OTT Releases This Week: 'ಮಾರ್ಕ್' ಹಾಗೂ '45' ಜೊತೆ ಈ ವಾರ ಓಟಿಟಿಗೆ ಬರ್ತಿರೋ ಹಿಟ್ ಚಿತ್ರಗಳ ಲಿಸ್ಟ್
ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗಪ್ಪಳಿಸಿದ ಸಿನಿಮಾಗಳ ಆರ್ಭಟ ಕಮ್ಮಿ ಆಗ್ತಿದೆ. ಮತ್ತೊಂದು ವೀಕೆಂಡ್ ಬರ್ತಿದ್ದು ಹೊಸ ಹೊಸ ಸಿನಿಮಾಗಳು ಪ್ರೇಕ್ಷಕರ ಮುಂದೆ ಬರ್ತಿದೆ. ಕನ್ನಡದ 'ಲ್ಯಾಂಡ್‌ಲಾರ್ಡ್' ಹಾಗೂ 'ಕಲ್ಟ್' ಚಿತ್ರಗಳು ಈ ವಾರ ರಾಜ್ಯಾದ್ಯಂತ ಬಿಡುಗಡೆಗೆ ಆಗ್ತಿವೆ. ಇತ್ತ ಓಟಿಟಿಯಲ್ಲಿ ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆರಂಭಿಸಲಿವೆ.
ಸುಗ್ಗಿ ಸಂಭ್ರಮದಲ್ಲಿ ಕಳೆದ ವಾರ ಹಿಟ್ ಸಿನಿಮಾಗಳು ಓಟಿಟಿ ಚಂದಾದಾರರ ಮುಂದೆ ಬಂದಿದ್ದವು. ಈ ವಾರ ಕನ್ನಡದ 2 ದೊಡ್ಡ ಚಿತ್ರಗಳ ಜೊತೆಗೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಇಂಗ್ಲೀಷ್ ಭಾಷೆಯ ಸಿನಿಮಾಗಳು ಬಿಡುಗಡೆ ಆಗಲಿದೆ. ಸುದೀಪ್ ನಟನೆಯ 'ಮಾರ್ಕ್' ಹಾಗೂ ಅರ್ಜುನ್ ಜನ್ಯಾ ಸಾರಥ್ಯದ '45' ಚಿತ್ರಗಳು ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿವೆ.

ಮಾರ್ಕ್
ಡಿಸೆಂಬರ್ 25ರಂದು ತೆರೆಗೆ ಬಂದಿದ್ದ ಸುದೀಪ್ ನಟನೆಯ ಆಕ್ಷನ್ ಥ್ರಿಲ್ಲರ್ 'ಮಾರ್ಕ್' ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ಜನವರಿ 23ರಂದು ಜಿಯೋ ಹಾಟ್‌ಸ್ಟರ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. 'ಮ್ಯಾಕ್ಸ್' ಸಿನಿಮಾ ಮಾಡಿದ್ದ ಅದೇ ತಂಡ ಈ ಚಿತ್ರವನ್ನು ಕಟ್ಟಿಕೊಟ್ಟಿತ್ತು. ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 28 ದಿನಕ್ಕೆ ಸಿನಿಮಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಎಂಟ್ರಿ ಕೊಡ್ತಿದೆ.
45
ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ನಟಿಸಿದ್ದ '45' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಗರುಡಪುರಾಣ ಹಿನ್ನೆಲೆಯಲ್ಲಿ ಅರ್ಜುನ್ ಜನ್ಯಾ ಈ ಚಿತ್ರ ಕಟ್ಟಿಕೊಟ್ಟಿದ್ದರು. ಭಾರೀ ಸದ್ದು ಗದ್ದಲ ಮಾಡಿದ್ದ ಸಿನಿಮಾ ದೊಡ್ಡಮಟ್ಟದಲ್ಲಿ ಗೆಲ್ಲಲಿಲ್ಲ. ಶಿವಣ್ಣ 11 ಗೆಟಪ್‌ಗಳಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದರು. ಡಿಸೆಂಬರ್ 24ರಂದು ತೆರೆಗೆ ಬಂದಿದ್ದ ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ.

