ಮೂಲಕ ದಾಖಲೆ ಬರೆಯಲು ಸಿದ್ಧವಾಗಿದೆ. ತಿರುಮಲ ಕಿಶೋರ್ ನಿರ್ದೇಶಿಸಿದ ಈ ಚಿತ್ರದಲ್ಲಿ ಶರ್ವಾನಂದ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯಿಸಿದ್ದಾರೆ. ಏಪ್ರಿಲ್ 14ಕ್ಕೆ ಈ ಚಿತ್ರ ಸೋನಿ ಲೈವ್‌ನಲ್ಲಿ ರಿಲೀಸ್ ಆಗುತ್ತಿದೆ.

ಒಟಿಟಿಗೆ ಅಕ್ಷಯ್ ಕುಮಾರ್ ಸಿನಿಮಾ!

ಒಟಿಟಿಗೆ ಅಕ್ಷಯ್ ಕುಮಾರ್ ಸಿನಿಮಾ!

ನಟ ಅಕ್ಷಯ್ ಕುಮಾರ್ ಮತ್ತು ಕೃತಿ ಸನೊನ್ ಅಭಿನಯದ 'ಬಚ್ಚನ್ ಪಾಂಡೆ' ಚಿತ್ರ ಕೂಡ ಏಪ್ರಿಲ್ 15ಕ್ಕೆ ಒಟಿಟಿಗೆ ಬರಲಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರ ಮಾರ್ಚ್ 18ಕ್ಕೆ ಚಿತ್ರ ಮಂದಿರಗಳಲ್ಲಿ ರಿಲೀಸ್ ಆಗಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಈ ಚಿತ್ರ ಹೆಚ್ಚಿನ ಗಳಿಕೆ ಮಾಡಲಿಲ್ಲ. ಈಗ ಒಟಿಟಿ ಮೂಲಕ ದಾಖಲೆ ಮಾಡಲು ಸಜ್ಜಾಗಿದೆ.

ಗಾಲಿವಾನ, ದಿ ಬ್ಲಡಿ ಮೇರಿ ಏಪ್ರಿಲ್ 15ಕ್ಕೆ!

ಗಾಲಿವಾನ, ದಿ ಬ್ಲಡಿ ಮೇರಿ ಏಪ್ರಿಲ್ 15ಕ್ಕೆ!

ಇನ್ನು ಜೀ 5ನಲ್ಲಿ 'ಗಾಲಿವಾನ' ವೆಬ್ ಸರಣಿ ರಿಲೀಸ್ ಆಗುತ್ತಿದೆ. ಹಾಗೆ ಆಹಾದಲ್ಲಿ ಡ್ರಾಮಾ ಥ್ರಿಲ್ಲರ್ ಕಥೆಯುಳ್ಳ 'ದಿ ಬ್ಲಡಿ ಮೇರಿ' ರಿಲೀಸ್ ಆಗುತ್ತಿದೆ. ಒಟ್ಟರೆ ಈ ವಾರ ಅಮೆಜಾನ್, ನೆಟ್‌ಫ್ಲಿಕ್ಸ್, ಜೀ 5, ಆಹಾದಲ್ಲಿ ಚಿತ್ರಗಳು ರಿಲೀಸ್ ಆಗುತ್ತಿವೆ. ಇದರೊಂದಿಗೆ ಏಪ್ರಿಲ್ 15ಕ್ಕೆ ಹಿಂದಿಯ 'ಮಾಯಿ' ರಿಲೀಸ್ ಆಗುತ್ತಿದೆ. ಈ ಚಿತ್ರ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿದೆ.

More from Filmibeat

English summary
OTT Release Films On This Weekend April 14 And 15th, James, Bachchan Pandey In List
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X