Peddi OTT: ಬ್ಲಾಕ್‌ಬಸ್ಟರ್ 'ಪೆದ್ದಿ' ಓಟಿಟಿಗೆ ಎಂಟ್ರಿ; ಕನ್ನಡಕ್ಕೂ ಡಬ್ ಆಗಿ ಸ್ಟ್ರೀಮಿಂಗ್

ರಾಮ್‌ಚರಣ್‌ ನಟನೆಯ 'ಪೆದ್ದಿ' ಸಿನಿಮಾ ಒಂದೇ ತಿಂಗಳಿಗೆ ಓಟಿಟಿಗೆ ಬರ್ತಿದೆ. ಜೂನ್ 4ರಂದು ಸಿನಿಮಾ ತೆರೆಗಪ್ಪಳಿಸಿತ್ತು. ಇದೀಗ ಡಿಜಿಟಲ್‌ ಸ್ಟ್ರೀಮಿಂಗ್ ಬಗ್ಗೆ ಅಧಿಕೃತವಾಗಿ ಅಪ್‌ಡೇಟ್ ಸಿಕ್ಕಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದ್ದ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು.

ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡಿತ್ತು. ಬುಚ್ಚಿಬಾಬು ನಿರ್ದೇಶನದ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ಮಿಂಚಿದ್ದಾರೆ. ಶಿವರಾಜ್‌ಕುಮಾರ್, ಜಗಪತಿ ಬಾಬು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. 90ರ ದಶಕದ ಹಳ್ಳಿ ಹಿನ್ನೆಲೆಯ ಸ್ಪೋರ್ಟ್ಸ್ ಡ್ರಾಮಾ ಕಥೆ ಚಿತ್ರದಲ್ಲಿದೆ. ಬಾಕ್ಸಾಫೀಸ್ ಶೇಕ್ ಮಾಡಿದ್ದ 'ಪೆದ್ದಿ' ಓಟಿಟಿಗೆ ಬರ್ತಿದ್ದಾನೆ.

Peddi OTT Ramcharan starrer sports drama film digital streaming date locked

ನೆಟ್‌ಫ್ಲಿಕ್ಸ್ ಸಂಸ್ಥೆ 'ಪೆದ್ದಿ' ಓಟಿಟಿ ರೈಟ್ಸ್ ಕೊಂಡುಕೊಂಡಿತ್ತು. ಇದೀಗ ದಕ್ಷಿಣದ 4 ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್‌ಗೆ ಅಣಿಯಾಗಿದೆ. ಆದರೆ ಹಿಂದಿ ವರ್ಷನ್ ಮಾತ್ರ ಕೊಂಚ ತಡವಾಗಿ ವೀಕ್ಷಣೆಗೆ ಲಭ್ಯವಾಗಲಿದೆ. ಈ ವಾರವೇ ಸಿನಿಮಾ ಓಟಿಟಿಗೆ ಬರುತ್ತೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಒಂದು ವಾರ ತಡವಾಗುತ್ತಿದೆ.

ಜುಲೈ 9ಕ್ಕೆ ಸ್ಟ್ರೀಮಿಂಗ್

ಹೌದು.. ಮುಂದಿನ ವಾರ ಅಂದ್ರೆ ಜುಲೈ 9ರಂದು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಈ ಬಗ್ಗೆ ಅಧಿಕೃತವಾಗಿ ಮಾಹಿತಿ ಲಭ್ಯವಾಗಿದೆ. ಮಿಶ್ರ ಪ್ರತಿಕ್ರಿಯೆಯಿಂದ ಚಿತ್ರಮಂದಿರಕ್ಕೆ ಹೋಗಬೇಕಾ ಬೇಡ್ವಾ ಎಂದು ಮೀನಾಮೇಷ ಎಣಿಸಿದವರು ಮನೆಯಲ್ಲಿ ಕೂತು 'ಪೆದ್ದಿ' ಸಿನಿಮಾ ವೀಕ್ಷಿಸುವ ಅವಕಾಶ ಸಿಗಲಿದೆ.

