OTT Releases this week: ಈ ವಾರ 30 ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್: ಆ 3 ಚಿತ್ರಗಳ ಮೇಲೆ ಎಲ್ಲರ ಕಣ್ಣು
ದೀಪಾವಳಿ ಸಂಭ್ರಮ ಮುಗಿದಿದೆ. ಆದರೆ ವೀಕೆಂಡ್‌ನಲ್ಲಿ ಸಿನಿ ಹಬ್ಬ ಶುರುವಾಗುತ್ತಿದೆ. ಈ ವಾರ ರಕ್ಷಿತ್ ಶೆಟ್ಟಿ ನಟನೆಯ 'ಸಪ್ತಸಾಗರದಾಚೆ ಎಲ್ಲೋ' ಸೈಡ್- B ಸಿನಿಮಾ ರಿಲೀಸ್ ಆಗುತಿದೆ. ಆದರೆ ಓಟಿಟಿಯಲ್ಲಿ ಶಿವಣ್ಣನ 'ಘೋಸ್ಟ್' ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳು ಸ್ಟ್ರೀಮಿಂಗ್ ಆಗಲಿವೆ.
ದೊಡ್ಡ ದೊಡ್ಡ ಸಿನಿಮಾಗಳೇ ಈಗ ಎರಡು ವಾರಕ್ಕೆ ಥಿಯೇಟರ್‌ನಲ್ಲಿ ಆಟ ಮುಗಿಸಿಬಿಡುತ್ತವೆ. 100 ದಿನ, 200 ದಿನ ಸಿನಿಮಾ ಪ್ರದರ್ಶನ ಅನ್ನೋದೆಲ್ಲಾ ಕನಸಿನ ಮಾತು. ಸಿನಿಮಾ ಎಷ್ಟು ಕಲೆಕ್ಷನ್ ಮಾಡುತ್ತೆ ಅನ್ನೋದು ಮುಖ್ಯ ಎನ್ನುವಂತಾಗಿಬಿಟ್ಟಿದೆ. ಫಸ್ಟ್ ವೀಕೆಂಡ್‌ನಲ್ಲಿ ಸಂಪೂರ್ಣ ಬಂಡವಾಳವನ್ನು ವಾಪಸ್ ಪಡೆಯುವ ಲೆಕ್ಕಾಚಾರ ನಡೀತಿದೆ. ದೊಡ್ಡ ಸಿನಿಮಾಗಳು ಮಾತ್ರ 2ರಿಂದ 3 ವಾರ ಉತ್ತಮ ಪ್ರದರ್ಶನ ಕಾಣುತ್ತವೆ.

ಮೊದಲೆಲ್ಲಾ ಥಿಯೇಟರ್‌ನಲ್ಲಿ ರಿಲೀಸ್ ಆಗಿದ್ದ ಸಿನಿಮಾ ಟಿವಿಗೆ ಬರಲು ತಿಂಗಳುಗಳೇ ಬೇಕಾಗಿತ್ತು. ಆದರೆ ಈಗ ರಿಲೀಸ್ ಆಗಿ ತಿಂಗಳು ಕಳೆಯುವ ಮುನ್ನ ಓಟಿಟಿಗೆ ಎಂಟ್ರಿ ಕೊಡುತ್ತಿವೆ. ಅದಕ್ಕೂ ಮುನ್ನ ಸಿನಿಮಾ ಪೈರಸಿ ಆಗಿಬಿಡುತ್ತಿದೆ. ಪೈರಸಿ ಆಗುವ ಭಯದಿಂದ ಬಹಳ ಬೇಗ ಓಟಿಟಿಗೆ ಸ್ಟ್ರೀಮಿಂಗ್ ಮಾಡುವಂತಹ ವಾತಾವರಣ ನಿರ್ಮಾಣವಾಗಿದೆ. ಈ ವೀಕೆಂಡ್ ಓಟಿಟಿ ಸ್ಟ್ರೀಮಿಂಗ್ ಸಿನಿಮಾಗಳ ಲಿಸ್ಟ್ ಇಲ್ಲಿದೆ ಮುಂದೆ ಓದಿ.
