OTT Releases: ಡಿಸೆಂಬರ್ ಕೊನೆಯ ವಾರದಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಪಟ್ಟಿ
ಈ ವರ್ಷಾಂತ್ಯದಲ್ಲಿ ಸಿನಿ ಪ್ರಿಯೆರಿಗೆ ಸಕತ್ ಹಬ್ಬ. ಬಹುನಿರೀಕ್ಷಿತ ಸಲಾರ್, ಡಂಕಿ ಬಿಡುಗಡೆಯಾಗಿದೆ. ಇನ್ನು, ಕನ್ನಡಿಗರು ಕಾತುರದಿಂದ ಕಾಯುತ್ತಿರುವ ನಟ ದರ್ಶನ್ ಅಭಿನಯದ 'ಕಾಟೇರ' ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆಗೆ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಕೂಡ ತಾವು ಕಡಿಮೆಯಿಲ್ಲ ಎನ್ನುವಂತೆ ಒಳ್ಳೋಳ್ಳೆ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಿದೆ.
ನಟ ಸಲ್ಮಾನ್ ಖಾನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಟೈಗ್ ಭಾಗ ಮೂರು ಕೂಡ ಈ ವಾರ ಒಟಿಟಿಗೆ ಕಾಲಿಡುತ್ತಿದೆ. ಹಾಗಾದರೇ, ಈ ವಾರ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ ಹಾಟ್‌ಸ್ಟಾರ್, ಜೀ೫ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳು ಯಾವುದು ಎಂಬ ಪಟ್ಟಿ ಇಲ್ಲಿದೆ.

ಮಂಗಳಾವರಂ
ಮಹಾ ಸಮುದ್ರಂ ಸಿನಿಮಾದ ಸೋಲಿನ ಬಳಿಕ ನಿರ್ದೇಶಕ ಅಜಯ್ ಭೂಪತಿ ಮಂಗಳಾವರಂ ಸಿನಿಮಾ ಮೂಲಕ ಪ್ರೇಕ್ಷಕರನ್ನು ತಮ್ಮ ಸೀಟ್ ತುದಿಗೆ ಬಂದು ಕೂರುವಂತೆ ಮಾಡಿದ್ದಾರೆ. ಸೈಕಲಾಜಿಕಲ್ ಮಿಸ್ಟರಿ ಥ್ರಿಲ್ಲರ್ ಮಂಗಳಾವರಂ ಸಿನಿಮಾಕ್ಕೆ ಒಳ್ಳೆ ರೆಸ್ಪಾನ್ಸ್ ಬಂದಿದೆ. ಸಿನಿಮಾದಲ್ಲಿ ನಟಿ ಪಾಯಲ್ ರಜಪೂತ್ ಮುಖ್ಯ ಪಾತ್ರದಲ್ಲಿದ್ದಾರೆ.
ಮಂಗಳಾವರಂ ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಪ್ರಶಂಸೆ ಪಡೆದಿತ್ತು. ಥಿಯೇಟ್ರಿಕಲ್ ರನ್ ಯಶಸ್ವಿಯಾದ ನಂತರ, ಡಿಜಿಟಲ್ ಬಿಡುಗಡೆಗೆ ಸಿದ್ಧವಾಗಿದೆ. ಇದು ಈ ತಿಂಗಳ 26 ರಿಂದ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ.
ಟೈಗರ್ 3
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಟೈಗರ್ 3 ಸಿನಿಮಾ, ಸಲ್ಮಾನ್ ಖಾನ್ ಅವರ ಜನಪ್ರಿಯ ಫ್ರಾಂಚೈಸಿ ಟೈಗರ್‌ನ ಮೂರನೇ ಭಾಗ. ಮನೀಶ್ ಶರ್ಮಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಶ್ರೀಧರ್ ರಾಘವನ್ ಮತ್ತು ನೀಲೇಶ್ ಮಿಶ್ರಾ ಚಿತ್ರಕಥೆ ಬರೆದಿದ್ದಾರೆ. ಇಮ್ರಾನ್ ಹಶ್ಮಿ, ಸಲ್ಮಾನ್ ಖಾನ್, ಕತ್ರಿನಾ ಕೈಫ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಆದರೆ ಪಠಾಣ್ ಆಗಿ ಶಾರುಖ್ ಖಾನ್ ಮತ್ತು ಕಬೀರ್ ಆಗಿ ಹೃತಿಕ್ ರೋಷನ್ ಟೈಗರ್ 3 ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 600 ಕೋಟಿ ಬಜೆಟ್‌ನಲ್ಲಿ ಆದಿತ್ಯ ಚೋಪ್ರಾ ಈ ಚಿತ್ರವನ್ನು ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇದು ಹೊಸ ವರ್ಷದ ಟ್ರೀಟ್ ಆಗಿ ಡಿಸೆಂಬರ್ 31 ರಿಂದ Amazon Prime ನಲ್ಲಿ ಸ್ಟ್ರೀಮ್ ಆಗಲಿದೆ.]
