ಈ ಬಾರಿ ಆಸ್ಕರ್ ಗೆದ್ದ ಸಿನಿಮಾಗಳನ್ನು ಯಾವ ಓಟಿಟಿಯಲ್ಲಿ ನೋಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ

ಬಹಳ ಅದ್ಧೂರಿಯಾಗಿ 96ನೇ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿದೆ. 'ಓಪನ್‌ಹೈಮರ್', 'ಪೂರ್ ಥಿಂಗ್ಸ್' ಚಿತ್ರಗಳಿಗೆ ಹೆಚ್ಚು ಪ್ರಶಸ್ತಿ ಲಭಿಸಿದೆ. ಸಿಲಿಯನ್ ಮರ್ಫಿ ಅತ್ಯುತ್ತಮ ನಟ ಪ್ರಶಸ್ತಿಗೆ ಮುತ್ತಿಟ್ಟರೆ ಎಮ್ಮಾ ಸ್ಟೋನ್ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ.

ಕಳೆದ ಬಾರಿ 'RRR' ಚಿತ್ರಕ್ಕೆ ಅತ್ಯುತ್ತಮ ಓರಿಜಿನಲ್ ಸಾಂಗ್ ವಿಭಾಗದಲ್ಲಿ ಪ್ರಶಸ್ತಿ ಸಿಕ್ಕಿತ್ತು. ಈ ಬಾರಿ ಭಾರತದ ಸಿನಿಮಾಗಳು ಆಸ್ಕರ್ ಸ್ಪರ್ಧೆಯ ಅಂತಿಮ ಹಂತಕ್ಕೇರುವಲ್ಲಿ ವಿಫಲವಾಗಿದ್ದವು. ಜಿಮ್ಮಿ ಕಿಮ್ಮೆಲ್ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಿರೂಪಣೆ ಮಾಡಿದರು. 13 ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದ ಓಪನ್ ಹೈಮರ್ ಚಿತ್ರಕ್ಕೆ 7 ಪ್ರಶಸ್ತಿಗಳು ಸಿಕ್ಕಿದ್ದು ವಿಶೇಷ.

Poor Things to Oppenheimer Where to watch 96th Oscar winning movies in OTT

ಕಳೆದ ಬಾರಿ 'RRR' ಸಿನಿಮಾ ಆಸ್ಕರ್‌ ಪ್ರಶಸ್ತಿ ಪಡೆಯಲು ನಾಮನಿರ್ದೇಶನಗೊಂಡಿದ್ದ ಕಾರಣ ಭಾರತದಲ್ಲೂ ಕಾರ್ಯಕ್ರಮದ ಬಗ್ಗೆ ಕುತೂಹಲವಿತ್ತು. ಆದರೆ ಯಾವುದೇ ಭಾರತದ ಸಿನಿಮಾ ಇರಲಿಲ್ಲ. ಹಾಗಾಗಿ ಅಷ್ಟೇನು ಆಸಕ್ತಿ ಭಾರತದ ಸಿನಿರಸಿಕರಿಗೆ ಇರಲಿಲ್ಲ. ಇನ್ನು 'ಓಪನ್‌ಹೈಮರ್' ಹಾಗೂ 'ಬಾರ್ಬಿ' ಭಾರತದಲ್ಲೂ ತೆರೆಕಂಡು ಸಖತ್ ಸದ್ದು ಮಾಡಿದ್ದವು. ಆಸ್ಕರ್‌ ಪ್ರಶಸ್ತಿ ಗೆದ್ದ ಸಿನಿಮಾಗಳನ್ನು ವೀಕ್ಷಿಸುವ ಕುತೂಹಲ ಕೆಲವರಲ್ಲಿದೆ. ಹಾಗಾದರೆ ಆ ಸಿನಿಮಾಗಳು ಯಾವ ಓಟಿಟಿಯಲ್ಲಿ ಸಿಗುತ್ತದೆ. ಮುಂದೆ ಓದಿ.

1. ಓಪನ್‌ಹೈಮರ್

ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ಓಪನ್‌ಹೈಮರ್' ಸಿನಿಮಾ ಈ ಬಾರಿ ಆಸ್ಕರ್ ವೇದಿಕೆಯಲ್ಲಿ ಸಖತ್ ಸದ್ದು ಮಾಡಿದೆ. 13 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದ ಸಿನಿಮಾ 7 ಪ್ರಶಸ್ತಿ ಗಳಿಸಿದೆ. ಭಾರತದಲ್ಲಿ ಸಿನಿಮಾ ಬಿಡುಗಡೆಯಾಗಿದ್ದಾಗ ಚಿತ್ರದ ದೃಶ್ಯವೊಂದರ ಬಗ್ಗೆ ವಿವಾದವಾಗಿತ್ತು. ಅಂದಹಾಗೆ ಜಿಯೋ ಸಿನಿಮಾದಲ್ಲಿ ಮಾರ್ಚ್‌ 21ರಿಂದ ಕಿಲಿಯನ್ ಮರ್ಫಿ ನಟನೆಯ ಈ ಸಿನಿಮಾ ಸ್ಟ್ರೀಮಿಂಗ್ ಆಗಲಿದೆ. ಅಣುಬಾಂಬ್ ಕಂಡು ಹಿಡಿದ ಓಪನ್‌ಹೈಮರ್ ಜೀವನನ್ನಾಧರಿಸಿ ಸಿನಿಮಾ ಮೂಡಿ ಬಂದಿದೆ.

