'ಕಲ್ಕಿ 2898 AD' ಓಟಿಟಿ ರಿಲೀಸ್ ಡೇಟ್ ಫಿಕ್ಸ್!; ಆ ವಿಶೇಷ ದಿನವೇ ಸ್ಟ್ರೀಮಿಂಗ್?
ನಾಗ್ ಅಶ್ವಿನ್ ನಿರ್ದೇಶನದಲ್ಲಿ ಪ್ರಭಾಸ್- ಅಮಿತಾಬ್ ಬಚ್ಚನ್ ನಟನೆಯ 'ಕಲ್ಕಿ 2898 AD' ಸಿನಿಮಾ ಹಿಟ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಕಂಡು ಭರ್ಜರಿ ಸದ್ದು ಮಾಡ್ತಿದೆ. ಈಗಾಗಲೇ ವಿಶ್ವದಾದ್ಯಂತ 900 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಾಗಿ ಹೇಳಲಾಗುತ್ತಿದೆ.
ಜೂನ್ 27ಕ್ಕೆ ತೆರೆಕಂಡ ಸಿನಿಮಾ 2 ವಾರಕ್ಕೆ ಭರ್ಜರಿ ಕಲೆಕ್ಷನ್ ಮಾಡಿದೆ. ಹಿಂದಿ ಬೆಲ್ಟ್‌ನಲ್ಲಿ ಕೂಡ ಸಿನಿಮಾ ಗಳಿಕೆ ಚೆನ್ನಾಗಿದೆ. ಮಹಾಭಾರತ ಹಾಗೂ ಕಲ್ಕಿ ಪುರಾಣಕ್ಕೆ ಲಿಂಕ್ ಮಾಡಿ ನಾಗ್ ಅಶ್ವಿನ್ ಹೇಳಿರುವ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಫಸ್ಟ್ ಹಾಫ್ ನಿರಾಸೆ ಮೂಡಿಸಿದರೂ ಸೆಕೆಂಡ್ ಹಾಫ್ ನೋಡುಗರ ಮನಗೆದ್ದಿದೆ.

ನಿರ್ಮಾಪಕರು 'ಕಲ್ಕಿ 2898 AD' ಸಿನಿಮಾ 900 ಕೋಟಿ ರೂ. ಕಲೆಕ್ಷನ್ ಮಾಡುವುದಾಗಿ ಹೇಳುತ್ತಿದ್ದಾರೆ. ಕೆಲವರು ಇದನ್ನು ನಂಬಲು ಸಿದ್ಧರಿಲ್ಲ. ಆದರೂ ಚಿತ್ರ ಒಳ್ಳೆ ಕಲೆಕ್ಷನ್ ಮಾಡಿರುವುದಂತೂ ಸುಳ್ಳಲ್ಲ. ಇನ್ನು ಎರಡು ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದ್ದು ಸೀಕ್ವೆಲ್ ನೋಡೊಕೆ ಸಿನಿರಸಿಕರು ಕಾತರರಾಗಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಪ್ರಭಾಸ್, ಅಮಿತಾಬ್ ಬಚ್ಚನ್ ಜೊತೆಗೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್, ರಾಜೇಂದ್ರ ಪ್ರಸಾದ್, ದಿಶಾ ಪಟಾನಿ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಹಾಲಿವುಡ್ ಸ್ಟೈಲ್ ಮೇಕಿಂಗ್‌ನಿಂದ ಸಿನಿಮಾ ಗಮನ ಸೆಳೆಯುತ್ತಿದೆ. ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್ ಸಖತ್ ಕಿಕ್ ಕೊಡುತ್ತಿದೆ. ಐಮ್ಯಾಕ್ಸ್ ಹಾಗೂ ತ್ರೀಡಿ ವರ್ಷನ್‌ಗಳಲ್ಲಿ ಕೂಡ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ.
'ಕಲ್ಕಿ 2898 AD' ಸಿನಿಮಾ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿದೆ. ನಿರ್ದೇಶಕ ನಾಗ್ ಅಶ್ವಿನ್ ತಮಗಿಷ್ಟ ಬಂದಂತೆ ಮಹಾಭಾರತವನ್ನು ತಿರುಚುವ ಪ್ರಯತ್ನ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿಬರ್ತಿದೆ. ಅದನ್ನೆಲ್ಲಾ ಮೀರಿ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 'ಸಲಾರ್' ಬಳಿಕ ಪ್ರಭಾಸ್ ನಟನೆಯ ಮತ್ತೊಂದು ಸಿನಿಮಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿಕೊಂಡಿದೆ. ಅಂದಾಜು 500 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು.

