Latest Ott Releases: ಈ ವಾರ ಓಟಿಟಿಗೆ ಬಂದ ಚಿತ್ರಗಳ ಪಟ್ಟಿ; 3 ಕನ್ನಡ ಚಿತ್ರಗಳನ್ನು ಮಿಸ್ ಮಾಡ್ಬೇಡಿ

ಚಿತ್ರಮಂದಿರಗಳಲ್ಲಿ ಹಿಟ್ ಸಿನಿಮಾಗಳ ಆರ್ಭಟ ನಡೀತಿದೆ. ಒಂದ್ಕಡೆ 'ಧುರಂಧರ್- 2' ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೀತಿದೆ. ಕನ್ನಡದಲ್ಲಿ 'ಲವ್ ಮಾಕ್ಟೇಲ್'-3 ದರ್ಬಾರ್ ಜೋರಾಗಿದೆ. ತೆಲುಗಿನ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಕೂಡ ಅಭಿಮಾನಿಗಳ ಮನಗೆದ್ದಿದೆ.

ಯುಗಾದಿ, ರಂಜಾನ್ ಹಬ್ಬದ ಸಂಭ್ರಮದಲ್ಲಿ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ 'ಟಾಕ್ಸಿಕ್' ಸಿನಿಮಾ ಕೂಡ ರಿಲೀಸ್ ಆಗಬೇಕಿತ್ತು. ಅದನ್ನೆಲ್ಲ ಪಕ್ಕಕ್ಕಿಟ್ಟರೆ ಓಟಿಟಿಯಲ್ಲಿ ಕೂಡ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಈ ವಾರ ವೀಕ್ಷಕರನ್ನು ರಂಜಿಸಲು ಬಂದಿವೆ.

Ott Releases this week Landlord to Border 2 This Week s Must-Watch Movies amp amp Web Series

ಕನ್ನಡದ ಎರಡು ಸಿನಿಮಾಗಳು ಸೇರಿದಂತೆ ಓಟಿಟಿ ಚಂದಾದಾರರಿಗೆ ವೀಕೆಂಡ್‌ ಭರ್ಜರಿ ಮನರಂಜನೆ ಕಾದಿದೆ. ಮನೆಯಲ್ಲೇ ಕೂತು ಸಿನರಸಿಕರು ಸಿನಿಮಾ, ವೆಬ್ ಸೀರಿಸ್ ನೋಡಿ ಎಂಜಾಯ್ ಮಾಡಿ.

ಲ್ಯಾಂಡ್‌ಲಾರ್ಡ್

ಜಡೇಶ್ ಹಂಪಿ ನಿರ್ದೇಶನದಲ್ಲಿ ದುನಿಯಾ ವಿಜಯ್, ರಾಜ್ ಬಿ ಶೆಟ್ಟಿ ನಟನೆಯ 'ಲ್ಯಾಂಡ್‌ಲಾರ್ಡ್' ಸಿನಿಮಾ ಓಟಿಟಿಗೆ ಬಂದಿದೆ. ಯುಗಾದಿ ಸಂಭ್ರಮದಲ್ಲಿ ಜೀ-5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ರಚಿತಾರಾಮ್, ಉಮಾಶ್ರೀ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಜನವರಿ 23ರಂದು ತೆರೆಗೆ ಬಂದಿದ್ದ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಲಿಲ್ಲ. ಈಗ ಓಟಿಟಿಯಲ್ಲೇ ಸಿನಿಮಾ ನೋಡಬಹುದು.

Ott Releases this week Landlord to Border 2 This Week s Must-Watch Movies amp amp Web Series

ಸೀತಾಪಯಣ

ಅರ್ಜುನ್ ಸರ್ಜಾ ನಿರ್ಮಿಸಿ ನಿರ್ದೇಶಿಸಿದ 'ಸೀತಾಪಯಣ' ಸಿನಿಮಾ ಕೂಡ ಸನ್‌ನೆಕ್ಸ್ಟ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ನಿರಂಜನ್ ಜೊತೆ ಐಶ್ವರ್ಯ ಸರ್ಜಾ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಕಾಶ್ ರಾಜ್, ಅರ್ಜುನ್ ಸರ್ಜಾ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಧ್ರುವ ಸರ್ಜಾ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.

ಬಾರ್ಡರ್-2

ಸೂಪರ್ ಹಿಟ್ 'ಬಾರ್ಡರ್- 2' ಸಿನಿಮಾ ಕೊನೆಗೂ ಓಟಿಟಿಗೆ ಬಂದಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಿದೆ. ತೆರೆಕಂಡ 8 ವಾರಗಳ ಬಳಿಕ ಹಿಂದಿ ಸಿನಿಮಾಗಳು ಓಟಿಟಿಗೆ ಬರುತ್ತವೆ. ಜನವರಿ 23ಕ್ಕೆ ಸನ್ನಿ ಡಿಯೋಲ್, ವರುಣ್ ಧವನ್ ನಟನೆಯ ಆಕ್ಷನ್ ಸಿನಿಮಾ ಬಿಡುಗಡೆ ಆಗಿತ್ತು.

