OTT Releases This Week: ಸಂಕ್ರಾಂತಿಗೆ 15 ಚಿತ್ರಗಳು ಓಟಿಟಿಗೆ ಎಂಟ್ರಿ; ಕನ್ನಡ ಚಿತ್ರ ಕೂಡ ಇದೆ
ಸುಗ್ಗಿ ಸಂಭ್ರಮದಲ್ಲಿ ಚಿತ್ರಮಂದಿರಗಳಲ್ಲಿ ದೊಡ್ಡ ದೊಡ್ಡ ಸಿನಿಮಾಗಳು ತೆರೆಕಂಡು ಸದ್ದು ಮಾಡ್ತಿದೆ. ಕನ್ನಡದ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ ಎನ್ನುವುದು ಬೇಸರದ ಸಂಗತಿ. ಇನ್ನುಳಿದಂತೆ ತೆಲುಗು, ತಮಿಳಿನ ಇಂಟ್ರೆಸ್ಟಿಂಗ್ ಚಿತ್ರಗಳ ದರ್ಬಾರ್ ಜೋರಾಗಿದೆ.
ಚಿರಂಜೀವಿ ಹಾಗೂ ನಯನತಾರ ನಟನೆಯ 'ಮನ ಶಂಕರವರಪ್ರಸಾದ್ ಗಾರು' ಸಿನಿಮಾ ಆರ್ಭಟ ಜೋರಾಗಿದೆ. 3 ದಿನಕ್ಕೆ ಸಿನಿಮಾ 150 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಎಲ್ಲೆಲ್ಲೂ ಹೌಸ್‌ಫುಲ್ ಪ್ರದರ್ಶನ ಕಾಣ್ತಿದೆ. ಇನ್ನುಳಿದಂದತೆ ಪ್ರಭಾಸ್ ನಟನೆಯ 'ದಿ ರಾಜಾಸಾಬ್', ರವಿತೇಜ- ಆಶಿಕಾ ನಟನೆಯ 'ಭರ್ತ ಮಹಾಶಯಲಕು ವಿಜ್ಞಪ್ತಿ' ಚಿತ್ರಗಳು ಪ್ರೇಕ್ಷಕರನ್ನು ಸೆಳೆಯುತ್ತಿದೆ. ತಮಿಳಿನ 'ಪರಾಶಕ್ತಿ' ಸಿನಿಮಾ ಕೂಡ ಪ್ರೇಕ್ಷಕರನ್ನು ರಂಜಿಸುತ್ತಿದೆ.

'ಅನಗನಗ ಒಕ ರೋಜು', 'ನಾರಿ ನಾಡಿ ನಡುಮು ಮುರಾರಿ' ಹೀಗೆ ಸಂಕ್ರಾಂತಿ ರಿಲೀಸ್ ಸಿನಿಮಾಗಳ ಪಟ್ಟಿ ಬೆಳೆಯುತ್ತಿದೆ. ಇದೆಲ್ಲದರ ನಡುವೆ ಓಟಿಟಿಯಲ್ಲಿ ಈ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾಗಳು, ವೆಬ್ ಸೀರಿಸ್ ರಿಲೀಸ್ ಆಗಿದೆ. ಕಳೆದ ವಾರ ಕನ್ನಡದ 5 ಸಿನಿಮಾಗಳು ಓಟಿಟಿಯಲ್ಲಿ ಸದ್ದು ಮಾಡಿದ್ದವು. ಮುಂದಿನ '45' ಸಿನಿಮಾ ಜೀ-5ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.
1. ಕಲಾಂಕಾವಲ್
ಮಮ್ಮುಟ್ಟಿ ನಟನೆಯ 'ಕಲಾಂಕಾವಲ್' ಸಿನಿಮಾ ತಿಂಗಳ ಹಿಂದೆ ತೆರೆಗೆ ಬಂದಿತ್ತು. ಜಿತಿನ್ ಜೋಸ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದೀಗ ಓಟಿಟಿಗೆ ಬಂದಿದೆ. ಸೋನಿ ಲಿವ್ ಓಟಿಟಿ ವೇದಿಕೆಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಓಟಿಟಿಯಲ್ಲಿ ಲಭ್ಯವಿದೆ.