ಮೊದಲ ಭಾಗದಲ್ಲಿ ಭೈರವ ಆಗಿ ಪ್ರಭಾಸ್ ಪಾತ್ರ ಚಿಕ್ಕದಾಗಿ ಕಂಡರೂ ಸೀಕ್ವೆಲ್‌ನಲ್ಲಿ ಹೆಚ್ಚು ಅವಕಾಶ ಇರಲಿದೆ. ಈಗಾಗಲೇ ಕ್ಲೈಮ್ಯಾಕ್ಸ್‌ನಲ್ಲಿ ಕರ್ಣನಾಗಿ ಪ್ರಭಾಸ್‌ನ ತೋರಿಸಿ ಕುತೂಹಲ ಹೆಚ್ಚಿಸಲಾಗಿದೆ. ಇನ್ನು ಚಿತ್ರಮಂದಿರಗಳಲ್ಲಿ 'ಕಲ್ಕಿ 2898 AD' ಹವಾ ಕಮ್ಮಿ ಆಗುತ್ತಿದೆ. ಇಂತಹ ಸಮಯದಲ್ಲೇ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಯಾವಾಗ ಎನ್ನುವ ಚರ್ಚೆ ಶುರುವಾಗಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾ ತೆರೆಕಂಡ 45 ದಿನಗಳ ಬಳಿಕ ಓಟಿಟಿ ರಿಲೀಸ್ ಒಪ್ಪಂದವಾಗಿರುತ್ತದೆ.
ದೊಡ್ಡ ಸಿನಿಮಾಗಳೇ 25 ದಿನಕ್ಕೆ ಓಟಿಟಿಗೆ ಬಂದು ಬಿಡುತ್ತಿವೆ. ಇನ್ನು 'ಕಲ್ಕಿ 2898 AD' ಚಿತ್ರದಲ್ಲಿ ಓಟಿಟಿ ರೈಟ್ಸ್ ಅಮೇಜಾನ್ ಪ್ರೈಂ ಹಾಗೂ ನೆಟ್‌ಫ್ಲಿಕ್ಸ್ ಪಾಲಾಗಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ವರ್ಷನ್‌ಗಳು ಪ್ರೈಂ ವೀಡಿಯೋಗೆ ಬರೋದು ಪಕ್ಕಾ ಆಗಿದೆ. ಹಿಂದಿ ವರ್ಷನ್ ಮಾತ್ರ ನೆಟ್‌ಫ್ಲಿಕ್ಸ್‌ಗೆ ಬರುತ್ತದೆ ಎನ್ನಲಾಗ್ತಿದೆ.
ಸ್ವಾತಂತ್ರ ದಿನಾಚರಣೆ ಸಂಭ್ರಮದಲ್ಲಿ ಆಗಸ್ಟ್ 15ಕ್ಕೆ 'ಕಲ್ಕಿ 2898 AD' ಸಿನಿಮಾ ಡಿಜಿಟಲ್ ಸ್ಟ್ರೀಮಿಂಗ್ ಆರಂಭವಾಗುತ್ತದೆ ಎನ್ನಲಾಗ್ತಿದೆ. ಲಾಂಗ್ ವೀಕೆಂಡ್ ಇರುವುದರಿಂದ ಜನ ಕೂಡ ಹೆಚ್ಚು ಸಿನಿಮಾ ವೀಕ್ಷಿಸುತ್ತಾರೆ ಎನ್ನುವ ಲೆಕ್ಕಾಚಾರ ನಡೆದಿದೆ. ಹಾಗಾಗಿ ಅದೇ ದಿನ ಸಿನಿಮಾ ಓಟಿಟಿಗೆ ಬರೋದು ಬಹುತೇಕ ಖಚಿತ ಎನ್ನಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.


Click it and Unblock the Notifications











