ಥಿಯೇಟರ್‌ನಲ್ಲಿ ಸೋತ ಸಿನಿಮಾ ಓಟಿಟಿಯಲ್ಲಿ ದಾಖಲೆ; ಧನಂಜಯ್, ಶ್ರೀಲೀಲಾ ಕೂಡ ನಟಿಸಿರೋ ಸಿನಿಮಾ ಈಗ್ಲೇ ನೋಡಿ
ಸಿನಿಮಾಗಳು ಬೇಗ ಓಟಿಟಿಗೆ ಬರುವ ಕಾರಣಕ್ಕೆ ಜನ ಚಿತ್ರಮಂದಿರಗಳಿಗೆ ಬರ್ತಿಲ್ಲ ಎನ್ನುವ ಆರೋಪ ಒಂದು ಕಡೆ. ಆದರೆ ಕೆಲವೊಮ್ಮೆ ಇದು ನಿಜ ಅನ್ನಿಸಿಬಿಡುತ್ತದೆ. ಚಿತ್ರಮಂದಿರಗಳಲ್ಲಿ ಗೆಲ್ಲದ ಸಿನಿಮಾಗಳು ಓಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತವೆ. ತಮಿಳಿನ 'ಪರಾಶಕ್ತಿ' ಚಿತ್ರದ ಈಗ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಸದ್ದು ಮಾಡ್ತಿದೆ.
'ಸುರರೈ ಪೊಟ್ರು' ರೀತಿಯ ಸೂಪರ್ ಹಿಟ್ ಸಿನಿಮಾ ಕೊಟ್ಟ ಸುಧಾ ಕೊಂಗರ ನಿರ್ದೇಶನದ ಹೊಸ ಸಿನಿಮಾ ಇದು. 60-70ರ ದಶಕಗಳಲ್ಲಿ ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ವಿರೋಧಿಸಿ ನಡೆದ ಹೋರಾಟಗಳ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಕಟ್ಟಿಕೊಡಲಾಗಿದೆ. ಶಿವಕಾರ್ತಿಕೇಯನ್, ಶ್ರೀಲೀಲಾ, ಜಯಂ ರವಿ, ಅಥರ್ವ ಚಿತ್ರದ ತಾರಾಗಣದಲ್ಲಿದ್ದಾರೆ. ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬಂದಿದ್ದ ಸಿನಿಮಾ ಮಿಶ್ರಿ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ ಓಟಿಟಿಗೆ ಬಂದು ಗಮನ ಸೆಳೆದಿದೆ.

ಕನ್ನಡಕ್ಕೂ ಡಬ್ ಆಗಿ 'ಪರಾಶಕ್ತಿ' ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗ್ತಿದೆ. ಜನವರಿ 10ರಂದು ತೆರೆಗೆ ಬಂದಿದ್ದ ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬಂದಿದ್ದು ವಿಶೇಷ. ಫೆಬ್ರವರಿ 7ರಂದು ಜೀ-5ನಲ್ಲಿ ಸಿನಿಮಾ ಬಿಡುಗಡೆ ಆಗಿತ್ತು. ಓಟಿಟಿ ಚಂದಾದಾರರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಜೀ-5ನಲ್ಲಿ ಬಹಳ ಬೇಹ 100 ಮಿಲಿಯನ್ ಸ್ಟ್ರೀಮಿಂಗ್ ನಿಮಿಷ ತಲುಪಿದ ಚಿತ್ರ ಎನಿಸಿಕೊಂಡಿದೆ. ಆ ಮೂಲಕ ಹೊಸ ದಾಖಲೆ ಬರೆದಿದೆ.
ಓಟಿಟಿಯಲ್ಲಿ ಮುಗಿಬಿದ್ದು ಸಿನಿಮಾ ನೋಡುತ್ತಿರುವವರು ಚಿತ್ರಮಂದಿರಕ್ಕೆ ಬಂದು ಯಾಕೆ ನೋಡಲಿಲ್ಲ ಎನ್ನುವ ಚರ್ಚೆ ಶುರುವಾಗಿದೆ. ಸಂಕ್ರಾಂತಿಗೆ 'ಪರಾಶಕ್ತಿ' ಜೊತೆಗೆ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಕೂಡ ಬಿಡುಗಡೆ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ತೆರೆಗೆ ಬರಲೇಯಿಲ್ಲ. ಹಾಗಾಗಿ ಬಿಡುಗಡೆ ಆಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಂಡಿದ್ದ 'ಪರಾಶಕ್ತಿ' ಚಿತ್ರ ಯಾಕೆ ಜನ ನೋಡಲಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.
