ಪ್ರಭಾಸ್ 'ಸಲಾರ್' Vs ರಣ್‌ಬೀರ್ 'ಅನಿಮಲ್' ಮಧ್ಯೆ ಬಿಗ್‌ ಫೈಟ್; ಗೆಲ್ಲೋದ್ಯಾರು?

ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ 'ಅನಿಮಲ್' ಹಾಗೂ 'ಸಲಾರ್' ಸಿನಿಮಾಗಳು ಭರ್ಜರಿ ಬೆಳೆ ತೆಗೆದಿದ್ದವು. ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸದ್ದು ಮಾಡಿದ್ದವು. ಸದ್ಯ ಎರಡೂ ಸಿನಿಮಾಗಳು ಓಟಿಟಿಗೆ ಬಂದು ಸಿನಿರಸಿಕರ ಗಮನ ಸೆಳೆಯುತ್ತಿವೆ. ಭರ್ಜರಿ ವೀವ್ಸ್ ಗಿಟ್ಟಿಸುತ್ತಿವೆ.

ನೆಟ್‌ಫ್ಲಿಕ್ಸ್‌ನಲ್ಲಿ 'ಅನಿಮಲ್', 'ಸಲಾರ್' ಸಿನಿಮಾಗಳು ಸ್ಟ್ರೀಮಿಂಗ್ ಆಗುತ್ತಿದೆ. ಕಳೆದ ವರ್ಷ ಡಿಸೆಂಬರ್ 1ಕ್ಕೆ 'ಅನಿಮಲ್' ಸಿನಿಮಾ ತೆರೆಗಪ್ಪಳಿಸಿತ್ತು. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದರು. 3 ಗಂಟೆ 12 ನಿಮಿಷಗಳ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ಆದರೆ ಕೆಲವರು ಮಾತ್ರ ಚಿತ್ರವನ್ನು ಟೀಕಿಸಿದ್ದರು. ಆದರೆ ಅದನ್ನೆಲ್ಲಾ ಮೀರಿ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು.

Prabhas Salaar Beats Ranbirs Animal Record in Netflix OTT Views

ಡಿಸೆಂಬರ್ 22ಕ್ಕೆ ಬಿಡುಗಡೆಯಾಗಿದ್ದ 'ಸಲಾರ್' ಸಿನಿಮಾ ಸಹ ಬೇಜಾನ್ ಸೌಂಡ್ ಮಾಡಿತ್ತು. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್ ಜೊತೆ ಪೃಥ್ವಿರಾಜ್ ಸುಕುಮಾರನ್ ಲೀಡ್ ರೋಲ್‌ಗಳಲ್ಲಿ ಮಿಂಚಿದ್ದರು. ಕನ್ನಡದ 'ಉಗ್ರಂ' ಕಥೆಯನ್ನೇ ಬಹಳ ದೊಡ್ಡದಾಗಿ ತೆರೆಗೆ ತರಲಾಗಿತ್ತು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಾಕ್ಸಾಫೀಸ್‌ ದೋಚಿತ್ತು.

'ಅನಿಮಲ್‌' ಚಿತ್ರಕ್ಕಿಂತ ತಡವಾಗಿ ತೆರೆಗೆ ಬಂದಿದ್ದ 'ಸಲಾರ್' ಅಚ್ಚರಿ ಎನ್ನುವಂತೆ ಓಟಿಟಿಗೆ ಬೇಗ ಬಂದಿತ್ತು. ಗಣರಾಜ್ಯೋತ್ಸವದ ದಿನ 'ಅನಿಮಲ್' ಸ್ಟ್ರೀಮಿಂಗ್ ಆರಂಭವಾಗಿತ್ತು. ಆದರೆ ಓಟಿಟಿಯಲ್ಲಿ ಬಿಡುಗಡೆಯಾದ ಒಂದು ವಾರದಲ್ಲಿ 'ಅನಿಮಲ್' ದಾಖಲೆ ಸೃಷ್ಟಿಸಿದೆ. ನೆಟ್‌ಫ್ಲಿಕ್ಸ್ ಇಂಡಿಯಾ ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ರಣ್‌ಬೀರ್ ಸಿನಿಮಾ ಅಗ್ರಸ್ಥಾನದಲ್ಲಿದೆ.

