ಬಿಗ್ ಬಾಸ್ ಮನೆಯೊಳಗೆ ಕಾಲಿಡುತ್ತಿದ್ದಂತೆ ಸೋನು, ಆರ್ಯವರ್ಧನ್ ವಿರುದ್ಧ ಅಸಮಾಧಾನದ ಹೊಗೆ !

By ಎಸ್ ಸುಮಂತ್

ಬಿಗ್ ಬಾಸ್ ಶುರುವಾಗುತ್ತೆ ಎಂದಾಗಲೇ ಒಂದಷ್ಟು ಜನರ ಮನಸ್ಸಲ್ಲಿ ಕುತೂಹಲ ಮನೆ ಮಾಡಿರುತ್ತದೆ. ಈ ಸಲ ಬಿಗ್ ಬಾಸ್‌ನಲ್ಲಿ ಯಾವೆಲ್ಲಾ ಸಾಧಕರು ಬರಬಹುದು, ಏನೆಲ್ಲಾ ಬದಲಾವಣೆಗಳು ನಡೆಯಬಹುದು ಎಂಬ ಕುತೂಹಲವಿತ್ತು. ಆದರೆ ಅದ್ಯಾಕೋ ಈ ಬಾರಿಯ ಕಂಟೆಸ್ಟೆಂಟ್‌ಗಳಲ್ಲಿ ಕೆಲವರ ಮೇಲೆ ಹಲವರ ಮುನಿಸು ಜೋರಾಗಿಯೇ ಎದ್ದಿದೆ. ಅದರಲ್ಲೂ ಮೊದಲ ಮತ್ತು ಎರಡನೇ ಕಂಟೆಸ್ಟೆಂಟ್ ಮೇಲೆ ಮುನಿಸು ಜೋರಾಗಿದೆ.

ಬಿಗ್ ಬಾಸ್ ಪ್ರತಿ ಸೀಸಸ್‌ನಲ್ಲೂ ಸಾಧಕರನ್ನು ಗುರುತಿಸುವ ವೇದಿಕೆಯಾಗಿತ್ತು. ಈ ಗೇಮ್ ಎಲ್ಲಾ ಮುಗಿದ ಮೇಲೆ ಸ್ಪರ್ಧಿಗಳ ಮುಂದಿನ ಜೀವನ ಕಟ್ಟಿಕೊಳ್ಳಲು ಒಂದಷ್ಟು ವೇದಿಕೆಗಳು ಸೃಷ್ಟಿಯಾಗುತ್ತಿದ್ದವು. ಈ ಸಲದ ಸ್ಪರ್ಧಿಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತವಾಗಿದೆ. ಇಂತಹ ಸ್ಪರ್ಧಿಗಳು ಬಿಗ್ ಬಾಸ್‌ಗೆ ಬೇಕಿತ್ತಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಇನ್ನು ಎಪಿಸೋಡ್ ಶುರುವಾದ ಮೇಲೆ ಇನ್ಯಾವ ರೀತಿಯ ರಿಯಾಕ್ಷನ್ ಇರುತ್ತೋ ಅಂತ ಕುತೂಲಹದಿಂದ ಕಾಯುತ್ತಿದ್ದಾರೆ.

ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್

ಓಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್

ಬಿಗ್ ಬಾಸ್ ರಿಯಾಲಿಟಿ ಶೋಗೆ ಸಾಕಷ್ಟು ಜನ ಅಭಿಮಾನಿಗಳಿದ್ದಾರೆ. ಬಿಗ್ ಬಾಸ್ ಶುರುವಾಗುವುದನ್ನೇ ಕಾಯುತ್ತಿರುತ್ತಾರೆ. ಪ್ರತಿ ಸಲ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್ ಬಾಸ್ ಕಾಲ, ಜನರ ಮನಸ್ಥಿತಿ ಬದಲಾದಂತೆ ಮೊದಲ ಬಾರಿಗೆ ನೇರ ಓಟಿಟಿಗೆ ಲಗ್ಗೆ ಇಟ್ಟಿದೆ. ವೂಟ್ ಸೆಲೆಕ್ಟ್ ಮೂಲಕ ಎಲ್ಲಿ ಯಾವಾಗ ಬೇಕಾದರೂ ಬಿಗ್ ಬಾಸ್ ವೀಕ್ಷಿಸಬಹುದು. ಈಗಾಗಲೇ ಕಿಚ್ಚ ಸುದೀಪ್ ಎಲ್ಲಾ ಸ್ಪರ್ಧಿಗಳನ್ನು ವೇದಿಕೆ ಮೇಲೆ ಬರಮಾಡಿಕೊಂಡು, ದೊಡ್ಮನೆ ಒಳಗೆ ಕಳುಹಿಸಿದ್ದಾರೆ.

