twitter
    For Quick Alerts
    ALLOW NOTIFICATIONS  
    For Daily Alerts

    2020: ಚಿಕ್ಕ ಪರದೆ ಮೂಲಕ ದೊಡ್ಡ ಪ್ರಭಾವ ಬೀರಿದ ಸಿನಿಮಾಗಳು

    |

    ಮನೊರಂಜನಾ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದ ವರ್ಷ 2020. ಹೊಸ ಸಿನಿಮಾಕ್ಕೆ ಚಿತ್ರಮಂದಿರಗಳನ್ನೇ ಅವಲಂಬಿಸಿದ್ದ ಸಿನಿಪ್ರಿಯರು, ಮೊಬೈಲ್‌ನಲ್ಲಿಯೇ ಹೊಸ ಸಿನಿಮಾಗಳನ್ನು ನೋಡುವಂತಾಯಿತು.

    ಸಿನಿಮಾ ರಂಗದಲ್ಲಿ ಭಾರಿ ಚರ್ಚೆಯನ್ನೇ ಹುಟ್ಟುಹಾಕಿದೆ ಒಟಿಟಿ. ಚಿತ್ರಮಂದಿರಗಳಿಗೆ ಪರ್ಯಾಯ ಈ ಒಟಿಟಿಗಳು ಎಂಬ ಮಟ್ಟಿಗೆ ಚರ್ಚೆ ಎದ್ದಿದೆ. ಈ ವರ್ಷದಲ್ಲಿ ಒಟಿಟಿಯ ಶಕ್ತಿ ಸಿನಿಮಾ ರಂಗದವರಿಗೆ ಅರಿವಾಗಿದೆ. ಹಲವು ಒಟಿಟಿಗಳು ಈ ವರ್ಷ ಆರಂಭಗೊಂಡಿವೆ. ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾಗಳು ನೇರ ಒಟಿಟಿಗೆ ಬಿಡುಗಡೆ ಆಗಿವೆ, ಗಮನವನ್ನೂ ಸೆಳೆದಿವೆ.

    2020 ಕನ್ನಡ ಚಿತ್ರರಂಗ; ಕೊರೊನಾ ವರ್ಷದಲ್ಲಿ ತೆರೆಕಂಡ ಕನ್ನಡ ಸಿನಿಮಾಗಳು2020 ಕನ್ನಡ ಚಿತ್ರರಂಗ; ಕೊರೊನಾ ವರ್ಷದಲ್ಲಿ ತೆರೆಕಂಡ ಕನ್ನಡ ಸಿನಿಮಾಗಳು

    ಕನ್ನಡದ ಕೆಲವು ಸಿನಿಮಾಗಳು ಒಟಿಟಿಯಲ್ಲಿ ಬಹುವಾಗಿ ಗಮನ ಸೆಳೆದಿವೆ. ಕೆಲವು ಕನ್ನಡ ಸಿನಿಮಾಗಳು ಮಾತ್ರವೇ ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಕಂಡಿವೆ. ಕನ್ನಡ ಸೇರಿದಂತೆ ಈ ವರ್ಷ ಒಟಿಟಿಯಲ್ಲಿ ಬಿಡುಗಡೆ ಆಗಿ ಗಮನ ಸೆಳೆದ ಸಿನಿಮಾಗಳ ಪಟ್ಟಿ ಇಲ್ಲಿದೆ.

    ಒಟಿಟಿಯಲ್ಲಿ ಹಿಟ್ ಆದ ಲವ್ ಮಾಕ್ಟೇ-ದಿಯಾ

    ಒಟಿಟಿಯಲ್ಲಿ ಹಿಟ್ ಆದ ಲವ್ ಮಾಕ್ಟೇ-ದಿಯಾ

    ಇದೇ ವರ್ಷಾರಂಭದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ ಲವ್ ಮಾಕ್ಟೆಲ್ ಹಾಗೂ ದಿಯಾ ಸಿನಿಮಾಗಳು ಚಿತ್ರಮಂದಿರದಲ್ಲಿ ಅಷ್ಟಾಗಿ ಗಮನ ಸೆಳೆಯದಿದ್ದರೂ. ಒಟಿಟಿಯಲ್ಲಿ ಬಹುಜನರನ್ನು ಸೆಳೆಯಿತು. ಕೊರೊನಾ ಲಾಕ್‌ಡೌನ್ ಆರಂಭದಲ್ಲಿ ಈ ಸಿನಿಮಾಗಳು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆದವು, ಹಾಗೂ ಲಕ್ಷಾಂತರ ಮಂದಿ ಎರಡೂ ಸಿನಿಮಾಗಳನ್ನು ವೀಕ್ಷಿಸಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ಸಿನಿಮಾರಂಗಕ್ಕೆ ಒಟಿಟಿ ಶಕ್ತಿಯನ್ನು ಪರಿಚಯಿಸಿದ್ದು ಈ ಎರಡು ಸಿನಿಮಾಗಳು.

