Ustaad Bhagat Singh OTT: ತಿಂಗಳಿಗೂ ಮುನ್ನ ಓಟಿಟಿಗೆ 'ಉಸ್ತಾದ್ ಭಗತ್ ಸಿಂಗ್'; ಎಲ್ಲಿ ನೋಡಬಹುದು ಅಂದ್ರೆ

ಅದ್ಯಾಕೋ ಪವನ್ ಕಲ್ಯಾಣ್ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. 8 ತಿಂಗಳ ಅಂತರದಲ್ಲಿ ಪವರ್ ಸ್ಟಾರ್ ನಟಿಸಿದ 3 ಸಿನಿಮಾಗಳು ಬಿಡುಗಡೆ ಆಗಿತ್ತು. ಒಂದು ಕೂಡ ಹಿಟ್ ಆಗಲಿಲ್ಲ. ಭರ್ಜರಿ ಓಪನಿಂಗ್ ಪಡೆದುಕೊಂಡು ಬಳಿಕ ನೆಗೆಟಿವ್ ಟಾಕ್ ಹೆಚ್ಚಾಗಿ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ. 'ಹರಿಹರ ವೀರಮಲ್ಲು' ಹಾಗೂ 'OG' ಬಳಿಕ 'ಉಸ್ತಾದ್ ಭಗತ್ ಸಿಂಗ್' ಫಲಿತಾಂಶ ಕೂಡ ಬದಲಾಗಲಿಲ್ಲ.

ಮಾರ್ಚ್ 28ಕ್ಕೆ ಬರಬೇಕಿದ್ದ ಚಿತ್ರವನ್ನು ಒಂದು ವಾರ ಮುನ್ನ ಮಾರ್ಚ್ 19ಕ್ಕೆ ಬಿಡುಗಡೆ ಮಾಡಿದ್ದರು. ಈದ್ ಹಾಗೂ ಯುಗಾದಿ ಸಂಭ್ರಮದಲ್ಲಿ ಸಿನಿಮಾ ಗೆಲ್ಲುತ್ತದೆ ಎಂದುಕೊಂಡಿದ್ದ ಚಿತ್ರತಂಡಕ್ಕೆ ನಿರಾಸೆ ಆಗಿತ್ತು. 'ಧುರುಂಧರ್'- 2 ಆರ್ಭಟದ ಮುಂದೆ ಉಸ್ತಾದ್ ಆಟ ನಡೆಯಲಿಲ್ಲ. ಭಾರೀ ನಷ್ಟ ಅನುಭವಿಸಿದ ಸಿನಿಮಾ ಈಗ ಓಟಿಟಿಗೆ ಬರ್ತಿದೆ. ಅಧಿಕೃತವಾಗಿ ಓಟಿಟಿ ಸ್ಟ್ರೀಮಿಂಗ್ ಡೇಟ್ ಘೋಷಣೆಯಾಗಿದೆ.

Pawan Kalyan s Ustaad Bhagat Singh OTT release date announced

ಬಾಲಿವುಡ್ ಮಾದರಿಯಲ್ಲಿ ದಕ್ಷಿಣದಲ್ಲಿ ಕೂಡ 2 ತಿಂಗಳ ಬಳಿಕ ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮಿಂಗ್ ಮಾಡಬೇಕು ಎನ್ನುವ ಚರ್ಚೆ ನಡೆದಿತ್ತು. ದಕ್ಷಿಣದ 4 ಚಿತ್ರರಂಗದವರು ಈ ಬಗ್ಗೆ ಸಭೆ ನಡೆಸಿ ತೀರ್ಮಾನಕ್ಕೆ ಬಂದಿದ್ದರು. ಆದರೆ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ತಿಂಗಳಿಗೂ ಮುನ್ನ ಓಟಿಟಿಗೆ ಬರ್ತಿದೆ.

ಹರೀಶ್ ಶಂಕರ್ ನಿರ್ದೇಶನದ 'ಉಸ್ತಾದ್ ಭಗತ್ ಸಿಂಗ್' ಚಿತ್ರವನ್ನು ಮೈತ್ರಿ ಮೂವಿಮೇಕರ್ಸ್ ಸಂಸ್ಥೆ ನಿರ್ಮಿಸಿತ್ತು. ಶ್ರೀಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಟ್ರೈಲರ್, ಸಾಂಗ್ಸ್ ಮೂಲಕ ಸದ್ದು ಮಾಡಿದ್ದ ಸಿನಿಮಾ ಫಸ್ಟ್ ಡೇ ಪ್ರೇಕ್ಷಕರನ್ನು ಸೆಳೆಯಲು ಯಶಸ್ವಿಯಾಗಿತ್ತು. ಬಳಿಕ ಆ ಮ್ಯಾಜಿಕ್ ಮುಂದುವರೆಯಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ನೆಗೆಟಿವ್ ಟಾಕ್ ಹೆಚ್ಚಾಗಿ ಸಮಸ್ಯೆ ಆಗಿತ್ತು. ಅಂದಾಜು 80 ಕೋಟಿ ರೂ.ವರೆಗೆ ನಿರ್ಮಾಪಕರು ನಷ್ಟ ಎದುರಿಸಿದ್ದಾಗಿ ಹೇಳಲಾಗ್ತಿದೆ. ಏಪ್ರಿಲ್ 16ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆರಂಭಿಸಲಿದೆ. ಕನ್ನಡಕ್ಕೂ ಡಬ್ ಆಗಿ ವೀಕ್ಷಣೆಗೆ ಸಿಗಲಿದೆ.

ರಾಜಕೀಯರಂಗದಲ್ಲಿ ಸಕ್ರಿಯರಾಗಿರುವ ಪವನ್ ಕಲ್ಯಾಣ್ ಸದ್ಯ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಹಾಗಾಗಿ ಸದ್ಯಕ್ಕೆ 'ಉಸ್ತಾದ್ ಭಗತ್ ಸಿಂಗ್' ಅವರ ಕೊನೆಯ ಸಿನಿಮಾ ಎನ್ನುವಂತಾಗಿದೆ. ಆದರೆ ಇಂತಹ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಕೆಲವರು ಸಿನಿಮಾ ಚೆನ್ನಾಗಿದೆ ಎಂದರೂ ಬಹುತೇಕರು ಔಟ್‌ಡೇಟೆಡ್ ಸಿನಿಮಾ ಎಂದು ಷರಾ ಬರೆದುಬಿಟ್ಟರು. ಹಾಗಾಗಿ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ.

More from Filmibeat

Read more about: pawan kalyan tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X