For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರಗಳನ್ನು ಮೂಲೆಗೆ ತಳ್ಳಲಿವೆಯೇ ಒಟಿಟಿಗಳು?

  |

  ಇದು ಮೊಬೈಲ್‌ಗಳ ಯುಗ. ಮೊಬೈಲ್ ಗಳು ಮಾನವನ ಜೀವನದಲ್ಲಿ ಬಹುದೊಡ್ಡ ಬದಲಾವಣೆಯನ್ನು ತಂದಿವೆ. ಸಂವಹನದಿಂದ ಪ್ರಾರಂಭಿಸಿ ಶಿಕ್ಷಣವೂ ಮೊಬೈಲ್‌ ಮೂಲಕವೇ ನಡೆಯುತ್ತಿರುವ ಕಾಲಘಟ್ಟವನ್ನು ನಾವು ತಲುಪಿದ್ದೇವೆ. ಮೊಬೈಲ್‌ಗಳು ಬಹುತೇಕ ಕ್ಷೇತ್ರಗಳಲ್ಲಿ ತನ್ನ ಪ್ರಭಾವ ಬೀರಿದೆ. ಮನೊರಂಜನಾ ಕ್ಷೇತ್ರದಲ್ಲೂ ಸಹ.

  ಮೊಬೈಲ್‌ ಮೂಲಕ ಸಿನಿಮಾ, ಧಾರಾವಾಹಿ ಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತಿರುವ ಒಟಿಟಿಗಳು ಮನೊರಂಜನಾ ಕ್ಷೇತ್ರದಲ್ಲಿ ಬಹುದೊಡ್ಡ ಬದಲಾವಣೆ ತರುವ ಸಾಧ್ಯತೆ ಕಣ್ಣ ಮುಂದೆಯೇ ಇದೆ. ಬದಲಾವಣೆ ಈಗಾಗಲೇ ಆರಂಭವೂ ಆಗಿದೆ.

  ಒಟಿಟಿ ಹೆಸರಲ್ಲಿ 'ಕಾಲವೇ ಮೋಸಗಾರ' ಸಿನಿಮಾ ತಂಡಕ್ಕೆ ಭಾರಿ ಮೋಸ

  ಅಮೆಜಾನ್, ನೆಟ್‌ಫ್ಲಿಕ್ಸ್, ಡಿಸ್ನಿ ಹಾಟ್‌ಸ್ಟಾರ್, ಸೋನಿ ಲಿವ್ ನಂಥಹಾ ಒಟಿಟಿಗಳು ಸಾಂಪ್ರದಾಯಿಕ ಸಿನಿಮಾ ವೀಕ್ಷಣೆ ಅಭ್ಯಾಸವನ್ನು ಬದಲಾಯಿಸುತ್ತವೆ, ಚಿತ್ರಮಂದಿರಗಳ ಪಾಲಿಗೆ ಮುಳ್ಳಾಗಲಿವೆ ಎನ್ನುವ ಆತಂಕ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದೆ. ಈಗಾಗಲೇ ಹಲವು ಸ್ಟಾರ್ ನಟರೇ ತಮ್ಮ ಸಿನಿಮಾವನ್ನು ಒಟಿಟಿಗಳಲ್ಲಿ ಬಿಡುಗಡೆ ಮಾಡಿ ಗೆಲುವು ಸಾಧಿಸಿದ್ದಾರೆ.

  ಒಟಿಟಿ ಸಿನಿಮಾಗಳನ್ನು ಪ್ರಶಸ್ತಿಗೆ ಪರಿಗಣಿಸಿ: ಆಗ್ರಹ

  ಶತ ವರ್ಷ ದಾಟಿ ಬಂದಿರುವ ಚಿತ್ರಮಂದಿರಗಳನ್ನು ಈ ಒಟಿಟಿಗಳು ಮೂಲೆಗುಂಪು ಮಾಡಬಲ್ಲವೇ? ಎಂಬ ಪ್ರಶ್ನೆಗೆ ಆಳವಾಗಿ ಉತ್ತರ ಹುಡುಕುತ್ತಾ ಹೋದರೆ, ಸನಿಹ ಭವಿಷ್ಯದಲ್ಲಿ ಅಂಥಹಾ ಸಾಧ್ಯತೆ ಇಲ್ಲವೆಂದೇ ಹೇಳಬೇಕಾಗುತ್ತದೆ.

  2000 ಸಿನಿಮಾ ಖರೀದಿಸಬಲ್ಲವೇ ಒಟಿಟಿಗಳು?

  2000 ಸಿನಿಮಾ ಖರೀದಿಸಬಲ್ಲವೇ ಒಟಿಟಿಗಳು?