'ಪರಾಶಕ್ತಿ' ಚಿತ್ರದಲ್ಲಿ ಕನ್ನಡ ನಟ ಡಾಲಿ ಧನಂಜಯ್, ತೆಲುಗು ನಟ ರಾಣಾ ದಗ್ಗುಬಾಟಿ ಹಾಗೂ ಮಲಯಾಳಂ ನಟ ಬಾಸಿಲ್ ಜೋಸೆಫ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀಲೀಲಾ ನಾಯಕಿಯಾಗಿ ನಟಿಸಿ ಒಳ್ಳೆ ಅಂಕ ಗಿಟ್ಟಿಸಿಕೊಂಡಿದ್ದಾರೆ.
ಅಂದಾಜು 140 ಕೋಟಿ ರೂ. ಬಜೆಟ್ 'ಪರಾಶಕ್ತಿ' ಸಿನಿಮಾ 100 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾರೆ ಹೇಳಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಮಾತ್ರ ಸಿಕ್ಕಿಲ್ಲ. ರವಿ ಕೆ ಚಂದ್ರನ್ ಛಾಯಾಗ್ರಹಣ, ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕಿದೆ. ಟೈಟಲ್ ಕಾರಣಕ್ಕೆ ಸಿನಿಮಾ ವಿವಾದ ಸೃಷ್ಟಿಸಿತ್ತು. ಇದೇ ಟೈಟಲ್‌ನಲ್ಲಿ ದಶಕಗಳ ಹಿಂದೆ ಶಿವಾಜಿ ಗಣೇಶನ್ ನಟಿಸಿದ್ದ ಸಿನಿಮಾ ಬಂದಿತ್ತು. ಕರುಣಾನಿಧಿ ಚಿತ್ರಕಥೆ ಬರೆದಿದ್ದರು. ಸಿನಿಮಾ ಸೂಪರ್ ಹಿಟ್ ಆಗಿತ್ತು.
ಓಟಿಟಿ ಸಂಸ್ಥೆಗಳು ಈಗ ಸಿನಿಮಾಗಳ ಭವಿಷ್ಯ ನಿರ್ಧರಿಸುತ್ತಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಚಿತ್ರಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕರೆ ಮಾತ್ರ ಜನ ಸಿನಿಮಾ ನೋಡಲು ಹೋಗುತ್ತಾರೆ. ಇಲ್ಲಿದಿದ್ದರೆ ಓಟಿಟಿಯಲ್ಲಿ ನೋಡೋಣ ಬಿಡು ಎಂದು ಸುಮ್ಮನಾಗುತ್ತಿದ್ದಾರೆ. ಓಟಿಟಿಗೆ ಬಂದ ಕೂಡಲೇ ಮುಗಿಬಿದ್ದು ವೀಕ್ಷಿಸುತ್ತಾರೆ. ಪ್ರಭಾಸ್ ನಟನೆಯ 'ದಿ ರಾಜಾಸಾಬ್' ಚಿತ್ರ ಕೂಡ ಚಿತ್ರಮಂದಿರಗಳಲ್ಲಿ ಮುಗ್ಗರಿಸಿತ್ತು. ಆದರೆ ಓಟಿಟಿಯಲ್ಲಿ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದರು.
ದೊಡ್ಡ ಸಿನಿಮಾಗಳನ್ನು ತಿಂಗಳಿಗೂ ಮುನ್ನ ಓಟಿಟಿಯಲ್ಲಿ ರಿಲೀಸ್ ಮಾಡುವ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಲೇ ಇದ್ದಾರೆ. ಬಾಲಿವುಡ್‌ನಲ್ಲಿ ಸಿನಿಮಾ ತೆರೆಕಂಡು 8 ವಾರಗಳ ಬಳಿಕ ಡಿಜಿಟಲ್ ಸ್ಟ್ರೀಮಿಂಗ್ ಮಾಡಬೇಕು ಎನ್ನುವ ನಿಯಮ ಇದೆ. ದಕ್ಷಿಣ ಭಾರತದ ಚಿತ್ರರಂಗದಲ್ಲಿ ಯಾರು ಇದನ್ನು ಅನುಸರಿಸುತ್ತಿಲ್ಲ. ಹಾಗಾಗಿ ಥಿಯೇಟರ್‌ನಲ್ಲಿ ಕೆಲ ಒಳ್ಳೆ ಸಿನಿಮಾಗಳಿಗೆ ಹಿನ್ನಡೆ ಆಗುತ್ತದೆ ಎನ್ನುವುದು ಕೆಲವರ ವಾದ.


Click it and Unblock the Notifications