Prabhas Salaar Beats Ranbirs Animal Record in Netflix OTT Views

ಅಂದಹಾಗೆ 16 ದೇಶಗಳಲ್ಲಿ 'ಅನಿಮಲ್' ನಂಬರ್ ಒನ್ ಸ್ಥಾನದಲ್ಲಿದೆ. ಆದರೆ 'ಸಲಾರ್' ಸದ್ಯ ಟಾಪ್ 2 ನಲ್ಲಿ ಮುಂದುವರಿಯುತ್ತಿದೆ. ನೆಟ್‌ಫ್ಲಿಕ್ಸ್‌ನಲ್ಲಿ ಮೊದಲ 3 ದಿನಗಳಲ್ಲಿ 'ಅನಿಮಲ್' ಸಿನಿಮಾ 62 ಲಕ್ಷ ವೀವ್ಸ್ ಪಡೆದುಕೊಂಡಿದೆ. ಒಟ್ಟಾರೆ 20.8 ಮಿಲಿಯನ್ ಗಂಟೆಗಳ ವೀವರ್‌ಶಿಪ್ ಹೊಂದಿದೆ. ಇನ್ನು 'ಸಲಾರ್' ಚಿತ್ರವು 10 ದಿನಗಳಲ್ಲಿ 35 ಲಕ್ಷ ವೀಕ್ಷಣೆ ಜೊತೆ 10.3 ಮಿಲಿಯನ್ ಗಂಟೆಗಳ ವೀವರ್‌ಶಿಪ್ ಪಡೆದುಕೊಂಡಿದೆ. ಆ ಮೂಲಕ 'ಅನಿಮಲ್' ಮುಂದೆ 'ಸಲಾರ್' ಮಂಕಾಗಿದ್ದಾನೆ.

ಅಷ್ಟಕ್ಕೂ 'ಅನಿಮಲ್' ಸಿನಿಮಾ ಓಟಿಟಿಯಲ್ಲಿ ಈ ಪಾಟಿ ಸದ್ದು ಮಾಡೋಕೆ ಕಾರಣ ಏನು ಅಂದ್ರೆ ಹಿಂದಿ ವರ್ಷನ್. ಹೌದು 'ಅನಿಮಲ್' ಹಿಂದಿ ಸೇರಿ ಎಲ್ಲಾ ಭಾಷೆಗಳಲ್ಲಿ ಓಟಿಟಿಗೆ ಬಂದಿದೆ. 'ಸಲಾರ್' ಹಿಂದಿ ಬಿಟ್ಟು ಇತರೆ 4 ಭಾಷೆಗಳಲ್ಲಿ ಮಾತ್ರ ಸ್ಟ್ರೀಮಿಂಗ್ ಆಗುತ್ತಿದೆ. ಇದೇ ಕಾರಣಕ್ಕೆ 'ಸಲಾರ್‌' ವೀವ್ಸ್ ಕಮ್ಮಿ ಆಗಿದೆ.

ಇನ್ನು 'ಸಲಾರ್' ಹಿಂದಿ ವರ್ಷನ್ ಓಟಿಟಿ ಸ್ಟ್ರೀಮಿಂಗ್ ಯಾವಾಗ ಎನ್ನುವುದು ಗೊತ್ತಿಲ್ಲ. ಒಂದು ವೇಳೆ ಬಂದರೆ 'ಅನಿಮಲ್' ದಾಖಲೆ ಮುರಿಯುವ ಸಾಧ್ಯತೆಯಿದೆ. 'ಅನಿಮಲ್' ಸೀಕ್ವೆಲ್ ಮಾಡುವ ಬಗ್ಗೆ ಚರ್ಚೆ ನಡೀತಿದೆ. ಸಂದೀಪ್ ರೆಡ್ಡಿ ವಂಗಾ ಈ ಬಗ್ಗೆ ಆಯೋಚನೆಯಲ್ಲಿದ್ದಾರೆ. ಇನ್ನು 'ಸಲಾರ್' ಚಿತ್ರವನ್ನು 2 ಭಾಗಗಳಾಗಿಯೇ ತೆರೆಗೆ ತರಲಾಗುತ್ತಿದೆ. 'ಸಲಾರ್‌-2 ಶೌರ್ಯಾಂಗ ಪರ್ವಂ' ಹೆಸರಿನಲ್ಲಿ ಸರಣಿಯ ಮುಂದಿನ ಸಿನಿಮಾ ಬರಲಿದೆ.

ಮುಂದಿನ ವರ್ಷವೇ 'ಸಲಾರ್-2' ಸಿನಿಮಾ ತೆರೆಗೆ ತರುವುದಾಗಿ ಹೊಂಬಾಳೆ ಸಂಸ್ಥೆ ಹೇಳಿದೆ. 'ಸಲಾರ್' ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ಶಾರುಖ್ ಖಾನ್ 'ಡಂಕಿ' ಪೈಪೋಟಿ ಕೊಟ್ಟಿತ್ತು. ಹಾಗಾಗಿ ಕೊಂಚಮಟ್ಟಿಗೆ ಚಿತ್ರಕ್ಕೆ ಹಿನ್ನಡೆಯಾಗಿತ್ತು. 'ಉಗ್ರಂ' ರೀಮೆಕ್ ಎನ್ನುವ ಕಾರಣಕ್ಕೆ ಕರ್ನಾಟಕದಲ್ಲೂ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಲಿದೆ.

More from Filmibeat

English summary
Salaar, Animal in most viewed Indian movies on Netflix in 2024 list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X