OTT Releases This Week; 'ಕಿಂಗ್ಡಮ್' ಜೊತೆ ಈ ವಾರ ಓಟಿಟಿ ರಿಲೀಸ್ ಚಿತ್ರಗಳ ಪಟ್ಟಿ

'ಮಹಾವತಾರ್ ನರಸಿಂಹ', 'ಸು ಫ್ರಮ್ ಸೋ', 'ಕೂಲಿ' ಹಾಗೂ 'ವಾರ್- 2' ಸಿನಿಮಾಗಳೇ ಈ ವಾರವೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ. ಒಂದಷ್ಟು ಹೊಸ ಸಿನಿಮಾಗಳು ಬಂದಿದ್ದರೂ ಸದ್ದು ಮಾಡಲಿಲ್ಲ. ಇನ್ನು ಈ ಶುಕ್ರವಾರ ಕನ್ನಡದ 'ಅಂದೊಂದಿತ್ತು ಕಾಲ' ಸೇರಿ ಒಂದಷ್ಟು ಸಿನಿಮಾಗಳು ತೆರೆಗೆ ಬರ್ತಿವೆ.

ಇತ್ತ ಓಟಿಟಿಯಲ್ಲಿ ಒಂದಷ್ಟು ಸಿನಿಮಾ ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್‌ಗೆ ಸಜ್ಜಾಗಿದೆ. ಈಗಾಗಲೇ ವಿಜಯ್ ದೇವರಕೊಂಡ ನಟನೆ 'ಕಿಂಗ್ಡಮ್' ಸಿನಿಮಾ 5 ಭಾಷೆಗಳಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ವಿಫಲವಾಗಿದ್ದ ಸಿನಿಮಾ ಓಟಿಟಿಯಲ್ಲಿ ಸದ್ದು ಮಾಡ್ತಿದೆ. ಇನ್ನುಳಿದಂತೆ ಈ ವಾರ ಓಟಿಟಿಗೆ ಬರ್ತಿರೋ ಸಿನಿಮಾಗಳ ಲಿಸ್ಟ್ ಮುಂದೆ ಇದೆ ಓದಿ.

OTT This Week Maman Janaki vs State of Kerala ekka and More New Releases

ಮಾಮನ್

ತಮಿಳಿನ 'ಮಾಮನ್' ಸಿನಿಮಾ ಇದೀಗ ಓಟಿಟಿಗೆ ಬಂದಿದೆ. ಸೂರಿ, ರಾಜ್‌ ಕಿರಣ್, ಐಶ್ವರ್ಯ ಲಕ್ಷ್ಮಿ ನಟನೆಯ ಚಿತ್ರಕ್ಕೆ ಪ್ರಶಾಂತ್ ಪಾಂಡಿರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಮೇ 16ರಂದು ತೆರೆಗೆ ಬಂದು ಗೆದ್ದಿದ್ದ ಸಿನಿಮಾ ಇದೀಗ ಜೀ-5ನಲ್ಲಿ ರಿಲೀಸ್ ಆಗಿದೆ. ತೆಲುಗು ಹಾಗೂ ಕನ್ನಡಕ್ಕೂ ಡಬ್ ಆಗಿ ವೀಕ್ಷಣೆಗೆ ಲಭ್ಯವಿದೆ.

ಜಾನಕಿ vs ಸ್ಟೇಟ್ ಆಫ್ ಕೇರಳ

ಅನುಪಮಾ ಪರಮೇಶ್ವರನ್ ನಟನೆಯ ಕೋರ್ಟ್ ರೂಂ ಡ್ರಾಮಾ 'ಜಾನಕಿ ವಿ vs ಸ್ಟೇಟ್ ಆಫ್ ಕೇರಳ' ಸಿನಿಮಾ ಜೀ-5ನಲ್ಲಿ ಬಿಡುಗಡೆಯಾಗಿದೆ. ಕನ್ನಡಕ್ಕೂ ಡಬ್ ಆಗಿ ಬಂದಿದೆ. ಜುಲೈ 17ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಅನುಪಮಾ ಜೊತೆಗೆ ಸುರೇಶ್ ಗೋಪಿ, ಶ್ರುತಿ ರಾಮಚಂದ್ರನ್, ಮಾಧವ್ ಸುರೇಶ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಬಹಳ ಕುತೂಹಲಭರಿತವಾಗಿ ಸಿನಿಮಾ ಕಥೆ ಸಾಗುತ್ತದೆ. ಓಟಿಟಿಯಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಗುತ್ತಿದೆ.