ವಲವಾರ

ಸುನತ್ ಗೌಡ ನಿರ್ದೇಶನದ ಕನ್ನಡ ಸಿನಿಮಾ 'ವಲವಾರ' ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ಆದರೆ ಪ್ರೇಕ್ಷಕರ ಬರ ಎದುರಿಸುವಂತಾಗಿತ್ತು. ಇಬ್ಬರು ಮಕ್ಕಳು ಮತ್ತು ಒಂದು ಹಸುವಿನ ಸುತ್ತ ಸುತ್ತುವ ಹಳ್ಳಿಯಲ್ಲಿ ನಡೆಯುವ ಕಥೆ ನೋಡುಗರ ಮನಗೆದ್ದಿತ್ತು. ಇದೀಗ ಸನ್ ನೆಕ್ಸ್ಟ್‌ನಲ್ಲಿ ಸಿನಿಮಾ ವೀಕ್ಷಸಬಹುದು. ಬೇರೆ ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಓಟಿಟಿಗೆ ಬಂದಿದೆ. ಮುಂದೆ ಓದಿ.

ನೆಟ್‌ಫ್ಲಿಕ್ಸ್

1. ಪೀಕಿ ಬ್ಲೆಂಡರ್ಸ್: ದಿ ಇಮ್ಮಾರ್ಟಲ್ ಮ್ಯಾನ್(ಇಂಗ್ಲೀಷ್ ಸಿನಿಮಾ) ಮಾರ್ಚ್ 19

2. ದಿ ರೈಸ್ ಆಫ್ ದಿ ರೆಡ್ ಹಾರ್ಟ್ ಚಿಲ್ಲಿ ಪೆಪ್ಪರ್(ಇಂಗ್ಲೀಷ್ ಸಿನಿಮಾ) ಮಾರ್ಚ್ 20

3. ಎ ಡಿಫ್‌ರೆಂಟ್ ಮ್ಯಾನ್(ಇಂಗ್ಲೀಷ್ ಸಿನಿಮಾ) ಮಾರ್ಚ್ 20

ಪ್ರೈಂ ವೀಡಿಯೋ

1. ಮೈ ಲಾರ್ಡ್ (ತಮಿಳು ಸಿನಿಮಾ)

2. ಆಂಕೋಂಕಿ ಗುಸ್ತಾಕಿಯಾನ್( ಹಿಂದಿ ಸಿನಿಮಾ)

3. ಕಂಪನಿ ರೀಟ್ರೀಟ್ ಸೀಸನ್-2- (ಇಂಗ್ಲೀಷ್ ವೆಬ್ ಸೀರಿಸ್) ಮಾರ್ಚ್ 19

4. ದಿ ಹೌಸ್ ಮೇಡ್(ಇಂಗ್ಲಿಷ್ ಸಿನಿಮಾ) ಮಾರ್ಚ್ 18

5. ಡೆಡ್‌ಲೊನ್ ಸೀಸನ್-2 (ಇಂಗ್ಲೀಷ್ ವೆಬ್ ಸೀರಿಸ್) ಮಾರ್ಚ್ 19

6. ವೈಲ್ಡ್ ಕ್ಯಾಟ್(ಇಂಗ್ಲಿಷ್ ಸಿನಿಮಾ) ಮಾರ್ಚ್ 20

7. ಸ್ಪೈ ಕಿಡ್ಸ್ (ಇಂಗ್ಲೀಷ್ ಕನ್ಸರ್ಟ್ ಸಿನಿಮಾ) ಮಾರ್ಚ್ 19


ಜೀ-5

1. ಕಾಸರಗೋಡ್ ಎಂಬಸಿ ಸೀಸನ್-1 (ಮಲಯಾಳಂ ಸೀರಿಸ್) ಮಾರ್ಚ್ 19

2. ಅಗ ಅಗ ಸುನಾಬೈ; ಕಾಯ್ ಮಹಾಂತಾಯ್ ಸಸುಬಾಯ್- (ಮರಾಠಿ ಸಿನಿಮಾ) ಮಾರ್ಚ್ 20

ಸೋನಿ ಲಿವ್

1. ದಿ ಜಾರ್ಜ್ ಸಿಟಿ(ತೆಲುಗು ಸೀರಿಸ್) ಮಾರ್ಚ್ 19

ಅಹಾ ಓಟಿಟಿ

1. ಅಮರಾವತಿ ಆಹ್ವಾನಂ(ತೆಲುಗು ಸಿನಿಮಾ)ಮಾರ್ಚ್ 18

More from Filmibeat

Read more about: kannada sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X