ಪಿಆರ್‌ಕೆ ಪ್ರೊಡಕ್ಷನ್‌ನ ಹೊಸ ಸಿನಿಮಾ 'ಒನ್ ಕಟ್ ಟು ಕಟ್' ಟ್ರೇಲರ್ ಬಿಡುಗಡೆ

ಪುನೀತ್ ರಾಜ್‌ಕುಮಾರ್ ಅವರ ಮಹತ್ವಾಂಕಾಂಕ್ಷೆಯ ಪಿಆರ್‌ಕೆ ಪ್ರೊಡಕ್ಷನ್‌ನಿಂದ ಬಿಡುಗಡೆ ಆಗುತ್ತಿರುವ ಹೊಸ ಸಿನಿಮಾ 'ಒನ್ ಕಟ್ ಟು ಕಟ್' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ.

ದಾನಿಶ್ ಸೇಠ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಒನ್ ಕಟ್ ಟು ಕಟ್' ಸಿನಿಮಾ ಕೆಲವೇ ದಿನಗಳಲ್ಲಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದ್ದು. ಅಮೆಜಾನ್ ಪ್ರೈಂನವರೇ ಇಂದು ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

'ಒನ್ ಕಟ್ ಟು ಕಟ್' ಹಾಸ್ಯ ಪ್ರಧಾನ ಸಿನಿಮಾ ಆಗಿದ್ದು, ಶಾಲೆಯೊಂದರಲ್ಲಿ ನಡೆವ ಒಂದು ದಿನದ ಕತೆಯನ್ನು ಸಿನಿಮಾ ಒಳಗೊಂಡಿರಲಿದೆ. ಸಿನಿಮಾದ ಟ್ರೇಲರ್‌ನಲ್ಲಿ ಸಿನಿಮಾ ಬಗ್ಗೆ ಕೆಲವು ಗುಟ್ಟುಗಳ್ಳನ್ನು ಬಿಟ್ಟುಕೊಡಲಾಗಿದ್ದು, ಸಿನಿಮಾದ ಬಗ್ಗೆ ಕುತೂಹಲ ಕೆರಳಿಸಿದೆ.

PRK Productions New Movie One Cut Two Cut Trailer Released

ಸಿನಿಮಾದಲ್ಲಿ ದಾನಿಶ್ ಸೇಠ್ ಕಲಾ ಶಿಕ್ಷಕನ ಪಾತ್ರದಲ್ಲಿ ನಟಿಸಿದ್ದಾರೆ. ಬ್ಯಾಟರಾಯನಪುರ ಶಾಲೆಯೊಂದನ್ನು ಕೆಲವು ದುಷ್ಕರ್ಮಿಗಳು ತಮ್ಮ ಹತೋಟಿಗೆ ತೆಗೆದುಕೊಂಡಾಗ ಶಾಲೆಯಲ್ಲಿ ಏನು ನಡೆಯುತ್ತದೆ. ಆ ಪರಿಸ್ಥಿತಿಯಿಂದ ಮಕ್ಕಳು, ಶಾಲಾ ಸಿಬ್ಬಂದಿ ಹೇಗೆ ಪಾರಾಗುತ್ತಾರೆ ಎಂಬುದು ಕತೆಯ ಸಾರಾಂಶ.

ಟ್ರೇಲರ್ ನೋಡಿದರೆ ಇದು ಬ್ರೇನ್‌ಲೆಸ್ ಕಾಮಿಡಿ ಮಾದರಿಯ ಸಿನಿಮಾ ಎಂಬುದು ಗೊತ್ತಾಗುತ್ತಿದೆ. 'ಮನಿ ಹೈಸ್ಟ್‌' ವೆಬ್ ಸರಣಿಯಲ್ಲಿ ದರೋಡೆಕೋರರು ಧರಿಸುವ ಉಡುಗೆಗಳನ್ನು ಧರಿಸಿ ಪ್ರಕಾಶ್ ಬೆಳವಾಡಿ ಹಾಗೂ ತಂಡ ಶಾಲೆಯನ್ನು ತಮ್ಮ ಸುಪರ್ಧಿಗೆ ತೆಗೆದುಕೊಂಡಿದೆ. ಅಪಹರಣಕಾರರು ಹಾಗೂ ಮತ್ತೊಬ್ಬರ ನಡುವೆ ಗೋಪಿ ಪಾತ್ರಧಾರಿ ದಾನಿಶ್ ಸೇಠ್ ಮಧ್ಯವರ್ತಿಯಾಗಿದ್ದಾರೆ.

