OTT Releases this Week: ಈ ವಾರ ಓಟಿಟಿಯಲ್ಲಿ ಸೋತ, ಗೆದ್ದ ಸಿನಿಮಾಗಳ ಮೆರವಣಿಗೆ.. ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಹೊಸ ವಾರ ಶುರುವಾಗುತ್ತಿದ್ದಂತೆ ಮತ್ತೆ ವೀಕೆಂಡ್ ಯಾವಾಗ ಬರುತ್ತೋ? ಥಿಯೇಟರ್‌ಗಳಲ್ಲಿ ಯಾವ್ಯಾವ ಸಿನಿಮಾ ರಿಲೀಸ್ ಆಗುತ್ತೋ ಎಂದು ಸಿನಿರಸಿಕರು ಕಾಯ್ತಿರ್ತಾರೆ. ಸದ್ಯ ಬಾಕ್ಸಾಫೀಸ್‌ನಲ್ಲಿ 'ಜವಾನ್', 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾಗಳ ದರ್ಬಾರ್ ಮುಮದುವರೆದಿದೆ. ಇನ್ನು ಈ ವೀಕೆಂಡ್ ಓಟಿಟಿಯಲ್ಲೂ ಭರ್ಜರಿ ಸಿನಿಮಾಗಳು ಸ್ಟ್ರೀಮಿಂಗ್ ಆಗಲಿವೆ.
ಸೋಮವಾರದಿಂದಲೇ ಓಟಿಟಿಯಲ್ಲಿ ಹೊಸ ಹೊಸ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ರಿಲೀಸ್ ಆಗಲು ಶುರುವಾಗುತ್ತದೆ. ಗುರುವಾರ, ಶುಕ್ರವಾರ ಅಂತೂ ಆ ಸಂಖ್ಯೆ ಹೆಚ್ಚಾಗುತ್ತೆ. ಅದಾಗಲೇ ಥಿಯೇಟರ್‌ಗಳಲ್ಲಿ ಸಿನಿಮಾ ನೋಡಿದವರು, ನೋಡದೇ ಇದ್ದವರು ಓಟಿಟಿಯಲ್ಲಿ ಸಿನಿಮಾ ನೋಡಲು ಮುಗಿಬೀಳ್ತಾರೆ. ವೆಬ್ ಸೀರಿಸ್‌ಗಳಂತೂ ಎಕ್ಸ್‌ಕ್ಲೂಸಿವ್ ಆಗಿ ಡಿಜಿಟಲ್ ಫ್ಲಾಟ್‌ಪಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಆಗುತ್ತವೆ.

ಈ ವಾರ ಥಿಯೇಟರ್‌ನಲ್ಲಿ ಕನ್ನಡದ 'ತತ್ಸಮ ತದ್ಭವ' ಹಾಗೂ ತಮಿಳಿನ 'ಮಾರ್ಕ್ ಆಂಟನಿ' ಸಿನಿಮಾಗಳು ರಿಲೀಸ್ ಆಗ್ತಿವೆ. ಆದರೆ ಓಟಿಟಿಗೆ ಸೂಪರ್ ಹಿಟ್ ಸಿನಿಮಾಗಳ ಜೊತೆಗೆ ಫ್ಲಾಪ್ ಸಿನಿಮಾಗಳು ಎಂಟ್ರಿ ಕೊಡುತ್ತಿವೆ. ಆ ಕಂಪ್ಲೀಟ್ ಲಿಸ್ಟ್ ಇಲ್ಲಿದೆ ನೋಡಿ.
ಜೀ 5
1. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ
ಜುಲೈ 21ಕ್ಕೆ ರಿಲೀಸ್ ಆಗಿ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಸದ್ದು ಮಾಡಿದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ. ಸಿನಿಮಾ ಈ ವಾರ ಜೀ5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಈ ಕಾಮಿಡಿ ಎಂಟರ್‌ಟೈನರ್ ಚಿತ್ರದಲ್ಲಿ ಬಹುತೇಕ ಹೊಸ ಪ್ರತಿಭೆಗಳು ನಟಿಸಿದ್ದಾರೆ. ಪ್ರೇಕ್ಷಕರನ್ನು ಸಿಕ್ಕಾಪಟ್ಟೆ ನಗಿಸಿ ರಂಜಿಸಿದ ಸಿನಿಮಾ ಇತ್ತೀಚೆಗೆ 50 ದಿನ ಪೂರೈಸಿತ್ತು. ವರುಣ್ ಸ್ಟುಡಿಯೋಸ್ ಹಾಗೂ ಗುಲ್‌ಮೊಹರ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ತೆಲುಗಿಗೂ ಡಬ್ ಆಗಿ ರಿಲೀಸ್ ಆಗಿತ್ತು. ಶುಕ್ರವಾರದಿಂದ ಕನ್ನಡ ಹಾಗೂ ತೆಲುಗಿನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ.