ಜೀ-5
ಶ್ರೀನಿ ನಿರ್ದೇಶನದ 'ಘೋಸ್ಟ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ದಳವಾಯಿ ಶಿವಣ್ಣನ ಆರ್ಭಟಕ್ಕೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದರು. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿದ್ದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ದಸರಾ ಸಂಭ್ರಮದಲ್ಲಿ ರಿಲೀಸ್ ಆಗಿ ಸದ್ದು ಮಾಡಿದ 'ಘೋಸ್ಟ್' ಸಿನಿಮಾ ನವೆಂಬರ್ 17ಕ್ಕೆ ಜೀ-5ನಲ್ಲಿ ರಿಲೀಸ್ ಆಗಲಿದೆ. ತೆಲುಗು, ತಮಿಳು, ಮಲಯಾಳಂ ವರ್ಷನ್ ಕೂಡ ವೀಕ್ಷಕರಿಗೆ ಸಿಗಲಿದೆ.

ನೆಟ್‌ಫ್ಲಿಕ್ಸ್
1. ಲಿಯೋ
ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ಅಕ್ಟೋಬರ್ 19ರಂದು ರಿಲೀಸ್ ಆಗಿತ್ತು. ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದ್ದ ಸಿನಿಮಾ 12 ದಿನಕ್ಕೆ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಘೋಷಿಸಿತ್ತು. ನವೆಂಬರ್ 17ಕ್ಕೆ 'ಲಿಯೋ' ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುವ ಸಾಧ್ಯತೆಯಿದೆ.
2. ಬೆಸ್ಟ್ ಕ್ರಿಸ್ಮಸ್ ಎವರ್ (ನವೆಂಬರ್ 16)
3. ಕ್ರಿಮಿನಲ್ ಕೋಡ್ (ನವೆಂಬರ್ 14)
4. ಹೌಟೂ ಬಿಕಮ್ ಏ ಮಾಬ್ ಬಾಸ್ (ನವೆಂಬರ್ 14)
5. ಸಬರ್‌ಅಟೇರ್ನಾ (ನವೆಂಬರ್ 14)
6. ಕ್ರ್ಯಾಶಿಂಗ್ ಈದ್ (ನವೆಂಬರ್ 15)
7. ದ ಕ್ರೌನ್ ಸೀಸನ್ 6 (ನವೆಂಬರ್ 16)
8. ಇನ್ ಲವ್ ಅಂಡ್ ಡೀಪ್ ವಾಟರ್ (ನವೆಂಬರ್ 16)
9. ದಿ ಕ್ವೀನ್ಸ್ ಟೌಸ್ ಕಿಂಗ್ (ನವೆಂಬರ್ 17)
10. ಕೊಕೊಮೆಲನ್ ಲೇನ್ (ನವೆಂಬರ್ 17)
11. ಬಿಲಿವರ್ (ನವೆಂಬರ್ 17)
12. ಆಲ್ ಟೈಂ ಹೈ (ನವೆಂಬರ್ 17)
13. ದ ಡಾಡ್ಸ್ (ನವೆಂಬರ್ 17)
14. ಸೀ ಯು ಆನ್ ವೀನಸ್ (ನವೆಂಬರ್ 17)
