OTT Releases This Week: ಒಂದು ಕನ್ನಡ ಸಿನಿಮಾ ಸೇರಿ 20 ಚಿತ್ರಗಳು ಈ ವಾರ ಓಟಿಟಿಗೆ

ಕಳೆದ ಶುಕ್ರವಾರ ತೆಲುಗಿನ 'ಆಂಧ್ರಕಿಂಗ್ ತಾಲೂಕ' ಹಾಗೂ ಬಾಲಿವುಡ್ ಸಿನಿಮಾ 'ತೆರೆ ಇಷ್ಕ್‌ ಮೇ' ಸೇರಿ ಒಂದಷ್ಟು ಸಿನಿಮಾಗಳು ಬಿಡುಗಡೆ ಆಗಿದ್ದವು. ಈ ವಾರ 'ಅಖಂಡ- 2' ಇನ್ನು ಕೆಲ ಚಿತ್ರಗಳು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿವೆ. ಇತ್ತ ಓಟಿಟಿಯಲ್ಲಿ 20ಕ್ಕೂ ಅಧಿಕ ಸಿನಿಮಾ, ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗಲಿದೆ.

ರಶ್ಮಿಕಾ ಮಂದಣ್ಣ ನಟನೆಯ ಎರಡೆರಡು ಸಿನಿಮಾ ಒಂದೇ ವಾರದಲ್ಲಿ ಓಟಿಟಿಗೆ ಬರ್ತಿರೋದು ವಿಶೇಷ. ಇನ್ನುಳಿದಂತೆ ತೆಲುಗು, ತಮಿಳು, ಹಿಂದಿ, ಕನ್ನಡ, ಮಲಯಾಳಂ ಹಾಗೂ ಇಂಗ್ಲೀಷ್ ಸಿನಿಮಾ ಹಾಗೂ ವೆಬ್ ಸೀರಿಸ್‌ ವಿವಿಧ ಓಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ರಿಲೀಸ್ ಆಗಲಿವೆ. ಕೆಲವು ಕನ್ನಡಕ್ಕೆ ಡಬ್ ಆಗಿ ಬರಲಿದೆ. ಈ ತಿಂಗಳು ಕನ್ನಡದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಗಪ್ಪಳಿಸುತ್ತಿವೆ. ಮುಂದಿನ ತಿಂಗಳು ಅವೆಲ್ಲಾ ಓಟಿಟಿಗೆ ಬರೋ ನಿರೀಕ್ಷೆಯಿದೆ.

OTT Releases This Week Rashmika Mandanna s Two Films Lead This Week

1. ಥಮ್ಮಾ

ರಶ್ಮಿಕಾ ಮಂದಣ್ಣ ನಟನೆಯ ಬಾಲಿವುಡ್ ಹಾರರ್ ಕಾಮಿಡಿ ರೊಮ್ಯಾಟಿಂಗ್ ಸಿನಿಮಾ 'ಥಮ್ಮಾ' ಓಟಿಟಿಗೆ ಬಂದಿದೆ. ಪ್ರೈಂ ವೀಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗ್ತಿದೆ. ಆದರೆ ಸದ್ಯಕ್ಕೆ ಚಂದಾದಾರರು 349 ರೂ. ಪಾವತಿಸಿ ಸಿನಿಮಾ ವೀಕ್ಷಿಸಲು ಅವಕಾಶವಿದೆ. ಡಿಸೆಂಬರ್ 19ರ ಬಳಿಕ ಉಚಿತವಾಗಿ ನೋಡಲು ಸಿಗಬಹುದು.

OTT Releases This Week Rashmika Mandanna s Two Films Lead This Week

ಮಡ್ಯಾಕ್ ಫಿಲ್ಮ್ಸ್ ಬ್ಯಾನರ್‌ನಲ್ಲಿ 'ಥಮ್ಮಾ' ಸಿನಿಮಾ ನಿರ್ಮಾಣವಾಗಿದೆ. ಆಯೂಷ್ಮಾನ್ ಖುರಾನ ಜೊತೆ ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದಾರೆ. ನವಾಜುದ್ದಿನ್ ಸಿದ್ದಿಕಿ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಅಕ್ಟೋಬರ್ 21ರಂದು ತೆರೆಗೆ ಬಂದಿದ್ದ ಸಿನಿಮಾ 169 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

