OTT Release This Week: ಸಖತ್ ಥ್ರಿಲ್ ಕೊಡುವ ಸಿನಿಮಾ, ವೆಬ್‌ ಸೀರಿಸ್‌ಗಳು ಈ ವಾರ ಓಟಿಟಿಗೆ ಎಂಟ್ರಿ.. ಇಲ್ಲಿದೆ ಲಿಸ್ಟ್

ಮತ್ತೊಂದು ವೀಕೆಂಡ್ ಬರ್ತಿದೆ. ಸಿನಿರಸಿಕರಿಗೆ ಸಿನಿಹಬ್ಬ ಶುರುವಾಗುತ್ತಿದೆ. ಈ ವಾರ ಥಿಯೇಟರ್‌ಗಳಲ್ಲಿ ದೊಡ್ಡ ಸಿನಿಮಾಗಳು ರಿಲೀಸ್ ಆಗ್ತಿಲ್ಲ. ಆದರೆ ಓಟಿಟಿಯಲ್ಲಿ ಭಿನ್ನ ವಿಭಿನ್ನ ಸಿನಿಮಾಗಳ ಜೊತೆಗೆ ಇಂಟ್ರೆಸ್ಟಿಂಗ್ ವೆಬ್‌ ಸೀರಿಸ್‌ಗಳು ದಾಂಗುಡಿ ಇಡುತ್ತಿವೆ.

ಸೆಪ್ಟೆಂಬರ್ 28ಕ್ಕೆ ಪ್ರಭಾಸ್ ನಟನೆಯ 'ಸಲಾರ್' ಸಿನಿಮಾ ರಿಲೀಸ್ ಆಗಬೇಕಿತ್ತು. ಹಾಗಾಗಿ ಬೇರೆ ಯಾವುದೇ ಸಿನಿಮಾಗಳು ಈ ವಾರ ಮುಂದಿನ ವಾರ ತೆರೆಗೆ ಬರುವ ಸಾಹಸಕ್ಕೆ ಕೈ ಹಾಕಿರಲಿಲ್ಲ. ಕೊನೆ ಕ್ಷಣದಲ್ಲಿ 'ಸಲಾರ್' ಬರಲ್ಲ ಎಂದು ಗೊತ್ತಾಗಿ ಬಹುನಿರೀಕ್ಷಿತ ಸಿನಿಮಾಗಳು ಮುಂದಿನ ವಾರಕ್ಕೆ ಶಿಫ್ಟ್ ಆಗಿವೆ.

OTT Releases This Week: Jaane Jaan, Fast X, and other new web series and movies

ಓಟಿಟಿ ಪ್ರಿಯರಿಗೆ ಒಂದಲ್ಲ ಒಂದು ಇಂಟ್ರೆಸ್ಟಿಂಗ್ ಸಿನಿಮಾ, ವೆಬ್‌ ಸೀರಿಸ್ ಪ್ರತಿ ವೀಕೆಂಡ್‌ನಲ್ಲೂ ಸಿಗ್ತಾನೇ ಇರುತ್ತೆ. ಹಾಗಾದರೆ ಈ ವಾರ ಯಾವೆಲ್ಲಾ ಸಿನಿಮಾ ಹಾಗೂ ವೆಬ್‌ ಸೀರಿಸ್‌ಗಳು ಯಾವ್ಯಾವ ಫ್ಲಾಟ್‌ಪಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಆಗುತ್ತೆ? ನೋಡೋಣ ಬನ್ನಿ.

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್

1. ಕಿಂಗ್ ಆಫ್ ಕೋತ

ದುಲ್ಕರ್ ಸಲ್ಮಾನ್ ನಟನೆಯ 'ಕಿಂಗ್ ಆಫ್ ಕೋತ' ಸಿನಿಮಾ ಇತ್ತೀಚೆಗೆ ಥಿಯೇಟರ್‌ಗಳಲ್ಲಿ ರಿಲೀಸ್ ಆಗಿತ್ತು. ಮಾಲಿವುಡ್ 'KGF' ಅಂತಲೇ ಬಿಂಬಿಸಲಾಗಿದ್ದ ಈ ಗ್ಯಾಂಗ್‌ಸ್ಟರ್ ಡ್ರಾಮಾ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಸೆಪ್ಟೆಂಬರ್ 22ಕ್ಕೆ ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ನಲಾಗ್ತಿದೆ.

