Ott Releases this week: ಮೇ ಕೊನೆ ವಾರ 15ಕ್ಕೂ ಅಧಿಕ ಸಿನಿಮಾ, ಸೀರಿಸ್ ಸ್ಟ್ರೀಮಿಂಗ್

ಕನ್ನಡದಲ್ಲಿ 'ಡೆವಿಲ್', 'ಮಾರ್ಟಿನ್', 'ಕೆಡಿ' ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. 'ಮ್ಯಾಕ್ಸ್', 'ಯುಐ' ಹಾಗೂ 'ಭೀಮ' ಸಿನಿಮಾಗಳು ರಿಲೀಸ್ ಬಗ್ಗೆ ಇನ್ನು ಖಚಿತ ಮಾಹಿತಿ ಸಿಕ್ಕಿಲ್ಲ. ಆದರೆ ಸದ್ಯಕ್ಕೆ ದೊಡ್ಡ ಸಿನಿಮಾಗಳು ತೆರೆಗೆ ಬರುವ ಸುಳಿವು ಸಿಗುತ್ತಿಲ್ಲ.

ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಲೂ ತೆರೆಗ ಬರುವ ನಿರೀಕ್ಷೆಯಿದೆ. ಇದ್ದಿದ್ದರಲ್ಲಿ ಧನಂಜಯ್ ನಟನೆಯ 'ಕೋಟಿ' ಸಿನಿಮಾ ಜೂನ್ 15ಕ್ಕೆ ತೆರೆಗೆ ಬರುವುದು ಖಚಿತವಾಗಿದೆ. ಇನ್ನು ಓಟಿಟಿಯಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು ಇತ್ತೀಚೆಗೆ ಬರುತ್ತಿವೆ. ಪರಭಾಷಾ ಕಂಟೆಂಟ್ ನೋಡಿ ನೋಡಿ ಸಾಕಾಗಿದ್ದವರು ಬ್ಲಿಂಕ್, 'ಶಾಖಾಹಾರಿ' ರೀತಿಯ ಉತ್ತಮ ಸಿನಿಮಾಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Ott Releases this week from Panchayat-3 to lineman many films series ready to streaming

ಮೇ ಕೊನೆ ವಾರದಲ್ಲಿ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಓಟಿಟಿಗೆ ಬರುತ್ತಿದೆ ಎನ್ನುವುದರ ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಕನ್ನಡ ಸಿನಿಮಾಗಳು, ಕನ್ನಡಕ್ಕೆ ಡಬ್ ಆಗಿ ಬಂದಿರುವ ಪರಭಾಷಾ ಸಿನಿಮಾಗಳು ಇವೆ. ಇಲ್ಲಿದೆ ಅಂತಹ ಸಿನಿಮಾ, ವೆಬ್‌ ಸೀರಿಸ್‌ಗಳ ಕಂಪ್ಲೀಟ್ ಲಿಸ್ಟ್.

ಅಮೇಜಾನ್ ಪ್ರೈಂ

1. ಶಾಖಾಹಾರಿ

ರಂಗಾಯಣ ರಘು ಹಾಗೂ ಗೋಪಾಲ ದೇಶಪಾಂಡೆ ನಟನರ ಮರ್ಡರ್ ಮಿಸ್ಟರಿ 'ಶಾಖಾಹಾರಿ' ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ತಿದೆ. ಕಳೆದ ವಾರವೇ ವಿದೇಶಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿತ್ತು. ವೀಕೆಂಡ್ ವೇಳೆಗೆ ಭಾರತದಲ್ಲಿ ಕೂಡ ವೀಕ್ಷಣೆಗೆ ಲಭ್ಯವಾಗಿತ್ತು. ಕಳೆದ 3 ದಿನಗಳಿಂದ ಕನ್ನಡಿಗರು ಅಮೇಜಾನ್ ಪ್ರೈಂನಲ್ಲಿ ಸಿನಿಮಾ ನೋಡುತ್ತಿದ್ದಾರೆ. ಪರಭಾಷಿಕರು ಕೂಡ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

2. ಲೈನ್‌ಮ್ಯಾನ್

ರಘು ಶಾಸ್ತ್ರಿ ನಿರ್ದೇಶನದ 'ಲೈನ್‌ಮ್ಯಾನ್' ಸಿನಿಮಾ ಕೂಡ ಸದ್ದಿಲ್ಲದೇ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕೂಡ ಈ ಸಿನಿಮಾ ಪ್ರದರ್ಶನವಾಗಿತ್ತು. ಮಾರ್ಚ್ 22ಕ್ಕೆ ಸಿನಿಮಾ ಬಿಡುಗಡೆ ಆಗಿತ್ತು. ತ್ರಿಗುಣ್ ಚಿತ್ರದ ಹೀರೊ ಆಗಿ ನಟಿಸಿದ್ದು ಕಾಜಲ್ ಕುಂದರ್, ಮೈಕೋ ನಾಗರಾಜ್, ಬಿ. ಜಯಶ್ರೀ, ಹರಿಣಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

Ott Releases this week from Panchayat-3 to lineman many films series ready to streaming

