ಬಿಡುಗಡೆಯಾದ ಏಳೇ ದಿನಕ್ಕೆ ಓಟಿಟಿಗೆ ಬಂತು ಸ್ಟಾರ್ ನಟನ ಸಿನಿಮಾ

ಚಿತ್ರಮಂದಿರಕ್ಕೆ ಚಿತ್ರವೊಂದು ಬಂದು ಒಂದು ತಿಂಗಳಾಗಿರುವುದಿಲ್ಲ. ಅಷ್ಟರಲ್ಲಿಯೇ ಚಿತ್ರ ಓಟಿಟಿಯ ಅಂಗಳಕ್ಕೆ ಬಂದಿರುತ್ತೆ. ಕೇವಲ ಹೊಸಬರ ಚಿತ್ರಗಳು ಮಾತ್ರವಲ್ಲ ಸೂಪರ್ ಸ್ಟಾರ್ ಗಳ ಚಿತ್ರಗಳದ್ದು ಕೂಡ ಇದೇ ಕಥೆ. ಹೀಗಾಗಿಯೇ ಮನೆಯಲ್ಲಿಯೇ ನೋಡುವ ಸೌಲಭ್ಯ ಇದ್ದಾಗ ಚಿತ್ರಮಂದಿರಕ್ಕೆ ಹೋಗುವ ಅವಶ್ಯಕತೆಯಾದರು ಏನು ಎಂಬ ಆಲೋಚನೆಯಲ್ಲಿ ಅನೇಕರು ಈಗ ಓಟಿಟಿಯಲ್ಲಿ ಚಿತ್ರ ಪ್ರಸಾರವಾಗುವ ದಿನವನ್ನೇ ಎದುರು ನೋಡುತ್ತಿರುತ್ತಾರೆ.

ಮತ್ತೊಂದು ಕಡೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಚಿತ್ರರಂಗದವರು ಗೊಣಗುತ್ತಿರುತ್ತಾರೆ. ಸಂದರ್ಭ- ಸನ್ನಿವೇಶ ಹೀಗಿರುವಾಗ ಕೇವಲ ಒಂದು ವಾರಕ್ಕೆ ಚಿತ್ರಮಂದಿರಕ್ಕೆ ಬಂದಿದ್ದ ಚಿತ್ರವೊಂದು ಓಟಿಟಿಗೆ ಬಂದಿದೆ. ಹೀಗಾದರೆ ಚಿತ್ರಮಂದಿರಗಳ ಕಥೆ ಏನು..? ಪ್ರೇಕ್ಷಕರು ಚಿತ್ರಮಂದಿರಕ್ಕಾದರೂ ಯಾಕೆ ಬರಬೇಕು ಎನ್ನುವುದು ಸದ್ಯಕ್ಕೆ ಉತ್ತರ ಇರದ ಪ್ರಶ್ನೆ.

paanch-minar-shock-drop-telugu-film-hits-amazon-prime-video-just-7-days-after-theatres

ಹೌದು. ಕಳೆದ ವಾರ ತೆಲುಗಿನಲ್ಲಿ ಚಿತ್ರವೊಂದು ಬಂದಿತ್ತು. ಆ ಚಿತ್ರದ ಹೆಸರು ಪಾಂಚ್ ಮಿನಾರ್. ರಾಮ್ ಕಡಮುಲ ನಿರ್ದೇಶನದ ಈ ಚಿತ್ರದಲ್ಲಿ ರಾಜ್ ತರುಣ್ ಮತ್ತು ರಾಶಿ ಸಿಂಗ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಘೋಷ್.. ಬ್ರಹ್ಮಾಜಿ.. ಶ್ರೀನಿವಾಸ್ ರೆಡ್ಡಿ.. ಸುದರ್ಶನ್ ಈ ಚಿತ್ರದ ಉಳಿದ ಪ್ರಮುಖ ಪಾತ್ರಧಾರಿಗಳು.

ಬಿಡುಗಡೆ ಮುನ್ನ ಭರವಸೆ ಮೂಡಿಸಿದ್ದ ಈ ಚಿತ್ರ, ಸದ್ಯದ ಸ್ಫರ್ಧಾತ್ಮಕ ಯುಗದಲ್ಲಿ ಪ್ರೇಕ್ಷಕರನ್ನು ತಲುಪುವಲ್ಲಿ ವಿಫಲವಾಯ್ತು. ಅವತ್ತೇ ಬಿಡುಗಡೆಯಾಗಿದ್ದ ''12 A ರೇಲ್ವೇ ಕಾಲೋನಿ'' ಮತ್ತು ''ರಾಜು ವೆಡ್ಸ್ ರಾಮ್‌ಬಾಯಿ'' ನಡುವೆ ಬಂದ ಈ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಯ್ತು.

