ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಹಲವು ಸಿನಿಮಾ: ನಿಮ್ಮ ಆಯ್ಕೆ ಯಾವುದು?
ಚಿತ್ರಮಂದಿರಗಳಿಗೆ ಪ್ರಬಲ ಪೈಪೋಟಿಯನ್ನೇ ಒಟಿಟಿ ನೀಡುತ್ತಿದೆ. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚ್ರಾಯ ಸ್ಥಿತಿ ತಲುಪಿದ್ದ ಒಟಿಟಿ ಈಗ ಹಲವು ಜನರ ಮನೊರಂಜನೆಯ ಪ್ರಮುಖ ಮಾಧ್ಯಮವಾಗಿ ಮಾರ್ಪಟ್ಟಿದೆ.
ಸಿನಿಮಾಗಳು ಚಿತ್ರಮಂದಿರ ದಾಟಿಕೊಂಡು ಒಟಿಟಿಗೆ ಬಂದಾಗಲಷ್ಟೆ ಕಾದು ನೋಡುವ ವೀಕ್ಷಕರ ಒಂದು ವರ್ಗವೂ ಇದೀಗ ಹುಟ್ಟಿಕೊಂಡಿದೆ. ಒಟಿಟಿ ನೀಡುವ ಆಯ್ಕೆಯ ಸ್ವಾತಂತ್ರ್ಯದ ಪ್ರತಿಫಲ ಇದು.
ಅಂತೆಯೇ ಒಟಿಟಿಗಳು ಸಹ ನಾ ಮುಂದು ತಾ ಮುಂದು ಎಂದು ತನ್ನ ಸಬ್‌ಸ್ಕ್ರೈಬರ್‌ಗಳಿಗೆ ಹೊಸ-ಹೊಸ ಸಿನಿಮಾಗಲು, ವೆಬ್ ಸರಣಿಗಳನ್ನು ನೀಡುತ್ತಿವೆ. ಇತ್ತೀಚೆಗಂತೂ ಈ ಸ್ಪರ್ಧೆ ಹೆಚ್ಚಾಗಿದೆ. ಸ್ಪರ್ಧೆ ಹೆಚ್ಚಾದಷ್ಟು ವೀಕ್ಷಕ ಪ್ರಭುವಿಗೆ ಒಳ್ಳೆಯ ಸಿನಿಮಾಗಳು ಬೆರಳ ತುದಿಯಲ್ಲಿಯೇ ಸಿಗುವಂತಾಗಿದೆ. ಇದೀಗ ಮತ್ತೊಂದು ವಾರಾಂತ್ಯ ಬಂದಿದ್ದು, ಒಟಿಟಿಗಳಲ್ಲಿ ಹಲವು ಸಿನಿಮಾಗಳು, ವೆಬ್ ಸರಣಿಗಳು ಬಿಡುಗಡೆ ಆಗುತ್ತಿವೆ. ಇಲ್ಲಿದೆ ಪಟ್ಟಿ...

ವೂಟ್‌ನಲ್ಲಿ ಪೆಟ್ರೊಮ್ಯಾಕ್ಸ್
ನಟ ವಿಜಯ್ ಅಭಿನಯಿಸಿ, ವಿಜಯೇಂದ್ರ ಪ್ರಸಾದ್ ನಿರ್ದೇಶನದ 'ಪೆಟ್ರೊಮ್ಯಾಕ್ಸ್' ಸಿನಿಮಾ ಒಟಿಟಿಗೆ ಬರುತ್ತಿದೆ. ಕಳೆದ ತಿಂಗಳು 15 ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ಕಾಣಲಿಲ್ಲ. ಸೋಲಿನ ಜವಾಬ್ದಾರಿಯನ್ನು ತಾವೇ ಹೊರುವುದಾಗಿ ವಿಜಯೇಂದ್ರ ಪ್ರಸಾದ್ ಟ್ವೀಟ್ ಸಹ ಮಾಡಿದ್ದರು. ಇದೀಗ 'ಪೆಟ್ರೋಮ್ಯಾಕ್ಸ್' ಸಿನಿಮಾ ವೂಟ್‌ನಲ್ಲಿ ಆಗಸ್ಟ್ 26 ತೆರೆ ಕಂಡಿದೆ.

ಹಿಂದಿಯ ಮೂರು ವೆಬ್‌ಸರಣಿಗಳು
ಹಿಂದಿಯ ಮೂರು ಜನಪ್ರಿಯ ವೆಬ್‌ಸರಣಿಯ ಹೊಸ ಸೀಸನ್‌ಗಳು ಬಿಡುಗಡೆ ಆಗಿವೆ. ಸೋನಿ ಲಿವ್‌ನಲ್ಲಿ 'ಮಹಾರಾಣಿ' ಎರಡನೇ ಸೀಸನ್ ಬಿಡುಗಡೆ ಆಗಿದೆ. ಎಮ್ಮಿ ಪ್ರಶಸ್ತಿ ವಿಜೇತ 'ಡೆಲ್ಲಿ ಕ್ರೈಮ್ಸ್' ವೆಬ್ ಸರಣಿಯ ಎರಡನೇ ಸೀಸನ್ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಗೆ ಬಂದಿದೆ. ಪಂಕಜ್ ತ್ರಿಪಾಠಿ ನಟನೆಯ 'ಕ್ರಿಮಿನಲ್ ಜಸ್ಟಿಸ್: ಅಧುರಾ ಸಚ್' ವೆಬ್ ಸರಣಿಯ ಎರಡನೇ ಸೀಸನ್ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಆಗಸ್ಟ್ 26 ರಂದು ಬಿಡುಗಡೆ ಆಗಿದೆ.

ಕ್ರೈಂ ಥ್ರಿಲ್ಲರ್ ಹಿಟ್ ಸಿನಿಮಾ ಬಿಡುಗಡೆ
ಕಳೆದ ತಿಂಗಳು ಹದಿನೈದರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದ 'ಹಿಟ್' ಸಿನಿಮಾ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ತೆರೆಗೆ ಬರಲಿದೆ. ತೆಲುಗಿನ ಹಿಟ್ ಸಿನಿಮಾದ ರೀಮೇಕ್ ಆಗಿರುವ ಈ ಸಿನಿಮಾ ಅದೇ ಹೆಸರಿನಲ್ಲಿ ಹಿಂದಿಗೆ ರೀಮೇಕ್ ಆಗಿತ್ತು. ರಾಜ್‌ಕುಮಾರ್ ರಾವ್ ಹಾಗೂ ಸಾನ್ಯಾ ಮಲ್ಹೋತ್ರಾ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವು ನೆಟ್‌ಫ್ಲಿಕ್ಸ್‌ನಲ್ಲಿ ಆಗಸ್ಟ್ 28 ರಂದು ತೆರೆ ಕಾಣಲಿದೆ.


Click it and Unblock the Notifications











