OTT releases this week: ಈ ವಾರ ಓಟಿಟಿ ಸಿನಿಮಾ, ಸೀರಿಸ್ ಲಿಸ್ಟ್; ಕನ್ನಡ ಸಿನಿಮಾಗಳು ಕೂಡ ಇದೆ
ನೋಡ್ತಾ ನೋಡ್ತಾ ಹೊಸ ವರ್ಷದ ಒಂದು ತಿಂಗಳು ಕಳೆದೇ ಹೋಯಿತು. ಫೆಬ್ರವರಿ ಮೊದಲ ವಾರ ಶುರುವಾಗುತ್ತಿದೆ. ಈ ಸಂಕ್ರಾಂತಿ ಬಳಿಕ ಗಣರಾಜ್ಯೋತ್ಸವ ಸಂಭ್ರಮದಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಕಂಡವು. ಎಲ್ಲಾ ಸಿನಿಮಾಗಳಿಗೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಇನ್ನು ಓಟಿಟಿಯಲ್ಲೂ ಇಂಟ್ರೆಸ್ಟಿಂಗ್ ಸಿನಿಮಾ, ವೆಬ್ ಸೀರಿಸ್ ಬರ್ತಿವೆ.
ಸಂಕ್ರಾಂತಿಗೆ ಬಿಡುಗಡೆಯಾದ 'ಹನುಮಾನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಲೇ ಇದೆ. ಕನ್ನಡದಲ್ಲಿ ಕಳೆದ ವರ್ಷ ಕನೆಗೆ ಬಂದ 'ಕಾಟೇರ' ಕಾರುಬಾರು ಇನ್ನು ಕಮ್ಮಿ ಆಗಿಲ್ಲ. ಇದರ ಜೊತೆಗೆ ಕಳೆದ ವಾರಂತ್ಯದಲ್ಲಿ 'ಉಪಾಧ್ಯಕ್ಷ', 'ಬ್ಯಾಚುಲರ್ ಪಾರ್ಟಿ' ಸಿನಿಮಾಗಳು ಬಂದಿವೆ. ಅತ್ತ ಬಾಲಿವುಡ್‌ನಲ್ಲಿ 'ಫೈಟರ್' ಆಗಿ ಬಂದ ಹೃತಿಕ್ ರೋಷನ್ ಫಸ್ಟ್ ವೀಕೆಂಡ್‌ನಲ್ಲೇ 100 ಕೋಟಿ ರೂ. ಬಾಚಿದ್ದಾರೆ.

ಕಳೆದ ವಾರ 'ಸಪ್ತ ಸಾಗರದಾಚೆ ಎಲ್ಲೋ' ಸೈಡ್-B ಸಿನಿಮಾ ದಿಢೀರನೆ ಓಟಿಟಿಗೆ ಬಂದಿತ್ತು. ಅಮೇಜಾನ್ ಪ್ರೈಂನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಕನ್ನಡ ಸಿನಿರಸಿಕರು ಸಿನಿಮಾ ವೀಕ್ಷಿಸಿ ಎಂಜಾಯ್ ಮಾಡುತ್ತಿದ್ದಾರೆ. ಕೆಲವರು ಸಿನಿಮಾ ಇಷ್ಟವಾಗಿದ್ದರೆ ಮತ್ತೆ ಕೆಲವರಿಗೆ ಬೇಸರ ಮೂಡಿಸಿದೆ. ಇನ್ನು ಈ ಈ ವೀಕೆಂಡ್ ಡಿಜಿಟಲ್ ಸ್ಟ್ರೀಮಿಂಗ್‌ಗೆ ಸಿದ್ಧವಾಗಿರುವ ಸಿನಿಮಾ, ವೆಬ್ ಸೀರಿಸ್ ಲಿಸ್ಟ್ ಇಲ್ಲಿದೆ.
ಅಮೇಜಾನ್ ಪ್ರೈಮ್
1. ಮರೀಚಿ
ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 'ಮರೀಚಿ' ಓಟಿಟಿಗೆ ಬಂದಿದೆ. ಸದ್ಯಕ್ಕೆ ಬಾಡಿಗೆ ಆಧಾರದಲ್ಲಿ ಅಮೇಜಾನ್ ಪ್ರೈಂನಲ್ಲಿ ಸಿನಿಮಾ ವೀಕ್ಷಣೆಗೆ ಲಭ್ಯವಿದೆ. ಸಿದ್ಧ್ರುವ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ವಿಜಯ್ ಪೊಲೀಸ್ ಆಫೀಸರ್ ಆಗಿ ಮಿಂಚಿದ್ದಾರೆ. ಡಿಸೆಂಬರ್ 8ರಂದು ಸಿನಿಮಾ ತೆರೆಕಂಡಿತ್ತು.
2. ಗರಡಿ
ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾ ಜನವರಿ 31ರಿಂದ ಸ್ಟ್ರೀಮಿಂಗ್ ಆಗ್ತಿದೆ. ಯಶಸ್ ಸೂರ್ಯ ಹೀರೊ ಆಗಿ ನಟಿಸಿರುವ ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಬಿ. ಸಿ ಪಾಟೀಲ್ ಈ ಹಳ್ಳಿ ಸೊಗಡಿನ ಸಿನಿಮಾ ನಿರ್ಮಿಸಿ, ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೇಜಾನ್ ಪ್ರೈಂ ವಿಡಿಯೋದಲ್ಲಿ ಸಿನಿಮಾ ಲಭ್ಯವಿದೆ.
2. ಸೈಂಧವ್
ತೆಲುಗಿನಲ್ಲಿ ವಿಕ್ಟರ್ ವೆಂಕಟೇಶ್ ನಟಿಸಿದ 'ಸೈಂಧವ್' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ರಿಲೀಸ್ ಆಗಿತ್ತು. ಆದರೆ 15 ದಿನಕ್ಕೆ ಸಿನಿಮಾ ಓಟಿಟಿಗೆ ಬರ್ತಿದೆ ಎನ್ನಲಾಗ್ತಿದೆ. ಇದೇ ಶುಕ್ರವಾರ ಸಿನಿಮಾ ಅಮೇಜಾನ್ ಪ್ರೈಂಗೆ ಬರುವ ನಿರೀಕ್ಷೆ ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಶ್ರದ್ಧಾ ಶ್ರೀನಾಥ್ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ.
3. ಡೀ ಪ್ರಾಂಕ್ ಶೋ(ಡಚ್ ಸೀರಿಸ್) - ಫೆಬ್ರವರಿ 02
4. ಮಿಸ್ಟರ್ & ಮಿಸ್ ಸ್ಮಿತ್(ಇಂಗ್ಲೀಷ್ ಸೀರಿಸ್) - ಫೆಬ್ರವರಿ 02

