OTT Release This Week: ಈ ವಾರ ಓಟಿಟಿ ರಿಲೀಸ್ ಚಿತ್ರಗಳ ಪಟ್ಟಿ; 3 ಸಿನಿಮಾ ಮಿಸ್ ಮಾಡ್ಬೇಡಿ
ಚಿತ್ರಮಂದಿರಗಳಲ್ಲಿ ದೊಡ್ಡ ಸಿನಿಮಾಗಳು ಬಿಡುಗಡೆ ಆಗ್ತಿಲ್ಲ. ಇತ್ತ ಓಟಿಟಿಯಲ್ಲಿ ಕೆಲ ಇಂಟ್ರೆಸ್ಟಿಂಗ್ ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿವೆ. ದೊಡ್ಡ ಸಿನಿಮಾಗಳ ಬರದ ಹೊರತು ಜನ ಚಿತ್ರಮಂದಿರಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಓಟಿಟಿಯಲ್ಲೇ ಒಳ್ಳೆ ಸಿನಿಮಾ, ವೆಬ್ ಸೀರಿಸ್ ನೋಡಲು ಹುಡುಕಾಡುತ್ತಿದ್ದಾರೆ.
ಈ ವರ್ಷ ಕನ್ನಡದಲ್ಲಿ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. 'ಲ್ಯಾಂಡ್‌ಲಾರ್ಡ್', 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಹಾಗೂ 'ರಕ್ಕಸಪುರದೋಳ್' ಸಿನಿಮಾಗಳು ತಕ್ಕಮಟ್ಟಿಗೆ ಪ್ರೇಕ್ಷಕರ ಮನ ಗೆದ್ದಿದ್ದವು. ಈ ಮೂರು ಸಿನಿಮಾಗಳು ಯಾವಾಗ ಓಟಿಟಿಗೆ ಬರ್ತಾವೆ ಎಂದು ಸಿನಿರಸಿಕರು ಕಾಯುವಂತಾಗಿದೆ. ಇನ್ನುಳಿದಂತೆ ಕನ್ನಡ ಸಿನಿಮಾಗಳು ಹೆಚ್ಚು ಓಟಿಟಿಯಲ್ಲಿ ಸದ್ದು ಮಾಡ್ತಿಲ್ಲ.

3 ದಿನಗಳ ಹಿಂದೆ ಅನೀಶ್ ತೇಜೇಶ್ವರ್ ನಟನೆಯ 'ಲವ್ ಒಟಿಪಿ' ಸಿನಿಮಾ ಓಟಿಟಿಗೆ ಬಂದಿದೆ. ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈ ವಾರ ಕೂಡ ಕನ್ನಡ ಸಿನಿರಸಿಕರಿಗೆ ಇದೊಂದೇ ಆಯ್ಕೆ ಎನ್ನುವಂತಾಗಿದೆ. ಈ ವಾರ ಯಾವೆಲ್ಲಾ ಸಿನಿಮಾಗಳು ಓಟಿಟಿಗೆ ಬರ್ತಿವೆ ಎನ್ನುವ ಮಾಹಿತಿ ಮುಂದೆ ಓದಿ.
1. ಭರ್ತ ಮಹಾಶಯುಲಕು ವಿಜ್ಞಪ್ತಿ
ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ತೆಲುಗಿನ 'ಭರ್ತ ಮಹಾಶಯುಲಕು ವಿಜ್ಞಪ್ತಿ' ಸಿನಿಮಾ ಈ ವಾರ ಓಟಿಟಿಗೆ ಬರ್ತಿದೆ. ಜೀ5ನಲ್ಲಿ ಮಾರ್ಚ್ 13 ರಿಂದ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ವೀಕ್ಷಣೆಗೆ ಸಿಗಲಿದೆ. ರವಿತೇಜಾ ಜೊತೆ ಈ ಚಿತ್ರದಲ್ಲಿ ಕನ್ನಡ ನಟಿ ಆಶಿಕಾ ರಂಗನಾಥ್ ನಟಿಸಿದ್ದಾರೆ.
ಗಂಡ, ಹೆಂಡತಿ ನಡುವೆ ಮೂರನೇ ವ್ಯಕ್ತಿ(ಪ್ರೇಯಸಿ) ಬಂದಾಗ ಏನೆಲ್ಲಾ ಆಗುತ್ತದೆ ಎನ್ನುವುದನ್ನು ತಮಾಷೆಯಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಚಿತ್ರದಲ್ಲಿ ರವಿತೇಜಾ ಪತ್ನಿ ಪಾತ್ರದಲ್ಲಿ ಡಿಂಪಲ್ ಹಯಾತಿ ನಟಿಸಿದ್ದಾರೆ. ಪ್ರೇಯಸಿಯಾಗಿ ಆಶಿಕಾ ಕಾಣಿಸಿಕೊಂಡಿದ್ದಾರೆ.

2. ಫಂಕಿ
ವಿಶ್ವಕ್ ಸೇನ್ ಹಾಗೂ ಕಯಾದು ಲೋಹರ್ ನಟನೆಯ ಕಾಮಿಡಿ ಎಂಟರ್‌ಟೈನರ್ ಸಿನಿಮಾ 'ಫಂಕಿ'. ಅನುದೀಪ್ ನಿರ್ದೇಶನದ ಸಿನಿಮಾ ವ್ಯಾಲಂಟೈನ್ಸ್ ಡೇ ಸಂಭ್ರಮದಲ್ಲಿ ತೆರೆಗೆ ಬಂದಿತ್ತು. ತಿಂಗಳ ಬಳಿಕ ಓಟಿಟಿ ಸ್ಟ್ರೀಮಿಂಗ್‌ಗೆ ಅಣಿಯಾಗಿದೆ. ಮಾರ್ಚ್ 12ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ವೀಕ್ಷಿಸಬಹುದು.
3. ಲಾಕ್‌ಡೌನ್
ಅನುಪಮಾ ಪರಮೇಶ್ವರನ್ ನಟನೆಯ ತಮಿಳು ಥ್ರಿಲ್ಲರ್ ಸಿನಿಮಾ 'ಲಾಕ್‌ಡೌನ್' ಓಟಿಟಿಗೆ ಬಂದಿದೆ. ಪ್ರೈಂ ವೀಡಿಯೋದಲ್ಲಿ ಸಿನಿಮಾ ನೋಡಬಹುದು. ಕೋವಿಡ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ಸಿನಿಮಾ ಕಥೆ ಕಟ್ಟಿಕೊಡಲಾಗಿದೆ. ಎ.ಆರ್ ಜೀವ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜನವರಿ 30ರಂದು ಸಿನಿಮಾ ತೆರೆಗೆ ಬಂದಿತ್ತು.
4. ಪೆನ್ನುಂ ಪೊರಟ್ಟುಂ
ಮಲಯಾಳಂ ಸಿನಿಮಾಗಳಿಗೆ ಓಟಿಟಿಯಲ್ಲಿ ಬಹಳ ಡಿಮ್ಯಾಂಡ್ ಇದೆ. ಈ ವಾರ 'ಪೆನ್ನುಂ ಪೊರಟ್ಟುಂ' ಎಂಬ ಸಿನಿಮಾ ಓಟಿಟಿಗೆ ಬರ್ತಿದೆ. ಮಾರ್ಚ್ 13ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಹಳ್ಳಿಯೊಂದರಲ್ಲಿರುವ ನಿಯಮಗಳನ್ನು ಒಬ್ಬ ಯುವತಿ ಹಾಗೂ ಒಂದು ಶ್ವಾನ ಮೀರುತ್ತಾರೆ. ಮುಂದೇನಾಗುತ್ತದೆ ಎನ್ನುವುದು ಸಿನಿಮಾ ಕಥೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಓಟಿಟಿಗೆ ಬರಲಿದೆ.
ಹಾಟ್‌ಸ್ಟರ್
1. ಸಿ ಸೊಸೈಟಿ ಸೀಸನ್-2(ಹಿಂದಿ ರಿಯಾಲಿಟಿ ಶೋ) ಮಾರ್ಚ್ 9
2. ರಿಸಾರ್ಟ್(ವೆಬ್ ಸೀರಿಸ್) ಮಾರ್ಚ್ 13
3. ಝೂಟೋಪಿಯಾ- 2(ಆನಿಮೇಟೆಡ್ ಸಿನಿಮಾ) ಮಾರ್ಚ್ 13
4. ದಿ ಫ್ಯಾಮಿಲಿ ಮೆಕ್‌ಮಿಲನ್(ಇಂಗ್ಲೀಷ್ ಸಿನಿಮಾ) ಮಾರ್ಚ್ 15
ಪ್ರೈಂ ವೀಡಿಯೋ
1. ಲೋಕಲ್ ಟೈಮ್ಸ್(ತಮಿಳು ವೆಬ್ ಸೀರಿಸ್) ಮಾರ್ಚ್ 13
2. ಆಸ್ಪಿರೆಂಟ್ಸ್ ಸೀಸನ್-3 (ಹಿಂದಿ ವೆಬ್ ಸೀರಿಸ್) ಮಾರ್ಚ್ 13
3. ಕಪಲ್ ಫ್ರೆಂಡ್ಲಿ(ತೆಲುಗು ಸಿನಿಮಾ) ಮಾರ್ಚ್ 13
ಸನ್ ನೆಕ್ಸ್ಟ್
1. ನಾಂಗಳ್(ತಮಿಳು ಸಿನಿಮಾ) ಮಾರ್ಚ್ 13
2. ಫ್ರೈಡೇ(ತಮಿಳು ಸಿನಿಮಾ) ಮಾರ್ಚ್ 13
ನೆಟ್‌ಫ್ಲಿಕ್ಸ್
1. ವರ್ಜಿನ್ ರಿವರ್ ಸೀಸನ್- 7(ಇಂಗ್ಲೀಷ್ ವೆಬ್ ಸೀರಿಸ್) ಮಾರ್ಚ್ 12
2. ವನ್ ಪೀಸ್ ಸೀಸನ್-2 (ಇಂಗ್ಲೀಷ್ ವೆಬ್ ಸೀರಿಸ್) ಮಾರ್ಚ್ 10


Click it and Unblock the Notifications











