OTT releases this week; ಈ ವಾರ ಓಟಿಟಿಗೆ ಎಂಟ್ರಿ ಆಗುತ್ತಿರುವ ಸಿನಿಮಾ, ವೆಬ್ ಸೀರಿಸ್ ಲಿಸ್ಟ್

ಮತ್ತೊಂದು ವಾರ ಕಳೆದು ಹೊಸ ವಾರ ಶುರುವಾಗಿದೆ. ಅದ್ಯಾಕೋ ಸದ್ಯಕ್ಕೆ ದೊಡ್ಡ ಸಿನಿಮಾಗಳು ಥಿಯೇಟರ್‌ ಕಡೆ ಬರುವಂತೆ ಕಾಣುತ್ತಿಲ್ಲ. ಸಣ್ಣ ಸಿನಿಮಾಗಳು ಪ್ರೇಕ್ಷಕರನ್ನು ಸೆಳೆಯುತ್ತಿಲ್ಲ. ಓಟಿಟಿಯಲ್ಲೂ ಇದೇ ಪರಿಸ್ಥಿತಿ ಇದೆ. ಒಮ್ಮೊಮ್ಮೆ ಒಟ್ಟೊಟ್ಟಿಗೆ ಒಂದೇ ವೀಕೆಂಡ್‌ನಲ್ಲಿ ದೊಡ್ಡ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತವೆ. ಕೆಲವೊಮ್ಮೆ ಖಾಲಿ ಖಾಲಿ ಎನಿಸಿಬಿಡುತ್ತದೆ.

ಕಳೆದೆರಡು ವಾರಗಳಿಂದ ಓಟಿಟಿ ವೀಕ್ಷಕರಿಗೆ ಹಬ್ಬ ಎನ್ನುವಂತಾಗಿತ್ತು. ಫೆಬ್ರವರಿ 9ರಂದು ದರ್ಶನ್ ನಟನೆಯ 'ಕಾಟೇರ', ಮಹೇಶ್ ಬಾಬು 'ಗುಂಟೂರು ಖಾರಂ', ಧನುಷ್- ಶಿವಣ್ಣ ಜೋಡಿಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾಗಳು ತೆರೆಗಪ್ಪಳಿಸಿತ್ತು. ಇನ್ನು ಕಳೆದ ವಾರ ಕೂಡ 'ದಿ ಕೇರಳ ಸ್ಟೋರಿ', 'ಡಂಕಿ', 'ನಾ ಸಾಮಿ ರಂಗ' ಹೀಗೆ ಹತ್ತಾರು ಸಿನಿಮಾ ಹಿಟ್ ಸಿನಿಮಾಗಳು ಓಟಿಟಿಗೆ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಟ್ಟಿದ್ದವು.

OTT releases this week: From Poacher, Malaikottai Vaaliban to Mea Culpa

ಈ ವಾರ ಹಿಟ್ ಸಿನಿಮಾಗಳು ಇಲ್ಲದೇ ಇದ್ದರೂ ಇಂಟ್ರೆಸ್ಟಿಂಗ್ ಸಿನಿಮಾಗಳು ಅಮೇಜಾನ್ ಪ್ರೈಂ, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್‌ ಸಜ್ಜಾಗಿವೆ. ಸಿನಿಮಾಗಳ ಜೊತೆಗೆ ಒಂದಷ್ಟು ವೆಬ್‌ ಸೀರಿಸ್ ಕೂಡ ಈ ಲಿಸ್ಟ್‌ನಲ್ಲಿವೆ.

ಅಮೇಜಾನ್ ಪ್ರೈಂ

1. ಪೋಚರ್

'ಡೆಲ್ಲಿ ಕ್ರೈಂ' ವೆಬ್ ಸೀರಿಸ್ ಖ್ಯಾತಿಯ ರಿಚ್ಚಿ ಮೆಹ್ತಾ ನಿರ್ದೇಶನದ ಹೊಸ ಕ್ರೈಂ ಡ್ರಾಮಾ 'ಪೋಚರ್'. ತಮ್ಮ ಎಟರ್ನಲ್ ಸನ್‌ಶೈನ್ ಬ್ಯಾನರ್ ಅಡಿಯಲ್ಲಿ ಆಲಿಯಾ ಭಟ್ ಈ ಸೀರಿಸ್ ನಿರ್ಮಿಸಿದ್ದಾರೆ. ನಿಜ ಘಟನೆಗಳನ್ನು ಆಧರಿಸಿ ಈ ಸೀರಿಸ್ ಕಟ್ಟಿಕೊಡಲಾಗಿದೆ. ಈಗಾಗಲೇ ಟ್ರೈಲರ್ ರಿಲೀಸ್ ಆಗಿ ಗಮನ ಸೆಳೆದಿದೆ. ಫೆಬ್ರವರಿ 23ಕ್ಕೆ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಲಿದೆ.