15. ಸ್ಕಾಟ್ ಪಿಲ್‌ಗ್ರಿಮ್ ಟೇಕ್ಸ್ ಆಫ್ (ನವೆಂಬರ್ 17)
16. ದ ರೈಲ್ವೆ ಮೆನ್ (ನವೆಂಬರ್ 18)
17. ವಿ ಫರ್ ವೆಂಜನ್ಸ್ (ನವೆಂಬರ್ 18)
18. ಬುಕ್ ಮೈ ದಿ ಎಕ್ಸಾರ್ಸಿಸ್ಟ್ (ನವೆಂಬರ್ 18)
ಡಿಸ್ನಿ ಹಾಟ್‌ಸ್ಟರ್
1. ಚಿಕ್ಕು
ಸಿದ್ದಾರ್ಥ್ ನಿರ್ಮಿಸಿ ನಟಿಸಿದ್ದ 'ಚಿತ್ತಾ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿತ್ತು. 'ಚಿಕ್ಕು' ಹೆಸರಿನಲ್ಲಿ ಸಿನಿಮಾ ಕನ್ನಡಕ್ಕೂ ಡಬ್ ಆಗಿತ್ತು. ಬೆಂಗಳೂರಿನಲ್ಲಿ ನಡೆದ ಈ ಚಿತ್ರದ ಸುದ್ದಿಗೋಷ್ಠಿ ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಕರ್ನಾಟಕದಲ್ಲಿ ಕಾವೇರಿ ನೀರಿಗಾಗಿ ಹೋರಾಟ ನಡೆಯುವ ಸಂದರ್ಭದಲ್ಲಿ ಸಿದ್ದಾರ್ಥ್ ಸುದ್ದಿಗೋಷ್ಠಿ ನಡೆಸಿದ್ದು ಕನ್ನಡ ಪರ ಹೋರಾಟಗಾರರನ್ನು ಕೆರಳಿಸಿತ್ತು. ಹೋರಾಟಗಾರರು ಸುದ್ದಿಗೋಷ್ಠಿ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿ ವಿರೋಧ ವ್ಯಕ್ತಪಡಿಸಿದ್ದರು. ಬಳಿಕ ಸಿದ್ದಾರ್ಥ್ ಸುದ್ದಿಗೋಷ್ಠಿ ಮೊಟಕುಗೊಳಿಸಿ ಹೊರಟುಬಿಟ್ಟರು. 'ಚಿಕ್ಕು' ಡಿಸ್ನಿ ಹಾಟ್‌ಸ್ಟರ್‌ನಲ್ಲಿ ನವೆಂಬರ್ 17ರಂದು ಸ್ಟ್ರೀಮಿಂಗ್ ಆಗಲಿದೆ.
2. ಅಪೂರ್ವ(ನವೆಂಬರ್ 15)
3. ಶೋಹಿ ಒಟಾನಿ: ಬಿಯಾಂಡ್ ದಿ ಡ್ರೀಮ್ (ನವೆಂಬರ್ 17)
4. ಡ್ಯಾಶಿಂಗ್ ತ್ರೂ ದ ಸ್ನೋ (ನವೆಂಬರ್ 17)
5. ಕಣ್ಣೂರ್ ಸ್ಕ್ವಾಡ್ (ನವೆಂಬರ್ 17
ಅಮೇಜಾನ್ ಪ್ರೈಂ
1. ಟ್ರೆವಾರ್ ವಲ್ಲಾಸ್ ಟೆರೋಡಾಕ್ಟಲ್ (ನವೆಂಬರ್ 14)
2. ಟ್ವಿನ್ ಲವ್ (ನವೆಂಬರ್ 17)
3. ಮ್ಯಾಕ್ಸೈನ್ಸ್ ಬೇಬಿ (ನವೆಂಬರ್ 17)
4. ಕಂಗ್ರಾಟ್ಸ್ ಮೈ ಎಕ್ಸ್ (ನವೆಂಬರ್ 16)
ಜಿಯೋ ಸಿನಿಮಾ
1. ಲೆಗಸಿ ಆಫ್ ಮೂನ್‌ಸ್ಟಾರ್ಸ್(ನವೆಂಬರ್ 17)
2. ದ ಫ್ಲಾಷ್(ನವೆಂಬರ್ 15)


Click it and Unblock the Notifications











