OTT releases this week: ಇಂಟ್ರೆಸ್ಟಿಂಗ್ ಸಿನಿಮಾ, ಸೀರಿಸ್ ಈ ವಾರ ಓಟಿಟಿಗೆ ಎಂಟ್ರಿ; ಆ ಚಿತ್ರದ ಮೇಲೆ ಎಲ್ಲರ ಕಣ್ಣು
ಹೊಸ ವರ್ಷದ ಎರಡು ತಿಂಗಳು ಕಳೆದೆ ಹೋಯ್ತು. ಕನ್ನಡದಲ್ಲಿ ಇನ್ನು ದೊಡ್ಡ ಸಿನಿಮಾಗಳು ತೆರೆಗೆ ಬಂದಿಲ್ಲ. ಆದರೆ ಈ ತಿಂಗಳು ಬ್ಯಾಕ್ ಟು ಬ್ಯಾಕ್ ಸ್ಟಾರ್‌ಗಳ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿವೆ. 'ಕರಟಕ ದಮನಕ', 'ರಂಗನಾಯಕ', 'ಅವತಾರ್ ಪುರುಷ-2' ಹಾಗೂ 'ಯುವ' ಬಿಡುಗಡೆ ಆಗುತ್ತಿವೆ. ಓಟಿಟಿಯಲ್ಲೂ ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್‌ಗೆ ಸಜ್ಜಾಗಿವೆ.
ಮಾರ್ಚ್ ಎರಡನೇ ವಾರಾಂತ್ಯದಲ್ಲಿ ಒಂದಷ್ಟು ಸಿನಿಮಾಗಳು ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಇದರಲ್ಲಿ ಕನ್ನಡ, ತಮಿಳು, ತೆಲುಗು ಸಿನಿಮಾಗಳಿವೆ. ದೇಶ ವಿದೇಶಗಳ ವೆಬ್ ಸೀರಿಸ್‌ಗಳಿವೆ. ಭಾರೀ ನಿರೀಕ್ಷೆ ಮೂಡಿಸಿದ್ದ ಸೂಪರ್ ಹಿಟ್ 'ಹನುಮಾನ್' ಸಿನಿಮಾ ಕೂಡ ಸ್ಟ್ರೀಮಿಂಗ್ ಆಗುತ್ತಿರುವುದು ವಿಶೇಷ.

14ಕ್ಕೂ ಅಧಿಕ ಸಿನಿಮಾ ಹಾಗೂ ವೆಬ್‌ಸೀರಿಸ್ ಈ ವಾರ ನೆಟ್‌ಫ್ಲಿಕ್ಸ್, ಜೀ5, ಅಮೇಜಾನ್ ಪ್ರೈಂ ಹಾಗೂ ಹಾಟ್‌ಸ್ಟರ್ ಡಿಜಿಟಲ್ ಫ್ಲಾಟ್‌ಪಾರ್ಮ್‌ಗಳಲ್ಲಿ ರಿಲೀಸ್ ಆಗಲಿದೆ. ಆ ಕಂಪ್ಲೀಟ್ ಲಿಸ್ಟ್ ಮುಂದೆ ಇದೆ ಓದಿ.
ಅಮೇಜಾನ್ ಪ್ರೈಂ
1. ಬ್ಯಾಚುಲರ್ ಪಾರ್ಟಿ
ರಕ್ಷಿತ್ ಶೆಟ್ಟಿ ನಿರ್ಮಾಣದ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಓಟಿಟಿಗೆ ಬಂದಿದೆ. ಜನವರಿ 26ಕ್ಕೆ ತೆರೆಕಂಡಿದ್ದ ಕಾಮಿಡಿ ಎಂಟರ್‌ಟೈನರ್ ಸಿನಿಮಾ ಅಷ್ಟಾಗಿ ಸದ್ದು ಮಾಡಿರಲಿಲ್ಲ. ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಹಾಲಿವುಡ್‌ನ ಹ್ಯಾಂಗೋವರ್ ಸಿನಿಮಾದಿಂದ ಪ್ರೇರಣೆಗೊಂಡು ಅಭಿಜಿತ್ ಮಹೇಶ್ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಮಧ್ಯರಾತ್ರಿ(ಮಾರ್ಚ್ 4)ಯಿಂದಲೇ ಸಿನಿಮಾ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
2. ಯಾತ್ರಾ-2
ಫೆಬ್ರವರಿ 8ಕ್ಕೆ ಬಿಡುಗಡೆಯಾಗಿದ್ದ 'ಯಾತ್ರಾ-2' ತೆಲುಗು ಸಿನಿಮಾ ಮಾರ್ಚ್ 8ಕ್ಕೆ ಓಟಿಟಿಗೆ ಬರ್ತಿದೆ ಎನ್ನುವ ಚರ್ಚೆ ನಡೀತಿದೆ. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಜೀವನವನ್ನಾಧರಿಸಿ ಈ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ನಿರ್ಮಾಣವಾಗಿದೆ. 4 ವರ್ಷಗಳ ಹಿಂದೆ 'ಯಾತ್ರಾ' ಸಿನಿಮಾ ತೆರೆಕಂಡು ಹಿಟ್ ಆಗಿತ್ತು. ಆ ಚಿತ್ರದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ತಂದೆ ಮಾಜಿ ಸಿಎಂ ದಿವಂಗತ ರಾಜಶೇಖರ್ ರೆಡ್ಡಿ ಕಥೆಯನ್ನು ಚಿತ್ರದಲ್ಲಿ ಹೇಳಲಾಗಿತ್ತು. ಆ ಸಿನಿಮಾ ಹಿಟ್ ಆಗಿತ್ತು. ಆದರೆ ಸೀಕ್ವೆಲ್ ಯಾಕೋ ಗೆಲ್ಲಲಿಲ್ಲ.

