ಈ ವಾರಾಂತ್ಯಕ್ಕೆ ಒಟಿಟಿಯಲ್ಲಿ ಭರ್ಜರಿ ಸಿನಿಮಾಗಳು: ಇಲ್ಲಿದೆ ಪಟ್ಟಿ

ಹೊರಗೆ ಜಿಟಿ-ಜಿಟಿ ಮಳೆ, ತಪ್ಪಿದರೆ ಬಿರು ಬಿಸಿಲು ಹೀಗಿದ್ದಾಗ ಮನೆಯಲ್ಲಿಯೇ ಸೋಫಾಕ್ಕೆ ಒರಗಿ ಕಿವಿಗೆ ಇವರ್ ಫೋನ್ ಸಿಕ್ಕಿಸಿಕೊಂಡು ಮೊಬೈಲ್‌ನಲ್ಲಿ ಹೊಸ ಸಿನಿಮಾ ನೋಡುತ್ತಾ ಸಮಯ ಕಳೆಯುವುದು ಹಿತ ಎನಿಸುತ್ತದೆ.

ಹೀಗೆ ಮನೆಯಲ್ಲಿಯೇ ಸಿನಿಮಾ ನೋಡುವವರಿಗೆ ಈ ವಾರಾಂತ್ಯಕ್ಕೆ ಸಾಕಷ್ಟು ಆಯ್ಕೆಗಳಿವೆ. ಸಾಕಷ್ಟು ಒಳ್ಳೆಯ, ಬಿಗ್‌ ಬಜೆಟ್‌ನ ಸಿನಿಮಾಗಳು ಈ ವಾರ ಒಟಿಟಿಗೆ ಬಂದಿವೆ.

ಕನ್ನಡ ಸೇರಿದಂತೆ ಬೇರೆ ಭಾಷೆಗಳ ಕೆಲವು ಗುಣಮಟ್ಟದ, ಆಸಕ್ತಿದಾಯಕ ಸಿನಿಮಾಗಳು ಈ ಬಾರಿ ಒಟಿಟಿಗೆ ಬಂದಿದ್ದು, ಸಿನಿಮಾ ಪ್ರೇಮಿಗಳ ಈ ವಾರಾಂತ್ಯ ಸಾಕಷ್ಟು ಬ್ಯುಸಿಯಾಗಿರಲಿದೆ. ಜೊತೆಗೆ ಮನೊರಂಜನಾತ್ಮಕವಾಗಿ ಸಹ.

ಸಂಚಾರಿ ವಿಜಯ್‌ರ 'ತಲೆದಂಡ'

ಸಂಚಾರಿ ವಿಜಯ್‌ರ 'ತಲೆದಂಡ'

ಸಂಚಾರಿ ವಿಜಯ್ ಅದ್ಭುತವಾಗಿ ನಟಿಸಿರುವ 'ತಲೆದಂಡ' ಸಿನಿಮಾ ಈ ವಾರ ಒಟಿಟಿಗೆ ಬರುತ್ತಿದೆ. ಸಂಚಾರಿ ವಿಜಯ್ ನಿಧನದ ಬಳಿಕ ಬಿಡುಗಡೆ ಆಗಿದ್ದ ಈ ಸಿನಿಮಾ ಮೆಚ್ಚುಗೆ ಗಳಿಸಿತ್ತು. ಅದರಲ್ಲಿಯೂ ವಿಜಯ್ ಅಭಿನಯದ ಬಗ್ಗೆ ಬಹಳ ಪ್ರಶಂಸೆಗಳು ಕೇಳಿ ಬಂದಿದ್ದವು. ಇದೀಗ ಈ ಸಿನಿಮಾ ಜೀ5 ನಲ್ಲಿ ಮೇ 13 ರಿಂದ ಪ್ರಸಾರವಾಗಲಿದೆ.

ರವಿಚಂದ್ರನ್ ಪುತ್ರನ ಸಿನಿಮಾ

ರವಿಚಂದ್ರನ್ ಪುತ್ರನ ಸಿನಿಮಾ

ರವಿಚಂದ್ರನ್ ಪುತ್ರ ಮನೊರಂಜನ್ ನಟನೆಯ 'ಮುಗಿಲ್ ಪೇಟೆ' ಸಿನಿಮಾ ಸಹ ಇದೇ ವಾರ ಜೀ5 ನಲ್ಲಿ ಬಿಡುಗಡೆ ಆಗಲಿದೆ. ಖಯಾದು ಲೋಹರ್ ನಾಯಕಿಯಾಗಿದ್ದ ನಟಿಸಿದ್ದ ಈ ಸಿನಿಮಾ ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆ ಆಗಿತ್ತು. ಸಿನಿಮಾವನ್ನು ಭರತ್ ಎಸ್ ನಾವುಂದ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಹಾಡುಗಳ ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬಂದಿದ್ದವು.