ತೆರೆ ಇಷ್ಕ್ ಮೇ
ಆನಂದ್ ಎಲ್ ರಾಯ್ ನಿರ್ದೇಶನದಲ್ಲಿ ಧನುಷ್ ಹಾಗೂ ಕೃತಿ ಸನೂನ್ ನಟನೆಯ 'ತೆರೆ ಇಷ್ಕ್ ಮೇ' ಚಿತ್ರಕ್ಕೂ ಈ ವಾರವೇ ಓಟಿಟಿ ರಿಲೀಸ್ ಭಾಗ್ಯ. ಜನವರಿ 23ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ವೀಕ್ಷಣೆಗೆ ಸಿಗಲಿದೆ. ಈ ರೊಮ್ಯಾಂಟಿಕ್ ಸಿನಿಮಾ ನವೆಂಬರ್ 28ರಂದು ತೆರೆಕಂಡು ಸೋತಿತ್ತು.
ಶಂಬಾಲ
ಆದಿ, ಅರ್ಚನಾ ಅಯ್ಯರ್ ನಟನೆಯ 'ಶಂಬಾಲ' ಸಿನಿಮಾ ಡಿಸೆಂಬರ್ 25ರಂದು ಬಿಡುಗಡೆ ಆಗಿತ್ತು. ಅಹಾ ಓಟಿಟಿಗೆ ಈ ವಾರ ಸಿನಿಮಾ ಎಂಟ್ರಿ ಕೊಡಲಿದೆ. ಸೂಪರ್ ನ್ಯಾಚುಲರ್ ಹಾರರ್ ಥ್ರಿಲ್ಲರ್ ಚಿತ್ರಕ್ಕೆ ಉಗಂದರ್ ಮುನಿ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನುಳಿದಂತೆ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಈ ವಾರ ಓಟಿಟಿಗೆ ಬರ್ತಿದೆ ಮುಂದೆ ಓದಿ.
ಹಾಟ್‌ಸ್ಟರ್
1. ಹಿಮ್(ಇಂಗ್ಲೀಷ್ ಸಿನಿಮಾ) ಜನವರಿ 19
2. ಸ್ಪೇಸ್ ಜೆನ್: ಚಂದ್ರಯಾನ್(ಇಂಗ್ಲೀಷ್ ಸೀರಿಸ್) ಜನವರಿ 23
3. ಎ ನೈಟ್ ಆಫ್ ಸೆವೆನ್ ಕಿಂಗ್‌ಡಮ್ಸ್ ಸೀಸನ್-1 ಎಪಿಸೋಡ್-1(ವೆಬ್ ಸೀರಿಸ್) ಜನವರಿ 19
ಜೀ-5
1. ಮಸ್ತಿ- 4(ಹಿಂದಿ ಸಿನಿಮಾ) ಜನವರಿ 23
2. ಸಿರಾಯ್(ತಮಿಳು ಸಿನಿಮಾ) ಜನವರಿ 23
ಅಹಾ ಓಟಿಟಿ
1. ಸಲ್ಲಿಯರ್ಗಳ್(ತಮಿಳು ಸಿನಿಮಾ) ಜನವರಿ 20
ಪ್ರೈಂ ವೀಡಿಯೋ
1. ಸ್ಟೀಲ್(ಇಂಗ್ಲೀಷ್ ಸೀರಿಸ್) ಜನವರಿ 21
2. ಚಿಕಟಿಲೊ(ತೆಲುಗು ಸಿನಿಮಾ) ಜನವರಿ 23
3. ಇಟ್ಸ್ ನಾಟ್ ಲೈಕ್ ದಟ್(ಇಂಗ್ಲೀಷ್ ಸೀರಿಸ್) ಜನವರಿ 25
4. ಪಿಪರೇಷನ್ ಫರ್ ದ ನೆಕ್ಸ್ಟ್ ಲೈಫ್(ಇಂಗ್ಲೀಷ್ ಸಿನಿಮಾ) ಜನವರಿ 19
ನೆಟ್‌ಫ್ಲಿಕ್ಸ್
1. ಸ್ಕೈ ಸ್ಕ್ರಾಪರ್ ಲೈವ್(ಇಂಗ್ಲೀಷ್ ಸಿನಿಮಾ) ಜನವರಿ 23
2. ಫ್ರೀ ಬೆರ್ಟ್(ಇಂಗ್ಲೀಷ್ ಸೀರಿಸ್) ಜನವರಿ 22
3. ಕಿಡ್ನ್ಯಾಪ್ಡ್: ಎಲಿಜಬೆತ್ ಸ್ಮಾರ್ಟ್(ಇಂಗ್ಲೀಷ್ ಸಿನಿಮಾ) ಜನವರಿ 21
4. ಫೈಂಡಿಂಗ್ ಹರ್ ಎಡ್ಜ್(ಇಂಗ್ಲೀಷ್ ಸೀರಿಸ್) ಜನವರಿ 22


Click it and Unblock the Notifications











