'ಸಲಾರ್' ಚಿತ್ರಕ್ಕೆ Ottಯಲ್ಲಿ ಭಾರಿ ಬೇಡಿಕೆ: ಹರಿದು ಬಂತು ನೂರಾರು ಕೋಟಿ ಆಫರ್!
ಕನ್ನಡದ ನಿರ್ದೇಶ ಪ್ರಶಾಂತ್ ನೀಲ್ ಕೆಜಿಎಫ್ 2 ಸಿನಿಮಾದ ಜೊತೆಗೆ ಸಲಾರ್ ಸಿನಿಮಾದ ಕೆಲಸಗಳಲ್ಲೂ ಬ್ಯುಸಿ ಆಗಿದ್ದಾರೆ. ಎರಡು ಸಿನಿಮಾಗಳು ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗಳಾಗಿವೆ. ಹಾಗಾಗಿ ಎರಡು ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ. ಒಂದು ಕಡೆ ಯಶ್ ಇದ್ರೆ, ಮತ್ತೊಂದು ಕಡೆ ಪ್ರಭಾಸ್. ಈ ಸ್ಟಾರ್ ನಟರ ಅಭಿಮಾನಿಗಳಂತೂ ತುದಿಗಾಲಲ್ಲಿ ನಿಂತು ಸಿನಿಮಾ ರಿಲೀಸ್‌ಗಾಗಿ ಕಾಯುತ್ತಿದ್ದಾರೆ.
Recommended Video
ಸದ್ಯ ಕೆಜಿಎಫ್ ಸಿನಿಮಾದ ರಿಲೀಸ್ ದಿನಾಂಕ ಪ್ರಕಟ ಆಗಿದೆ. ಚಿತ್ರತಂಡ ಸದ್ಯದಲ್ಲಿಯೇ ಪ್ರಚಾರ ಕಾರ್ಯಗಳನ್ನು ಮಾಡಿ ಮುಗಿಸಲು ತಯಾರಿ ನಡೆಸಿವೆ. ಈ ಎರಡೂ ಚಿತ್ರಗಳನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಹಾಗಾಗಿ ಎರಡೂ ಚಿತ್ರಗಳ ರಿಲೀಸ್ ದಿನಾಂಕವನ್ನು ಒಂದೆ ದಿನ ಫಿಕ್ಸ್ ಮಾಡಿ ಅಲ್ಲೂ ಟ್ವಿಸ್ಟ್ ಇಟ್ಟಿದೆ ಚಿತ್ರ ತಂಡ.
ಸದ್ಯ 'ಸಲಾರ್' ಸಿನಿಮಾದ ಬಗ್ಗೆ ಹೊಸದೊಂದು ಸುದ್ದಿ ಹಬ್ಬಿದೆ. ಈ ಚಿತ್ರಕ್ಕೆ ottಯಲ್ಲಿ ಬೇಡಿಕೆ ಹೆಚ್ಚಾಗಿದೆಯಂತೆ. ಹಾಗಾಗಿ ಚಿತ್ರ ಖರೀದಿಗೆ ದೊಡ್ಡ ಮೊತ್ತವನ್ನು ಬಿಡ್ ಮಾಡಲಾಗುತ್ತಿದೆಯಂತೆ. ಚಿತ್ರ ಥಿಯೇಟರ್‌ಗೆ ಬರಲಿ, ಬರದೇ ಇರಲಿ ಒಟಿಟಿಯಲ್ಲಿ ಸಿನಿಮಾ ಹಾಕಲು ಒಟಿಟಿ ಸ್ಟ್ರೀಮಿಂಗ್ ಮಾಲೀಕರು ಚಿತ್ರ ತಂಡದ ಹಿಂದೆ ಬಿದ್ದಿದ್ದಾರಂತೆ.

'ಸಲಾರ್' ಚಿತ್ರಕ್ಕೆ 200 ಕೋಟಿ Ott ಆಫರ್!
ಸಲಾರ್ ಸಿನಿಮಾದ OTT ಸ್ಟ್ರೀಮಿಂಗ್ ಹಕ್ಕುಗಳನ್ನು ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ದೊಡ್ಡ ಮಟ್ಟದ ಬೇಡಿಕೆ ಹುಟ್ಟಿಕೊಂಡಿದೆ. ಹಾಗಾಗಿ ಕೆಲವು ಉನ್ನತ OTT ಪೋರ್ಟಲ್‌ಗಳು ದೊಡ್ಡ ಮಟ್ಟದ ಬಜೆಟ್ ಹಿಡಿದು ಆಕ್ಷನ್ ಡ್ರಾಮಾ 'ಸಲಾರ್' ಚಿತ್ರದ ತಯಾರಕರೊಂದಿಗೆ ಮಾತುಕತೆ ಪ್ರಾರಂಭಿಸಿವೆ. ಮೂಲಗಳ ಪ್ರಕಾರ 'ಸಲಾರ್' ಎಲ್ಲಾ ಭಾಷೆಯ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳಿಗಾಗಿ 200 ಕೋಟಿ ರೂಪಾಯಿಗಳನ್ನು ನೀಡಲು ಒಟಿಟಯಿಂದ ಆಫರ್ ಬಂದಿದೆಯಂತೆ. ಆದರೆ ಸಿನಿಮಾ ತಂಡ ಇನ್ನೂ ಈ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ತಿಳಿದು ಬಂದಿದೆ.