  ಅಮೆಜಾನ್, ನೆಟ್‌ಫ್ಲಿಕ್ಸ್‌ ಅಂಥಹಾ ಒಟಿಟಿಗಳ ಬಳಿ ಸಾಕಷ್ಟು ದೊಡ್ಡ ಮೊತ್ತದ ಬಂಡವಾಳ ಇದೆಯಾದರೂ, ಆ ಬಂಡವಾಳ ಭಾರತದ ಒಟ್ಟಾರೆ ಸಿನಿಮಾಗಳ ಬಂಡವಾಳದ ಮುಂದೆ ಬಹಳ ಕಡಿಮೆಯಾಗುತ್ತದೆ. ಭಾರತದಲ್ಲಿ ವರ್ಷವೊಂದಕ್ಕೆ ಸರಾಸರಿ 2000 ಸಿನಿಮಾಗಳು ತಯಾರಾಗುತ್ತವೆ. ಇಷ್ಟೂ ಸಿನಿಮಾಗಳನ್ನು ಒಟಿಟಿಗಳು ಕೊಂಡು, ಪ್ರದರ್ಶಿಸಲು ಸಾಧ್ಯವೇ? ಬಹುತೇಕ ಅಸಾಧ್ಯ.

  ಸಕ್ರಿಯ ಚಂದಾದಾರರ ಸಂಖ್ಯೆ ಎರಡು ಕೋಟಿ ದಾಟದು

  ಸಕ್ರಿಯ ಚಂದಾದಾರರ ಸಂಖ್ಯೆ ಎರಡು ಕೋಟಿ ದಾಟದು

  ಭಾರತದಲ್ಲಿ ಪ್ರಸ್ತುತ ಇರುವ ಒಟ್ಟು ಒಟಿಟಿ ಸಕ್ರಿಯ ಚಂದಾದಾರರ ಸಂಖ್ಯೆ 2 ಕೋಟಿಯನ್ನೂ ದಾಟುವುದಿಲ್ಲ. ಭಾರತದ ಒಟ್ಟು ಸಿನಿಮಾ ವೀಕ್ಷಕರ ಸಂಖ್ಯೆಯೊಂದಿಗೆ ಇದನ್ನು ತುಲನೆ ಮಾಡಿದರೆ ಈ ಸಂಖ್ಯೆ ನಗಣ್ಯ. ಭಾರತದ ಎಲ್ಲಾ ಸಿನಿಮಾ ವೀಕ್ಷಕರನ್ನು ತನ್ನ ಚಂದಾದಾರನ್ನಾಗಿ ಮಾಡಿಕೊಳ್ಳಲು ಒಟಿಟಿಗಳಿಗೆ ದಶಕಗಳೇ ಬೇಕೋ ಏನೋ?

  ದೇವಾಲಯದಲ್ಲಿ ಚುಂಬನ ದೃಶ್ಯ: ನೆಟ್‌ಫ್ಲಿಕ್ಸ್‌ನ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

  ಚಿತ್ರಮಂದಿರದ ಸಿನಿಮಾ ವೀಕ್ಷಣೆ ಅನುಭವ ಒಟಿಟಿಗಳಿಲ್ಲ

  ಚಿತ್ರಮಂದಿರದ ಸಿನಿಮಾ ವೀಕ್ಷಣೆ ಅನುಭವ ಒಟಿಟಿಗಳಿಲ್ಲ

  ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವ ಅನುಭವ ಮೊಬೈಲ್‌, ಲ್ಯಾಪ್‌ಟಾಪ್‌ಗಳ ಸಣ್ಣ ಸ್ಕ್ರೀನ್‌ಗಳಲ್ಲಿ ಸಿಗದು. ಚಿತ್ರಮಂದಿರಗಳ ಸಿನಿಮಾ ವೀಕ್ಷಣೆಯ ಅನುಭವವನ್ನು ಒಟಿಟಿಗಳು ನೀಡಲು ಸಾಧ್ಯವೇ ಇಲ್ಲ. ಇದರ ಜೊತೆಗೆ ಚಿತ್ರಮಂದಿರಗಳೊಂದಿಗೆ ಸಿನಿಮಾ ವೀಕ್ಷಕರಿಗೆ ಭಾವನಾತ್ಮಕ ಬಂಧವೂ ಇದೆ. ಆ ಬಂಧವನ್ನು ಕಡಿಯುವುದು ಒಟಿಟಿಗಳಿಗೆ ಸಾಧ್ಯವೇ ಇಲ್ಲ.

