For Quick Alerts
  ALLOW NOTIFICATIONS  
  For Daily Alerts

  ಕಾಂತಾರ ಜತೆ ಬಂದಿದ್ದ 'ಪೊನ್ನಿಯಿನ್ ಸೆಲ್ವನ್ 1' ಬಾಡಿಗೆಗೆ ಲಭ್ಯ; ಓಟಿಟಿ ಬಿಡುಗಡೆ ದಿನಾಂಕ ಬಹಿರಂಗ

  |

  ಸದ್ಯ ವಿಶ್ವದಾದ್ಯಂತ ಅಬ್ಬರಿಸಿ ಬೊಬ್ಬಿರಿಯುತ್ತಿರುವ ರಿಷಬ್ ಶೆಟ್ಟಿ ನಟನೆಯ ಕಾಂತಾರ ಚಿತ್ರದ ಜತೆ ಬಾಕ್ಸಾಫೀಸ್ ರೇಸ್‌ಗೆ ಇಳಿದಿದ್ದ ತಮಿಳು ಚಿತ್ರ ಪೊನ್ನಿಯನ್ ಸೆಲ್ವನ್ 1 ಸದ್ಯ ಒಟಿಟಿಯಲ್ಲಿ ವೀಕ್ಷಿಸಲು ಲಭ್ಯವಿದೆ.

  ಭಾರತದ ಹೆಸರಾಂತ ಓಟಿಟಿ ವೇದಿಕೆ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಪೊನ್ನಿಯನ್ ಸೆಲ್ವನ್ 1 ಚಿತ್ರ ಇಂದಿನಿಂದ ( ಅಕ್ಟೋಬರ್ 28 ) ವೀಕ್ಷಿಸಲು ಲಭ್ಯವಿದ್ದು, ಸದ್ಯ ಬಾಡಿಗೆಗೆ ಮಾತ್ರ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಹೌದು ಪೊನ್ನಿಯನ್ ಸೆಲ್ವನ್ 1 ಚಿತ್ರವನ್ನು ಸದ್ಯ ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ವೀಕ್ಷಿಸಲು 199 ರೂಪಾಯಿ ಪಾವತಿಸಿ ಬಾಡಿಗೆಗೆ ಪಡೆಯಬಹುದಾಗಿದೆ.

  ಇನ್ನು ಅಮೆಜಾನ್ ಪ್ರೈಮ್ ಚಂದಾದಾರತ್ವವನ್ನು ಹೊಂದಿರುವ ಸದಸ್ಯರು ನವೆಂಬರ್ 4ರಿಂದ ಯಾವುದೇ ಹೆಚ್ಚುವರಿ ಹಣವನ್ನು ನೀಡದೇ ಪೊನ್ನಿಯಿನ್ ಸೆಲ್ವನ್ 1 ಚಿತ್ರವನ್ನು ಅಮೆಜಾನ್ ಪ್ರೈಮ್ ವಿಡಿಯೋ ವೇದಿಕೆಯಲ್ಲಿ ವೀಕ್ಷಿಸಬಹುದಾಗಿದೆ.

  ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಗೊಂಡ ಪೊನ್ನಿಯಿನ್ ಸೆಲ್ವನ್ 475 ಕೋಟಿ ಗಳಿಕೆ ಮಾಡಿದ್ದು, ದೊಡ್ಡ ಲಾಭ ಸಂಪಾದಿಸಿದೆ. ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಿತ್ರ ಮಾಡಿದ್ದ ಕಲೆಕ್ಷನ್ ಅನ್ನು ಹಿಂದಿಕ್ಕಿದ ಪೊನ್ನಿಯನ್ ಸೆಲ್ವನ್ ತಮಿಳುನಾಡಿನಲ್ಲಿ ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ದಾಖಲೆ ಬರೆದಿದೆ. ಚಿತ್ರವನ್ನು ಮಣಿರತ್ನಂ ನಿರ್ದೇಶಿಸಿದ್ದು, ಚಿತ್ರದಲ್ಲಿ ವಿಕ್ರಮ್, ಐಶ್ವರ್ಯಾ ರೈ, ತ್ರಿಷಾ, ಶೋಭಿತಾ, ಕಾರ್ತಿ ಹಾಗೂ ಜಯಂ ರವಿ ಸೇರಿದಂತೆ ಹಲವಾರು ತಾರೆಯರು ಚಿತ್ರದಲ್ಲಿ ನಟಿಸಿದ್ದಾರೆ.

  ಇನ್ನು ಪೊನ್ನಿಯಿನ್ ಸೆಲ್ವನ್ 1 ಚಿತ್ರವನ್ನು ಬಾಡಿಗೆಗೆ ನೀಡುವ ಅಮೆಜಾನ್ ಪ್ರೈಮ್ ಯೋಜನೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿದೆ. ಪ್ರತಿ ಬಾರಿ ಹೊಸ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾದಾಗ ಅಮೆಜಾನ್ ಪ್ರೈಂ ಬಾಡಿಗೆಗೆ ಚಿತ್ರವನ್ನು ನೀಡುವ ಬದಲು ನೇರವಾಗಿ ಬಿಡುಗಡೆ ಮಾಡಬೇಕು. ಸಾವಿರಾರು ರೂಪಾಯಿ ನೀಡಿ ಚಂದಾದಾರತ್ವ ಪಡೆದ ಸದಸ್ಯರ ಬಳಿ ಮತ್ತಷ್ಟು ಹಣ ವಸೂಲಿ ಮಾಡುವ ಯೋಜನೆ ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.

  English summary
  Ponniyin Selvan 1 to stream on Amazon Prime Video from November 4
  Saturday, October 29, 2022, 7:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X