ಆದರೆ.. ಬಿಡುಗಡೆಯಾದ ಒಂದು ವಾರದಲ್ಲಿ ಈ ಚಿತ್ರ ಓಟಿಟಿಗೆ ಬರುತ್ತೆ ಎಂದು ಯಾರು ಅಂದುಕೊಂಡಿರಲಿಲ್ಲ. ಯಾಕೆಂದರೆ.. ಯಾವುದೇ ಸಿನಿಮಾ ಇರಲಿ. 42 ದಿನಗಳ ಮೇಲಷ್ಟೇ ಬರಬೇಕು. ಒಪ್ಪಂದ ಅದೇ ರೀತಿ ಮಾಡಿಕೊಳ್ಳಲಾಗುತ್ತೆ.

ನಿಜಾ.. ಅಲ್ಲೊಂದು.. ಇಲ್ಲೊಂದು.. ಸಿನಿಮಾ ಈ ನಿಯಮ ಮುರಿದು ಬೇಗ ಓಟಿಟಿಗೆ ಲಗ್ಗೆ ಇಟ್ಟಿವೆ. ಆದರೆ.. 7 ದಿನಕ್ಕೆ..? ಇತ್ತೀಚೆನ ದಿನಗಳಲ್ಲಿ ಬಹುಶಃ ಯಾವ ಸಿನಿಮಾ ಕೂಡ ಬಂದಿಲ್ಲ.

paanch-minar-shock-drop-telugu-film-hits-amazon-prime-video-just-7-days-after-theatres

ಆದರೆ.. ಈಗ ಕೇವಲ ಒಂದು ವಾರಕ್ಕೆ "ಪಾಂಚ್ ಮಿನಾರ್" ಓಟಿಟಿಗೆ ಬಂದಿದೆ. ಈ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಚಿತ್ರತಂಡದ ಈ ನಿರ್ಧಾರದ ಕುರಿತು ಪರ ವಿರೋಧ ಚರ್ಚೆ ನಡೆಯುತ್ತಿದೆ.

ಅಂದ್ಹಾಗೇ ನವೆಂಬರ್ 21ರಂದು ತೆರೆಗೆ ಬಂದಿದ್ದ "ಪಾಂಚ್ ಮಿನಾರ್" ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ 7 ದಿನದಲ್ಲಿ ₹ 1.13 ಕೋಟಿಯನ್ನು ಮಾತ್ರ. ಇನ್ನು tenvow.com ವರದಿಯ ಪ್ರಕಾರ ಈ ಚಿತ್ರಕ್ಕೆ ಖರ್ಚಾಗಿದ್ದು ₹5 ಕೋಟಿಯಷ್ಟೇ. ಈ ಹಿನ್ನೆಲೆ ಎಲ್ಲಾ ಅಳೆದು ತೂಗಿ ಚಿತ್ರದ ನಿರ್ಮಾಪಕರು ಚಿತ್ರವನ್ನು ಕೇವಲ ಒಂದು ವಾರಕ್ಕೆ ಮಾರಿ ದುಡ್ಡು ಮಾಡಿಕೊಂಡಿರಬಹುದು ಎನ್ನುವ ಮಾತು ಕೂಡ ಸದ್ಯ ಕೇಳಿ ಬರುತ್ತಿದೆ.

ಇನ್ನುಳಿದಂತೆ ಸದ್ಯ ''ಅಮೆಜಾನ್ ಫ್ರೈಂ''ನಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಚಿತ್ರಮಂದಿರದಲ್ಲಿ ಈ ಚಿತ್ರವನ್ನು ನೋಡದ ಪ್ರೇಕ್ಷಕರು ಓಟಿಟಿಯಲ್ಲಿ ಈ ಚಿತ್ರವನ್ನು ನೋಡುತ್ತಾರಾ..? ನೋಡಿದರೂ ಕೂಡ ''ಅಮೆಜಾನ್‌''ನಲ್ಲಿ ಸಿಗಬೇಕಾದ ಬೆಂಬಲ ಈ ಚಿತ್ರಕ್ಕೆ ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಆಸಕ್ತರು ಈ ಚಿತ್ರವನ್ನು ''ಅಮೆಜಾನ್‌''ನಲ್ಲಿ ಈ ಕ್ಷಣದಿಂದಲೇ ನೋಡಬಹುದು. ಇದರ ನಡುವೆ "ಪಾಂಚ್ ಮಿನಾರ್" ನಿರ್ಮಾಣ ಸಂಸ್ಥೆಯ ಈ ನಡೆ ಬೇರೆಯವರಿಗೆ ಮಾದರಿಯಾಗದಿರಲಿ, ಎಲ್ಲರೂ ಈ ಹಾದಿ ತುಳಿಯದಿರಲಿ ಎನ್ನುವ ಆಶಯವನ್ನು ಸಿನಿಮಾ ಪ್ರೇಮಿಗಳು ಮಾಡುತ್ತಿದ್ದಾರೆ.

More from Filmibeat

English summary
Don't wait! The new Telugu crime-comedy-thriller Paanch Minar is streaming exclusively on OTT. Get the link to watch it on Prime Video today.
Read more about: tollywood amazon prime thriller
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X