OTT Releases This Week: ಮಾರ್ಚ್ ಕೊನೆ ವಾರ ಯಾವೆಲ್ಲಾ ಚಿತ್ರಗಳು ಓಟಿಟಿಗೆ ಬರ್ತಿವೆ? ಇಲ್ಲಿದೆ ಲಿಸ್ಟ್

ಬಾಕ್ಸಾಫೀಸ್‌ನಲ್ಲಿ ಈಗ 'ಧುರಂಧರ್- 2' ಆರ್ಭಟವೇ ಜೋರಾಗಿದೆ. ಕನ್ನಡದ 'ಲವ್ ಮಾಕ್ಟೇಲ್'-3 ಸಿನಿಮಾ ಕೂಡ ಪ್ರೇಕ್ಷಕರ ಮನಗೆದ್ದಿದೆ. 'ಧುರಂಧರ್- 2' ಎದುರು 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ತೆರೆಗೆ ತಂದು ಪವನ್ ಕಲ್ಯಾಣ್ ತಪ್ಪು ಮಾಡಿದ್ದಾರೆ.

ಆದಿತ್ಯಧರ್ ನಿರ್ದೇಶನದ 'ಧುರಂಧರ್- 2' ಸಿನಿಮಾ 1000 ಕೋಟಿ ರೂ. ಗಳಿಕೆಯತ್ತ ಮುನ್ನುಗ್ಗುತ್ತಿದೆ. ಪ್ರೇಕ್ಷಕರು ನಿಧಾನವಾಗಿ 2ನೇ ಬಾರಿ ಸಿನಿಮಾ ನೋಡಲು ಆರಂಭಿಸಿದ್ದಾರೆ. ಸಿನಿಮಾ ಹೌಸ್‌ಫುಲ್ ಪ್ರದರ್ಶನ ಮುಂದುವರೆದಿದೆ. ಐಪಿಎಲ್ ಆರ್ಭಟಕ್ಕೆ ದಿನಗಣನೆ ಶುರುವಾಗಿರುವುದರಿಂದ ಇನ್ನೆರಡು ದೊಡ್ಡ ಸಿನಿಮಾಗಳು ಚಿತ್ರಮಂದಿರಗಳಿಗೆ ಬರುವುದು ಅನುಮಾನ. ಹಾಗಾಗಿ ಸಿನಿರಸಿಕರು ಓಟಿಟಿಯನ್ನೇ ಹೆಚ್ಚು ನೆಚ್ಚಿಕೊಳ್ಳುವಂತಾಗಿದೆ.

Ott Releases This Week Mardaani 3 Kaattaan and O Romeo Lead Weekend Releases

ಕಳೆದೆರಡು ತಿಂಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳು ಓಟಿಟಿಗೆ ಬರಲಿವೆ. ಈ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಬಿಡುಗಡೆಗೆ ಆಗ್ತಿವೆ. ನೆಕ್ಟ್‌ಫ್ಲಿಕ್ಸ್, ಪ್ರೈಂ ವೀಡಿಯೋ, ಜಿಯೋ ಹಾಟ್‌ಸ್ಟರ್ ಸೇರಿ ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಈ ವೀಕೆಂಡ್ ಯಾವೆಲ್ಲಾ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತವೆ ಬನ್ನಿ ನೋಡೋಣ.

ಮರ್ದಾನಿ- 3

ಬಾಲಿವುಡ್ ಸಿನಿಮಾಗಳು ತೆರೆಕಂಡು 2 ತಿಂಗಳ ಬಳಿಕ ಓಟಿಟಿಗೆ ಬರ್ತಿವೆ. ಜನವರಿ 30ರಂದು ತೆರೆಗಪ್ಪಳಿಸಿದ್ದ 'ಮರ್ದಾನಿ- 3' ಸಿನಿಮಾ ಮಾರ್ಚ್ 27ಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ. ಅಭಿರಾಜ್ ಮಿನವಾಲ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ರಾಣಿ ಮುಖರ್ಜಿ ಅಬ್ಬರಿಸಿದ್ದಾರೆ.

Ott Releases This Week Mardaani 3 Kaattaan and O Romeo Lead Weekend Releases

ರಾಣಿ ಮುಖರ್ಜಿ ನಟನೆಯ 'ಮರ್ದಾನಿ' ಸರಣಿ ಸಿನಿಮಾಗಳು ಹಿಟ್ ಆಗಿವೆ. ಸರಣಿಯ 3ನೇ ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. 60 ಕೋಟಿ ರೂ. ಬಜೆಟ್ ಸಿನಿಮಾ 75 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಚಿತ್ರದಲ್ಲಿ ಜಾನ್ಕಿ ಬಾಡಿವಾಲ, ಜಿಸ್ಸು ಸೇನ್‌ಗುಪ್ತಾ, ಶಶಾಂಕ್ ಶೆಂಧೆ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಆಕ್ಷನ್ ಪ್ರಿಯರಿಗೆ ಹೇಳಿ ಮಾಡಿಸಿದ ಸಿನಿಮಾ.

