Citadel Trailer: ಹಸಿಬಿಸಿ ದೃಶ್ಯಗಳಲ್ಲಿ ಬಿಸಿಯೇರಿಸಿದ ಪ್ರಿಯಾಂಕ : ಎಲ್ಲಿ, ಯಾವಾಗ ಈ ಸೀರಿಸ್ ನೊಡ್ಬೋದು?
ಬಹುನಿರೀಕ್ಷಿತ ಹಾಲಿವುಡ್ ವೆಬ್ ಸೀರಿಸ್ 'ಸಿಟಾಡೆಲ್' ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಹೊಸ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಗ್ಲೋಬಲ್ ಸ್ಟಾರ್ ಪ್ರಿಯಾಂಕ ಚೋಪ್ರಾ ಜಬರ್ದಸ್ತ್ ಆಕ್ಷನ್ ಸ್ವೀಕ್ವೆನ್ಸ್‌ಗಳಲ್ಲಿ ಅಬ್ಬರಿಸಿದ್ದು ಹಸಿಬಿಸಿ ದೃಶ್ಯಗಳಲ್ಲೂ ದರ್ಶನ ಕೊಟ್ಟು ಕಮಾಲ್ ಮಾಡಿದ್ದಾರೆ. ಭಾರತದ 5 ಭಾಷೆಗಳು ಸೇರಿದಂತೆ ಇಂಗ್ಲೀಷ್‌ನಲ್ಲಿ 'ಸಿಟಾಡೆಲ್' ವೆಬ್‌ಸೀರಿಸ್ ಸ್ಟ್ರೀಮಿಂಗ್ ಆಗಲಿದೆ.
ಜೋಶ್ ಅಫೆಲ್ಬ್ಯಾಮ್ ಹಾಗೂ ಬ್ರ್ಯಾನ್ ಓಹ್ ಆಕ್ಷನ್ ಕಟ್ ಹೇಳಿದ್ದು, ಅಮೆಜಾನ್ ಪ್ರೈಂನಲ್ಲಿ ಏಪ್ರಿಲ್ 28ರಂದು ವೀಕ್ಷಣೆಗೆ ಸಿಗಲಿದೆ. 'ಸಿಟಾಡಲ್' ಹೆಸರಿನ ಭದ್ರತಾ ಸಂಸ್ಥೆಯ ಮಾಸನ್ ಕಾನೆ (ರಿಚರ್ಡ್ ಮ್ಯಾಡೆನ್), ನಾದಿಯಾ ಶಾ (ಪ್ರಿಯಾಂಕ ಚೋಪ್ರಾ ಜೋನಸ್) ಜಗತ್ತಿನ ಟಾಪ್ ಗೂಢಚಾರರಾಗಿರುತ್ತಾರೆ. ಇವರಿಬ್ಬರ ಹಳೇ ನೆನಪುಗಳು ಮರೆತು ಹೋಗಿದ್ದು ನಂತರ ಮಾಸನ್, ನಾದಿಯಾ ಏನು ಮಾಡುತ್ತಿರುತ್ತಾರೆ ಎನ್ನುವುದರ ಬಗ್ಗೆ ಇಡೀ ಪ್ರಪಂಚ ನೋಡುತ್ತಾ ಇರುತ್ತದೆ. ಹಳೇ ನೆನಪುಗಳನ್ನು ಮರೆತು ಗೂಢಾಚಾರಿಗಳು ಏನು ಮಾಡಿದ್ರು? ಅವರಿಗೆ ಎದುರಾದ ಮಿಷನ್‌ನ ಹೇಗೆ ಗೆದ್ದು ತೋರಿಸಿದರು ಅನ್ನದೇ ಸೀರಿಸ್ ಕಥೆ.