2. ಪೂರ್ ಥಿಂಗ್ಸ್

ಎಮ್ಮಾ ಸ್ಟೋನ್, ಮಾರ್ಕ್ ರುಫಲೋ, ವಿಲ್ಲೆಮ್ ಡಫೊ ನಟನೆಯ 'ಪೂರ್ ಥಿಂಗ್ಸ್' ಸಿನಿಮಾ 4 ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ಭಾಜನವಾಗಿದೆ. ಅತ್ಯುತ್ತಮ ನಟಿ, ಬೆಸ್ಟ್‌ ಪ್ರೊಡಕ್ಷನ್‌ ಡಿಸೈನ್, ಅತ್ಯುತ್ತಮ ಕ್ಯಾಸ್ಟೂಮ್‌ ಡಿಸೈನ್, ಬೆಸ್ಟ್‌ ಹೇರ್‌ ಸ್ಟೈಲ್‌ ಅಂಡ್‌ ಮೇಕಪ್‌ ವಿಭಾಗಗಳಲ್ಲಿ ಈ ಸಿನಿಮಾ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಯೊರ್ಗೊಸ್ ಲ್ಯಾಂತಿಮೊಸ್ ನಿರ್ದೇಶನದ ಈ ಸಿನಿಮಾ ಹಾಟ್‌ಸ್ಟರ್‌ನಲ್ಲಿ ವೀಕ್ಷಣೆಗೆ ಸಿಗುತ್ತದೆ.

Poor Things to Oppenheimer Where to watch 96th Oscar winning movies in OTT

3. ಬಾರ್ಬಿ

ಒರಿಜಿನಲ್ ಸಾಂಗ್ ವಿಭಾಗದಲ್ಲಿ 'ಬಾರ್ಬಿ' ಚಿತ್ರದ 'ವಾಟ್ ವಾಸ್ ಐ ಮೇಡ್ ಫಾರ್' ಪ್ರಶಸ್ತಿ ಗೆದ್ದಿದೆ. ಕಳೆದ ವರ್ಷ 'RRR' ಚಿತ್ರದ 'ನಾಟು ನಾಟು' ಗೀತೆಗೆ ಈ ಪ್ರಶಸ್ತಿ ಸಿಕ್ಕಿದ್ದು ಗೊತ್ತೇಯಿದೆ. ಅಂದಹಾಗೆ ಫ್ಯಾಂಟಸಿ ಕಾಮಿಡಿ ಸಿನಿಮಾ 'ಬಾರ್ಬಿ' ಅಮೇಜಾನ್ ಪ್ರೈಂನಲ್ಲಿ ಅಪ್‌ಲೋಡ್ ಆಗಿದೆ.

4. ದಿ ಹೋಲ್ಡೊವರ್ಸ್- ಅಮೇಜಾನ್ ಪ್ರೈಂ & ಆಪಲ್ ಟಿವಿ

5. ಅನಾಟಮಿ ಆಫ್ ಎ ಫಾಲ್- ಅಮೇಜಾನ್ ಪ್ರೈಂ & ಆಪಲ್ ಟಿವಿ

6. ಅಮೇರಿಕನ್ ಫಿಕ್ಷನ್- ಅಮೇಜಾನ್ ಪ್ರೈಂ

7. ದಿ ಜೋನ್ ಆಫ್ ಇಂಟ್ರೆಸ್ಟ್- ಅಮೇಜಾನ್ ಪ್ರೈಂ & ಆಪಲ್ ಟಿವಿ

8. 20 ಡೇಸ್ ಇನ್ ಮರಿಯುಪೋಲ್- ಅಮೇಜಾನ್ ಪ್ರೈಂ

9. ವಾರ್ ಈಸ್ ಓವರ್- ಯೂಟ್ಯೂಬ್

10. ಗಾಡ್ಜಿಲ್ಲಾ ಮೈನಸ್‌ ಒನ್- ಈ ಸಿನಿಮಾ ಇನ್ನು ಓಟಿಟಿಗೆ ಬಂದಿಲ್ಲ.

More from Filmibeat

English summary
Oscar winning movies ott platforms details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X