400 ಕೋಟಿ ಕಲೆಕ್ಷನ್

'ಪೆದ್ದಿ' ಸಿನಿಮಾ ಮಿಶ್ರಪ್ರತಿಕ್ರಿಯೆ ನಡುವೆಯೂ 400 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತ್ತು. ಕರ್ನಾಟಕದಲ್ಲೇ 20 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿದೆ. ರಾಮ್‌ಚರಣ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಒದಗಿಸಿತ್ತು. ಹಳ್ಳಿ ಕ್ರಿಕೆಟರ್, ಕುಸ್ತಿ ಪೈಲ್ವಾನ್ ಹಾಗೂ ಕೊನೆಗೆ ಪ್ಯಾರಾ ಒಲಂಪಿಕ್ ಓಟಗಾರನಾಗಿ ರಾಮ್‌ಚರಣ್ ನಟನೆಗೆ ಒಳ್ಳೆ ಅಂಕ ಸಿಕ್ಕಿದೆ. ಪಾತ್ರಕ್ಕಾಗಿ ತನು ಮನ ಅರ್ಪಿಸಿಕೊಂಡು ನಟಿಸಿರುವ ಚಿರು ಪುತ್ರನಿಗೆ ರಾಷ್ಟ್ರಪ್ರಶಸ್ತಿ ಸಿಗಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಕುಸ್ತಿ ಉಸ್ತಾದ್ ಗೌರ್ನಾಯ್ಡು ಪಾತ್ರದಲ್ಲಿ ಶಿವಣ್ಣ ನಟನೆಗೂ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.

'ಪೆದ್ದಿ' ವಿವಾದ

ಚಿತ್ರದಲ್ಲಿ ನಾಯಕಿ ಜಾನ್ವಿ ಕಪೂರ್ ಪಾತ್ರ ಪೋಷಣೆ ಹಾಗೂ ತೆರೆಮೇಲೆ ಚಿತ್ರಿಸಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ವಿವಾದ ಉಂಟಾಗಿ ನಿರ್ದೇಶಕ ಬುಚ್ಚಿಬಾಬು ಕ್ಷಮೆ ಕೇಳಿದ್ದರು. ಬಳಿಕ ಆ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಹೊಸದಾಗಿ ಒಂದಷ್ಟು ದೃಶ್ಯಗಳನ್ನು ಸೇರಿ ಸಿನಿಮಾ ಪ್ರದರ್ಶನ ಮುಂದುವರೆಸಿದ್ದರು. ಸಿನಿಮಾ ಬಿಡುಗಡೆ ಬಳಿಕ ಪ್ರಚಾರ ಕಾರ್ಯಕ್ರಮಗಳಲ್ಲಿ ಜಾನ್ವಿ ಭಾಗವಹಿಸಲೇ ಇಲ್ಲ. ಎ. ಆರ್ ರಹಮಾನ್ ಸಂಗೀತ ಕೂಡ ಚಿತ್ರಕ್ಕೆ ಬಲ ತುಂಬಿತ್ತು.

ಓಟಿಟಿ ರೈಟ್ಸ್

'ಪೆದ್ದಿ' ಸಿನಿಮಾ ಬಿಡುಗಡೆಗೂ ಮುನ್ನ ಓಟಿಟಿ ಡೀಲ್ ಕುದುರಿಸಲಾಗಿತ್ತು. 105 ಕೋಟಿ ರೂ.ಗೆ ನೆಟ್‌ಫ್ಲಿಕ್ಸ್ ಸಂಸ್ಥೆ ಡಿಜಿಟಲ್ ರೈಟ್ಸ್ ಕೊಂಡುಕೊಂಡಿತ್ತು. 'RRR' ಬಿಟ್ರೆ ರಾಮ್‌ಚರಣ್ ನಟನೆಯ ಮತ್ಯಾವುದೇ ಸಿನಿಮಾ ಓಟಿಟಿ ರೈಟ್ಸ್ ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರಲಿಲ್ಲ.

ಜೀ ಸಂಸ್ಥೆಗೆ ಟಿವಿ ರೈಟ್ಸ್

ನೆಟ್‌ಫ್ಲಿಕ್ಸ್ ಸ್ಟ್ರೀಮಿಂಗ್ ಬಳಿಕ 'ಪೆದ್ದಿ' ಸಿನಿಮಾ ಟಿವಿಯಲ್ಲಿ ಪ್ರಸಾರವಾಗಲಿದೆ. ಎಲ್ಲಾ ಭಾಷೆಗಳ ಸಿನಿಮಾ ಸ್ಯಾಟಲೈಟ್ ರೈಟ್ಸ್ ಜೀ ಸಂಸ್ಥೆ ಪಾಲಾಗಿದೆ. ಇನ್ನೊಂದು ತಿಂಗಳಲ್ಲಿ ಸಿನಿಮಾ ಕಿರುತೆರೆಗೂ ಬರಲಿದೆ.

Read more about: ramcharan tollywood shivarajkumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X