  ಸಿನಿಮಾ 'ಸಂಭ್ರಮ' ಚಿತ್ರಮಂದಿರದಲ್ಲಿ ಮಾತ್ರ ಸಾಧ್ಯ

  ಸಿನಿಮಾ 'ಸಂಭ್ರಮ' ಚಿತ್ರಮಂದಿರದಲ್ಲಿ ಮಾತ್ರ ಸಾಧ್ಯ

  ಸಿನಿಮಾವನ್ನು 'ಸಂಭ್ರಮಿಸುವುದು' ಸಾಧ್ಯವಿರುವುದು ಚಿತ್ರಮಂದಿರಗಳಲ್ಲಿ ಮಾತ್ರ. ಅಭಿಮಾನದ ನಟನ ಸಿನಿಮಾವನ್ನು ಚಿತ್ರಮಂದಿರದಲ್ಲಿ ನೋಡುವ ಖುಷಿ ಸಿನಿಮಾ ವೀಕ್ಷಕರಿಗೆ ಗೊತ್ತು, ಆ ಖುಷಿಯನ್ನು ಒಟಿಟಿಗಳು ನೀಡಲು ಸಾಧ್ಯವೇ ಇಲ್ಲ. ಇದು ಸ್ಟಾರ್ ನಟರಿಗೂ ಗೊತ್ತು, ತಮ್ಮ ಅಭಿಮಾನಿಗಳ ಖುಷಿಯನ್ನು ಹಾಳುಮಾಡುವುದು ಸ್ಟಾರ್ ನಟರಿಗೆ ಇಷ್ಟವಿಲ್ಲ, ಹಾಗಾಗಿ ಸ್ಟಾರ್ ನಟರು ತಮ್ಮ ಸಿನಿಮಾಗಳನ್ನು ಒಟಿಟಿಗಳಿಗೆ ನೀಡಲು ಒಪ್ಪರು.

  ಕನ್ನಡದ 300 ಸಿನಿಮಾಗಳನ್ನು ಕೊಳ್ಳಲು ಸಾಧ್ಯವೇ?

  ಕನ್ನಡದ 300 ಸಿನಿಮಾಗಳನ್ನು ಕೊಳ್ಳಲು ಸಾಧ್ಯವೇ?

  ಅಮೆಜಾನ್ ಪ್ರೈಂ ಗೆ ಇಂಥಹಾ ಭಾಷೆಗೆ ವರ್ಷಕ್ಕೆ ಇಂತಿಷ್ಟು ಕೋಟಿ ಬಜೆಟ್ ಎಂದು ನೀಡಲಾಗಿದೆ. ಆ ಬಜೆಟ್‌ಗೆ ಅನುಗುಣವಾಗಿಯೇ ಅಮೆಜಾನ್ ಪ್ರೈಂ ಆಯಾ ಭಾಷೆಯಲ್ಲಿ ಸಿನಿಮಾ ಖರೀದಿಸುತ್ತದೆ. ಅದಕ್ಕಿರುವ ಬಜೆಟ್‌ಗೆ ಆಯಾ ಭಾಷೆಯ ಐದು-ಆರು ಸಿನಿಮಾಗಳನ್ನು ವರ್ಷಕ್ಕೆ ಖರೀದಿಸಬಹುದು. ಹೀಗಿದ್ದಾಗ ಕನ್ನಡದಲ್ಲಿ ವರ್ಷವೊಂದಕ್ಕೆ ತಯಾರಾಗುವ ಸುಮಾರು 300 ಸಿನಿಮಾಗಳನ್ನು ಖರೀದಿಸಿ ಬಿಡುಗಡೆ ಮಾಡಲು ಒಟಿಟಿಗಳಿಗೆ ಸಾಧ್ಯವೇ?

  Danish Sait ಬಡಿಸಲಿರುವ French Biryani ಹಿಂದಿನ ಕಥೆ ಕೇಳಿ | Filmibeat Kannada
  ನಿರ್ದೇಶಕ ಮಂಸೋರೆ ಏನು ಹೇಳುತ್ತಾರೆ?

  ನಿರ್ದೇಶಕ ಮಂಸೋರೆ ಏನು ಹೇಳುತ್ತಾರೆ?

  ಫಿಲ್ಮೀಬೀಟ್‌ ಜೊತೆಗೆ ಮಾತನಾಡಿದ ನಿರ್ದೇಶಕ ಮಂಸೋರೆ, 'ಕನ್ನಡ ಸಿನಿರಂಗದ ಮಟ್ಟಿಗೆ ಒಟಿಟಿಗಳು ವರ್ಷವೊಂದಕ್ಕೆ ಮೂರು-ನಾಲ್ಕು ಸಿನಿಮಾಗಳನ್ನು ಕೊಂಡು ಪ್ರದರ್ಶಿಸಬಹುದೇ ವಿನಃ, ಅವು ಚಿತ್ರಮಂದಿರಕ್ಕೆ ಪರ್ಯಾಯ ಆಗುತ್ತದೆ ಎನ್ನಲು ಸಾಧ್ಯವೇ ಇಲ್ಲ' ಎಂದರು.

  English summary
  OTT vs Theater: debate going on that OTTs were taking over theaters and theater experience.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X