ಭಾರಿ ಮೊತ್ತಕ್ಕೆ ಮಾರಾಟವಾಯ್ತು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಪಿಎಸ್‌ 1'

'ಕೆಜಿಎಫ್ 2', 'RRR', 'ಪುಷ್ಪ' ಸಿನಿಮಾಗಳ ಸೃಷ್ಟಿಸಿದ್ದ ಹವಾ ನಿಧಾನಕ್ಕೆ ಕಡಿಮೆ ಆಗುತ್ತಿದೆ. ಈಗ ದೃಷ್ಟಿ ಬೇರೆ ಸಿನಿಮಾಗಳತ್ತ ನೆಟ್ಟಿದೆ. 'ಸಲಾರ್', 'ಪುಷ್ಪ 2', 'ಆದಿಪುರುಷ್', 'ಜವಾನ್' ಇನ್ನೂ ಕೆಲವು ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಎದುರು ನೋಡಲಾಗುತ್ತಿದೆ. ಈ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ತಮಿಳು ಮೂಲದ ಪ್ಯಾನ್ ಇಂಡಿಯಾ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಸಹ ಇದೆ.

ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್ 1' ಮುಂದಿನ ತಿಂಗಳು ತೆರೆಗೆ ಬರಲಿದೆ. ಭಾರಿ ತಾರಾಗಣ ಹೊಂದಿದ ಈ ಸಿನಿಮಾವನ್ನು ಭಾರಿ ಬಜೆಟ್‌ನಲ್ಲಿ ನಿರ್ಮಿಸಲಾಗಿದ್ದು, ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇಡಲಾಗಿದೆ.

ಇದೀಗ ಸಿನಿಮಾದ ಒಟಿಟಿ ಹಕ್ಕುಗಳನ್ನು ಚಿತ್ರತಂಡ ಮಾರಾಟ ಮಾಡಿದ್ದು, ಭಾರಿ ಮೊತ್ತಕ್ಕೆ ಸಿನಿಮಾ ಮಾರಾಟವಾಗಿದೆ. ಭಾರಿ ಬಜೆಟ್‌ನ ಸಿನಿಮಾ ಆಗಿರುವ ಕಾರಣ ನಿರ್ಮಾಪಕರು ಬಿಡುಗಡೆಗೆ ಮೊದಲೇ ಹಕ್ಕು ಮಾರಾಟ ಮಾಡಿ ಸೇಫ್ ಆಗಲು ಯತ್ನಿಸಿದ್ದು, ಅದಕ್ಕೆ ಪೂರಕವಾಗಿ ಭಾರಿ ಮೊತ್ತಕ್ಕೆ ಒಟಿಟಿ ಹಕ್ಕು ಮಾರಾಟವಾಗಿದೆ.

ಭಾರಿ ಮೊತ್ತಕ್ಕೆ ಹಕ್ಕು ಮಾರಾಟ

ಭಾರಿ ಮೊತ್ತಕ್ಕೆ ಹಕ್ಕು ಮಾರಾಟ

'ಪೊನ್ನಿಯಿನ್ ಸೆಲ್ವನ್ 1' ಸಿನಿಮಾದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕನ್ನು ಅಮೆಜಾನ್ ಪ್ರೈಂ ಖರೀದಿ ಮಾಡಿದೆ. ಹಕ್ಕು ಖರೀದಿಗೆ ಬರೋಬ್ಬರಿ 120 ಕೋಟಿ ರುಪಾಯಿ ಹಣವನ್ನು ಅಮೆಜಾನ್ ನೀಡಿದೆ. ಇನ್ನಾವುದೇ ತಮಿಳು ಸಿನಿಮಾಕ್ಕೆ ಇಷ್ಟು ದೊಡ್ಡ ಮೊತ್ತವನ್ನು ಒಟಿಟಿಯೊಂದು ಇಲ್ಲಿಯವರೆಗೂ ನೀಡಿಲ್ಲ. ಅದೂ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಬಳಿಕ ಒಟಿಟಿಗೆ ಬರುವ ಸಿನಿಮಾಕ್ಕೆ ಇದೇ ಮೊದಲ ಬಾರಿಗೆ ಭಾರತದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ನೀಡಲಾಗಿದೆ ಎನ್ನಲಾಗುತ್ತಿದೆ.

