ಕಳಚಿ ಬಿತ್ತು ನಟಿಯ ಮುಖವಾಡ ; ಅವಕಾಶದ ಆಮಿಷವೊಡ್ಡಿ ಹೈಟೆಕ್ ದಂಧೆ ನಡೆಸುತ್ತಿದ್ದ ಚೆಲುವೆ ಅರೆಸ್ಟ್
ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಚಿತ್ರರಂಗದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು. ಹೇಗಾದರೂ ಮಾಡಿ ಬಹು ಬೇಗ ದುಡ್ಡು ಮಾಡಿಬಿಡಬೇಕು, ರಾತ್ರಿ ಕಳೆದು ಹಗಲಾಗುವಷ್ಟರಲ್ಲಿ ಶ್ರೀಮಂತರಾಗಬೇಕೆನ್ನುವ ಹಪಾಹಪಿ ಇಲ್ಲಿ ಅನೇಕರದ್ದು.
ಹೀಗಾಗಿಯೇ ಹಣದಾಸೆಗೆ ಹಲವರು.. ಇಲ್ಲಿ ಅಡ್ಡದಾರಿಯನ್ನು ಹಿಡಿಯುತ್ತಾರೆ. ಮಾಡಬಾರದ ಕೆಲಸ ಮಾಡುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಹೈಟೆಕ್ ವೇಶ್ಯಾವಾಟಿಕೆಯನ್ನು ನಡೆಸುತ್ತಿದ್ದ ನಟಿಯನ್ನು ಮುಂಬೈನ ಪೊಲೀಸರು ಬಂಧಿಸಿದ್ದಾರೆ.

ಹೌದು, ಅಸಲಿಗೆ ಬಂಧನಕ್ಕೊಳಗಾದ ಈ ಚೆಲುವೆ ಬಾಲಿವುಡ್‌ನ ವೆಬ್ ಸರಣಿಗಳಲ್ಲಿ ಆಕ್ಟ್ ಮಾಡುತ್ತಿದ್ದರು. ಆದರೆ, ಓಟಿಟಿಯಲ್ಲಿ ಇವರಿಗೆ ಅವಕಾಶಗಳಿಗೆ ಬರಗಾಲ ಇತ್ತು. ಇನ್ನೂ ಒಮ್ಮೆ ಚಿತ್ರರಂಗಕ್ಕೆ ಬಂದರೆ ಐಶಾರಾಮಿ ಜೀವನದ ಗೀಳು ಹತ್ತುತ್ತೆ. ಇವರ ವಿಚಾರದಲ್ಲಿ ಕೂಡ ಇದೇ ಆಗಿತ್ತು. ಸಾಲದಕ್ಕೆ ಸಹೋದರಿಯ ಶಿಕ್ಷಣದ ಜವಾಬ್ಧಾರಿ ಕೂಡ ಇವರ ಮೇಲಿತ್ತು. ಹಳ್ಳಿಯಲ್ಲಿರುವ ಪೋಷಕರಿಗೆ ಕೂಡ ಮನೆಯ ಖರ್ಚು-ವೆಚ್ಚಕ್ಕೆ ಹಣ ಕಳಿಸಬೇಕಿತ್ತು.
ಈ ಹಿನ್ನೆಲೆ ಬದುಕಿನ ಬಂಡಿಯನ್ನೇಳೆಯುವುದ್ಹೇಗೆ ಎಂದು ದಿಕ್ಕೆಟ್ಟು ಕುಂತ ಸಮಯದಲ್ಲಿಯೇ ಈ ನಟಿಗೆ 26 ವರ್ಷದ ಈ ನಟಿಗೆ ವ್ಯಕ್ತಿಯೊಬ್ಬನ ಪರಿಚಯವಾಗಿತ್ತು. ಪರಿಚಯ ಆದ ವ್ಯಕ್ತಿಯ ಸಹಾಯದಿಂದ ಸದ್ಯ ಪೊಲೀಸರ ಅತಿಥಿಯಾದ ಈ ನಟಿ ಹೈಟೆಕ್ ಮಾಸದಂಧೆಯನ್ನು ನಡೆಸಲು ಶುರು ಮಾಡಿದ್ದರು.