ನೆಟ್‌ಫ್ಲಿಕ್ಸ್
1. ದಿ ಗ್ರೇಟೆಸ್ಟ್ ನೈಟ್ ಇನ್ ಪಾಪ್(ಇಂಗ್ಲೀಷ್ ಸಿನಿಮಾ) - ಜನವರಿ 29
2. ಮೈಟಿ ಭೀಮ್ಸ್ ಪ್ಲೇಟೈಮ್(ಇಂಗ್ಲೀಷ್ ಸೀರಿಸ್) - ಜನವರಿ 29
3. ಬೇಬಿ ಬ್ಯಾಂಡಿಟೊ(ಇಂಗ್ಲೀಷ್ ಸೀರಿಸ್) - ಜನವರಿ 31
4. ಜ್ಯಾಕ್ ವೈಟ್‌ಹಾಲ್: ಸೆಟ್ಲ್ ಡೌನ್ (ಇಂಗ್ಲೀಷ್ ಸಿನಿಮಾ)- ಜನವರಿ 30
5. ನಾಸ್ಕರ್: ಫುಲ್ ಸ್ಪೀಡ್ (ಇಂಗ್ಲೀಷ್ ಸೀರಿಸ್)- ಜನವರಿ 30
6. ಅಲೆಕ್ಸಾಂಡರ್: ದಿ ಮೇಕಿಂಗ್ ಆಫ್ ಎ ಗಾಡ್(ಇಂಗ್ಲೀಷ್ ಸೀರಿಸ್) - ಜನವರಿ 31
7. ದಿ ಸೆವೆನ್ ಡೆಡ್ಲಿ ಸಿನ್ಸ್ (ಜಪಾನೀಸ್ ಸೀರಿಸ್)- ಜನವರಿ 31
8. WIL(ಡಚ್ ಸಿನಿಮಾ) - 31 ಜನವರಿ
9. ಆಫ್ಟರ್ ಎವರಿಥಿಂಗ್ (ಇಂಗ್ಲಿಷ್ ಸಿನಿಮಾ)- ಫೆಬ್ರವರಿ 01
10. ಲೆಟ್ಸ್ ಟಾಕ್ ಎಬೌಟ್ CHU (ಮ್ಯಾಂಡರಿನ್ ಸೀರಿಸ್) - ಫೆಬ್ರವರಿ 02
11. ಓರಿಯನ್ ಅಂಡ್ ದ ಡಾರ್ಕ್ (ಇಂಗ್ಲಿಷ್ ಸಿನಿಮಾ)- ಫೆಬ್ರವರಿ 02
ಜಿಯೋ ಸಿನಿಮಾ
1. ಇನ್ ದಿ ನೋ (ಇಂಗ್ಲೀಷ್ ಸೀರಿಸ್)- ಜನವರಿ 29
ಮನೋರಮಾ ಮ್ಯಾಕ್ಸ್
1. ಓ ಮೈ ಡಾರ್ಲಿಂಗ್(ಮಲಯಾಳಂ ಸಿನಿಮಾ)- ಫೆಬ್ರವರಿ 02
ಬುಕ್ ಮೈ ಶೋ
1. ಅಸಿಡಿಯೊ(ಸ್ಪಾನಿಷ್ ಸಿನಿಮಾ) - ಜನವರಿ 30
ಹಾಟ್‌ಸ್ಟಾರ್
1. ಕೊಯಿರ್(ಇಂಗ್ಲೀಷ್ ಸೀರಿಸ್) - ಜನವರಿ 31
2. ಮಿಸ್ ಪರ್ಫೆಕ್ಟ್(ತೆಲುಗು ಸೀರಿಸ್) - ಫೆಬ್ರವರಿ 02
3. ಸೆಲ್ಫ್(ಇಂಗ್ಲೀಷ್ ಸಿನಿಮಾ)- ಫೆಬ್ರವರಿ 02


Click it and Unblock the Notifications