ಕಾಟ್ಟಾನ್

ತಮಿಳು ನಟ ವಿಜಯ್ ಸೇತುಪತಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಇದೀಗ 'ಕಾಟ್ಟಾನ್' ಎಂಬ ವೆಬ್ ಸೀರಿಸ್ ಮೂಲಕ ರಂಜಿಸೋಕೆ ಬರ್ತಿದ್ದಾರೆ. ಜಿಯೋ ಹಾಟ್‌ಸ್ಟರ್‌ನಲ್ಲಿ ಮಾರ್ಚ್ 27ಕ್ಕೆ ಸರಣಿ ಸ್ಟ್ರೀಮಿಂಗ್ ಆರಂಭಿಸಲಿದೆ. 10 ಎಪಿಸೋಡ್‌ಗಳಾಗಿ ವೀಕ್ಷಣೆಗೆ ಸಿಗಲಿದೆ. ಪ್ರತಿ ಎಪಿಸೋಡ್ 30ರಿಂದ 40 ನಿಮಿಷ ಕಾಲಾವಧಿ ಇರಲಿದೆ.

ಹಳ್ಳಿಯ ಪೊಲೀಸ್ ಠಾಣೆ ಸುತ್ತಾ ಕಥೆ ಸಾಗಲಿದೆ. ಯಾವುದೇ ಕೇಸ್‌ಗಳು ಇಲ್ಲದೇ ಪೊಲೀಸ್ ಠಾಣೆ ಮುಚ್ಚಬೇಕು ಎಂದುಕೊಂಡಾಗ ಊರಿನಲ್ಲಿ ಮುಂಡವಿಲ್ಲದ ರುಂಡ ಸಿಗುತ್ತದೆ. ಆ ರುಂಡ ಯಾರದ್ದು? ಹತ್ಯೆ ನಡೆದಿದ್ದು ಹೇಗೆ? ಹೀಗೆ ವೆಬ್ ಸೀರಿಸ್ ಕಥೆ ಸಾಗಲಿದೆ. ಕನ್ನಡಕ್ಕೂ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ.

ಓ'ರೊಮಿಯೊ

ಬಾಲಿವುಡ್ ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಓ-ರೊಮಿಯೊ ಮಾರ್ಚ್ 27ಕ್ಕೆ ಓಟಿಟಿಗೆ ಬರ್ತಿದೆ. ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ವಿಶಾಲ್ ಭಾರಧ್ವಜ್ ನಿರ್ದೇಶನದ ರೊಮ್ಯಾಂಟಿಕ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಶಾಹಿದ್ ಕಪೂರ್, ತ್ರಿಪ್ತಿ ದಿಮ್ರಿ, ತಮನ್ನಾ ಭಾಟಿಯಾ ನಟಿಸಿದ್ದಾರೆ.

ಪ್ರೈಂ ವಿಡಿಯೋ

1. ಪ್ರೆಟಿ ಲೆಥಲ್(ಇಂಗ್ಲೀಷ್ ಸಿನಿಮಾ) ಮಾರ್ಚ್ 25

2. ಹೌಸ್ ಆಫ್ ಡೇವಿಡ್ ಸೀಸನ್-2(ಇಂಗ್ಲೀಷ್ ವೆಬ್ ಸೀರಿಸ್) ಮಾರ್ಚ್ 27

3. ಬೆಯಿಟ್(ಇಂಗ್ಲೀಷ್ ವೆಬ್ ಸೀರಿಸ್) ಮಾರ್ಚ್ 25

ನೆಟ್‌ಫ್ಲಿಕ್ಸ್

1. ಹಾರ್ಟ್ ಬ್ರೇಕ್ ಹೈ ಸೀಸನ್-3(ಇಂಗ್ಲೀಷ್ ವೆಬ್ ಸೀರಿಸ್) ಮಾರ್ಚ್ 25

2. ಹೋಮಿಸೈಡ್ ಸೀಸನ್-3 (ಇಂಗ್ಲೀಷ್ ವೆಬ್ ಸೀರಿಸ್) ಮಾರ್ಚ್ 25

3. ಸಂಥಿಂಗ್ ವೆರಿ ಬ್ಯಾಡ್ ಈಸ್ ಗೋಯಿಂಗ್ ಟು ಹ್ಯಾಪನ್(ಇಂಗ್ಲೀಷ್ ವೆಬ್ ಸೀರಿಸ್) ಮಾರ್ಚ್ 26

ಹಾಟ್‌ಸ್ಟರ್

1. ದಿ ಹನ್ನಾ ಮುಂಟಾನಾ 20th ಯೂನಿವರ್ಸರಿ ಸ್ಪೆಷಲ್ (ಇಂಗ್ಲೀಷ್ ವೆಬ್ ಸೀರಿಸ್) ಮಾರ್ಚ್ 24

2. ಡೇರ್ ಡೆವಿಲ್ ಬಾರ್ನ್ ಅಗೇನ್ ಸೀಸನ್-2 (ಇಂಗ್ಲೀಷ್ ವೆಬ್ ಸೀರಿಸ್) ಮಾರ್ಚ್ 25

3. ದಿ ಕಮ್ ಬ್ಯಾಕ್(ಇಂಗ್ಲೀಷ್ ವೆಬ್ ಸೀರಿಸ್) ಮಾರ್ಚ್ 23

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X