     ಪುನೀತ್ ರಾಜ್‌ಕುಮಾರ್ ನಿರ್ಮಾಣದ ಫ್ರೆಂಚ್ ಬಿರಿಯಾನಿ-ಲಾ

    ಪುನೀತ್ ರಾಜ್‌ಕುಮಾರ್ ನಿರ್ಮಾಣದ ಫ್ರೆಂಚ್ ಬಿರಿಯಾನಿ-ಲಾ

    ಪುನೀತ್ ರಾಜ್‌ಕುಮಾರ್ ನಿರ್ಮಾಣದ ಫ್ರೆಂಚ್ ಬಿರಿಯಾನಿ ಹಾಗೂ ಲಾ ಸಿನಿಮಾಗಳು ಅಮೆಜಾನ್ ಪ್ರೈಂ ನಲ್ಲಿ ನೇರವಾಗಿ ಬಿಡುಗಡೆ ಆದವು. ಫ್ರೆಂಚ್ ಬಿರಿಯಾನಿ ಸಿನಿಮಾ ಅಂತೂ ಅಮೆಜಾನ್ ಪ್ರೈಂನಲ್ಲಿ ಹೆಚ್ಚು ವೀಕ್ಷಣೆಯಾದ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿತು. ಇನ್ನು ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಪ್ರಜ್ವಲ್ ನಟಿಸಿದ್ದ 'ಲಾ' ಸಿನಿಮಾ ಸಹ ಗಮನ ಸೆಳೆಯಿತು.

    2020 ರಲ್ಲಿ ಬಾಲಿವುಡ್‌ ಕಳೆದುಕೊಂಡ ತಾರೆಗಳೆಷ್ಟು? ಇಲ್ಲಿದೆ ಪಟ್ಟಿ2020 ರಲ್ಲಿ ಬಾಲಿವುಡ್‌ ಕಳೆದುಕೊಂಡ ತಾರೆಗಳೆಷ್ಟು? ಇಲ್ಲಿದೆ ಪಟ್ಟಿ

    ಭೀಮಸೇನ ನಳಮಹರಾಜ-ನವರತ್ನ-ಮನೆ ನಂಬರ್ 13

    ಭೀಮಸೇನ ನಳಮಹರಾಜ-ನವರತ್ನ-ಮನೆ ನಂಬರ್ 13

    ರಕ್ಷಿತ್ ಶೆಟ್ಟಿಯವರ ಪರಮ್ಹ ಸ್ಟುಡಿಯೋಸ್ ಹಾಗೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಪುಷ್ಕರ್ ಸಿನಿಮಾಸ್ ವತಿಯಿಂದ ನಿರ್ಮಿಸಲಾಗಿದ್ದ ಭೀಮಸೇನ ನಳಮಹರಾಜ ಸಿನಿಮಾ ಸಹ ಅಮೆಜಾನ್ ನಲ್ಲಿ ನೇರವಾಗಿ ಬಿಡುಗಡೆಯಾಗಿ ಮಿಶ್ರ ಪ್ರತಿಕ್ರಿಯೆ ಗಳಿಸಿತು. ನವರತ್ನ ಸಿನಿಮಾ ಸಹ ಒಟಿಟಿಯಲ್ಲಿ ಬಿಡುಗಡೆ ಆಯಿತಾದರೂ ಹೆಚ್ಚು ಸೆಳೆಯಲಿಲ್ಲ. ಇನ್ನು ಮನೆ ನಂ 13 ಡಿಸೆಂಬರ್ ನಲ್ಲಿ ಬಿಡುಗಡೆ ಆಗಿದ್ದು, ಉತ್ತಮ ವಿಮರ್ಶೆಗಳು ಕೇಳಿಬರುತ್ತಿವೆ.