2. ಗರ್ಲ್‌ಫ್ರೆಂಡ್

ತೆಲುಗಿನ 'ದಿ ಗರ್ಲ್‌ಫ್ರೆಂಡ್' ಚಿತ್ರ ಕೂಡ ಇದೇ ಶುಕ್ರವಾರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದ್ದ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ದೀಕ್ಷಿತ್ ಶೆಟ್ಟಿ ನಟಿಸಿದ್ದರು. ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಮುಖ್ಯವಾಗಿ ಮಹಿಳಾ ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ಆದರೆ ದೊಡ್ಡಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ.

ತಿಂಗಳಿಗೂ ಮುನ್ನ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಓಟಿಟಿಗೆ ಬರ್ತಿದೆ. ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್ ಆಗಲಿದೆ. ಇದು ನನ್ನದೇ ಕಥೆ ಎಂದು ರಶ್ಮಿಕಾ ಮಂದಣ್ಣ ಪದೇ ಪದೆ ಹೇಳುತ್ತಾ ಬಂದಿದ್ದರು.

3. ಅರಸಯ್ಯನ ಪ್ರೇಮ ಪ್ರಸಂಗ

ಸೆಪ್ಟೆಂಬರ್‌ನಲ್ಲಿ ತೆರೆಗೆ ಬಂದಿದ್ದ 'ಅರಸಯ್ಯನ ಪ್ರೇಮ ಪ್ರಸಂಗ' ಸಿನಿಮಾ ಓಟಿಟಿ ಪ್ರಯಾಣ ಆರಂಭಿಸುತ್ತಿದೆ. ರಾಜ್ ಕಮಲ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ಚಿತ್ರಕ್ಕೆ ಜೆವಿಆರ್ ದೀಪು ಆಕ್ಷನ್ ಕಟ್ ಹೇಳಿದ್ದಾರೆ. ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯನಟರಾಗಿ ನಟಿಸಿರುವ ಮಹಂತೇಶ್ ಹಿರೇಮಠ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಡಿಸೆಂಬರ್ 5ರಂದು ಸನ್‌ನೆಕ್ಸ್ಟ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ.

ಪ್ರೈಂ ವೀಡಿಯೋ

1. ಓ ವಾಟ್ ಫನ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 3

ಹಾಟ್‌ಸ್ಟರ್

1. ಡಿಯಸ್ ಈರೆ(ಮಲಯಾಳಂ ಸಿನಿಮಾ) ಡಿಸೆಂಬರ್ 5

2. ದಿ ಬ್ಯಾಡ್ ಗಾಯ್ಸ್(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 1

ಜೀ-5

1. ಘರ್‌ವಾಲಿ ಪೆಡ್ವಾಲಿ(ಹಿಂದಿ ವೆಬ್ ಸೀರಿಸ್) ಡಿಸೆಂಬರ್ 5

2. ದಿ ಗ್ರೇಟ್ ಪ್ರೀ ವೆಡ್ಡಿಂಗ್ ಶೋ(ತೆಲುಗು ಸಿನಿಮಾ) ಡಿಸೆಂಬರ್ 5

ಆಹಾ ಓಟಿಟಿ

1. ಧೂಳ್‌ಪೇಟ್ ಪೊಲೀಸ್ ಸ್ಟೇಷನ್(ವೆಬ್ ಸೀರಿಸ್) ಡಿಸೆಂಬರ್ 5

ನೆಟ್‌ಫ್ಲಿಕ್ಸ್

1. ಜೆ ಕೆಲ್ಲಿ(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 5

2. ಕಿಲ್ಲಿಂಗ್ ಈವ್(ಇಂಗ್ಲೀಷ್ ವೆಬ್‌ ಸೀರಿಸ್) ಡಿಸೆಂಬರ್ 2

3. ಮೈ ಸೀಕ್ರೆಟ್ ಸಾಂತಾ(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 2

4. ದಿ ನ್ಯೂ ಇಯರ್ ಅಟ್ 100(ಇಂಗ್ಲೀಷ್ ಸಿನಿಮಾ) ಡಿಸೆಂಬರ್ 5

More from Filmibeat

Read more about: sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X