Ott Releases This Week: ಈ ವಾರ ಓಟಿಟಿ ಚಿತ್ರಗಳು; ಈ ಕನ್ನಡ ಸಿನಿಮಾ ಮಿಸ್ ಮಾಡ್ಕೊಬೇಡಿ
ಮತ್ತೊಂದು ವಾರ ಕಳೆದು ವೀಕೆಂಡ್ ಹತ್ತಿರವಾಗುತ್ತಿದೆ. ಈ ವಾರ ಚಿತ್ರಮಂದಿರಗಳಲ್ಲಿ 'ಕಣ್ಣಪ್ಪ' ಸೇರಿದಂತೆ ಕೆಲ ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಕನ್ನಡದಲ್ಲಿ ಯಾವುದೇ ದೊಡ್ಡ ಸಿನಿಮಾ ತೆರೆಗೆ ಬರ್ತಿಲ್ಲ. ಇತ್ತ ಓಟಿಟಿಯಲ್ಲಿ ಕೆಲ ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆಗಲಿವೆ.
ಕಳೆದ ವಾರ 'ಯುದ್ಧಕಾಂಡ'-2 ಕನ್ನಡ ಸಿನಿಮಾ ಓಟಿಟಿಗೆ ಬಂದಿದ್ದು ಗೊತ್ತೇಯಿದೆ. 'ಸಿದ್ಲಿಂಗು- 2' ಸೇರಿದಂತೆ ಕೆಲ ಸಿನಿಮಾಗಳನ್ನು ನೋಡಲು ಓಟಿಟಿ ಚಂದಾದಾರರು ಕಾಯುತ್ತಲೇ ಇದ್ದಾರೆ. ಆದರೆ ಆ ಸಿನಿಮಾಗಳ ಡಿಜಿಟಲ್ ಸ್ಟ್ರೀಮಿಂಗ್ ಬಗ್ಗೆ ಯಾವುದೇ ಅಪ್‌ಡೇಟ್ ಇಲ್ಲ. ಈ ವಾರ ಯಾವೆಲ್ಲಾ ಸಿನಿಮಾ ಹಾಗೂ ವೆಬ್ ಸೀರಿಸ್ ಓಟಿಟಿಗೆ ಎಂಟ್ರಿ ಕೊಡ್ತಿದೆ. ಇಲ್ಲಿದೆ ಲಿಸ್ಟ್.

ಅಮೇಜಾನ್ ಪ್ರೈಂ
1. ಪಂಚಾಯತ್- ಸೀಸನ್ 4
ಬಾಲಿವುಡ್ ಸೂಪರ್ ಹಿಟ್ ವೆಬ್ ಸೀರಿಸ್ ಪಂಚಾಯತ್. ಇದೀಗ ಸರಣಿಯ 4ನೇ ಸೀಸನ್ ಓಟಿಟಿಗೆ ಬಂದಿದೆ. ಕಳೆದರೆಡು ದಿನಗಳಿಂದ ಪ್ರೈಂ ವೀಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ನೀನಾ ಗುಪ್ತಾ, ರಘುಬೀರ್ ಯಾದವ್, ಚಂದನ್ ರಾಯ್, ಫೈಸಲ್ ಮಲಿಕ್, ಸಾನ್ವಿಕಾ, ದುರ್ಗೇಶ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಈ ಕಾಮಿಡಿ ಡ್ರಾಮಾ ಸೀರಿಸ್‌ನಲ್ಲಿದೆ. ನಾಲ್ಕನೇ ಸೀಸನ್‌ಗೆ ಕೂಡ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ.
ನೆಟ್‌ಫ್ಲಿಕ್ಸ್
1. ರೈಡ್-2
ರಾಜ್‌ಕುಮಾರ್ ಗುಪ್ತಾ ನಿರ್ದೇಶನದಲ್ಲಿ ಅಜಯ್ ದೇವಗನ್ ಹಾಗೂ ರಿತೇಶ್ ದೇಶ್‌ಮುಖ್ ನಟನೆಯ 'ರೈಡ್-2' ಸಿನಿಮಾ ಓಟಿಟಿ ಬಂದಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಕ್ರೈಂ ಥ್ರಿಲ್ಲರ್ ಸಿನಿಮಾ ವೀಕ್ಷಿಸಬಹುದು. ಮೇ 1ರಂದು ತೆರೆಗೆ ಬಂದಿದ್ದ ಈ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಪಾಸಿಟಿವ್ ರೆಸ್ಪಾನ್ಸ್ ಪಡೆದುಕೊಂಡಿದ್ದ ಸಿನಿಮಾ 200 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು. 2018ರಲ್ಲಿ 'ರೈಡ್' ಸಿನಿಮಾ ಬಂದಿತ್ತು. ಅದೇ ಕಥೆಯ ಮುಂದುವರೆದ ಭಾಗ ಇದೀಗ ಪ್ರೇಕ್ಷಕರ ಮುಂದೆ ಬಂದಿದೆ. ಥ್ರಿಲ್ಲರ್ ಸಿನಿಮಾಗಳನ್ನು ಬಯಸುವವರಿಗೆ ಒಳ್ಳೆಯ ಆಯ್ಕೆ.
2. ಸ್ಕ್ವಿಡ್ ಗೇಮ್; ಸೀಸನ್- 3(ವೆಬ್ ಸೀರಿಸ್) ಜೂನ್ 27
3. ದಿ ಅಲ್ಟಿಮೆಟಮ್(ಇಂಗ್ಲೀಷ್ ವೆಬ್ ಸೀರಿಸ್) ಜೂನ್ 25
4. ಟ್ರೈನ್ ರೆಕ್; ಪೂಪ್ ಕ್ರೂಯಿಸ್(ಇಂಗ್ಲೀಷ್ ಸಿನಿಮಾ) ಜೂನ್ 24
5. ಸ್ಟೆಫ್ ಟೋಲೆವ್: ಫಿಲ್ತ್ ಕ್ವೀನ್(ಇಂಗ್ಲೀಷ್ ಕಾಮೆಡಿ ಶೋ) ಜೂನ್ 24

