'ರಾಧೆ ಶ್ಯಾಮ್' ನೇರವಾಗಿ OTTಯಲ್ಲಿ ರಿಲೀಸ್!

ಕೊರೊನಾ ಹಾವಳಿ ಕಡಿಮೆ ಆಗುತ್ತಿದ್ದ ಹಾಗೆ ಸಾಲು, ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ, ಮಲಯಾಳಂ ಭಾಷೆಯಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿವೆ. ಆದರೆ ಸಿನಿಮಾಗಳಿಗೆ ಸರಿಯಾದ ರಿಲೀಸ್ ದಿನಾಂಕ ಸಿಗದೆ ಒದ್ದಾಡುವ ಪರಿಸ್ಥಿತಿ ಬಂದೊದಗಿದೆ.

Recommended Video

ರಾಧೆ ಶ್ಯಾಮ್ 97 ಕಿಸ್, ಪ್ರಭಾಸ್ ಅಭಿಮಾನಿಗಳು ಶಾಕ್

ಚಿಕ್ಕ ಬಜೆಟ್ ಸಿನಿಮಾಗಳ ಕಥೆ ಒಂದು ಕಡೆ ಆದರೆ, ದೊಡ್ಡ ಬಜೆಟ್ ಚಿತ್ರಗಳ ವ್ಯಥೆ ಮತ್ತೊಂದು ಕಡೆ. ಸದ್ಯಕ್ಕೆ ಕೊರೊನಾ ಹಾವಳಿ ಕೊಂಚ ತಗ್ಗಿದೆ. ಸಿನಿಮಾ ಮಂದಿರಗಳ ಬಾಗಿಲು ತೆರೆದಿದೆ ಎಂದು, ಸಿನಿಮಾ ರಿಲೀಸ್ ಮಾಡಲು ಮುಂದಾದರೆ ಒಂದಕ್ಕಿಂದ ಹೆಚ್ಚು ಸಿನಿಮಾಗಳು ಮುಖಾಮುಖಿ ಆಗುತ್ತಿವೆ. ಅಷ್ಟೊಂದು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿದೆ.

ಆದರೆ ನಟ ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ಸಿನಿಮಾ ನಿರ್ಧಾರ ಬದಲಿಸಿ ಬಿಟ್ಟಿದೆ. ಸಿನಿಮಾವನ್ನು ಥಿಯೇಟರ್‌ನಲ್ಲಿ ರಿಲೀಸ್ ಮಾಡದೆ ಇರಲು ನಿರ್ಧಾರ ಮಾಡಲಾಗಿದೆಯಂತೆ. ಸಿನಿಮಾವನ್ನು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ.

ನೆಟ್‌ ಫ್ಲಿಕ್ಸ್‌ನಿಂದ 'ರಾಧೆ ಶ್ಯಾಮ್' ಚಿತ್ರಕ್ಕೆ 400 ಕೋಟಿ ಆಫರ್!

ನೆಟ್‌ ಫ್ಲಿಕ್ಸ್‌ನಿಂದ 'ರಾಧೆ ಶ್ಯಾಮ್' ಚಿತ್ರಕ್ಕೆ 400 ಕೋಟಿ ಆಫರ್!

ನಟ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ 'ರಾಧೆ ಶ್ಯಾಮ್' ಸಿನಿಮಾಗೆ ದೊಡ್ಡ ಆಫರ್ ಬಂದಿದೆ ಅಂತೆ. ಒಟಿಟಿ ವೇದಿಕೆ ಆದ ನೆಕ್‌ಫ್ಲಿಕ್ಸ್ ವತಿಯಿಂದ 400 ಕೋಟಿ ರೂ.ಆಫರ್ ಬಂದಿದೆಯಂತೆ. ಈ ಸುದ್ದಿ ಟಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ಹಾಗಾಗಿ 'ರಾಧೆ ಶ್ಯಾಮ್' ಚಿತ್ರ ಮಂದಿರದ ಬದಲಿಗೆ ನೇರವಾಗಿ ಒಟಿಟಿಯಲ್ಲಿ ತೆರೆಕಾಣಲಿದೆ ಎನ್ನುವ ವಿಚಾರ ಹರಿದಾಡುತ್ತಿದೆ. ಈ ಚಿತ್ರ ಪ್ಯಾನ್‌ ಇಂಡಿಯಾ ಸಿನಿಮಾ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಎಲ್ಲಾ ಭಾಷೆಗಳಲ್ಲೂ ಸಿನಿಮಾ ಒಟಿಟಿಯಲ್ಲೇ ತೆರೆಕಾಣಲಿದೆಯಂತೆ.

ಜನವರಿ 14 ರಿಲೀಸ್ ಆಗಬೇಕಿದ್ದ 'ರಾಧೆ ಶ್ಯಾಮ್'!

ಜನವರಿ 14 ರಿಲೀಸ್ ಆಗಬೇಕಿದ್ದ 'ರಾಧೆ ಶ್ಯಾಮ್'!

