OTT releases this week: ಮಾರ್ಚ್ 18ರಿಂದ 24ರ ವರೆಗೆ ಓಟಿಟಿ ರಿಲೀಸ್ ಸಿನಿಮಾ, ವೆಬ್ ಸೀರಿಸ್ ಲಿಸ್ಟ್
ದಿನದಿಂದ ದಿನಕ್ಕೆ ಓಟಿಟಿ ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಥಿಯೇಟರ್‌ಗಳಿಗಿಂತ ಓಟಿಟಿಯಲ್ಲಿ ಸಿನಿಮಾ, ವೆಬ್ ಸೀರಿಸ್ ನೋಡಲು ಜನ ಹೆಚ್ಚು ಬಯಸುತ್ತಿದ್ದಾರೆ. ಆದರೆ ಕನ್ನಡದ ಮಟ್ಟಿಗೆ ಇನ್ನು ಓಟಿಟಿಗೆ ಹೆಚ್ಚಿನ ಕಂಟೆಂಟ್ ಕ್ರಿಯೇಟ್ ಆಗುತ್ತಿಲ್ಲ. ಸಿನಿಮಾ ಬಿಟ್ಟರೆ ವೆಬ್ ಸೀರಿಸ್ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇಲ್ಲ.
ಇನ್ನು ಪ್ರತಿ ವಾರದಂತೆ ವಾರವೂ ಹತ್ತು ಹಲವು ಸಿನಿಮಾ, ವೆಬ್ ಸೀರಿಸ್ ಡಿಜಿಟಲ್ ಫ್ಲಾಟ್‌ಪಾರ್ಮ್‌ಗೆ ಬರ್ತಿದೆ. ಇದರಲ್ಲಿ ಬಾಲಿವುಡ್‌ನ ಹಿಟ್ ಸಿನಿಮಾಗಳು ಇವೆ. ಇನ್ನು ಈ ಬಾರಿ 7 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ 'ಓಪನ್‌ಹೈಮರ್' ಸಿನಿಮಾ ಕೂಡ ಲಿಸ್ಟ್‌ನಲ್ಲಿದೆ. ಓಟಿಟಿ ಪ್ರಿಯರಿಗಂತೂ ಭಾರೀ ಮನರಂಜನೆ ಕಾದಿದೆ ಎನ್ನಬಹುದು.

ಜೀ5
1. ಹನುಮಾನ್
ಸಂಕ್ರಾಂತಿ ಸಂಭ್ರಮದಲ್ಲಿ ತೆರೆಕಂಡು ಗೆದ್ದಿದ್ದ 'ಹನುಮಾನ್' ಸಿನಿಮಾ ಜೀ5ನಲ್ಲಿ ದಿಢೀರನೆ ಸ್ಟ್ರೀಮಿಂಗ್ ಆಗುತ್ತಿದೆ. ಪ್ರಶಾಂತ್ ವರ್ಮ ನಿರ್ದೇಶನದ ಈ ಸೂಪರ್ ಹೀರೋ ಚಿತ್ರದಲ್ಲಿ ತೇಜಾ ಸಜ್ಜಾ ಹೀರೊ ಆಗಿ ನಟಿಸಿದ್ದಾರೆ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ 200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ತೆಲುಗು ವರ್ಷನ್ ಜೀ5ನಲ್ಲಿದ್ದರೆ ಜಿಯೋ ಸಿನಿಮಾದಲ್ಲಿ ಹಿಂದಿ ವರ್ಷನ್ ವೀಕ್ಷಣೆಗೆ ಲಭ್ಯವಿದೆ. ಕನ್ನಡ, ತಮಿಳು, ಮಲಯಾಳಂ ವರ್ಷನ್ ಶೀಘ್ರದಲ್ಲೇ ರಿಲೀಸ್ ಆಗುತ್ತದೆ ಎನ್ನಲಾಗ್ತಿದೆ.
ನೆಟ್‌ಫ್ಲಿಕ್ಸ್
1. ಫೈಟರ್
ಗಣರಾಜ್ಯೋತ್ಸವ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ಹಿಂದಿಯ 'ಫೈಟರ್' ಹಿಟ್ ಆಗಿತ್ತು. ಈ ಏರಿಯಲ್ ಆಕ್ಷನ್ ಚಿತ್ರದಲ್ಲಿ ಹೃತಿಕ್ ರೋಷನ್ ಜೋಡಿಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ದೇಶಭಕ್ತಿ ಸಾರುವ ಈ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ಆಕ್ಷನ್ ಕಟ್ ಹೇಳಿದ್ದಾರೆ. ನೆಟ್‌ಫ್ಲಿಕ್ಸ್‌ಗೆ ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿದೆ. ಮಾರ್ಚ್ 21ಕ್ಕೆ ಸಿನಿಮಾ ಸ್ಟ್ರೀಮಿಂಗ್ ಆಗುತ್ತದೆ ಎನ್ನಲಾಗ್ತಿದೆ.
2. ದಿ ಕ್ಯಾಸಗ್ರಾಂಡಸ್ ಮೂವಿ(ಇಂಗ್ಲೀಷ್ ಸಿನಿಮಾ) ಮಾರ್ಚ್ 22
3. ಷಿರ್ಲೆ(ಇಂಗ್ಲೀಷ್ ಸಿನಿಮಾ) ಮಾರ್ಚ್ 22
4. ಬೈಯಿಂಗ್ ಬೆವರ್ಲಿ ಹಿಲ್ಸ್- ಸೀಸನ್ 2, ಮಾರ್ಚ್ 22
5. 3 ಬಾಡಿ ಪ್ರಾಬ್ಲಂ(ಇಂಗ್ಲೀಷ್ ಸೀರಿಸ್) ಮಾರ್ಚ್ 21
6. ಯಂಗ್ ರಾಯಲ್ಸ್ ಫೇವರಲ್(ಸ್ವಿಡಿಸ್ ಸಿನಿಮಾ) ಮಾರ್ಚ್ 18
ಅಮೇಜಾನ್ ಪ್ರೈಂ
1. ರೋಡ್ ಹೌಸ್(ಇಂಗ್ಲೀಷ್ ಸಿನಿಮಾ) ಮಾರ್ಚ್ 21
2. ಏ ವತನ್ ಮೇರೆ ವತನ್(ಹಿಂದಿ ಸಿನಿಮಾ) ಮಾರ್ಚ್ 21
3. ಮರಕ್ಕುಮ ನಂಜಮ್(ತಮಿಳು ಸಿನಿಮಾ) ಮಾರ್ಚ್ 19