OTT releases this week: From Poacher, Malaikottai Vaaliban to Mea Culpa

2. ಮಲೈಕೋಟ ವಾಲಿಬನ್

ಗಣರಾಜ್ಯೋತ್ಸ ಸಂಭ್ರಮದಲ್ಲಿ ಮೋಹನ್ ಲಾಲ್ ನಟನೆಯ 'ಮಲೈಕೋಟೈ ವಾಲಿಬನ್' ಸಿನಿಮಾ ತೆರೆ ಕಂಡಿತ್ತು. ಈ ಎಪಿಕ್ ಆಕ್ಷನ್ ಡ್ರಾಮಾ ಚಿತ್ರಕ್ಕೆ ಜಿಜೊ ಜೋಸ್ ಪೆಲ್ಲಿಸೆರಿ ಆಕ್ಷನ್ ಕಟ್ ಹೇಳಿದ್ದರು. 65 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿತ್ತು. ಇದೇ ಕಾರಣಕ್ಕೆ ಅಂದುಕೊಂಡಿದ್ದಕ್ಕಿಂತ ಬಹಳ ಬೇಗ ಸಿನಿಮಾ ಓಟಿಟಿಗೆ ಬರುತ್ತೆ ಎನ್ನಲಾಗ್ತಿದೆ. ಇದೇ ಶುಕ್ರವಾರ ಸಿನಿಮಾ ಸ್ಟ್ರೀಮಿಂಗ್ ನಿರೀಕ್ಷೆಯಿದೆ.

ನೆಟ್‌ಫ್ಲಿಕ್ಸ್

1. ಮೈಕ್ ಏಪ್ಸ್: ರೆಡಿ ಟು ಸೆಲ್ ಔಟ್(ಕಾಮೆಡಿ ಸೀರಿಸ್)- ಫೆಬ್ರವರಿ 19

2. ಕ್ಯಾನ್ ಐ ಟೆಲ್ ಯು ಎ ಸೀಕ್ರೆಟ್(ಡಾಕ್ಯುಮೆಂಟರಿ ಸೀರಿಸ್) ಫೆಬ್ರವರಿ 21

3. ಐನ್‌ಸ್ಟಿನ್ ಅಂಡ್ ಎ ಬಾಂಬ್(ಡಾಕ್ಯುಮೆಂಟರಿ) ಫೆಬ್ರವರಿ 19

4. ಅವತಾರ್ ಅಂಡ್ ದಿ ಲಾಸ್ಟ್ ಎಯಿರ್ ಬೆಂಡರ್(ವೆಬ್ ಸೀರಿಸ್) ಫೆಬ್ರವರಿ 22

5. ಥ್ರೂ ಮೈ ವಿಂಡೋ 3: ಲುಕಿಂಗ್ ಅಟ್ ಯು(ಸ್ಪಾನಿಷ್ ಸಿನಿಮಾ) ಫೆಬ್ರವರಿ 23

6. ಸೌತ್ ಪಾ(ಇಂಗ್ಲೀಷ್ ಸಿನಿಮಾ) ಫೆಬ್ರವರಿ 22

7. ಮೀ ಕಲ್ಪಾ(ನೆಟ್‌ಫ್ಲಿಕ್ಸ್ ಸಿನಿಮಾ) ಫೆಬ್ರವರಿ 23

8. ಫಾರ್ಮುಲಾ 1: ಡ್ರೈವ್ ಟು ಸರ್ವೈವ್ ಸೀಸನ್-6 (ಡಾಕ್ಯುಮೆಂಟರಿ ಸೀರಿಸ್) ಫೆಬ್ರವರಿ 23

9. ದಿ ಇಂದ್ರಾಣಿ ಮುಖರ್ಜಿ ಸ್ಟೋರಿ: ದಿ ಬರೀಡ್ ಟ್ರೂತ್(ಡಾಕ್ಯುಮೆಂಟರಿ ಸೀರಿಸ್) ಫೆಬ್ರವರಿ 23

10. ಎವರಿಥಿಂಗ್ ಎವರಿವೇರ್ ಆಲ್ ಅಟ್ ಒನ್ಸ್- ಫೆಬ್ರವರಿ 23

11. ಮಾರ್ಸೆಲ್ ದಿ ಶೆಲ್ ವಿತ್ ಶೂಸ್ ಆನ್-(ಹಾಲಿವುಡ್ ಸಿನಿಮಾ) ಫೆಬ್ರವರಿ 24

12. ರಿಥಮ್ ಪ್ಲಸ್ ಫ್ಲೋ ಇಟಲಿ(ರಿಯಾಲಿಟಿ ಸೀರಿಸ್) ಫೆಬ್ರವರಿ 19

ಡಿಸ್ನಿ ಪ್ಲಸ್‌ಹಾಟ್‌ಸ್ಟರ್

1. ವಿಲ್ ಟ್ರೆಂಟ್ ಸೀಸನ್-2 (ಇಂಗ್ಲೀಷ್ ಸಿನಿಮಾ) ಫೆಬ್ರವರಿ 21

2. ಸ್ಟಾರ್ ವಾರ್ಸ್: ದಿ ಬ್ಯಾಡ್ ಬ್ಯಾಚ್(ಇಂಗ್ಲೀಷ್ ಆನಿಮೇಷನ್ ಸಿನಿಮಾ) ಫೆಬ್ರವರಿ 21

More from Filmibeat

English summary
List of New Movies and Shows to watch OTT this Week:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X