twitter
    For Quick Alerts
    ALLOW NOTIFICATIONS  
    For Daily Alerts

    'ತಾಂಡವ್' ವಿವಾದ: ಒಟಿಟಿಗೆ ಶೀಘ್ರ ಹೊಸ ಮಾರ್ಗಸೂಚಿ

    |

    ಭಾರಿ ವಿವಾದ ಎಬ್ಬಿಸಿರುವ 'ತಾಂಡವ್' ವೆಬ್ ಸರಣಿಯಿಂದಾಗಿ ಒಟ್ಟಾರೆ ಎಲ್ಲ ಒಟಿಟಿಗಳ ಮೇಲೂ ಸೆನ್ಸಾರ್ ವಿಧಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆ ಯೋಜಿಸಿದೆ.

    ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, 'ಶೀಘ್ರದಲ್ಲಿಯೇ ಒಟಿಟಿಗಳ ಕುರಿತು ಮಾರ್ಗದರ್ಶನ ಸೂತ್ರವೊಂದನ್ನು ಬಿಡುಗಡೆ ಮಾಡಲಾಗುವುದು' ಎಂದಿದ್ದಾರೆ.

    'ಇತ್ತೀಚೆಗೆ ಒಟಿಟಿ ಕಂಟೆಂಟ್‌ಗಳ ಬಗ್ಗೆ ಹಲವಾರು ದೂರುಗಳು ಕೇಳಿ ಬರುತ್ತಿದ್ದು. ಹೀಗಾಗಿ ಒಟಿಟಿ ಗಳ ಕಂಟೆಂಟ್‌ ಗಳ ಮೇಲೆ ನಿಗಾ ಇರಿಸುವುದು ಅವಶ್ಯಕವಾಗಿ ಪರಿಣಮಿಸಿದೆ' ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

    OTT Will Have New Guidelines By Central Government

    'ಒಟಿಟಿ ಮತ್ತು ಡಿಜಿಟಲ್ ನ್ಯೂಸ್‌ ಪೇಪರ್‌ಗಳು ಮಾಧ್ಯಮ ಕಾಯ್ದೆ ಹಾಗೂ ಕೇಬಲ್ ಟೆಲಿವಿಷನ್ ಕಾಯ್ದೆ ಅಡಿ ಬರುವುದಿಲ್ಲವಾದ್ದರಿಂದ. ಅವುಗಳಿಗಾಗಿ ಹೊಸ ಮಾರ್ಗಸೂಚಿಗಳನ್ನು ಹೊರತರಲಾಗುವುದು' ಎಂದಿದ್ದಾರೆ.

    'ತಾಂಡವ್' ಸೇರಿದಂತೆ ಹಲವು ಒಟಿಟಿ ವೆಬ್ ಸರಣಿ, ಸಿನಿಮಾಗಳ ಬಗ್ಗೆ ಹಲವಾರು ದೂರುಗಳನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ನೀಡಲಾಗಿದೆ. 'ತಾಂಡವ್' ವೆಬ್ ಸರಣಿಯಲ್ಲಿ ಹಿಂದು ಭಾವನೆಗೆ ಧಕ್ಕೆ ತರುವಂತಹ ಸಂಭಾಷಣೆಗಳಿವೆ ಎಂದು ಹಲವರು ದೂರು ದಾಖಲಿಸಿದ್ದಾರೆ

    English summary
    I and B minister Prakash Javdekar said, receiving lot of complaints about OTT contents, so ministry coming up with new guidelines.
    Monday, February 1, 2021, 17:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X