OTT releases this week: ಈ ವಾರ ಓಟಿಟಿ ರಿಲೀಸ್ ಸಿನಿಮಾ, ವೆಬ್‌ಸೀರಿಸ್ ಲಿಸ್ಟ್: ಆ 2 ಚಿತ್ರಗಳ ಮೇಲೆ ಎಲ್ಲರ ಕಣ್ಣು
ದಸರಾ ಸಂಭ್ರಮದಲ್ಲಿ ಕನ್ನಡ 'ಘೋಸ್ಟ್', ತಮಿಳಿನ 'ಲಿಯೋ' ಹಾಗೂ ತೆಲುಗಿನ 'ಭಗವಂತ್ ಕೇಸರಿ', 'ಟೈಗರ್ ನಾಗೇಶ್ವರರಾವ್' ಸಿನಿಮಾಗಳು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ ಸದ್ದು ಮಾಡುತ್ತಿವೆ. ಈ ವಾರ ಯಾವುದೇ ದೊಡ್ಡ ಸಿನಿಮಾಗಳು ಥಿಯೇಟರ್ ಕಡೆ ಮುಖ ಮಾಡ್ತಿಲ್ಲ. ಆದರೆ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗಲಿವೆ.
ಓಟಿಟಿಯಲ್ಲಿ ಕನ್ನಡ ಕಂಟೆಂಟ್ ಕಮ್ಮಿ ಎನ್ನುವ ಆರೋಪವಿದೆ. ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬರ್ತಾವೆ. ಇನ್ನು ವೆಬ್ ಸೀರಿಸ್‌ಗಳು ಬರೋದೇ ಕಷ್ಟವಾಗಿಬಿಟ್ಟಿದೆ. ಕಳೆದ ವಾರ ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ನಟನೆಯ 'ತತ್ಸಮ ತದ್ಭವ' ಸಿನಿಮಾ ಬಂದು ರಂಜಿಸಿತ್ತು. ವಿಜಯ್ ರಾಘವೇಂದ್ರ ನಟನೆಯ 'ಕದ್ದಚಿತ್ರ' ಕೂಡ ಪ್ರೈಂ ವಿಡಿಯೋಗೆ ಎಂಟ್ರಿ ಕೊಟ್ಟಿತ್ತು.

ಇದೀಗ ಮತ್ತೊಂದು ವಾರ ಕಳೆದಿದ್ದು ಈ ವಾರ 25ಕ್ಕೂ ಅಧಿಕ ಸಿನಿಮಾ, ವೆಬ್ ಸೀರಿಸ್‌ಗಳು ಓಟಿಟಿ ಪ್ರವೇಶಿಸುತ್ತಿವೆ. ಆದರೆ ಸಿನಿರಸಿಕರ ಗಮನ ಆ ಎರಡು ಸಿನಿಮಾಗಳ ಮೇಲಿವೆ. ಈ ವಾರ ಸ್ಟ್ರೀಮಿಂಗ್ ಆಗಲಿರುವ ಸಿನಿಮಾ, ವೆಬ್‌ಸೀರಿಸ್ ಲಿಸ್ಟ್ ಇಲ್ಲಿದೆ ನೋಡಿ.
ನೆಟ್‌ಫ್ಲಿಕ್ಸ್
1. ಚಂದ್ರಮುಖಿ-2
ಭಾರೀ ನಿರೀಕ್ಷೆ ಹುಟ್ಟಾಕ್ಕಿದ್ದ ಕಾಮಿಡಿ, ಹಾರರ್ 'ಚಂದ್ರಮುಖಿ-2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಪಿ. ವಾಸು ನಿರ್ದೇಶನದ ಈ ಚಿತ್ರದಲ್ಲಿ ರಾಘವ ಲಾರೆನ್ಸ್ ಹಾಗೂ ಕಂಗನಾ ರಾಣಾವತ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಆಪ್ತಮಿತ್ರ, ಚಂದ್ರಮುಖಿ ಛಾಯೆಯಲ್ಲೇ ಈ ಚಿತ್ರವೂ ಮೂಡಿ ಬಂದಿತ್ತು. ಆದರೆ ಥಿಯೇಟರ್‌ಗಳಲ್ಲಿ ಪ್ರೇಕ್ಷಕರನ್ನು ರಂಜಿಸುವಲ್ಲಿ ವಿಫಲವಾಗಿತ್ತು. ಅಕ್ಟೋಬರ್ 26ರಂದು ಓಟಿಟಿಯಲ್ಲಿ ನೋಡಲು ಕೆಲವರು ಉತ್ಸುಕರಾಗಿದ್ದಾರೆ.
