OTT releases this week: ಸಂಕ್ರಾಂತಿ ಹಬ್ಬ ಮಾಡಿ ಓಟಿಟಿಯಲ್ಲಿ ಈ ಸಿನಿಮಾ, ಸೀರಿಸ್ ನೋಡಿ

ಸಂಕ್ರಾಂತಿ ಹಬ್ಬಕ್ಕೆ ತೆಲುಗು, ತಮಿಳಿನ ದೊಡ್ಡ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿದೆ. ತಮಿಳಿನ 'ಕ್ಯಾಪ್ಟನ್ ಮಿಲ್ಲರ್', 'ಅಯಲಾನ್' ತೆಲುಗಿನ 'ಗುಂಟೂರು ಖಾರಂ', 'ಸೈಂಧವ್', 'ನಾ ಸಾಮಿ ರಂಗ', 'ಹನುಮಾನ್' ಸೇರಿದಂತೆ ಹಲವು ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. ಇನ್ನು ಓಟಿಟಿಯಲ್ಲೂ ಸಾಕಷ್ಟು ಸಿನಿಮಾಗಳು, ವೆಬ್‌ ಸೀರಿಸ್ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ.

ಹಬ್ಬಕ್ಕೆ ಕನ್ನಡದ ಯಾವುದೇ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿಲ್ಲ. ಓಟಿಟಿಯಲ್ಲೂ ಪರಿಸ್ಥಿತಿ ಇದೇ ರೀತಿ ಇದೆ. ಕಳೆದ ವಾರ 'ಸ್ವಾತಿಮುತ್ತಿನ ಮಳೆ ಹನಿಯೇ' ಸಿನಿಮಾ ಸ್ಟ್ರೀಮಿಂಗ್ ಆಗಿತ್ತು. ಇನ್ನುಳಿದಂತೆ ತೆಲುಗು, ತಮಿಳಿನ ಸಿನಿಮಾಗಳ ಜೊತೆಗೆ ಹಾಲಿವುಡ್, ಬಾಲಿವುಡ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಅಪ್‌ಲೋಡ್ ಆಗುತ್ತಿದೆ.

OTT releases this week: 25 movies and series to watch on Netflix, Prime Video, zee 5

ತೆಲುಗಿನ 'ಎಕ್ಸ್‌ಸ್ಟ್ರಾಡಿನರಿಮ್ಯಾನ್' ಜೊತೆಗೆ ಹಾಲಿವುಡ್‌ನ 'ಮಿಷನ್ ಇಂಪಾಸಿಬಲ್': ರೆಡ್ ರಿಕನಿಂಗ್ ಪಾರ್ಟ್-1', 'ಜಸ್ಟೀಸ್ ಲೀಗ್: ಕ್ರೈಸಿಸ್ ಆನ್ ಇನ್‌ಫೈನಿಟ್ ಎರ್ಥ್ಸ್' ಸೇರಿದಂತೆ ಹಲವು ಸಿನಿಮಾಗಳು ಈ ಲಿಸ್ಟ್‌ನಲ್ಲಿದೆ.

ಅಮೇಜಾನ್ ಪ್ರೈಂ

1. 'ಮಿಷನ್ ಇಂಪಾಸಿಬಲ್': ರೆಡ್ ರಿಕನಿಂಗ್ ಪಾರ್ಟ್-1'

ಕಳೆದ ವರ್ಷ ಹಾಲಿವುಡ್‌ನಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆಗಿದ್ದ 'ಮಿಷನ್ ಇಂಪಾಸಿಬಲ್': ರೆಡ್ ರಿಕನಿಂಗ್ ಪಾರ್ಟ್-1' ಸಿನಿಮಾ ಜನವರಿ 11ರಂದು ಅಮೇಜಾನ್ ಪ್ರೈಂನಲ್ಲಿ ಉಚಿತವಾಗಿ ಸಿಗಲಿದೆ. ಕಳೆದೆರಡು ತಿಂಗಳಿನಿಂದ ಬಾಡಿಗೆ ಆಧಾರದಲ್ಲಿ ಸಿನಿಮಾ ವೀಕ್ಷಣೆಗೆ ಸಿಗುತ್ತಿತ್ತು. ಇನ್ನು ಮುಂದೆ ಚಂದಾದಾರರೆಲ್ಲರೂ ಸಿನಿಮಾ ನೋಡಬಹುದು. ಹಾಲಿವುಡ್‌ ಸಿರೀಸ್‌ಗಳಲ್ಲಿ ಮಿಷನ್ ಇಂಪಾಸಿಬಲ್ ಸರಣಿ ಸಿನಿಮಾಗಳಿಗಿರುವ ಕ್ರೇಜ್ ಎಂಥದ್ದು ಎನ್ನುವುದು ಗೊತ್ತೇಯಿದೆ. ಟಾಮ್ ಕ್ರೂಸ್ ಮತ್ತೊಂದು ಆಕ್ಷನ್ ಧಮಾಕ ತೋರಿಸಿದ್ದಾರೆ. ತೆಲುಗು, ತಮಿಳು, ಹಿಂದಿಗೂ ಡಬ್ ವರ್ಷನ್ ಕೂಡ ಸ್ಟ್ರೀಮಿಂಗ್ ಆಗಲಿದೆ.

