For Quick Alerts
  ALLOW NOTIFICATIONS  
  For Daily Alerts

  ಕಾಫಿ ವಿತ್ ಕರಣ್ ಶೋನಲ್ಲಿ ತುಂಬು ಗರ್ಭಿಣಿ ಸೋನಮ್ ಕಪೂರ್

  |

  ಬಾಲಿವುಡ್‌ ನಟಿ ಸೋನಂ ಕಪೂರ್ ತಾಯಿ ಆಗಲಿದ್ದಾರೆ. ಈಗವರು ತುಂಬು ಗರ್ಭಿಣಿ. ಇದೇ ಕಾರಣದಿಂದ ಸಿನಿಮಾ ಮಾತ್ರವೇ ಅಲ್ಲದೆ ಎಲ್ಲ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರ ಉಳಿದಿದ್ದಾರೆ. ಆದರೆ ಕಾಫಿ ವಿತ್ ಕರಣ್ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

  ಕಾಫಿ ವಿತ್ ಕರಣ್ ಸೀಸನ್ 7 ಪ್ರಸಾರವಾಗುತ್ತಿದ್ದು ಈ ಶೋನ ಐದನೇ ಎಪಿಸೋಡ್‌ನಲ್ಲಿ ಸೋನಂ ಕಪೂರ್ ಅತಿಥಿಯಾಗಿ ಬಂದಿದ್ದಾರೆ. ಅವರೊಟ್ಟಿಗೆ ಅವರ ಸಹೋದರ ಅರ್ಜುನ್ ಕಪೂರ್ ಸಹ ಶೋಗೆ ಆಗಮಿಸಿದ್ದಾರೆ.

  ಸೋನಂ ಕಪೂರ್ ಹಾಗೂ ಅರ್ಜುನ್ ಕಪೂರ್ ಅವರುಗಳು ಒಟ್ಟಿಗೆ ಕಾಫಿ ವಿತ್ ಕರಣ್ ಶೋಗೆ ಆಗಮಿಸಿರುವ ಎಪಿಸೋಡ್‌ನ ಟ್ರೈಲರ್ ಇದೀಗ ಬಿಡುಗಡೆ ಆಗಿದ್ದು, ಕಪ್ಪು ಬಣ್ಣದ ಗೌನ್ ರೀತಿಯ ಬಟ್ಟೆ ತೊಟ್ಟು ಶೋನಲ್ಲಿ ಭಾಗವಹಿಸಿದ್ದಾರೆ ಸೋನಂ ಕಪೂರ್.

  ಎಪಿಸೋಡ್‌ನ ಟ್ರೈಲರ್ ಈಗ ಬಿಡುಗಡೆ ಆಗಿದ್ದು, ಟ್ರೈಲರ್‌ನಲ್ಲಿ ಕಾಣುತ್ತಿರುವಂತೆ ಶೋನಲ್ಲಿ ಮಸ್ತ್ ಮಜಾ ಮಾಡಿದ್ದಾರೆ ಸೋನಂ ಕಪೂರ್. ಅಲ್ಲದೆ ತಾಯಿಯಾಗಲಿರುವ ಸೋನಂ ಎದುರು ಕುಳಿತಿರುವ ಕಾರಣದಿಂದಲೋ ಏನೋ ಕರಣ್ ಜೋಹರ್ ಸಹ ಯಾವುದೇ 'ವಲ್ಗರ್' ಪ್ರಶ್ನೆಗಳನ್ನು ಸಹ ಕೇಳಿಲ್ಲ ಎನಿಸುತ್ತದೆ.

  ಶೋನಲ್ಲಿ ಸೋನಂ ಕಪೂರ್‌ರ ಅಣ್ಣ (ದೊಡ್ಡಪ್ಪನ ಮನ) ಅರ್ಜುನ್ ಕಪೂರ್ ಸಹ ಇದ್ದಾರೆ. ಅವರು ಸಹ ಹಲವು ವಿಷಯಗಳ ಬಗ್ಗೆ ಶೋನಲ್ಲಿ ಮಾತನಾಡಿದ್ದಾರೆ. ಅಲ್ಲದೆ ಸೋನಂ ಕಪೂರ್, ತಮ್ಮ ಅಣ್ಣ ಅರ್ಜುನ್ ಅನ್ನು ಶೋನಲ್ಲಿ ಚೆನ್ನಾಗಿ ಟ್ರೋಲ್ ಮಾಡಿದ್ದಾರೆ. ಆದರೆ ಕೊನೆಯಲ್ಲಿ ತಾವೇ ಟ್ರೋಲ್‌ ಆಗಿಬಿಟ್ಟಿದ್ದಾರೆ.