ಜೀ-5
1. ಹನುಮಾನ್
ಸಂಕ್ರಾಂತಿ ಸಂಭ್ರಮದಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ತೆಲುಗಿನ 'ಹನುಮಾನ್' ಸಿನಿಮಾ ಓಟಿಟಿ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದೆ. ಮಾರ್ಚ್ 8ಕ್ಕೆ ಜೀ5ನಲ್ಲಿ ಸಿನಿಮಾ ವೀಕ್ಷಣೆಗೆ ಸಿಗಲಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಕಂಡು ಹಿಟ್ ಆಗಿತ್ತು. ದೊಡ್ಡ ದೊಡ್ಡ ಸಿನಿಮಾಗಳಿಗೆ ಸೆಡ್ಡು ಹೊಡೆದಿತ್ತು. ಪ್ರಶಾಂತ್ ವರ್ಮ ನಿರ್ದೇಶನದ ಈ ಸೂಪರ್ ಹೀರೊ ಚಿತ್ರದಲ್ಲಿ ತೇಜಾ ಸಜ್ಜ ಹೀರೋ ಆಗಿ ನಟಿಸಿದ್ದಾರೆ.
ನೆಟ್‌ಫ್ಲಿಕ್ಸ್
1. ಲಾಲ್ ಸಲಾಂ
ಐಶ್ವರ್ಯ ರಜನಿಕಾಂತ್ ನಿರ್ದೇಶನದ ಸ್ಪೋರ್ಟ್ಸ್ ಡ್ರಾಮಾ 'ಲಾಲ್ ಸಲಾಂ' ಕಳೆದ ತಿಂಗಳು ತೆರೆಕಂಡಿತ್ತು. ರಜನಿಕಾಂತ್ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆದರೆ ಯಾಕೋ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗಲಿಲ್ಲ. ನೆಟ್‌ಫ್ಲಿಕ್ಸ್‌ಗೆ ಚಿತ್ರದ ಓಟಿಟಿ ರೈಟ್ಸ್ ಬಿಕರಿಯಾಗಿದೆ. ಮಾರ್ಚ್ 8ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಅಧಿಕೃತವಾಗಿ ದಿನಾಂಕ ಘೋಷಣೆ ಆಗಿಲ್ಲ.
2. ಅನ್ವೇಷಿಪ್ಪಿನ್ ಕಂಡೆತ್ತುಮ್(ಮಲಯಾಳಂ ಸಿನಿಮಾ) ಮಾರ್ಚ್ 8
3. ದಿ ಜೆಂಟಲ್‌ಮ್ಯಾನ್-ಮಾರ್ಚ್ 7
4. ಸೂಪರ್‌ಸೆಕ್ಸ್- ಮಾರ್ಚ್ 6
5. ದಿ ಪ್ರೋಗ್ರಾಂ; ಕಾನ್ಸ್, ಕಲ್ಟ್ಸ್ ಅಂಡ್ ಕಿಡ್ನ್ಯಾಪಿಂಗ್- ಮಾರ್ಚ್ 5
6. ಹನ್ನಾ ಗ್ಯಾಡ್ಸ್ಬಿಸ್ ಜೆಂಡರ್ ಅಜೆಂಡಾ- ಮಾರ್ಚ್ 5
7. ಅರಾ ಸಾನ್ ಜುವಾನ್: ದಿ ಸಬ್‌ಮೆರಿನ್ ಡಟ್ ಡಿಸ್ಸಪ್ಪೀರ್- ಮಾರ್ಚ್ 7
8. ದಿ ಸಿಗ್ನಲ್- ಮಾರ್ಚ್ 7
9. ಡಮ್ಸೆಲ್- ಮಾರ್ಚ್ 8
10. ಮೇರಿ ಕ್ರಿಸ್ಮಸ್-(ಹಿಂದಿ ಸಿನಿಮಾ) ಮಾರ್ಚ್ 8


Click it and Unblock the Notifications