    ಗಮನ ಸೆಳೆದ ಇತರ ಭಾಷೆ ಸಿನಿಮಾಗಳು

    ಗಮನ ಸೆಳೆದ ಇತರ ಭಾಷೆ ಸಿನಿಮಾಗಳು

    ತಮಿಳಿನ 'ಪೊನ್ಮಗಳ್ ವಂದಾಳ್', 'ಸೂರರೈ ಪೊಟ್ರು', 'ಪುತ್ತು ಪುದು ಕಾಲಂ' ಸಿನಿಮಾಗಳು ನೇರವಾಗಿ ಒಟಿಟಿಗೆ ಬಿಡುಗಡೆ ಆಗಿ ಜನರ ಮೆಚ್ಚುಗೆಯನ್ನೂ ಗಳಿಸಿದವು. ತೆಲುಗಿನ 'ನಿಶ್ಯಬ್ದಂ', 'ಕಲರ್ ಫೊಟೊ', ಪೆಂಗ್ವಿನ್‌, ವಿ, ಸಿನಿಮಾಗಳಿಗೆ ಮೆಚ್ಚುಗೆ ವ್ಯಕ್ತವಾಯಿತು. ಒಟಿಟಿಯಲ್ಲಿ ನೇರವಾಗಿ ಬಿಡುಗಡೆ ಆದ ಮಲಯಾಳಂ ನ 'ಸಿ ಯು ಸೂನ್' ಸಿನಿಮಾ ಜನರ ಮೆಚ್ಚುಗೆ ಗಳಿಸಿತು.

    2020ರಲ್ಲಿ ಹೆಚ್ಚು ಹುಡುಕಲ್ಪಟ್ಟ 10 ನಟಿಯರು: ಸನ್ನಿ ಲಿಯೋನ್‌ಗೆ ಎಷ್ಟನೇ ಸ್ಥಾನ?2020ರಲ್ಲಿ ಹೆಚ್ಚು ಹುಡುಕಲ್ಪಟ್ಟ 10 ನಟಿಯರು: ಸನ್ನಿ ಲಿಯೋನ್‌ಗೆ ಎಷ್ಟನೇ ಸ್ಥಾನ?

    ದಾಖಲೆ ಬರೆದ ದಿಲ್ ಬೇಚಾರಾ-ಲಕ್ಷ್ಮಿ

    ದಾಖಲೆ ಬರೆದ ದಿಲ್ ಬೇಚಾರಾ-ಲಕ್ಷ್ಮಿ

    ಸುಶಾಂತ್ ಸಿಂಗ್ ನಟನೆಯ ಕೊನೆಯ ಸಿನಿಮಾ 'ದಿಲ್ ಬೇಚಾರ' ಒಟಿಟಿಯಲ್ಲಿ ಬಿಡುಗಡೆ ಕಂಡು ದಾಖಲೆಯ ವೀಕ್ಷಣೆಯನ್ನು ಪಡೆಯಿತು. ಅಕ್ಷಯ್ ಕುಮಾರ್ ನಟನೆಯ 'ಲಕ್ಷ್ಮಿ' ಸಿನಿಮಾ ಸಹ ಹಾಟ್‌ಸ್ಟಾರ್ ನಲ್ಲಿ ಬಿಡುಗಡೆಯಾಗಿ ಮೊದಲ ದಿನವೇ ಅತಿ ಹೆಚ್ಚು ಜನರಿಂದ ನೋಡಲ್ಪಟ್ಟ ಸಿನಿಮಾ ಎಂಬ ದಾಖಲೆ ಬರೆಯಿತು. ಅಮಿತಾಬ್ ನಟನೆಯ ಗುಲಾಬೊ-ಸಿತಾಬೊ, ಲೂಡೊ, ಖಾಲಿ-ಪೀಲಿ, ದಿ ಸೀರಿಯಸ್ ಮ್ಯಾನ್ ಸಿನಿಮಾಗಳು ಸಹ ಗಮನ ಸೆಳೆದವು. ಸಡಕ್ 2 ಸಿನಿಮಾ ಇನ್ನಿಲ್ಲದಂತೆ ನೆಲಕಚ್ಚಿತು.

    English summary
    Many movies in several language released on OTT platform this year. Here is the list of movies which grab the attention.
    Wednesday, December 9, 2020, 10:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X