ಅಮೆಜಾನ್ ಪ್ರೈಂ ಜೊತೆ ಒಪ್ಪಂದ

ಅಮೆಜಾನ್ ಪ್ರೈಂ ಜೊತೆ ಒಪ್ಪಂದ

'ಪೊನ್ನಿಯಿನ್ ಸೆಲ್ವನ್ 1' ಸಿನಿಮಾ ಸೆಪ್ಟೆಂಬರ್ 30 ರಂದು ತೆರೆಗೆ ಬರಲಿದ್ದು, ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆ ಆದ ಮೂರೇ ವಾರದಲ್ಲಿ ಒಟಿಟಿಗೆ ಬರಲಿದೆ. ಬೇಗ ಒಟಿಟಿಯಲ್ಲಿ ಬಿಡುಗಡೆ ಮಾಡುವ ಒಪ್ಪಂದ ಮಾಡಿಕೊಂಡ ಕಾರಣದಿಂದಲೇ ಸಿನಿಮಾದ ಹಕ್ಕಿಗೆ ಭಾರಿ ಮೊತ್ತವನ್ನು ಅಮೆಜಾನ್ ನೀಡಿದೆ ಎನ್ನಲಾಗುತ್ತಿದೆ. ಅಲ್ಲದೆ ಈಗ ಅಮೆಜಾನ್ ನೀಡಿರುವ ಹಣ ಸಿನಿಮಾದ ಒಂದು ಭಾಗಕ್ಕೆ ಮಾತ್ರವೇನಾ? ಅಥವಾ ಎರಡೂ ಭಾಗಕ್ಕಾ? ಎಂಬ ಬಗ್ಗೆ ಚಿತ್ರತಂಡದಿಂದ ಸ್ಪಷ್ಟನೆ ದೊರೆತಿಲ್ಲ.

'ಪೊನ್ನಿಯಿನ್ ಸೆಲ್ವನ್ 1' ನಟರ್ಯಾರ್ಯಾರು?

'ಪೊನ್ನಿಯಿನ್ ಸೆಲ್ವನ್ 1' ನಟರ್ಯಾರ್ಯಾರು?

ಭಾರಿ ತಾರಾಗಣ ಹೊಂದಿರುವ 'ಪೊನ್ನಿಯಿನ್ ಸೆಲ್ವನ್ 1' ಸಿನಿಮಾದ ತಾರಾ ಮೌಲ್ಯ ಬಹಳ ದೊಡ್ಡದಿದೆ. ಸಿನಿಮಾದಲ್ಲಿ ಐಶ್ವರ್ಯಾ ರೈ, ಚಿಯಾನ್ ವಿಕ್ರಂ, ಕಾರ್ತಿ, ತ್ರಿಶಾ, ಜಯಂ ರವಿ, ಐಶ್ವರ್ಯ ಲಕ್ಷ್ಮಿ, ಶೋಭಿತ ಧುಲಿಪಾಡ, ಪ್ರಕಾಶ್ ರೈ, ನಾಸರ್, ವಿಕ್ರಂ ಪ್ರಭು, ಶರತ್ ಕುಮಾರ್, ಮಕರಂದ್ ದೇಶಪಾಂಡೆ, ಕನ್ನಡದ ಕಿಶೋರ್, ಮಲಯಾಳಂ ನಟ ಲಾಲ್, ಆರ್ ಪಾರ್ತಿಬನ್, ಸಾರಾ ಅರ್ಜುನ್ ಇನ್ನೂ ಹಲವರು ಸಿನಿಮಾದಲ್ಲಿದ್ದಾರೆ. ಸಿನಿಮಾವು ಚೋಳರ ಕತೆ ಹೊಂದಿದ್ದು, ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ.

ಶೀಘ್ರದಲ್ಲಿಯೇ ಅದ್ಧೂರಿ ಆಡಿಯೋ ಲಾಂಚ್

ಶೀಘ್ರದಲ್ಲಿಯೇ ಅದ್ಧೂರಿ ಆಡಿಯೋ ಲಾಂಚ್

ಪೊನ್ನಿಯಿನ್ ಸೆಲ್ವನ್ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಸೆಪ್ಟೆಂಬರ್ ಎರಡನೇ ವಾರದಲ್ಲಿ ಚೆನ್ನೈನಲ್ಲಿ ಅದ್ಧೂರಿಯಾಗಿ ನೆರವೇರಿಸಲು ಚಿತ್ರತಂಡ ಯೋಜಿಸಿದೆ. ನೆಹರೂ ಸ್ಟೇಡಿಯಂನಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ವಿದೇಶದಿಂದಲೂ ಅತಿಥಿಗಳು ಆಗಮಿಸಲಿದ್ದಾರಂತೆ. ಈ ಸಿನಿಮಾವು ಕಲ್ಕಿ ಕೃಷ್ಣಮುರ್ತಿಯವರ ಐತಿಹಾಸಿಕ ಕಾದಂಬರಿಯನ್ನು ಆಧರಿಸಿದೆ. ಕಾದಂಬರಿಯ ಹೆಸರನ್ನೇ ಸಿನಿಮಾಕ್ಕೆ ಇಡಲಾಗಿದೆ. ಮಣಿರತ್ನಂ ಜೀವನದ ಅತ್ಯಂತ ದುಬಾರಿ ಮತ್ತು ಅತ್ಯಂತ ಹೆಚ್ಚು ಸಮಯ ತೆಗೆದುಕೊಂಡು ಚಿತ್ರೀಕರಿಸಿದ ಸಿನಿಮಾ ಇದಾಗಿದೆ. ಮುಂದಿನ ಆಸ್ಕರ್‌ನಲ್ಲಿಯೂ ಈ ಸಿನಿಮಾ ಹಲವು ವಿದೇಶಿ ಸಿನಿಮಾಗಳಿಗೆ ಕಠಿಣ ಸ್ಪರ್ಧೆ ಒಡ್ಡಲಿದೆ ಎನ್ನಲಾಗುತ್ತಿದೆ.

More from Filmibeat

English summary
Tamil movie Ponniyin Selvan 1 movie sold to Amazon Prime OTT for whooping amount. Movie is releasing on theater on September 30.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X