ಅವೆಂಜರ್ಸ್, ಕ್ಯಾಪ್ಟನ್ ಅಮೆರಿಕ ಖ್ಯಾತಿಯ ನಿರ್ದೇಶಕರಾದ ರುಸ್ಸೋ ಬ್ರದರ್ಸ್ 'ಸಿಟಾಡೆಲ್' ವೆಬ್ ಸೀರಿಸ್ ನಿರ್ಮಾಣ ಮಾಡಿದ್ದಾರೆ. ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ಪ್ರಿಯಾಂಕ ಚೋಪ್ರಾ ಜಬರ್ದಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಟಂಟ್ಸ್ ವೇಳೆ ಕಾಎಯ ಬಾಡಿ ಲಾಂಗ್ವೇಜ್ ಸಖತ್ತಾಗಿದೆ. ಪ್ರಿಯಾಂಕ ಅಭಿಮಾನಿಗಳಂತೂ ಈ ವೆಬ್ ಸೀರಿಸ್ ಮಿಸ್ ಮಾಡಿಕೊಳ್ಳುವ ಛಾನ್ಸೇ ಇಲ್ಲ. ಗೂಢಚಾರಿಣಿಯಾಗಿ ಸಿಕ್ಕಾಪಟ್ಟೆ ಹಾಟ್ ಆಗಿಯೂ ಪಿಗ್ಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸಿದ್ದಾರೆ.
ಬೆಡ್‌ರೂಮ್ ಸೀನ್‌ಗಳಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಪ್ರಿಯಾಂಕ ನಟಿಸಿರೋದು ಟ್ರೈಲರ್‌ನಲ್ಲೇ ಗೊತ್ತಾಗುತ್ತಿದೆ. ಇನ್ನು ರಿಚರ್ಡ್ ಮ್ಯಾಡೆನ್ ಹಾಗೂ ಪಿಗ್ಗಿ ಕೆಮೆಸ್ಟ್ರಿ ಕೂಡ ವರ್ಕೌಟ್ ಆಗಿರುವಂತೆ ಕಾಣಿಸುತ್ತಿದೆ. ಇಬ್ಬರು ಗನ್ ಹಿಡ್ದು 6 ಭಾಷೆಗಳಲ್ಲಿ 'ಸಿಟಾಡೆಲ್' ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಕನ್ನಡಕ್ಕೂ ಡಬ್ ಆಗಿ ಈ ಸ್ಪೈ ಥ್ರಿಲ್ಲರ್ ವೆಬ್ ಸೀರಿಸ್ ಅಮೇಜಾನ್ ಪ್ರೈಂನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈಗಾಗಲೇ ಕನ್ನಡ ಟ್ರೈಲರ್ ಕೂಡ ರಿಲೀಸ್ ಆಗಿದೆ.

ಸ್ಟೇನ್‌ಲೇ ಟಸಿ, ಲೆಸ್ಲಿ ಮನ್ವಿಲೇ, ಓಸಿ ಈಖಿಲೆ, ಅಶುಲಿಗೇ ಕಮ್ಮಿನ್ಸ್, ರೋಲೆಂಡ್ ಮೊಲೆರ್ 'ಸಿಟಾಡೆಲ್' ವೆಬ್ ಸೀರಿಸ್ ಪಾತ್ರವರ್ಗದಲ್ಲಿದ್ದಾರೆ. 6 ಎಪಿಸೋಡ್‌ಗಳು ಏಪ್ರಿಲ್ 28ರಿಂದ ಸ್ಟ್ರೀಮಿಂಗ್ ಆಗಲು ಪ್ರಾರಂಭವಾಗಲಿಗೆ. ಮೊದಲಿಗೆ 2 ಎಪಿಸೋಡ್‌ಗಳನ್ನು ವೀಕ್ಷಕರು ನೋಡಬಹುದು. ಕಳೆದ ವರ್ಷ ಜೂನ್‌ನಲ್ಲಿ ಶೂಟಿಂಗ್ ಕಂಪ್ಲೀಟ್ ಆಗಿತ್ತು. ಸದ್ಯ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೀತಿದೆ. ಈ ಸೈನ್ಸ್ ಫಿಕ್ಷನ್ ಆಕ್ಷನ್ ಥ್ರಿಲ್ಲರ್ ವೆಬ್ ಸರಣಿಯಲ್ಲಿ ಭಾವನಾತ್ಮಕ ಅಂಶಗಳನ್ನು ಬೆರೆಸಲಾಗಿದೆ.
ಇದೇ 'ಸಿಟಾಡೆಲ್' ವೆಬ್ ಸೀರಿಸ್ ಭಾರತದಲ್ಲೂ ನಿರ್ಮಾಣವಾಗುತ್ತಿದೆ. ವರುಣ್ ಧವನ್ ಹಾಗೂ ಸಮಂತಾ ಲೀಡ್ ರೋಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ಕೂಡ 5 ಭಾಷೆಗಳಲ್ಲಿ ಅಮೇಜಾನ್‌ಗೆ ತರಲಾಗ್ತಿದೆ. ಸದ್ಯ ರಿಲೀಸ್ ಆಗಿರುವ 'ಸಿಟಾಡೆಲ್' ಸಖತ್ ಸದ್ದು ಮಾಡ್ತಿದ್ದು ಕುತೂಹಲ ಹೆಚ್ಚಿಸಿದೆ.


Click it and Unblock the Notifications