ದಾನಿಶ್ ಸೇಠ್‌ ಹಲವು ಪಾತ್ರಗಳನ್ನು ಸೃಷ್ಟಿಸುವಲ್ಲಿ ಆ ಪಾತ್ರಗಳಲ್ಲಿ ತಾವೇ ನಟಿಸುವಲ್ಲಿ ನಿಸ್ಸೀಮರು. ದಾನಿಶ್ ಸೇಠ್ ಸೃಷ್ಟಿಸುವ ಪಾತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ದಾನಿಶ್ ಸೃಷ್ಟಿಸಿರುವ ಪಾತ್ರಗಳಲ್ಲಿ ಒಂದು 'ಗೋಪಿ'. ಅದೇ ಗೋಪಿ ಪಾತ್ರಧಾರಿ ಈ ಸಿನಿಮಾದ ನಾಯಕ.

'ಒನ್ ಕಟ್ ಟು ಕಟ್' ಸಿನಿಮಾವನ್ನು ವಂಶಿಧರ ಭೋಗರಾಜು ನಿರ್ದೇಶನ ಮಾಡಿದ್ದಾರೆ. ಸಿನಿಮಾ ನಿರ್ಮಾಣ ಮಾಡಿರುವುದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ ಎ ತಲ್ವಾರ್. ಸಿನಿಮಾವು ಅಮೆಜಾನ್ ಪ್ರೈಂನಲ್ಲಿ ಫೆಬ್ರವರಿ 3ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಗೋಪಿಯಾಗಿ ದಾನಿಶ್, ದರೋಡೆಕೋರನಾಗಿ ಪ್ರಕಾಶ್ ಬೆಳವಾಡಿ, ಯೂಟ್ಯೂಬರ್ ವಿನೀತ್ ಬೀಪ್ ಕುಮಾರ್, ನಟಿ ಸಂಯುಕ್ತಾ ಹೊರನಾಡು, ಕೆಜಿಎಫ್ ಸಂಪತ್ ಇನ್ನೂ ಕೆಲವರು ನಟಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್‌ನಲ್ಲಿ ದಾನಿಶ್ ಸೇಠ್ ನಟಿಸುತ್ತಿರುವ ಎರಡನೇ ಸಿನಿಮಾ ಇದು. ಈ ಮೊದಲು ಪಿಆರ್‌ಕೆ ಪ್ರೊಡಕ್ಷನ್‌ನಿಂದಲೇ ಹೊರಬಂದಿದ್ದ 'ಫ್ರೆಂಚ್ ಬಿರಿಯಾನಿ' ಸಿನಿಮಾದಲ್ಲಿ ದಾನಿಶ್ ಸೇಠ್ ನಟಿಸಿದ್ದರು. ಪನ್ನಗಾಭರಣ ನಿರ್ದೇಶನ ಮಾಡಿದ್ದ ಆ ಸಿನಿಮಾ ಸಹ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿ ಹಿಟ್ ಆಗಿತ್ತು.

ಪಿಆರ್‌ಕೆ ಪ್ರೊಡಕ್ಷನ್‌ ಹೌಸ್‌ನಿಂದ ಇನ್ನೂ ಎರಡು ಸಿನಿಮಾಗಳು ಅತಿ ಶೀಘ್ರದಲ್ಲಿ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. 'ಒನ್‌ ಕಟ್ ಟು ಕಟ್' ಸಿನಿಮಾದ ಬಳಿಕ ಲಿಖಿತ್ ಶೆಟ್ಟಿ, ಅಮೃತಾ ಐಯ್ಯಂಗಾರ್, ರಂಘಾಯಣ ರಘು ನಟಿಸಿರುವ 'ಫ್ಯಾಮಿಲಿ ಪ್ಯಾಕ್' ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ಅರ್ಜುನ್ ಕುಮಾರ್ ಎಸ್ ನಿರ್ದೇಶನ ಮಾಡಿದ್ದಾರೆ. ಬಳಿಕ 'ಮ್ಯಾನ್ ಆಫ್‌ ದಿ ಮ್ಯಾಚ್' ಸಿನಿಮಾ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು 'ರಾಮಾ ರಾಮಾ ರೇ' ಖ್ಯಾತಿಯ ಸತ್ಯ ನಿರ್ದೇಶನ ಮಾಡಿದ್ದಾರೆ. ಈ ಮೂರೂ ಸಿನಿಮಾಗಳಗ ಬಳಿಕ ಪುನೀತ್‌ರ ಮಹಾತ್ವಾಕಾಂಕ್ಷೆಯ ಟ್ರಾವೆಲ್ ಸಿನಿಮಾ 'ಗಂಧದ ಗುಡಿ' ಬಿಡುಗಡೆ ಆಗಲಿದೆ.

More from Filmibeat

English summary
Puneeth Rajkumar's PRK production's new movie One Cut Two Cut trailer released on YouTube. Movie will release on Amazon Prime on February 03.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X