ಸನ್ ನೆಕ್ಸ್ಟ್
1. ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು
ಕನ್ನಡದ 'ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು' ಸಿನಿಮಾ ಇದೀಗ ಸ್ಟ್ರೀಮಿಂಗ್ ಆರಂಭಿಸಿದೆ. ಸನ್‌ನೆಕ್ಸ್ಟ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ವೀಕ್ಷಿಸಬಹುದು. ಕೇಶವ್ ಮೂರ್ತಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಸನ್ನ ಶೆಟ್ಟಿ, ದಿಲೀಪ್ ರಾಜ್, ಅಪೂರ್ವ ಭಾರಧ್ವಜ್, ಶಿಲ್ಪಾ ಮಂಜುನಾಥ್ ಸೇರಿದಂತೆ ದೊಡ್ಡ ತಾರಾಗಣವಿದೆ. ಈ ಆಂಥಾಲಜಿ ಕ್ರೈಂ ಡ್ರಾಮಾ ಮೂರು ಭಾಗಗಳಾಗಿ ರೂಪುಗೊಂಡಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ದೊಡ್ಡಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿತ್ತು. ಜನವರಿ 10ರಂದು ತೆರೆಗೆ ಬಂದಿದ್ದ ಸಿನಿಮಾವನ್ನು ಈಗ ಓಟಿಟಿಯಲ್ಲೇ ನೋಡಬಹುದು.
ಜೀ5
1. ಬಿಬೀಷಣ್(ಬೆಂಗಾಲಿ ವೆಬ್ ಸೀರಿಸ್) ಜೂನ್ 27
2. ವಿರಾಟಪಾಲೆಂ(ತೆಲುಗು ವೆಬ್ ಸೀರಿಸ್) ಜೂನ್ 27
3. ಅಟ ಥಂಬೈಚ ನಾಯ್(ಮರಾಠಿ ವೆಬ್ ಸೀರಿಸ್)
ಹಾಟ್‌ಸ್ಟರ್
1. ಮಿಸ್ತ್ರಿ(ಹಿಂದಿ ವೆಬ್ ಸೀರಿಸ್) ಜೂನ್ 27
2. ಸ್ಕಾರ್ಸ್ ಆಫ್ ಬ್ಯೂಟಿ(ವೆಬ್ ಸೀರಿಸ್) ಜೂನ್ 26
3. ದಿ ಬೇರ್ ಸೀಸನ್-4(ವೆಬ್ ಸೀರಿಸ್) ಜೂನ್ 26


Click it and Unblock the Notifications