2. ಬರ್ನಿಂಗ್ ಬಿಟ್ರೇಯಲ್ (ಪೋರ್ಚುಗೀಸ್ ಸಿನಿಮಾ) - ಅಕ್ಟೋಬರ್ 25
3. ಲೈಫ್ ಆನ್ ಅವರ್ ಪ್ಲಾನೆಟ್ (ಇಂಗ್ಲಿಷ್ ಸೀರಿಸ್) - ಅಕ್ಟೋಬರ್ 25
4. ಲಾಂಗ್ ಲೈವ್ ಲವ್ (ಥಾಯ್ ಸಿನಿಮಾ) - ಅಕ್ಟೋಬರ್ 26
5. ಪ್ಲುಟೊ (ಜಪಾನೀಸ್ ಸೀರಿಸ್) - ಅಕ್ಟೋಬರ್ 26 ರಂದು ಸ್ಟ್ರೀಮಿಂಗ್
6. ಪೇಯ್ನ್ ಹ್ಯಾಜ್ಲರ್ಸ್ (ಇಂಗ್ಲಿಷ್ ಸಿನಿಮಾ)- ಅಕ್ಟೋಬರ್ 27
7. ಸಿಸ್ಟರ್ ಡೆತ್ (ಸ್ಪ್ಯಾನಿಷ್ ಸಿನಿಮಾ) - ಅಕ್ಟೋಬರ್ 27
8. ಟಾರ್ (ಸ್ವೀಡಿಷ್ ಸೀರಿಸ್)- ಅಕ್ಟೋಬರ್ 27
9. ಎಲ್ಲೋ ಡೋರ್(ಕೊರಿಯನ್ ಸಿನಿಮಾ)ಅಕ್ಟೋಬರ್ 27
10. ಕ್ಯಾಸ್ಟ್ ಅವೇ ದಿವಾ (ಕೊರಿಯನ್ ಸೀರಿಸ್) - ಅಕ್ಟೋಬರ್ 28
ಡಿಸ್ನಿ ಪ್ಲಸ್ ಹಾಟ್‌ಸ್ಟರ್
1. ಸ್ಕಂದ
ತೆಲುಗಿನಲ್ಲಿ ರಾಮ್ ಪೋತಿನೇನಿ ಹಾಗೂ ಶ್ರೀಲೀಲಾ ನಟನೆಯ 'ಸ್ಕಂದ' ಸಿನಿಮಾ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿತ್ತು. ಬೋಯಪಾಟಿ ಶ್ರೀನು ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಟ್ಟಿದ್ದರು. ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾ ಅಕ್ಟೊಬರ್ 27ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
2. ಕಾಫಿ ವಿತ್ ಕರಣ್ ಸೀಸನ್- 8 (ಹಿಂದಿ ಟಾಕ್ ಶೋ) - ಅಕ್ಟೋಬರ್ 26
ಅಮೇಜಾನ್ ಪ್ರೈಂ
1. ಪರಂಪೋರುಲ್ (ತಮಿಳು ಸಿನಿಮಾ) - ಅಕ್ಟೋಬರ್ 24
2. ಆಸ್ಪ್ರಿಂಟ್ಸ್ ಸೀಸನ್- 2 (ಹಿಂದಿ ಸೀರಿಸ್) - ಅಕ್ಟೋಬರ್ 25
3. ಟ್ರಾನ್ಸ್‌ಫಾರ್ಮ್ಸ್: ರೈಸ್ ಆಫ್ ದಿ ಬೀಸ್ಟ್ (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 26
4. ಕಾನ್ಸಕ್ರೇಷನ್ (ಇಂಗ್ಲಿಷ್ ಸಿನಿಮಾ) - ಅಕ್ಟೋಬರ್ 27
ಜೀ5
1. ದುರಂಗ್ ಸೀಸನ್- 2 (ಹಿಂದಿ ಸರಣಿ)- ಅಕ್ಟೋಬರ್ 24
2. ನಿಕೋಂಜ್ - ದಿ ಸರ್ಚ್ ಬಿಗಿನ್ಸ್ (ಬಂಗಾಳಿ ಸಿನಿಮಾ) - ಅಕ್ಟೋಬರ್ 27


Click it and Unblock the Notifications