OTT This Week Maman Janaki vs State of Kerala ekka and More New Releases

ಮೆಟ್ರೋ..ಇನ್ ಡಿನೊ

ಅನುರಾಗ್ ಬಸು ನಿರ್ದೇಶನದ 'ಮೆಟ್ರೋ..ಇನ್ ಡಿನೊ' ಸಿನಿಮಾ ಆಗಸ್ಟ್ 29ರಂದು ಓಟಿಟಿಗೆ ಬರ್ತಿದೆ. ಅನುಪಮ್ ಖೇರ್, ನೀನಾ ಗುಪ್ತಾ, ಕೊಂಕನಾ ಸೇನ್ ಶರ್ಮಾ, ಪಂಕಜ್ ತ್ರಿಪಾಠಿ, ಆದಿತ್ಯಾ ರಾಯ್ ಕಪೂರ್ ರೀತಿಯ ಪ್ರತಿಭಾನ್ವಿತ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜುಲೈ 4ರಂದು ಈ ಮ್ಯೂಸಿಕಲ್ ರೊಮ್ಯಾಂಟಿಕ್ ಡ್ರಾಮಾ ತೆರೆಗಪ್ಪಳಿಸಿತ್ತು. ತಕ್ಕಮಟ್ಟಿಗೆ ಸಕ್ಸಸ್ ಕಂಡಿತ್ತು. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗುತ್ತಿದೆ.

ಎಕ್ಕ

ಯುವ ರಾಜ್‌ಕುಮಾರ್ ಹಾಗೂ ಸಂಜನಾ ಆನಂದ್ ನಟನೆಯ 'ಎಕ್ಕ' ಸಿನಿಮಾ ಈ ವಾರವೇ ಓಟಿಟಿಗೆ ಬರುತ್ತದೆ ಎನ್ನುವ ಗುಸುಗುಸು ಶುರುವಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಜುಲೈ 18ಕ್ಕೆ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗೆ ಬಂದು ಪ್ರೇಕ್ಷಕರನ್ನು ರಂಜಿಸಿತ್ತು. ಮಿಶ್ರ ಪ್ರತಿಕ್ರಿಯೆ ಸಿಕ್ಕರೂ ಒಂದು ಹಂತಕ್ಕೆ ಸಕ್ಸಸ್ ಕಂಡಿತ್ತು. ರೋಹಿತ್ ಪದಕಿ ನಿರ್ದೇಶನದ ಚಿತ್ರವನ್ನು ಪಿಆರ್‌ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲ್ಮ್ಸ್ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆಗಳು ಒಟ್ಟಾಗಿ ನಿರ್ಮಾಣ ಮಾಡಿದ್ದವು. ಜೀ-5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುವ ನಿರೀಕ್ಷೆಯಿದೆ.

ಜೀ-5

1. ಶೋಧ (ಕನ್ನಡ ವೆಬ್ ಸೀರಿಸ್) ಆಗಸ್ಟ್ 29

ಪ್ರೈಂ ವೀಡಿಯೋ

1. ಸಾಂಗ್ ಆಫ್ ಪ್ಯಾರಡೈಸ್(ಹಿಂದಿ ಸಿನಿಮಾ) ಆಗಸ್ಟ್ 25

2. ಲವ್ ಮ್ಯಾರೇಜ್(ತಮಿಳು ಸಿನಿಮಾ) ಆಗಸ್ಟ್ 29

ಸೋನಿ ಲಿವ್

1. ಸಂಭವ ವಿವರಣಮ್ ನಲರಸಂಘಂ(ಮಲಯಾಳಂ ವೆಬ್ ಸೀರಿಸ್) ಆಗಸ್ಟ್ 29

ಹಾಟ್‌ಸ್ಟರ್

1. ರಾಂಬೊ ಇನ್ ಲವ್(ತೆಲುಗು ವೆಬ್ ಸೀರಿಸ್) ಆಗಸ್ಟ್ 29

2. ಅಟಾಮಿಕ್ ವನ್ ಹಾಲ್ ಆಫ್ ಎ ರೈಡ್(ಹಾಲಿವುಡ್ ಸಿನಿಮಾ) ಆಗಸ್ಟ್ 29

ನೆಟ್‌ಫ್ಲಿಕ್ಸ್

1. ಕರಾಟೆ ಕಿಡ್: ಲೆಜೆಂಡ್ಸ್(ಹಾಲಿವುಡ್ ಸಿನಿಮಾ) ಆಗಸ್ಟ್ 30

2. ಅನ್‌ನೌನ್ ನಂಬರ್(ಹಾಲಿವುಡ್ ಸಿನಿಮಾ) ಆಗಸ್ಟ್ 29

More from Filmibeat

English summary
New on OTT Platforms: Maman, Metro..in Dino, Janaki vs State of Kerala & More
Read more about: sandalwood ekka
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X