ಆರ್ಯರ್ಧನ್ & ಸೋನು ಆಯ್ಕೆ ಬಗ್ಗೆ ಬೇಸರ

ಆರ್ಯರ್ಧನ್ & ಸೋನು ಆಯ್ಕೆ ಬಗ್ಗೆ ಬೇಸರ

ಪ್ರತಿ ಸಲ ಬಿಗ್ ಬಾಸ್‌ಗೆ ಯಾರೆಲ್ಲಾ ಸ್ಪರ್ಧಿಗಳು ಬರುತ್ತಾರೆ ಎಂಬ ಕುತೂಹಲದೊಂದಿಗೆ, ಅವರ ಹಿನ್ನಲೆಯನ್ನು ಹುಡುಕುವ ಮೂಲಕ, ಎಪಿಸೋಡ್ ನೋಡುವ ತನಕ ನೋಡುಗರ ಕ್ಯೂರಿಯಾಸಿಟಿ ಉಳಿಯುತ್ತಿತ್ತು. ಒಂದಷ್ಟು ಕೌತುಕದಿಂದಲೇ ಎಲ್ಲವರೂ ಕಾಯುತ್ತಿದ್ದರು. ಆದರೆ ಈ ಬಾರಿಯ ಬಿಗ್ ಬಾಸ್ ಎಲ್ಲವನ್ನೂ ಉಲ್ಟಾ ಮಾಡಿದೆ. ಅದು ಸೋನು ಶ್ರೀನಿವಾಸ್ ಗೌಡ ಮತ್ತು ಆರ್ಯವರ್ಧನ್ ಇಬ್ಬರಿಂದಾಗಿ. ಈ ಇಬ್ಬರ ಎಂಟ್ರಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ತರಹೇವಾರಿ ಕಮೆಂಟ್‌ಗಳು ಬರುತ್ತಿವೆ. ಅದರಲ್ಲೂ ಐಪೋನ್ ಬಗ್ಗೆಯೇ ಹೆಚ್ಚು ಸುದ್ದಿಯಾಗುತ್ತಿದೆ.

ಯಾರು ಹೇಗೆಲ್ಲಾ ಅಸಮಾಧಾನ ಹೊರ ಹಾಕಿದ್ದಾರೆ?

ಯಾರು ಹೇಗೆಲ್ಲಾ ಅಸಮಾಧಾನ ಹೊರ ಹಾಕಿದ್ದಾರೆ?