3. ಪಂಚಾಯತ್-3

ಹಿಂದಿ ವೆಬ್‌ ಸೀರಿಸ್ 'ಪಂಚಾಯತ್' ಸೀಸನ್ 3 ಸಹ ಬಿಡುಗಡೆಯಾಗಿದೆ. 4 ವರ್ಷಗಳ ಹಿಂದೆ ಮೊದಲ ಸೀಸನ್ ಶುರುವಾಗಿ ವೀಕ್ಷಕರ ಗಮನ ಸೆಳೆದಿತ್ತು. ಈ ಕಾಮಿಡಿ ಡ್ರಾಮಾಗೆ ಚಂದನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಮಧ್ಯರಾತ್ರಿಯಿಂದಲೇ 3ನೇ ಸೀಸನ್ ಸ್ಟ್ರೀಮಿಂಗ್ ಆಗುತ್ತಿದೆ. 8 ಎಪಿಸೋಡ್‌ಗಳಾಗಿ ವೀಕ್ಷಣೆಗೆ ಸಿಗಲಿದೆ. ಅಭಿಷೇಕ್ ತ್ರಿಪಾಠಿಯಾಗಿ ಜಿತೇಂದ್ರ ಕುಮಾರ್, ಬ್ರಿಜ್ ಭೂಷಣ್ ದುಬೆಯಾಗಿ ರಘುಬೀರ್ ಯಾದವ್, ಮಂಜು ದೇವಿಯಾಗಿ ನೀನಾ ಗುಪ್ತಾ, ವಿಕಾಸ್ ಆಗಿ ಚಂದನ್ ರಾಯ್ ಮತ್ತು ರಿಂಕಿಯಾಗಿ ಸಾನ್ವಿಕಾ ನಟಿಸಿದ್ದಾರೆ.

ನೆಟ್‌ಫ್ಲಿಕ್ಸ್

1. ಎ ಪಾರ್ಟ್ ಆಫ್ ಯೂ(ಸ್ವೀಡಿಷ್ ಸಿನಿಮಾ) ಮೇ 31

2. ಗ್ರೀಕ್ ಗರ್ಲ್(ಇಂಗ್ಲೀಷ್ ಸೀರಿಸ್) ಮೇ 30

3. ಎರಿಕ್(ಇಂಗ್ಲೀಷ್ ಸೀರಿಸ್) ಮೇ 30

4. ರೈಸಿಂಗ್ ವಾಯಿಸೆಸ್(ಸ್ವೀಡಿಷ್ ಸೀರಿಸ್) ಮೇ 31

5. ಲಂಬರ್‌ಜಾಕ್ ದ ಮಾನ್‌ಸ್ಟರ್(ಜಪಾನೀಸ್ ಸಿನಿಮಾ) ಜೂನ್ 1

ಜಿಯೋ ಸಿನಿಮಾ

1. ದ ಲಾಸ್ಟ್ ಆಫ್ ರೈಫಿಲ್ ಮ್ಯಾನ್(ಇಂಗ್ಲೀಷ್ ಸಿನಿಮಾ) ಮೇ 31

2. ಇಲ್ಲೀಗಲ್ ಸೀಸನ್ 3(ಹಿಂದಿ ಸೀರಿಸ್) ಮೇ 29

3. ದೇದ್ ಬಿಗಾ ಜಮೀನ್(ಹಿಂದಿ ಸಿನಿಮಾ) ಮೇ 31

4. ಐಲೀನ್(ಇಂಗ್ಲೀಷ್ ಸಿನಿಮಾ) ಜೂನ್ 1

5. ಲಾ ಅಂಡ್ ಆರ್ಡರ್ ಟೊರಂಟೊ(ಇಂಗ್ಲೀಷ್ ಸೀರಿಸ್) ಮೇ 31

ಹಾಟ್‌ಸ್ಟರ್

1. ದ ಫಸ್ಟ್ ಓಮನ್(ಇಂಗ್ಲೀಷ್ ಸಿನಿಮಾ) ಮೇ 30

2. ಕಾಮ್ಡೆನ್(ಇಂಗ್ಲೀಷ್ ಸೀರಿಸ್) ಮೇ 29

3. ಉಪ್ಪು ಪುಳಿ ಖಾರಂ(ತಮಿಳು ಸೀರಿಸ್) ಮೇ 30

4. ಜಿಮ್ ಹಾನ್ಸನ್ ಐಡಿಯಾ ಮ್ಯಾನ್(ಇಂಗ್ಲೀಷ್ ಸಿನಿಮಾ) ಮೇ 31

ಜೀ 5

1. ಸ್ವಾತಂತ್ರ ವೀರ್‌ ಸಾರ್ವಕರ್

ವೀರ್‌ ಸಾರ್ವಕರ್ ಜೀವನಾಧರಿತ ಸಿನಿಮಾ ಮಾರ್ಚ್‌ 22ಕ್ಕೆ ತೆರೆಗೆ ಬಂದಿತ್ತು. ರಣ್‌ದೀಪ್ ಹೂಡ ನಿರ್ದೇಶಿಸಿ ನಟಿಸಿದ್ದ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಇದೀಗ ಈ ಬಯೋಪಿಕ್ ಸಿನಿಮಾ ಓಟಿಟಿಗೆ ಬರ್ತಿದೆ. ಜೀ5ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ನಿರ್ದೇಶನ, ನಟನೆ ಜೊತೆಗೆ ರಣ್‌ದೀಪ್ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರಾಗಿ ವೀರ್‌ ಸಾರ್ವಕರ್ ಹೆಸರಾಗಿದ್ದರು.

2. ಹೌಸ್ ಆಫ್ ಲೈಸ್(ಹಿಂದಿ ಸೀರಿಸ್) ಮೇ 31

More from Filmibeat

English summary
May last week ott streaming films, serias details;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X