'ಬೀಸ್ಟ್' ಸಿನಿಮಾ ನೆಟ್‌ಫ್ಲಿಕ್ಸ್‌ಗೆ

'ಬೀಸ್ಟ್' ಸಿನಿಮಾ ನೆಟ್‌ಫ್ಲಿಕ್ಸ್‌ಗೆ

'ಕೆಜಿಎಫ್ 2' ಸಿನಿಮಾಕ್ಕೆ ಎದುರಾಳಿಯಾಗಿ ಬಂದು ಹೈರಾಣಾಗಿ ಚಿತ್ರಮಂದಿರಗಳಿಂದ ಕಾಲ್ಕಿತ್ತ 'ಬೀಸ್ಟ್' ಸಿನಿಮಾ ಈಗ ಒಟಿಟಿಗೆ ಕಾಲಿಟ್ಟಿದೆ. ಏಪ್ರಿಲ್ 13 ರಂದು ಬಿಡುಗಡೆ ಆಗಿದ್ದ ವಿಜಯ್-ಪೂಜಾ ಹೆಗ್ಡೆ ನಟನೆಯ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಕಮಾಲ್ ಮಾಡಲು ವಿಫಲವಾಗಿತ್ತು. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಂಡಿದೆ. ನೆಟ್‌ಫ್ಲಿಕ್ಸ್‌ ಜೊತೆಗೆ ಸನ್‌ ನೆಕ್ಸ್ಟ್‌ನಲ್ಲಿಯೂ ಸಿನಿಮಾ ಬಿಡುಗಡೆ ಆಗಿದೆ.

'ದಿ ಕಾಶ್ಮೀರ್ ಫೈಲ್ಸ್'

'ದಿ ಕಾಶ್ಮೀರ್ ಫೈಲ್ಸ್'

ಆಡಳಿತ ಪಕ್ಷದಿಂದ ಹಾಗೂ ಸ್ವತಃ ಪ್ರಧಾನಿ ಮೋದಿಯವರಿಂದ ಪ್ರಚಾರ ಪಡೆದ 'ದಿ ಕಾಶ್ಮೀರ್ ಫೈಲ್ಸ್' ಜೀ 5 ನಲ್ಲಿ ತೆರೆ ಕಂಡಿದೆ. ಹಿಂದಿ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಈ ಸಿನಿಮಾದ ಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆಗಳು ಏರ್ಪಟ್ಟಿದ್ದವು. ಈ ಸಿನಿಮಾ ಅರಬ್‌ನ ಕೆಲ ದೇಶಗಳಲ್ಲಿ ಮಾತ್ರವೇ ಅಲ್ಲದೆ, ಸಿಂಗಪುರ, ನ್ಯೂಜಿಲೆಂಡ್ ದೇಶಗಳಲ್ಲಿ ನಿಷೇಧಕ್ಕೆ ಒಳಗಾಗಿದೆ.

ಮಮ್ಮುಟಿ ನಟಿಸಿರುವ ಕ್ರೈಂ ಥ್ರಿಲ್ಲರ್

ಮಮ್ಮುಟಿ ನಟಿಸಿರುವ ಕ್ರೈಂ ಥ್ರಿಲ್ಲರ್

ಮಲಯಾಳಂ ಸೂಪರ್ ಸ್ಟಾರ್ ನಟ ಮಮ್ಮುಟಿ ನಟಿಸಿರುವ ಕ್ರೈಂ ಥ್ರಿಲ್ಲರ್ ಸಿನಿಮಾ 'ಪುಜು' ಇದೇ ವಾರ ತೆರೆಗೆ ಒಟಿಟಿಗೆ ಬರಲಿದೆ. ಈ ಮೊದಲು ಚಿತ್ರಮಂದಿರದಲ್ಲಿ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ ಕಾರಣಾಂತರಗಳಿಂದ ನೇರವಾಗಿ ಒಟಿಟಿಗೆ ಬರುತ್ತಿದೆ. ಮೇ 13 ರಂದು 'ಪುಜು' ಸಿನಿಮಾ ಸೋನಿ ಲಿವ್‌ನಲ್ಲಿ ಪ್ರಸಾರಗೊಳ್ಳಲಿದೆ. ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆ ಆಗಿದ್ದು, ನಿರೀಕ್ಷೆ ಹುಟ್ಟಿಸಿದೆ. 'ಪುಜು' ಸಿನಿಮಾದಲ್ಲಿ ಮಮ್ಮುಟಿ ಜೊತೆಗೆ ಪಾರ್ವತಿ ಮಿಲ್ಟನ್ ಸಹ ನಟಿಸಿದ್ದಾರೆ.

'ದಿ ಮೇಟ್ರಿಕ್ಸ್: ರಿಸರೆಕ್ಶನ್'

'ದಿ ಮೇಟ್ರಿಕ್ಸ್: ರಿಸರೆಕ್ಶನ್'

'ಮೇಟ್ರಿಕ್ಸ್' ಸರಣಿಯ ಹೊಸ ಸಿನಿಮಾ 'ದಿ ಮೇಟ್ರಿಕ್ಸ್: ರಿಸರೆಕ್ಶನ್' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಮೇ 12 ರಂದು ಬಿಡುಗಡೆ ಆಗಿದೆ. ಭಾರತದ ನಟಿ ಪ್ರಿಯಾಂಕಾ ಚೋಪ್ರಾ ಸಹ ನಟಿಸಿರುವ ಸಿನಿಮಾ ಡಿಸೆಂಬರ್ 22 ರಂದು ಬಿಡುಗಡೆ ಆಗಿತ್ತು. ಲಾನಾ ವಾಶ್ವೋಸ್ಕಿ ನಿರ್ದೇಶನದ ಮಾಡಿರುವ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಇದೀಗ ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ.

More from Filmibeat

English summary
OTT releases this week: List of Movies Releasing This Week of May on OTT Platforms. Many new movies streaming on OTT this week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X