ಸೋನು ಶ್ರೀನಿವಾಸ್ ಗೌಡ ಗೊತ್ತಿಲ್ಲದವರಿಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ಸೋನು, ಅಷ್ಟೇ ನೆಗೆಟಿವ್ ಕಮೆಂಟ್‌ಗಳಿಗೆ ಹೆಸರುವಾಸಿ. ಅದರಲ್ಲೂ "ಅರುಣ್ ಆರ್ ಯು ದೇರ್" ಎಂಬ ಡೈಲಾಗ್ ಹೇಳಿದರೆ ಎಲ್ಲರೂ ಒಮ್ಮೆಲೆ ಹಾಯ್ ಸೋನು ಅಂತ ಕಮೆಂಟ್ ಹಾಕುತ್ತಾರೆ. ಈ ರೀತಿ ಖ್ಯಾತಿ ಪಡೆದಿರುವ ಸೋನು ಇದೀಗ ಬಿಗ್ ಬಾಸ್ ಮನೆಯಲ್ಲಿರುವುದಕ್ಕೆ ಟೀಕೆಗಳು ವ್ಯಕ್ತವಾಗಿವೆ. ಕೆಲವರು "ನೀವು ಸಾಧನೆ ಮಾಡಿಯೇ ಪಾಪ್ಯುಲರ್ ಆಗಿರಬೇಕಿಲ್ಲ.. ಬೆರಕೆ ಕೆಲಸ ಮಾಡಿದ್ರು‌ ರೆಡ್ ಕಾರ್ಪೆಟ್ ನಾವು ಹಾಕ್ತೀವಿ.." ಎಂದು ಬರೆದಿದ್ದಾರೆ. ಮತ್ತೊಬ್ಬರು ಬಿಗ್ ಬಾಸ್‌ಗೆ ಸೋನು ಎಂಟ್ರಿ ಆದಾಗಗಿನಿಂದಲೇ ಮನದೊಳಗಿನ ಬೇಸರ ತೋಡಿಕೊಂಡಿದ್ದಾರೆ. "I Phoneನಲ್ಲಿ ಹೋದ ಮಾನ Tvಯಲ್ಲಿ ಬಂದರೂ ಬಾರದು." ಎಂದು ಟೀಕಿಸಿದ್ದಾರೆ. ಇನ್ನೊಬ್ಬರು "ಡೈಲಿ 6GB ಡಾಟಾ ಫ್ರೀ ಇದ್ರೂ (2 phoneಯಿಂದ) 250MB ಬಳಸಿ ಮಾಡಿ ಹೆಂಗೋ ನೆಮ್ಮದಿಯಾಗಿ ಇದ್ದೆ. ಜನ ನೆಮ್ಮದಿಯಾಗಿ ಇರೋಕೆ ಬಿಡ್ಬೇಕಲ್ವ. ಚೋನು baby ಮತ್ತು ನಮ್ಮ ಜಿಂಗಲಕ ಲಕಲಕ ಗುರುಗಳು ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟವ್ರೆ ಅಂತೇಳಿ ಕೊನೆಗೂ Voot Download ಮಾಡೋತರ ಮಾಡ್ಬಟ್ರು. ವಿಷ್ಯ ಅದಲ್ಲ, 24ಗಂಟೆ ಇವರನ್ನು ನೋಡ್ಕೊಂಡು ನಾವು ನೆಮ್ಮದಿಯಾಗಿ ನಿದ್ದೆ ಮಾಡಕೈತದಾ ಅನ್ನೋದೇ ನನಗಿರುವ ಯೋಚನೆ. ಅದೂ ಅಲ್ಲದೆ 90% ಡೇಟಾ ಯೂಸ್ಡ್‌ ಅಂತ ಮೆಸೇಜ್ ಬೇರೆ."ಎಂದಿದ್ದಾರೆ.

ಸುದೀಪ್ ಬಗ್ಗೆ ಮರುಗುತ್ತಿರುವ ಫ್ಯಾನ್ಸ್

ಸುದೀಪ್ ಬಗ್ಗೆ ಮರುಗುತ್ತಿರುವ ಫ್ಯಾನ್ಸ್

ಬಿಗ್ ಬಾಸ್ ಶೋ ನಡೆಸಿಕೊಡುವುದು ಕಿಚ್ಚ ಸುದೀಪ್. ಅವರ ನಿರೂಪಣೆ ನೋಡುವುದಕ್ಕೆ ಹಲವರು ಕಾಯುತ್ತಾರೆ. ಅದರೆ, ಕೆಲ ಸ್ಪರ್ಧಿಗಳ ಬಗ್ಗೆ ಅಸಮಧಾನ ಹೊರಹಾಕಿದ್ದು, ಸುದೀಪ್ ಹೋಸ್ಟ್ ಮಾಡುತ್ತಿರುವುದಕ್ಕೂ ಸೋಶಿಯಲ್ ಮೀಡಿಯಾದಲ್ಲಿ ಮರುಕ ವ್ಯಕ್ತಪಡಿಸಿದ್ದಾರೆ. "ನಿರೂಪಕರಾಗಿರೋ ತಪ್ಪಿಗೆ ಸುದೀಪ್ ಎಂಥಾ ವ್ಯಕ್ತಿಗಳ ಜೊತೆಗೆಲ್ಲಾ ಸ್ಕ್ರೀನ್ ಶೇರ್ ಮಾಡಿ, ಕೈ ಮುಗಿದು ವೆಲ್ಕಮ್ ಮಾಡೋ ಹಾಗಾಯ್ತಲ್ಲ.. ದುರಂತ ಇದು.. ಕಿಚ್ಚ ಗಳಿಸಿದ ಘನತೆಗೆ ಕಪ್ಪು ಚುಕ್ಕೆಯಾಗುವಂತಹ ಸ್ಪರ್ಧಿಗಳು ಎಂದು ಅಸಮಾಧಾನ ಹೊರ ಹಾಕಿದ್ದಾರೆ.

More from Filmibeat

English summary
People Unhappy For Selecting Aryavardhan And Sonu Srinivas Gowda For Bigg Boss OTT For Voot Select. Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X