'ಸಾಹೋ' ಸಿನಿಮಾದ ಬಳಿಕ ವರ್ಷಗಳ ಅಂತರದಲ್ಲಿ ರಿಲೀಸ್ ಆಗುತ್ತಿರುವ ನಟ ಪ್ರಭಾಸ್ ಸಿನಿಮಾ ಇದು. ಹಾಗಾಗಿ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ಅಷ್ಟೇ ಅಲ್ಲಾ ಚಿತ್ರದ ಟೀಸರ್, ಪೋಸ್ಟರ್‌ಗಳು 'ರಾಧೆ ಶ್ಯಾಮ್' ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿವೆ. ಜನವರಿ 14ಕ್ಕೆ ಸಿನಿಮಾದ ರಿಲೀಸ್ ದಿನಾಂಕ ನಿಗದಿ ಆಗಿತ್ತು. ಆದರೆ ಕೊರೊನಾ ಕಾರಣಕ್ಕೆ ಎಲ್ಲೆಡೆ ಲಾಕ್‌ಡೌನ್‌ ಜಾರಿ ಆಗಿದ್ದ ಕಾರಣ ಸಿನಿಮಾದ ರಿಲೀಸ್ ಪೊಸ್ಟ್‌ಪೋನ್ ಮಾಡಿತ್ತು ಚಿತ್ರ ತಂಡ. ಚಿತ್ರದ ಮುಂದಿನ ರಿಲೀಸ್ ಯಾವಾಗ ಎಂದು ಕಾಯುತ್ತಿದ್ದ ಪ್ರೇಕ್ಷಕರಿಗೆ, 'ರಾಧೆ ಶ್ಯಾಮ್' ಚಿತ್ರಮಂದಿರಕ್ಕೆ ಬರುವುದಿಲ್ಲ ಎನ್ನುವ ಸುದ್ದಿ ಸಿಕ್ಕಿದೆ. ಒಟಿಟಿಯಲ್ಲೇ ಸಿನಿಮಾ ನೋಡಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

'ರಾಧೆ ಶ್ಯಾಮ್' ಚಿತ್ರಕ್ಕೆ 350 ಕೋಟಿ ಬಜೆಟ್!

'ರಾಧೆ ಶ್ಯಾಮ್' ಚಿತ್ರಕ್ಕೆ 350 ಕೋಟಿ ಬಜೆಟ್!

'ರಾಧೆ ಶ್ಯಾಮ್' ಸಿನಿಮಾ ದೊಡ್ಡ ಬಜೆಟ್‌ನಲ್ಲಿ ತಯಾರಾಗಿದೆ. ಈ ಚಿತ್ರಕ್ಕೆ ದೊಡ್ಡ ಮಟ್ಟದ ಬಂಡವಾಳವನ್ನೂ ಕೂಡ ಹಾಕಲಾಗಿದೆ. ಚಿತ್ರದಲ್ಲಿ ಹೆಚ್ಚಿನ ವಿಎಫ್‌ಎಕ್ಸ್‌ ವರ್ಕ್ ಇದೆ. ಜೊತೆಗೆ ದೊಡ್ಡ, ದೊಡ್ಡ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಹಾಗಾಗಿ ಸಿನಿಮಾದ ಒಟ್ಟು ಬಜೆಟ್ 350 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆದರೆ ಈಗ ಒಟಿಟಿಯಿಂದ 400 ಕೋಟಿ ಆಫರ್ ಬಂದಿದೆ. ಸಿನಿಮಾ ಒಟಿಟಯಲ್ಲಿ ರಿಲೀಸ್ ಆಗುವ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಹೀಗೊಂದು ಚರ್ಚೆ ಸಿನಿಮಾದ ಸುತ್ತಲೂ ಹುಟ್ಟಿಕೊಂಡಿದೆ.

'ಆದಿಪುರುಷ್' ಚಿತ್ರಕ್ಕೆ ದಾರಿ ಬಿಡಬೇಕಾಗಿದೆ 'ರಾಧೆ ಶ್ಯಾಮ್'!

'ಆದಿಪುರುಷ್' ಚಿತ್ರಕ್ಕೆ ದಾರಿ ಬಿಡಬೇಕಾಗಿದೆ 'ರಾಧೆ ಶ್ಯಾಮ್'!

ರಾಧೆ ಶ್ಯಾಮ್ ಸಿನಿಮಾ ಈಗಾಗಲೇ ಎರಡು ಬಾರಿ ರಿಲೀಸ್ ದಿನಾಂಕವನ್ನು ಮುಂದೂಡಿದೆ. ಇನ್ನೂ ಹೆಚ್ಚು ಕಾಲ ಸಿನಿಮಾ ಮುಂದಕ್ಕೆ ಹೋದರೆ, ಪ್ರಭಾಸ್ ಅವರ ಮುಂದಿನ ಸಿನಿಮಾಗೆ ತೊಂದರೆ ಆಗುತ್ತದೆ. ಹಾಗಾಗಿ 'ರಾಧೆ ಶ್ಯಾಮ್' ಚಿತ್ರವನ್ನು ಆದಷ್ಟು ಬೇಗ ರಿಲೀಸ್ ಮಾಡುವ ಅನಿವಾರ್ಯತೆ ಸಿನಿಮಾ ತಂಡದ ಮುಂದೆ ಇದೆ. ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾದ ಶೂಟಿಂಗ್ ಬಹುತೇಕ ಮುಕ್ತಾಯ ಆಗಿದೆ. ಸಿನಿಮಾವನ್ನು ಆಗಸ್ಟ್‌ನಲ್ಲಿ ರಿಲೀಸ್ ಮಾಡಲು ಯೋಜನೆ ರೂಪಿಸಲಾಗಿದೆ. ಈ ಚಿತ್ರದ ಪ್ರಚಾರ ಕಾರ್ಯಗಳು ಆರಂಭ ಆಗಬೇಕು ಅಂದರೆ, 'ರಾಧೆ ಶ್ಯಾಮ್' ತೆರೆ ಕಾಣಬೇಕಾಗಿದೆ.

More from Filmibeat

English summary
Prabhas Starrer Radhe Shyam Likely To Be Release In OTT: 400 Crore Offer From Netflix,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X