2. ಅತಿಥಿ(ವೆಬ್‌ ಸೀರಿಸ್)

ವೇಣು ತೊಟಂಪೂಡಿ ಹಾಗೂ ಅವಂತಿಕಾ ಮಿಶ್ರಾ ನಟನೆಯ 'ಅತಿಥಿ' ವೆಬ್‌ ಸೀರಿಸ್ ಈಗಾಗಲೇ(ಸೆಪ್ಟೆಂಬರ್ 19ರಿಂದ) ಸ್ಟ್ರೀಮಿಂಗ್ ಆಗುತ್ತಿದೆ. ಒಂದು ರಾತ್ರಿಯಲ್ಲಿ ನಡೆಯುವ ಈ ಕಥೆಗೆ ಭರತ್ ವೈಜಿ ಆಕ್ಷನ್ ಕಟ್ ಹೇಳಿದ್ದಾರೆ.

3. ನೊ ವನ್ ವಿಲ್ ಸೇವ್ ಯು

ಅಮೆಜಾನ್ ಪ್ರೈಮ್ ವಿಡಿಯೋ

1. ಡೈನೋಸಾರ್ಸ್ (ತಮಿಳು ಸಿನಿಮಾ)

2. ಕ್ಯಾಸಂಡ್ರೊ

3. ದಿ ಕಾಂಟಿನೆಂಟಲ್

ನೆಟ್‌ಫ್ಲಿಕ್ಸ್

1. ಜಾನೇ ಜಾನ್

ಕರೀನಾ ಕಪೂರ್ ಮತ್ತು ವಿಜಯ್ ವರ್ಮಾ ನಟನೆಯ ಹಿಂದಿಯ 'ಜಾನೇ ಜಾನ್' ಸಿನಿಮಾ ಸೆಪ್ಟೆಂಬರ್ 21 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ. ಮಿಸ್ಟರಿ ಥ್ರಿಲ್ಲರ್ ಕಥಾಹಂದರದ ಈ ಚಿತ್ರವನ್ನು ಸುಜಯ್ ಘೋಷ್ ನಿರ್ದೇಶಿಸಿದ್ದಾರೆ. ಈ ಸಿನಿಮಾ ನೇರವಾಗಿ ಓಟಿಟಿಗೆ ಎಂಟ್ರಿ ಕೊಡುತ್ತಿರುವುದು ವಿಶೇಷ.

2. ಸ್ಪೈ ಕಿಡ್ಸ್ ಆರ್ಮಗೆಡ್ಡೋನ್

3. ಸೆಕ್ಸ್ ಎಜುಕೇಷನ್(ಸೀಸನ್-4)

4. ಲವ್ ಅಗೇನ್

5. ಹೌ ಟು ಡೀಲ್ ವಿತ್ ಎ ಹಾರ್ಟ್ ಬ್ರೇಕ್

6. ಲವ್ ಈಸ್ ಬ್ಲೈಂಡ್ (ಸೀಸನ್ 5)

7. ಸಾಂಗ್ ಆಫ್ ದಿ ಬಂಡಿಟ್ಸ್

ಇನ್ನುಳಿದಂತೆ ಜಿಯೋ ಸಿನಿಮಾದಲ್ಲಿ 'ಫಾಸ್ಟ್-‍‍X' (ಸ್ಟ್ರೀಮಿಂಗ್ ಆಗ್ತಿದೆ), ಮನೋರಮಾ ಮ್ಯಾಕ್ಸ್‌ನಲ್ಲಿ 'ವಾಯ್ಸ್ ಆಫ್ ಸತ್ಯನಾಥನ್', ಸೋನಿ ಲಿವ್‌ನಲ್ಲಿ 'ದಿ ವಿಂಟರ್ ಕಿಂಗ್' ಸೇರಿದಂತೆ ಹಲವು ಸಿನಿಮಾ ಹಾಗೂ ವೆಬ್‌ ಸೀರಿಸ್‌ಗಳು ಈ ವಾರ ಓಟಿಟಿಗೆ ಸ್ಟ್ರೀಮಿಂಗ್ ಆಗಲಿವೆ.

More from Filmibeat

English summary
List of movies and shows releasing on OTT this week
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X