ಪವನ್ ಕುಮಾರ್ ನಿರ್ದೇಶನದ ತೆಲುಗು ವೆಬ್ ಸರಣಿ ಬಿಡುಗಡೆ ದಿನಾಂಕ ಪ್ರಕಟ

'ಲೂಸಿಯಾ', 'ಯು-ಟರ್ನ್' ಕನ್ನಡ ಸಿನಿಮಾಗಳ ಮೂಲಕ ಜನಪ್ರಿಯತೆ, ಯಶಸ್ಸು ಗಳಿಸಿರುವ ನಿರ್ದೇಶಕ ಪವನ್ ಕುಮಾರ್ ನಿರ್ದೇಶನದ ಮೊದಲ ತೆಲುಗು ವೆಬ್ ಸರಣಿಯ ಬಿಡಗುಡೆ ದಿನಾಂಕ ಪ್ರಕಟಗೊಂಡಿದೆ.

ಪವನ್ ಕುಮಾರ್ ಕುಮಾರ್ ನಿರ್ದೇಶಿಸಿರುವ ತೆಲುಗು ವೆಬ್ ಸರಣಿ 'ಕುಡಿ ಎಡಮೈತೆ' ವೆಬ್ ಸರಣಿಯು ಆಹಾ ಒಟಿಟಿಯಲ್ಲಿ ಜುಲೈ 16 ಕ್ಕೆ ಬಿಡುಗಡೆ ಆಗಲಿದೆ.

ಆಹಾ ತೆಲುಗು ಕಂಟೆಂಟ್‌ಗಾಗಿಯೇ ಸೀಮಿತವಾಗಿ ಒಟಿಟಿ ಆಗಿದ್ದು, ಇದೇ ಒಟಿಟಿಗಾಗಿ ಪವನ್ ಕುಮಾರ್ 'ಕುಡಿ ಎಡಮೈತೆ' ಹೆಸರಿನ ಥ್ರಿಲ್ಲರ್ ವೆಬ್ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ. 'ಕುಡಿ ಎಡಮೈತೆ' (ಬಲ ಎಡವಾದರೆ) ಎಂಟು ಎಪಿಸೋಡ್‌ಗಳಿರಲಿದೆ.

Pawan Kumars Telugu Web Series Kudi Yedamaithe Releasing On July 16

ವೆಬ್ ಸರಣಿಯಲ್ಲಿ ಅಮಲಾ ಪೌಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇನ್ನೂ ಹಲವು ತೆಲುಗಿನ ಜನಪ್ರಿಯ ಕಲಾವಿದರು, ಹಲವು ಕನ್ನಡದ ಕಲಾವಿದರು ಸಹ ನಟಿಸಿದ್ದಾರೆ. ಅಮಲಾ ಪೌಲ್‌ ರದ್ದು ಪೊಲೀಸ್ ಅಧಿಕಾರಿಯ ಪಾತ್ರ ಎಂಬುದು ಪೋಸ್ಟರ್‌ಗಳಿಂದ ಗೊತ್ತಾಗುತ್ತಿದೆ.

ಈ ಬಗ್ಗೆ ಇಂದು ಮಾತನಾಡಿರುವ ಪವನ್, ''ತೆಲುಗಿನಲ್ಲಿ ನಾನು ನಿರ್ದೇಶಿಸಿರುವ ವೆಬ್ ಸರಣಿ ಬಿಡುಗಡೆ ಆಗುತ್ತಿದೆ. ಈ ವೆಬ್ ಸರಣಿ ಏಕೆ ಕನ್ನಡದಲ್ಲಿಲ್ಲ ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. 'ಆಹಾ' ತೆಲುಗಿಗೆ ಸೀಮಿತವಾಗಿ ಒಟಿಟಿ. ಅಲ್ಲದೆ ಕನ್ನಡದಲ್ಲಿ ವೆಬ್ ಸರಣಿ ಮಾಡಿದರೂ ಇಲ್ಲಿ ಪ್ರದರ್ಶಿಸಲು ಸೂಕ್ತ ಒಟಿಟಿ ವ್ಯವಸ್ಥೆ ಇಲ್ಲ'' ಎಂದು ಉತ್ತರ ನೀಡಿದ್ದಾರೆ ಪವನ್ ಕುಮಾರ್.

ವೆಬ್ ಸರಣಿಯಲ್ಲಿ ಹಲವು ಕನ್ನಡದ ತಂತ್ರಜ್ಞರೆ ಕೆಲಸ ಮಾಡಿದ್ದಾರೆ. ವೆಬ್ ಸರಣಿಗೆ ಪೂರ್ಣಚಂದ್ರ ಸಂಗೀತ ನೀಡಿದ್ದಾರೆ. 'ಯೂ-ಟರ್ನ್'ಸಿನಿಮಾಕ್ಕೆ ಕೆಲಸ ಮಾಡಿದ ಹಲವು ಮಂದಿ ಈ ವೆಬ್ ಸರಣಿಗಾಗಿ ಕೆಲಸ ಮಾಡಿದ್ದಾರೆ.

More from Filmibeat

English summary
U-Turn fame Pawan Kumar's new web series Kudi Yedamaithe releasing on July 16 on Aaha OTT.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X