ಒಟಿಟಿಯಲ್ಲೇ ನೇರ ರಿಲೀಸ್ ಆಗುತ್ತಾ 'ಸಲಾರ್'!
ಸದ್ಯ 'ಸಲಾರ್' ಚಿತ್ರಕ್ಕೆ ಒಟಿಟಿಯಿಂದ ದೊಡ್ಡ ಆಫರ್ ಬಂದಿದೆ. ಇದು ಸಿನಿಮಾ ರಿಲೀಸ್ ಆಗುವುದಿರಲಿ, ಇನ್ನು ನಿರ್ಮಾಣ ಹಂತದಲ್ಲಿ ಸಿನಿಮಾ ಇದೆ. ಈಗಲೇ ಇಷ್ಟು ದೊಡ್ಡ ಆಫರ್ ಬಂದಿದೆ ಅಂದರೆ. ಸಂಪೂರ್ಣ ಸಿನಿಮಾ ರಿಲೀಸ್ ಆದ ಬಳಿಕ ನೇರವಾಗಿ ಚಿತ್ರವನ್ನು ಒಟಿಟಿಯಲ್ಲಿ ರಿಲೀಸ್ ಮಾಡಲು ಮತ್ತಷ್ಟು ದೊಡ್ಡ ಮಟ್ಟದ ಆಫರ್ ಬರಲಿದೆ ಎನ್ನುವ ನಿರೀಕ್ಷೆ ಇದೆ. ಆದರೆ ಈ ಚಿತ್ರವನ್ನು ಮೊದಲು ಥಿಯೇಟರ್‌ನಲ್ಲಿ ರಿಲೀಸ್ ಮಾಡಬೇಕು ಎನ್ನುವುದು ಚಿತ್ರ ತಂಡದ ಮೊದಲ ಆದ್ಯತೆ ಆಗಿದೆ.

ಪ್ಯಾನ್ ಇಂಡಿಯಾ ಸಿನಿಮಾ 'ಸಲಾರ್'!
'ಸಲಾರ್' ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಳ್ಳಲಿದೆ. ಮತ್ತು ಹಿಂದಿ, ತಮಿಳು, ಮಲಯಾಳಂ ಭಾಷೆಗಳಿಗೆ ನಂತರ ಡಬ್ ಆಗಲಿದೆ. ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಮತ್ತು ಶ್ರುತಿ ಹಾಸನ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿದ್ದಾರೆ. ರವಿ ಬಸ್ರೂರ್ ಅವರ ಸಂಗೀತವಿದೆ. ಸಲಾರ್ ಇನ್ನೂ ನಿರ್ಮಾಣದ ಹಂತದಲ್ಲಿದೆ ಆದರೆ ಈ ಚಿತ್ರಕ್ಕೆ ಈಗಾಗಲೇ OTTಯಿಂದ ದೊಡ್ಡ ಆಫರ್ ಬರ್ತಿದೆ. ಇದನ್ನು ಚಿತ್ರತಂಡ ಸ್ವೀಕರಿಸುವುದಷ್ಟೇಬಾಕಿ ಇದೆ.

ಅಂಡರ್‌ವರ್ಲ್ಡ್ ಆಕ್ಷನ್ ಡ್ರಾಮಾ 'ಸಲಾರ್'
ಪ್ರಭಾಸ್ ಮತ್ತು ಶ್ರುತಿ ಹಾಸನ್ ಅಭಿನಯದ ಸಲಾರ್ ಅಂಡರ್‌ವರ್ಲ್ಡ್ ಆಕ್ಷನ್ ಡ್ರಾಮಾ ಎಂದು ಹೇಳಲಾಗುತ್ತಿದೆ. ಮತ್ತು ಪ್ರಭಾಸ್ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕನ್ನಡದ ಉಗ್ರಂ ಚಿತ್ರದ ರಿಮೇಕ್ ಇದು ಎಂದು ಹೇಳಲಾಗುತ್ತಿದೆ. ಕೆಜಿಎಫ್ 1 ಮತ್ತು ಕೆಜಿಎಫ್ 2 ನಲ್ಲಿ ಕೆಲಸ ಮಾಡಿದ್ದ ಛಾಯಾಗ್ರಾಹಕ ಭುವನ್ ಗೌಡ ಅವರೇ 'ಸಲಾರ್'ನಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಚಿತ್ರವು 2022 ರ ಏಪ್ರಿಲ್ 14 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.


Click it and Unblock the Notifications