OTT releases this week: 25 movies and series to watch on Netflix, Prime Video, zee 5

2. ರೋಲ್ ಪ್ಲೇ(ಇಂಗ್ಲೀಷ್ ಸಿನಿಮಾ)- ಜನವರಿ 12

ನೆಟ್‌ಫ್ಲಿಕ್ಸ್

1. ಎಕ್ಸ್‌ಸ್ಟ್ರಾಡಿನರಿ ಮ್ಯಾನ್

ತೆಲುಗಿನಲ್ಲಿ ನಿತಿನ್ ಹಾಗೂ ಶ್ರೀಲೀಲಾ ನಟನೆಯ 'ಎಕ್ಸ್‌ಸ್ಟ್ರಾಡಿನರಿ ಮ್ಯಾನ್' ಸಿನಿಮಾ ಜನವರಿ 12ರಂದು ನೆಟ್‌ಫ್ಲಿಕ್ಸ್‌ಗೆ ಬರ್ತಿದೆ. ಡಿಸೆಂಬರ್ 8ಕ್ಕೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಯಾವ ರೀತಿ ಸದ್ದು ಮಾಡುತ್ತದೆ ಕಾದು ನೋಡಬೇಕಿದೆ.

2. ಕೆ ಪಾಯಿಂಟ್: ಸೀಸನ್ 2(ಇಂಗ್ಲೀಷ್ ಸೀರಿಸ್) ಜನವರಿ 10

3. ಏರ್ ಮಾತಾ ಡಿ ಉಜುಂಗ್ ಸಜಾದಾ(ಇಂಡೊನೇಷ್ಯಾ ಸಿನಿಮಾ) ಜನವರಿ 8

4. ಡೈರಿಸ್ ಸೀಸಜನ್ -2: ಭಾಗ- 2 (ಇಟಾಲಿಯನ್ ಸೀರಿಸ್) ಜನವರಿ 9

5. ಪಿಟ್ ಡೇವಿಡ್‌ಸನ್: ಟರ್ಬೋ ಫಂಜರೆಲ್ಲಿ(ಇಂಗ್ಲೀಷ್ ಸಿನಿಮಾ) ಜನವರಿ 9

6. ಕಿಂಗ್‌ಡಮ್ 3: ದ ಫ್ಲೇಮ್ ಆಫ್ ಫೇಟ್(ಜಪಾನೀಸ್ ಸಿನಿಮಾ) ಜನವರಿ 10

7. ದ ಟ್ರಸ್ಟ್: ಎ ಗೇಮ್ ಆಫ್ ಗ್ರಿಡ್(ಇಂಗ್ಲೀಷ್ ಸೀರಿಸ್) ಜನವರಿ 10

8. ಬಾಯ್ ಸಾಲ್ವೋಸ್ ಯೂನಿವರ್ಸ್(ಇಂಗ್ಲೀಷ್ ಸೀರಿಸ್) ಜನವರಿ 11

9. ಕಿಲ್ಲರ್ ಸೂಪ್(ಹಿಂದಿ ಸೀರಿಸ್) ಜನವರಿ 11

10. ಚಾಂಪಿಯನ್(ಇಂಗ್ಲೀಷ್ ಸೀರಿಸ್) ಜನವರಿ 11

11. ಮಂತ್ರ ಸುರುಗಣ(ಇಂಡೋನೇಷಿಯಾ ಸಿನಿಮಾ) ಜನವರಿ 11

12. ಸೋನಿಕ್ ಪ್ರೈಂ ಸೀಸನ್- 3(ಇಂಗ್ಲೀಷ್ ಸೀರಿಸ್) ಜನವರಿ 11

13. ಅಡಿರೇ(ಇಂಗ್ಲೀಷ್ ಸಿನಿಮಾ) ಜನವರಿ 12

14. ಲಿಫ್ಟ್(ಇಂಗ್ಲೀಷ್ ಸಿನಿಮಾ) ಜನವರಿ 12

15. ಲವ್ ಈಸ್ ಬ್ಲೈಂಡ್: ಸ್ವೀಡನ್ (ಸ್ವೀಡಿಷ್ ಭಾಷೆಯ ಸೀರಿಸ್) ಜನವರಿ 12

16. ಡಂಬ್ ಮನಿ(ಇಂಗ್ಲೀಷ್ ಸಿನಿಮಾ) ಜನವರಿ 13

ಜೀ5

1. ಅಜಯ್‌ಗಾಡು(ತೆಲುಗು ಸಿನಿಮಾ) ಜನವರಿ 12

ಹಾಟ್‌ಸ್ಟರ್

1. ದ ಲೆಜೆಂಡ್ ಆಫ್ ಹನುಮಾನ್ ಸೀಸನ್-3 (ತೆಲುಗು) ಜನವರಿ 12

2. ಎಕೋ(ಇಂಗ್ಲೀಷ್ ಸೀರಿಸ್) ಜನವರಿ 11

More from Filmibeat

English summary
New OTT Releases This Week, January 10th to January 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X