ಕೀಡಾ ಕೋಲಾ
ತರುಣ್ ಭಾಸ್ಕರ್ ಅವರು "ಕೀಡಾ ಕೋಲಾ" ದೊಂದಿಗೆ ಹ್ಯಾಟ್ರಿಕ್ ಯಶಸ್ಸನ್ನು ಪಡೆದಿದ್ದಾರೆ. ಟಾಲಿವುಡ್ ಉದ್ಯಮದಲ್ಲಿ ವಿಶಿಷ್ಟ ಪ್ರಕಾರದೊಂದಿಗೆ ಛಾಪು ಮೂಡಿಸಿದ್ದಾರೆ. ಸಿನಿಮಾಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಈ ಕಾಮಿಡಿ ಸಿನಿಮಾ ಈ ಒಟಿಟಿಗೂ ಲಗ್ಗೆ ಇಡಲು ಬರುತ್ತಿದೆ. ಇದು ಡಿಸೆಂಬರ್ 28 ರಿಂದ ಆಹಾ ವಿಡಿಯೋದಲ್ಲಿ ಸ್ಟ್ರೀಮ್ ಆಗುತ್ತದೆ.
12th ಫೇಲ್
ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿರುವ 12th ಫೇಲ್ ಸಿನಿಮಾದಲ್ಲಿ ವಿಕ್ರಾಂತ್ ಮೆಸ್ಸೆ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾವನ್ನು 2019 ರಲ್ಲಿ ಪ್ರಕಟವಾದ ಅದೇ ಹೆಸರಿನ ಅನುರಾಗ್ ಪಾಠಕ್ ಅವರ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು ಚಿತ್ರಿಸಲಾಗಿದೆ. ಈ ಚಿತ್ರವು ಮನೋಜ್ ಕುಮಾರ್ ಶರ್ಮಾ ಅವರ ಹೋರಾಟದ ಕಥೆಯನ್ನು ಹೇಳುತ್ತದೆ. ಇದು ಡಿಸೆಂಬರ್ 29 ರಿಂದ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್ ಆಗಲಿದೆ.
ಅನ್ನಪೂರಣಿ
ನಿಲೇಶ್ ಕೃಷ್ಣ ಅವರ ನಿರ್ದೇಶನದ ಅಡುಗೆ ಮನೆ, ಊಟದ ಸುತ್ತ ಸುತ್ತುವ ಅನ್ನಪೂರಣಿ: ದಿ ಗಾಡೆಸ್ ಆಫ್ ಫುಡ್ ಸಿನಿಮಾದಲ್ಲಿ ನಟಿ ನಯನತಾರಾ ಮತ್ತು ಜೈ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಡಿಸೆಂಬರ್ 1 ರಂದು ಬಿಡುಗಡೆಯಾಯಿತು. ತಮಿಳು ಸಿನಿಮಾ ತಮಿಳುನಾಡಿನಲ್ಲಿ ಮಿಶ್ರ ವಿಮರ್ಶೆಗಳನ್ನು ಪಡೆದಿದೆ. ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆ ಮಾಡಲಿಲ್ಲ. ನಯನತಾರಾ ಅವರ 75 ನೇ ಚಿತ್ರವಾಗಿದೆ. ಇದು ಈ ತಿಂಗಳ 29 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.


Click it and Unblock the Notifications











