OTT Releases This Week: ಗಣೇಶ ಹಬ್ಬದ ವೀಕೆಂಡ್ ಓಟಿಟಿಗೆ ಬರ್ತಿರೋ ಚಿತ್ರಗಳ ಪಟ್ಟಿ
ಆಗಸ್ಟ್ ಕಳೆದು ಸೆಪ್ಟೆಂಬರ್ ತಿಂಗಳು ಶುರುವಾಗಿದೆ. ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳು ನಿಧಾನವಾಗಿ ಸದ್ದು ಮಾಡುತ್ತಿದೆ. ಗಣೇಶ ಹಬ್ಬದ ವೀಕೆಂಡ್‌ನಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ತೆರೆಗೆ ಬರ್ತಿವೆ. ಇನ್ನು ಓಟಿಟಿಯಲ್ಲಿ ಕೂಡ ಹಲವು ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ.
ಚಿತ್ರಮಂದಿರಗಳಲ್ಲಿ ಈ ವಾರ ರಕ್ಷಿತ್ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ಬಿಡುಗಡೆ ಆಗುತ್ತಿದೆ. ತಮಿಳಿನಲ್ಲಿ ದಳಪತಿ ವಿಜಯ್ ನಟನೆಗ 'ಗೋಟ್'(GOAT) ಸಿನಿಮಾ ತೆರೆಗಪ್ಪಳಿಸುತ್ತಿದೆ. ಕರ್ನಾಟಕದಲ್ಲಿ ಮುಖ್ಯವಾಗಿ ಬೆಂಗಳೂರಿನಲ್ಲಿ ಈ ಸಿನಿಮಾ ದೊಡ್ಡದಾಗಿ ರಿಲೀಸ್ ಆಗುತ್ತಿದೆ. ಮೊದಲ ದಿನ ಫ್ಯಾನ್ಸ್ ಶೋ ಟಿಕೆಟ್ 1000 ರೂಪಾಯಿಗೆ ಮಾರಾಟವಾಗುತ್ತಿದೆ.

ಆಗಸ್ಟ್ ಕೊನೆ ವಾರದಲ್ಲಿ 3 ಕನ್ನಡ ಸಿನಿಮಾಗಳು ಓಟಿಟಿಗೆ ಬಂದಿತ್ತು. ಜಗ್ಗೇಶ್ ನಟನೆಯ 'ರಂಗನಾಯಕ' ಜೊತೆಗೆ 'ರಂಗನಾಯಕ' ಜೊತೆಗೆ 'ಸ್ಕ್ಯಾಮ್ 1770' ಹಾಗೂ 'ಚಿಲ್ಲಿ ಚಿಕನ್' ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದ್ದವು. ಅದೇ ಸಿನಿಮಾಗಳು ಈ ವಾರವೂ ಓಟಿಟಿ ವೀಕ್ಷಕರನ್ನು ಸೆಳೆಯುತ್ತಿದೆ. ಈ ವಾರ ಕೂಡ ಒಂದು ಕನ್ನಡ ಸಿನಿಮಾ ರಿಲೀಸ್ ಆಗಿದೆ.
ಅಮೇಜಾನ್ ಪ್ರೈಂ
1. 19.20.21
ಮಂಸೋರೆ ನಿರ್ದೇಶನದ '19.20.21' ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿತ್ತು. ನೈಜ ಘಟನೆ ಆಧರಿಸಿದ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ವಿಮರ್ಶಕರು ಬಹಳ ಮೆಚ್ಚಿಕೊಂಡಿದ್ದರು. ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ಈ ಚಿತ್ರದಲ್ಲಿ ಚರ್ಚಿಸಲಾಗಿತ್ತು. ಶೃಂಗ ಬಿವಿ, ಬಾಲಾಜಿ ಮನೋಹರ್, ಎಂಡಿ ಪಲ್ಲವಿ, ರಾಜೇಶ್ ನಟರಂಗ, ಅವಿನಾಶ್, ಮಹದೇವ್ ಹಡಪದ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದರು.