ನೆಟ್‌ಫ್ಲಿಕ್ಸ್
1. ಭೋಳಾ ಶಂಕರ್
ಸೆಪ್ಟೆಂಬರ್ 15ಕ್ಕೆ ತೆಲುಗಿನ 'ಭೋಳಾ ಶಂಕರ್' ಸಿನಿಮಾ ನೆಟ್‌ಫ್ಲಿಕ್ಸ್‌ಗೆ ಬರ್ತಿದೆ. ತಮಿಳಿನ 'ವೇದಾಳಂ' ಸಿನಿಮಾ ರೀಮೆಕ್ ಆಗಿದ್ದ ಈ ಸಿನಿಮಾ ತೆಲುಗಿನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಮೆಹರ್ ರಮೇಶ್ ನಿರ್ದೇಶನದ ಚಿತ್ರದಲ್ಲಿ ಚಿರಂಜೀವಿ, ತಮನ್ನಾ, ಕೀರ್ತಿ ಸುರೇಶ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಅಣ್ಣ- ತಂಗಿ ಅನುಬಂಧದ ಜೊತೆಗೆ ಮಹಿಳಾ ಕಳ್ಳಸಾಗಣೆ ಸುತ್ತಾ ಈ ಸಿನಿಮಾ ಕಥೆ ಸಾಗುತ್ತದೆ. ಥಿಯೇಟರ್‌ಗಳಲ್ಲಿ ಸೋಲುಂಡ ಸಿನಿಮಾ ಓಟಿಟಿಯಲ್ಲಿ ಸದ್ದು ಮಾಡುತ್ತಾ ಕಾದು ನೋಡಬೇಕಿದೆ.
2. ರಾಮಬಾಣಂ
ಗುರುವಾರವೇ ಗೋಪಿಚಂದ್ ನಟನೆಯ 'ರಾಮಬಾಣಂ' ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಇದೊಂದು ಫ್ಯಾಮಿಲಿ ಆಕ್ಷನ್ ಎಂಟರ್‌ಟೈನರ್ ಆಗಿದ್ದು ಶಿವಾಸ್ ಆಕ್ಷನ್ ಕಟ್ ಹೇಳಿದ್ದಾರೆ. ಜಗಪತಿ ಬಾಬು, ಖುಷ್ಬು ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದಲ್ಲಿ ಡಿಂಪಲ್ ಹಯಾತಿ ನಾಯಕಿಯಾಗಿ ಮಿಂಚಿದ್ದಾರೆ. ಹಳೇ ರೊಟೀನ್ ಸ್ಟೋರಿ ಆಗಿದ್ದರಿಂದ ಥಿಯೇಟರ್‌ಗಳಲ್ಲಿ ಈ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿರಲಿಲ್ಲ.