ವೆಬ್ ಸೀರೀಸ್‌ಗಳಲ್ಲಿ ಅಭಿನಯಿಸುವಾಗ ತನಗಾದ ಪರಿಚಯ,ಮತ್ತು ಸಾಮಾಜಿಕ ಜಾಲತಾಣದ ಮೂಲಕ ಬಲೆ ಬೀಸುತ್ತಿದ್ದ ಈ ನಟಿ ಬಣ್ಣದ ಲೋಕಕ್ಕೆ ಬರಬೇಕೆಂಬ ಕನಸು ಕಾಣುತ್ತಿದ್ದ ಯುವತಿಯರನ್ನು ಪುಸಲಾಯಿಸುತ್ತಿದ್ದರು. ಹಣ ಮತ್ತು ಅವಕಾಶ ಆಮಿಷವೊಡ್ಡಿ ಸುಂದರ ಯುವತಿಯರನ್ನು ತನ್ನ ಖೆಡ್ಡಾಗಿ ಬೀಳಿಸಿಕೊಳ್ಳುತ್ತಿದ್ದರು.
ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ಹೇಗೆ ಮದನಾರಿ?
ಮುಖಕ್ಕೆ ಮೇಕಪ್ ಹಾಕಿಕೊಂಡು ನಟಿ ನಡೆಸುತ್ತಿದ್ದ ಈ ದಂಧೆಯ ವಿಷಯವನ್ನರಿತ ಮುಂಬೈನ ಥಾಣೆಯ ಕ್ರೈಂ ಬ್ಯ್ರಾಂಚ್ ಅಧಿಕಾರಿಗಳು ನಟಿಗೆ ಬಲೆ ಬೀಸಿದರು. ನಕಲಿ ಗ್ರಾಹಕರನ್ನು ಕಳುಹಿಸಿದರು.

ನಮ್ಮ ಬಳಿ ಹಿಂದಿ ವೆಬ್ ಸೀರೀಸ್ ಮತ್ತು ಟಿವಿ ಧಾರಾವಾಹಿಗಳಲ್ಲಿ ನಟಿಸುವ ಆಸಕ್ತಿ ಹೊಂದಿರುವ ಯುವತಿಯರಿದ್ಧಾರೆ ಎಂದು ಹೇಳಿ ಫೋಟೋ ಕಳುಹಿಸಿದ್ದರು. ಆ ನಂತರ ನಟಿ ವ್ಯವಹಾರ ಕುದುರಿಸಿ ಇಬ್ಬರು ಪೊಲೀಸರು ಕಳುಹಿಸಿದ್ದ ಇಬ್ಬರು ಯುವತಿಯರನ್ನು ಕರೆದುಕೊಂಡು ಥಾಣೆಯ ವಾಗ್ಳೆ ಎಸ್ಟೇಟ್ ಪ್ರದೇಶದಲ್ಲಿನ ಹೋಟೆಲ್‌ಗೆ ನಟಿ ಬಂದರು. ಅಲ್ಲಿ ಮೊದಲೇ ಕಾದು ಕುಂತಿದ್ದ ಪೊಲೀಸರು ಸದ್ಯ ನಟಿಯನನ್ಉ ಬಂಧಿಸಿದ್ದಾರೆ. 40 ಮತ್ತು 48 ವರ್ಷದ ಮಹಿಳೆಯರನ್ನು ನಟಿಯ ಕಪಿಮುಷ್ಟಿಯಿಮದ ರಕ್ಷಿಸಿದ್ದಾರೆ.
ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಸೆಲ್ (AHTC) ಅಧಿಕಾರಿಗಳು ಬೀಸಿದ ಬಲೆಗೆ ಬಿದ್ದ ಈ ನಟಿಯ ವಿರುದ್ಧ ಇಮ್ಮೋರಲ್ ಟ್ರಾಫಿಕ್ ಪ್ರಿವೆನ್ಷನ್ ಆಕ್ಟ್ (PITA) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಟಿಯ ಮೊಬೈಲ್ ಫೋನ್ ಮತ್ತು ಡಿಜಿಟಲ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಜಾಲದಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ತೀವ್ರ ತನಿಖೆಯನ್ನು ನಡೆಸುತ್ತಿರುವ ಪೊಲೀಸರು ಜಾಲ ಥಾಣೆ ಮಾತ್ರವಲ್ಲದೆ ಮುಂಬೈನ ಇತರ ಭಾಗಗಳಿಗೂ ಹರಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಸದ್ಯ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ನಟಿಗೆ ಫೆಬ್ರವರಿ 26 ರವರೆಗೆ ಪೊಲೀಸ್ ಕಸ್ಟಡಿ ವಿಧಿಸಿದೆ. ವಾಗ್ಳೆ ಎಸ್ಟೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾಸದಂಧೆಯ ಈ ಸುದ್ದಿಯನ್ನು ಕೇಳಿ ಸದ್ಯ ಹಿಂದಿ ಚಿತ್ರ ಉದ್ಯಮ ಬೆಚ್ಚಿ ಬಿದ್ದಿದ್ದು ಈ ಪ್ರಕರಣದಲ್ಲಿ ಮುಂದೇನಾಗುತ್ತೆ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications










