ಭಾರಿ ಮೊತ್ತಕ್ಕೆ ಒಟಿಟಿಗೆ ಸೇಲ್ ಆಯ್ತು 'ಭೀಮ್ಲಾ ನಾಯಕ್'

ಪವನ್ ಕಲ್ಯಾಣ್, ರಾಣಾ ದಗ್ಗುಬಾಟಿ ನಟನೆಯ 'ಭೀಮ್ಲಾ ನಾಯಕ್' ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಆಂಧ್ರದಲ್ಲಿ ಸರ್ಕಾರದ ಪ್ರತಿರೋಧದ ನಡುವೆಯೂ ದೊಡ್ಡ ಮೊತ್ತವನ್ನು ಗಳಿಸಿದೆ.

ಫೆಬ್ರವರಿ 25 ರಂದು ಬಿಡುಗಡೆ ಆದ 'ಭೀಮ್ಲಾ ನಾಯಕ್' ಸಿನಿಮಾವು ಬಿಡುಗಡೆಯ ದಿನ ಭಾರತ ಸೇರಿದಂತೆ ವಿಶ್ವದಾದ್ಯಂತ 37.63 ಕೋಟಿ ಹಣ ಗಳಿಸಿದೆ. ಕರ್ನಾಟಕದಲ್ಲಿ ಮೊದಲ ದಿನ 3 ಕೋಟಿ ಹಣ ಗಳಿಸಿದೆ.

ಈ ವೀಕೆಂಡ್‌ನಲ್ಲಿ ಸಿನಿಮಾದ ಕಲೆಕ್ಷನ್ ಇನ್ನಷ್ಟು ಹೆಚ್ಚಾಗಿ ಹತ್ತು ದಿನಗಳಲ್ಲಿ 100 ಕೋಟಿ ಗಡಿ ತಲುಪುವುದು ಪಕ್ಕಾ ಎನ್ನಲಾಗುತ್ತಿದೆ. ಚಿತ್ರಮಂದಿರಗಳಲ್ಲಿ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ ಒಟಿಟಿಗೂ ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

'ಭೀಮ್ಲಾ ನಾಯಕ್' ಸಿನಿಮಾವು ಡಿಸ್ನಿ ಹಾಟ್‌ಸ್ಟಾರ್‌ಗೆ ಮಾರಾಟವಾಗಿದೆ ಎನ್ನಲಾಗುತ್ತಿದ್ದು, ಡಿಸ್ನಿಯು 'ಭೀಮ್ಲಾ ನಾಯಕ್' ಸಿನಿಮಾಕ್ಕೆ ಬರೋಬ್ಬರಿ 40 ಕೋಟಿ ರುಪಾಯಿಗಳನ್ನು ನೀಡಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಆದ ಸಿನಿಮಾಕ್ಕೆ ನೀಡಲಾಗಿರುವ ಈ ಮೊತ್ತ ಕಡಿಮೆಯೇನೂ ಅಲ್ಲ.

ಸಿನಿಮಾ ಬಿಡುಗಡೆ ಆದ ಐವತ್ತು ದಿನಕ್ಕೆ ಒಟಿಟಿಯಲ್ಲಿ ಬಿಡುಗಡೆ ಆಗಬೇಕೆಂಬ ಒಪ್ಪಂದ ನಿರ್ಮಾಪಕ ಹಾಗೂ ಒಟಿಟಿ ನಡುವೆ ಆಗಿದೆ. ಹಾಗಾಗಿ ಎರಡು ತಿಂಗಳ ಬಳಿಕ ಸಿನಿಮಾವು ಹಾಟ್‌ಸ್ಟಾರ್‌ನಲ್ಲಿ ತೆರೆ ಕಾಣಲಿದೆ. ಪವನ್ ಕಲ್ಯಾಣ್‌ರ 'ವಕೀಲ್ ಸಾಬ್' ಸಿನಿಮಾ ಸಹ ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಅಲ್ಲಿಯೂ ಹಿಟ್ ಆಗಿತ್ತು.

Pawan Kalyans Bheemla Nayak Movie Sold To OTT For Big Amount

ಡಿಸ್ನಿ ಹಾಟ್‌ಸ್ಟಾರ್ ಇತ್ತೀಚೆಗೆ ದಕ್ಷಿಣ ಭಾರತ ಸಿನಿಮಾಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದೆ. ಬಾಲಕೃಷ್ಣ ನಟನೆಯ ತೆಲುಗಿನ 'ಅಖಂಡ' ಸಿನಿಮಾ ಹಾಟ್‌ಸ್ಟಾರ್‌ನಲ್ಲಿಯೇ ಬಿಡುಗಡೆ ಆಗಿತ್ತು. ಮಲಯಾಳಂನ 'ಬ್ರೋ ಡ್ಯಾಡಿ', 'ಹೃದಯಂ' ಸಿನಿಮಾಗಳನ್ನು ಸಹ ಇತ್ತೀಚೆಗೆ ಡಿಸ್ನಿ ಹಾಟ್‌ಸ್ಟಾರ್ ಬಿಡುಗಡೆ ಮಾಡಿತ್ತು.

'ಭೀಮ್ಲಾ ನಾಯಕ್' ಸಿನಿಮಾವು ಮಲಯಾಳಂನ 'ಅಯ್ಯಪ್ಪನುಂ ಕೋಶಿಯುಂ' ಸಿನಿಮಾದ ರೀಮೇಕ್ ಆಗಿದ್ದು, ಸಿನಿಮಾದಲ್ಲಿ ಪವನ್ ಕಲ್ಯಾಣ್ ಜೊತೆಗೆ ರಾಣಾ ದಗ್ಗುಬಾಟಿ ನಟಿಸಿದ್ದಾರೆ. ಸಿನಿಮಾವನ್ನು ಯುವ ನಿರ್ದೇಶಕ ಸಾಗರ್ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಸೂರ್ಯದೇವರ ನಾಗರ ವಂಶಿ. ಸಿನಿಮಾದಲ್ಲಿ ನಿತ್ಯಾ ಮೆನನ್, ಸಂಯುಕ್ತಾ ಮೆನನ್, ಸಮುದ್ರಕಿಣಿ, ರಾವ್ ರಮೇಶ್, ಮುರಳಿ ಶರ್ಮಾ ನಟಿಸಿದ್ದಾರೆ.

'ಭೀಮ್ಲಾ ನಾಯಕ್' ಸಿನಿಮಾ ಪ್ರಸ್ತುತ ಆಂಧ್ರದಲ್ಲಿ ಸರ್ಕಾರದಿಂದಲೇ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಆಂಧ್ರದಲ್ಲಿ ಚಿತ್ರಮಂದಿರಗಳ ಟಿಕೆಟ್ ದರಗಳನ್ನು ತೀರ ಕಡಿಮೆ ಮಾಡಲಾಗಿರುವ ಕಾರಣ ಹೆಚ್ಚು ಕಲೆಕ್ಷನ್ ಆಗುತ್ತಿಲ್ಲ. ಜೊತೆಗೆ 'ಭೀಮ್ಲಾ ನಾಯಕ್; ಸಿನಿಮಾ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು, ನಿಯಮ ಉಲ್ಲಂಘನೆ ಕಾರಣ ನೀಡಿ ಚಿತ್ರಮಂದಿರವನ್ನು ಬಂದ್ ಮಾಡಿಸಿದ ಪ್ರಕರಣಗಳೂ ನಡೆದಿವೆ.

More from Filmibeat

English summary
Pawan Kalyan's Bheemla Nayak movie is sold to OTT for big amount of money. Movie released in theater on February 25.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X