ಸದ್ಯ '19.20.21' ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತದೆ. ಚಂದಾದಾರರು 99 ರೂ. ಪಾವತಿಸಿ ಸಿನಿಮಾ ವೀಕ್ಷಿಸಬಹುದು. ಈ ವೀಕೆಂಡ್‌ನಲ್ಲಿ ಯಾವುದೇ ಹಣ ಪಾವತಿಸದೇ ಎಲ್ಲರೂ ಈ ಸಿನಿಮಾ ವೀಕ್ಷಿಸುವ ಅವಕಾಶ ಸಿಗುವ ಸಾಧ್ಯತೆಯಿದೆ.
2. ಕಾಲ್ ಮಿ ಬೇ(ಹಿಂದಿ ವೆಬ್ ಸೀರಿಸ್) ಸೆಪ್ಟೆಂಬರ್-6
ನೆಟ್‌ಫ್ಲಿಕ್ಸ್
1. ರೆಬೆಲ್ ರಿಡ್ಜ್ (ಇಂಗ್ಲಿಷ್ ಸಿನಿಮಾ) - ಸೆಪ್ಟೆಂಬರ್ 6
2. ಸೆಕ್ಟರ್ 36 (ಹಿಂದಿ ಸಿನಿಮಾ)- ಸೆಪ್ಟೆಂಬರ್ 13
3. ದಿ ಪರ್ಫೆಕ್ಟ್ ಕಪಲ್ (ಇಂಗ್ಲೀಷ್ ಡ್ರಾಮ ಸೀರೀಸ್) - ಸೆಪ್ಟೆಂಬರ್ 5
4. ಅಪೊಲೊ 13: ಸರ್ವೈವಲ್ (ಡಾಕ್ಯಮೆಂಟರಿ) - ಸೆಪ್ಟೆಂಬರ್ 5
5. ಬ್ಯಾಡ್ ಬಾಯ್ಸ್: ರೈಡ್ ಆರ್ ಡೈ (ಇಂಗ್ಲಿಷ್ ಸಿನಿಮಾ) - ಸೆಪ್ಟೆಂಬರ್ 6
ಹಾಟ್‌ಸ್ಟರ್
1. ಕಿಲ್
ನಿಖಿಲ್ ನಾಗೇಶ್ ಭಟ್ ನಿರ್ದೇಶನದ ಹಿಂದಿ ಸಿನಿಮಾ 'ಕಿಲ್' ಕಳೆದ ವರ್ಷ ತೆರೆಗೆ ಬಂದಿತ್ತು. ಸೆಪ್ಟೆಂಬರ್ 6ಕ್ಕೆ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಲಕ್ಷ್ಯಾ, ರಾಘವ್ ಜ್ಯುವೆಲ್ ಹಾಗೂ ಆಶಿಶ್ ವಿದ್ಯಾರ್ಥಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.
2. ಇಂಗ್ಲೀಷ್ ಟೀಚರ್ (ಹಾಲಿವುಡ್ ಸಿನಿಮಾ) ಸೆಪ್ಟೆಂಬರ್ 3
3. ಟೆಲ್ ಮಿ ಲೈಸ್- ಸೀಸನ್-2(ವೆಬ್ ಸೀರಿಸ್) ಸೆಪ್ಟೆಂಬರ್ 4
ಜಿಯೋ ಸಿನಿಮಾ
1. ದಿ ಫಾಲ್ ಗಾಯ್(ಕನ್ನಡ ಡಬ್ ಸಿನಿಮಾ) ಸೆಪ್ಟೆಂಬರ್ 3
2. ಇಮ್ಯಾಕ್ಯುಲೇಟ್ (ಹಾಲಿವುಡ್ ಸಿನಿಮಾ) ಸೆಪ್ಟೆಂಬರ್ 6


Click it and Unblock the Notifications