  Pregnent Sonam Kapoor Appeared In Koffee With Karan Show

  ಶೋ ನಡುವೆ ಉತ್ತಮ ಹೀರೋಗಳು ಅಥವಾ ಬಾಲಿವುಡ್ ಪರ್ಸನಾಲಿಟಿಗಳ ಬಗ್ಗೆ ಮಾತು ಬಂದಾಗ, ರಣ್ಬೀರ್ ಕಪೂರ್ ಅತ್ಯುತ್ತಮ ನಟ, ಅತ್ಯುತ್ತಮ ಪರ್ಸನಾಲಿಟಿ ಹೊಂದಿದ್ದಾರೆ. ಅವರು ಇತ್ತೀಚಿಗಿನ ತಮ್ಮ ಹೊಸ ಸಿನಿಮಾದ ಪ್ರಚಾರದಲ್ಲಿ ಭಾಗವಹಿಸುತ್ತಿರುವುದನ್ನು ನಾನು ನೋಡುತ್ತಿದ್ದೇನೆ ಎಂದು ಸೋನಂ ಕಪೂರ್ ಹೇಳಿದರು.

  ಇದಕ್ಕೆ ಕರಣ್ ಜೋಹರ್, ರಣ್ಬೀರ್ ಕಪೂರ್ ತಮ್ಮ ಯಾವ ಸಿನಿಮಾಕ್ಕಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದರು ಅದಕ್ಕೆ ಸೋನಂ ಕಪೂರ್ 'ಶಿವಾ ದಿ ನಂಬರ್ 1' ತಾನೆ ಎಂದರು. ಅಸಲಿಗೆ ರಣ್ಬೀರ್ ಕಪೂರ್ ಪ್ರಚಾರ ಮಾಡುತ್ತಿರುವುದು 'ಬ್ರಹ್ಮಾಸ್ತ್ರ' ಸಿನಿಮಾಕ್ಕಾಗಿ ಆದರೆ ಅದನ್ನು 'ಶಿವಾ ದಿ ನಂಬರ್ 1' ಎಂದುಕೊಂಡಿದ್ದಾರೆ ಸೋನಂ.

  2018 ರಲ್ಲಿ ನಟಿ ಸೋನಂ ಕಪೂರ್ ಉದ್ಯಮಿ ಆನಂದ್ ಅಹುಜಾರನ್ನು ವಿವಾಹವಾದರು. ಕೋವಿಡ್ ಸಮಯದಲ್ಲಿ ಲಂಡನ್‌ನಲ್ಲಿ ಪತಿಯೊಟ್ಟಿಗೆ ನೆಲೆಸಿದ್ದ ಸೋನಂ ಅಲ್ಲಿ ಬಹಳ ಕಷ್ಟದ ಸಮಯವನ್ನು ಅನುಭವಿಸಿದ್ದಾಗಿ ಹೇಳಿಕೊಂಡಿದ್ದರು. ಇದೇ ವರ್ಷ ಮಾರ್ಚ್ ತಿಂಗಳಲ್ಲಿ ಸೋನಂ ಕಪೂರ್, ತಾವು ತಾಯಿ ಆಗುತ್ತಿರುವ ವಿಷಯ ಹಂಚಿಕೊಂಡಿದ್ದರು.

  ಸೋನಂ ಕಪೂರ್ ಅವರ ತಂದೆ ಅನಿಲ್ ಕಪೂರ್ ಸಹ ದೊಡ್ಡ ಸ್ಟಾರ್ ನಟ ಆಗಿದ್ದು, ಅವರೂ ಸಹ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದಾರೆ. ಅವರು ನಟ ವರುಣ್ ಧವನ್ ಜೊತೆಗೆ ಶೋನಲ್ಲಿ ಭಾಗವಹಿಸಿದ್ದು ಆ ಎಪಿಸೋಡ್ ಮುಂದಿನ ದಿನಗಳಲ್ಲಿ ಪ್ರಸಾರವಾಗಲಿದೆ.

  Recommended Video

  Public Opinion about BiggBoss OTT Kannada ಜನ ಹೇಳ್ಳಿದು ಏನು ..? | Filmibeat Kannada *Biggboss
  English summary
  Pregnent Sonam Kapoor appeared in Koffee with Karan show with her brother Arjun Kapoor. She will deliver baby soon.
  Tuesday, August 9, 2022, 14:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X