2. ಟಾಸ್ಕರಿ: ದಿ ಸ್ಮಗ್ಲರ್ಸ್ ವೆಬ್
ಬಾಲಿವುಡ್ ವೆಬ್ ಸೀರಿಸ್ 'ಟಾಸ್ಕರಿ: ದಿ ಸ್ಮಗ್ಲರ್ಸ್ ವೆಬ್' ಓಟಿಟಿ ಪ್ರಿಯರನ್ನು ರಂಜಿಸ್ತಿದೆ. ಈ ಕ್ರೈಂ ಥ್ರಿಲ್ಲರ್ ಸರಣಿಗೆ ನೀರಜ್ ಪಾಂಡೆ ಹಾಗೂ ವಿಪುಲ್ ಕೆ. ರಾವಲ್ ಆಕ್ಷನ್ ಕಟ್ ಹೇಳಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಇಮ್ರಾನ್ ಹಶ್ಮಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ವೆಬ್ ಸೀರಿಸ್ 7 ಎಪಿಸೋಡ್‌ಗಳಾಗಿ ಮೊದಲ ಸೀಸನ್ ಶುರುವಾಗಿದೆ.
3. ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ
ಅಭಿಷೇಕ್ ಮಂಜುನಾಥ್ ನಿರ್ದೇಶನದ 'ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ' ಕನ್ನಡ ಸಿನಿಮಾ ಪ್ರೈಂ ವೀಡಿಯೋಗೆ ಬಂದಿದೆ. ದೀಕ್ಷಿತ್ ಶೆಟ್ಟಿ, ಬೃಂದಾ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಶ್ರುತಿ ಹರಿಹರಣ್ ಈ ಚಿತ್ರದ ತಾರಾಗಣದಲ್ಲಿದ್ದಾರೆ. ನವೆಂಬರ್ 27ಕ್ಕೆ ಸಿನಿಮಾ ತೆರೆಕಂಡಿತ್ತು. ಇದೀಗ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಇನ್ನು ಯಾವೆಲ್ಲಾ ಸಿನಿಮಾ, ವೆಬ್ ಸೀರಿಸ್ ಓಟಿಟಿಗೆ ಬಂದಿದೆ ಮುಂದೆ ಓದಿ.
ನೆಟ್‌ಫ್ಲಿಕ್ಸ್
1. ಸೆವೆಲ್ ಡಯಲ್ಸ್(ಇಂಗ್ಲೀಷ್ ಸಿನಿಮಾ) ಜನವರಿ 15
2. ಸ್ಟ್ರೇಂಜರ್ ಥಿಂಗ್ಸ್- 5(ಮೇಕಿಂಗ್ ವಿಡಿಯೋ) ಜನವರಿ 12
3. ದ ರಿಪ್ (ಇಂಗ್ಲೀಷ್ ಸಿನಿಮಾ) ಜನವರಿ 16
ಹಾಟ್‌ಸ್ಟರ್
1. ಡೌನ್ ಟು ಅಬ್ಬೆ: ದ ಗ್ರ್ಯಾಂಡ್ ಫಿನಾಲೆ(ಇಂಗ್ಲೀಷ್ ಸೀರಿಸ್) ಜನವರಿ 12
2. ಇಂಡಸ್ಟ್ರಿ(ಇಂಗ್ಲೀಷ್ ಸೀರಿಸ್) ಜನವರಿ 12
ಜೀ-5
1. ಭಾ ಭಾ ಭಾ(ಮಲಯಾಳಂ ಸಿನಿಮಾ) ಜನವರಿ 16
2. ಗುರ್ರಂ ಪಾಪಿರೆಡ್ಡಿ(ತೆಲುಗು ಸಿನಿಮಾ) ಜನವರಿ 16
3. ಮಸ್ತಿ-4 (ಹಿಂದಿ ಸಿನಿಮಾ) ಜನವರಿ 16
ಆಪಲ್ ಟಿವಿ ಪ್ಲಸ್
1. ಹೈಜಾಕ್ ಸೀಸನ್-2(ಇಂಗ್ಲಿಷ್ ವೆಬ್ ಸೀರಿಸ್) ಜನವರಿ 14
ಪ್ರೈಂ ವೀಡಿಯೋ
1. ದಂಡೋರ(ತೆಲುಗು ಸಿನಿಮಾ) ಜನವರಿ 14
2. 120 ಬಹದ್ದೂರ್(ಹಿಂದಿ ಸಿನಿಮಾ) ಜನವರಿ 14


Click it and Unblock the Notifications