ಹಾಟ್‌ಸ್ಟರ್
1. ಸ್ಯಾಂಡ್‌ಲ್ಯಾಂಡ್; ದ ಸೀರಿಸ್(ಜಪನೀಸ್ ಆನಿಮೇಷನ್ ಸೀರಿಸ್) ಮಾರ್ಚ್ 20
2. ಅನಾಟಮಿ ಆಫ್ ಎ ಫಾಲ್(ಇಂಗ್ಲೀಷ್ ಸಿನಿಮಾ) ಮಾರ್ಚ್ 22
3. ಡೆವಿ & ಜಾನೀಸ್ ಲಾಕರ್(ಇಂಗ್ಲೀಷ್ ಸೀರಿಸ್) ಮಾರ್ಚ್ 22
4. ಫೋಟೊಗ್ರಾಫರ್ ಸೀಸನ್ 1(ಇಂಗ್ಲೀಷ್ ಸೀರಿಸ್) ಮಾರ್ಚ್ 24
5. ಎಕ್ಸ್-ಮ್ಯಾನ್-97(ಇಂಗ್ಲೀಷ್ ಸೀರಿಸ್) ಮಾರ್ಚ್ 20
6. ಅಬ್ರಹಾಂ ಓಜ್ಲರ್-(ಮಲಯಾಳಂ ಸಿನಿಮಾ) ಮಾರ್ಚ್ 22
7. ಲೂಟೆರೆ(ಹಿಂದಿ ಸೀರಿಸ್) ಮಾರ್ಚ್ 22
ಜಿಯೋ ಸಿನಿಮಾ
1. ಓಪನ್‌ಹೈಮರ್
ಹಾಲಿವುಡ್ ಸೂಪರ್ ಹಿಟ್ 'ಓಪನ್‌ಹೈಮರ್' ಸಿನಿಮಾ ಈ ವಾರವೇ ಓಟಿಟಿಗೆ ಎಂಟ್ರಿ ಕೊಡುತ್ತಿದೆ. ಈ ಬಾರಿ ಆಸ್ಕರ್ ವೇದಿಕೆಯಲ್ಲೂ ಈ ಸಿನಿಮಾ ಸದ್ದು ಮಾಡಿತ್ತು. ಅಣು ಬಾಂಬ್ ಅನ್ವೇಷಿಸಿದ ವಿಜ್ಞಾನಿ ಓಪನ್‌ಹೈಮರ್ ಜೀವನಾಧರಿತ ಕಥೆ ಈ ಚಿತ್ರದಲ್ಲಿದೆ. ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಬಯೋಪಿಕ್ ಚಿತ್ರ ಮಾರ್ಚ್ 21ಕ್ಕೆ ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಬುಕ್‌ಮೈ ಶೋ
1. ಫ್ರೂಯಡ್ಸ್ ಲಾಸ್ಟ್ ಸೆಷನ್(ಇಂಗ್ಲೀಷ್ ಸಿನಿಮಾ) ಮಾರ್ಚ್ 19
ಆಪಲ್ ಪ್ಲಸ್ ಟಿವಿ
1. ಪಾಮ್ ರಾಯಲ್(ಇಂಗ್ಲೀಷ್ ಸೀರಿಸ್) ಮಾರ್ಚ್ 20
2. ಆರ್ಗಿಲ್ಲೆ(ಇಂಗ್ಲೀಷ್ ಸಿನಿಮಾ) ಮಾರ್ಚ್ 22


Click it and Unblock the Notifications