3. ವನ್ಸ್ ಅಪಾನ್ ಎ ಕ್ರೈಮ್ (ಜಪನೀಸ್ ಸಿನಿಮಾ)- ಸೆಪ್ಟೆಂಬರ್ 13
4. ಲವ್ ಎಟ್ ಫಸ್ಟ್ ಸೈಟ್ (ಹಾಲಿವುಡ್ ಸಿನಿಮಾ)
5. ವೈಫ್‌ಲೈಕ್(ಸಿನಿಮಾ)- ಸೆಪ್ಟೆಂಬರ್ 11
6. ಟಾಪಿ/ಕ್ಲಾಸ್‌ಆಕ್ಟ್ (ಸೀಸನ್- 1)- ಸೆಪ್ಟೆಂಬರ್ 13
7. ರೆಜ್ಲರ್ಸ್ (ಡಾಕ್ಯೂಮೆಂಟರಿ ಸೀರೀಸ್)-ಸೆಪ್ಟೆಂಬರ್ 13
8. ಸರ್ವೈವಿಂಗ್ ಸಮ್ಮರ್ ಸೀಜನ್ 2
9. ಥರ್ಸ್‌ಡೇ ವಿಡೋಸ್ (ಸೀಜನ್ 1 - ಸ್ಪ್ಯಾನಿಷ್ ಸೀರಿಸ್) - ಸೆಪ್ಟೆಂಬರ್ 13
10. ಎಹ್ರೆಂಗಾರ್ಡ್: ದಿ ಆರ್ಟ್ ಆಫ್ ಸೆಡಕ್ಷನ್ (ಸೀರಿಸ್) - ಸೆಪ್ಟೆಂಬರ್ 13
11. ಬ್ಯಾಂಡ್ ಆಫ್ ಬ್ರದರ್ಸ್ (ಲಿಮಿಟೆಡ್ ಸರಣಿ) - ಸೆಪ್ಟೆಂಬರ್ 15
ಡಿಸ್ನಿ ಪ್ಲಸ್ ಹಾಟ್‌ಸ್ಟರ್
1. ಹಾನ್ ರಿವರ್ ಪೊಲೀಸ್ (ಸೀರಿಸ್) - ಸೆಪ್ಟೆಂಬರ್ 13
2. ಅತಿಥಿ (ತೆಲುಗು ಸೀರಿಸ್) - ಸೆಪ್ಟೆಂಬರ್ 16
3. ದಿ ಅದರ್ ಬ್ಲಾಕ್ ಗರ್ಲ್ (ಸೀರಿಸ್) - ಸೆಪ್ಟೆಂಬರ್ 15
4. ಯಾನಿಮಲ್ಸ್ ಅಪ್‌ಕ್ಲೋಜ್ (ಡಾಕ್ಯುಮೆಂಟರಿ) - ಸೆಪ್ಟೆಂಬರ್ 13
5. ವೆಲ್ಕಮ್ ಟೂ ದ ರೆಕ್ಸಾಮ್ ಸೀಸನ್ 2 (ಇಂಗ್ಲಿಷ್ ಡಾಕ್ಯುಮೆಂಟರಿ) - ಸೆಪ್ಟೆಂಬರ್ 13
6. ಎಲಿಮೆಂಟಲ್ (ಇಂಗ್ಲಿಷ್ ಸಿನಿಮಾ) - ಸೆಪ್ಟೆಂಬರ್ 13
ಅಮೇಜಾನ್ ಪ್ರೈಂ
1. ಮುಂಬೈ ಮೇರಿ ಜಾನ್ (ಹಿಂದಿ ವೆಬ್ ಸರಣಿ) - ಸೆಪ್ಟೆಂಬರ್ 14
2. ಮಿಲಿಯನ್ ಮೈಲ್ಸ್ ಇವೇ (ಇಂಗ್ಲಿಷ್ ಸಿನಿಮಾ) - ಸೆಪ್ಟೆಂಬರ್ 15
3. ವೈಲ್ಡರ್ನೆಸ್ (ಇಂಗ್ಲಿಷ್ ಸೀರಿಸ್) - ಸೆಪ್ಟೆಂಬರ್ 15
4. ಕೆಲ್ಸಿ (ಇಂಗ್ಲಿಷ್ ಸಿನಿಮಾ) - ಸೆಪ್ಟೆಂಬರ್ 12
5. ದ ಕಿಡ್ನಾಪಿಂಗ್ ಡೇ (ಕೊರಿಯನ್ ವೆಬ್ ಸೀರಿಸ್) - ಸೆಪ್ಟೆಂಬರ್ 13
6. ಬಾರ್ಬಿ- ಇಂದಿನಿಂದ (ಸೆಪ್ಟೆಂಬರ್ 13)ಸ್ಟ್ರೀಮಿಂಗ್ ಆಗ್ತಿದ್ದು ಚಂದಾದಾದರು ಹಣ ಪಾವತಿಸಿ ವೀಕ್ಷಿಸಬಹುದು. ಮುಂದಿನ ವಾರ ಎಲ್ಲರಿಗೂ ವೀಕ್ಷಿಸುವ ಅವಕಾಶ ಸಿಗಲಿದೆ.


Click it and Unblock the Notifications











