For Quick Alerts
  ALLOW NOTIFICATIONS  
  For Daily Alerts

  ಅಪ್ಪು ಮೆಚ್ಚಿದ್ದ 'ಮ್ಯಾನ್‌ ಆಫ್‌ ದಿ ಮ್ಯಾಚ್‌' ಸಿನಿಮಾ ಮೇ 5 ರಂದು ಬಿಡುಗಡೆ

  |

  ಪುನೀತ್ ರಾಜ್‌ಕುಮಾರ್ ಒಡೆತನದ ಪಿಆರ್‌ಕೆ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಕನ್ನಡ ಸಿನಿಮಾ 'ಮ್ಯಾನ್ ಆಫ್‌ ದಿ ಮ್ಯಾಚ್' ಮೇ 5 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

  'ರಾಮಾ ರಾಮಾ ರೇ', 'ಒಂದಲ್ಲ-ಎರಡಲ್ಲ' ಅಂಥಹಾ ಗುಣಮಟ್ಟದ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಸತ್ಯಪ್ರಕಾಶ್ ನಿರ್ದೇಶಿಸಿರುವ ಈ ಸಿನಿಮಾ ಅಮೆಜಾನ್ ಮೂಲಕ ಏಕಕಾಲಕ್ಕೆ 240 ದೇಶಗಳಲ್ಲಿ ಬಿಡುಗಡೆ ಆಗಲಿದೆ.

  'ರಾಮಾ ರಾಮಾ ರೇ', 'ಒಂದಲ್ಲ ಎರಡಲ್ಲ' ಮೂಲಕ ಗಂಭೀರ, ಭಾವುಕ ಸಿನಿಮಾಗಳನ್ನು ಮಾಡಿದ್ದ ಸತ್ಯಪ್ರಕಾಶ್ ಮೊದಲ ಬಾರಿಗೆ ಹಾಸ್ಯದ ಮೂಲಕ ಸಂದೇಶವೊಂದನ್ನು ಹೊತ್ತು ತಂದಿದ್ದಾರೆ. ಸಿನಿಮಾದಲ್ಲಿ ನಟರಾಜ್‌ ಎಸ್‌ ಭಟ್‌, ಧರ್ಮಣ್ಣ ಕಡೂರು, ವೀಣಾ ಸುಂದರ್, ಅಥರ್ವ ಪ್ರಕಾಶ್ ಮತ್ತು ವಾಸುಕಿ ವೈಭವ್‌ ಮುಖ್ಯ ಪಾತ್ರದಲ್ಲಿದ್ದಾರೆ.

  ಸಿನಿಮಾದ ಮುಖ್ಯ ಪಾತ್ರವು ಸಿನಿಮಾ ನಿರ್ದೇಶಕನಾಗಿದ್ದು, ಈ ಪಾತ್ರದಲ್ಲಿ ನಟರಾಜ್‌ ಎಸ್‌ ಭಟ್ ನಟಿಸಿದ್ದಾರೆ. ತನ್ನ ಮುಂಬರುವ ಸಿನಿಮಾ 'ಮ್ಯಾನ್‌ ಆಫ್‌ ದಿ ಮ್ಯಾಚ್‌'ಗೆ ನಿರ್ದೇಶಕ ಆಡಿಷನ್ ನಡೆಸುತ್ತಿರುತ್ತಾನೆ. ಆಡಿಷನ್ ನಡೆಯುವ ಪ್ರಕ್ರಿಯೆಯಲ್ಲಿ ನಡೆಯುವ ಘಟನೆಗಳು ನಗೆ ಉಕ್ಕಿಸುತ್ತವೆ. ಜೊತೆಗೆ ಸಮಸ್ಯೆಯೊಂದರ ಚರ್ಚೆಯೂ ಸಿನಿಮಾದಲ್ಲಿದೆ.

  ಪುನೀತ್ ರಾಜ್‌ಕುಮಾರ್ ಅವರು ಸಿನಿಮಾದ ಕತೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಸತ್ಯಪ್ರಕಾಶ್‌ರ ಈ ಹಿಂದಿನ ಸಿನಿಮಾಗಳನ್ನು ಮೆಚ್ಚಿ ಅವರಿಗೆ ತಮ್ಮ ಪ್ರೊಡಕ್ಷನ್‌ನಿಂದ ಸಿನಿಮಾ ಮಾಡುವ ಅವಕಾಶ ನೀಡಿದ್ದರು.

  ಅಮೆಜಾನ್ ಪ್ರೈಂನಲ್ಲಿ ನೇರವಾಗಿ ಬಿಡುಗಡೆ ಆಗುತ್ತಿರುವ ಪಿಆರ್‌ಕೆ ಪ್ರೊಡಕ್ಷನ್‌ನ ಐದನೇ ಸಿನಿಮಾ 'ಮ್ಯಾನ್ ಆಫ್‌ ದಿ ಮ್ಯಾಚ್' ಆಗಿದೆ. ಪಿಆರ್‌ಕೆ ಪ್ರೊಡಕ್ಷನ್‌ನಿಂದ ನಿರ್ಮಾಣವಾದ 'ಕವಲುದಾರಿ', 'ಮಾಯಾಬಜಾರ್ 2016' ಹೊರತುಪಡಿಸಿ ಆ ನಂತರ ಬಿಡುಗಡೆ ಆದ 'ಲಾ', 'ಫ್ರೆಂಚ್ ಬಿರಿಯಾನಿ', 'ಒನ್ ಕಟ್ ಟು ಕಟ್', 'ಫ್ಯಾಮಿಲಿ ಪ್ಯಾಕ್' ಸಿನಿಮಾಗಳು ನೇರವಾಗಿ ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗಿ ಹಿಟ್ ಎನಿಸಿಕೊಂಡಿವೆ.

  ಪ್ರಸ್ತುತ ಪಿಆರ್‌ಕೆ ಪ್ರೊಡಕ್ಷನ್‌ನ ಇನ್ನೂ ಮೂರು ಸಿನಿಮಾಗಳು ಬಿಡುಗಡೆಗೆ ತಯಾರಾಗುತ್ತಿವೆ. ಪುನೀತ್ ಅವರ ಕನಸಿನ ಪ್ರಾಜೆಕ್ಟ್ 'ಗಂಧದ ಗುಡಿ' ಇನ್ನೇನು ಬಿಡುಗಡೆ ಆಗಬೇಕಿದೆ. ಇದು ಪಿಆರ್‌ಕೆ ಪ್ರೊಡಕ್ಷನ್‌ ಮೂಲಕವೇ ನಿರ್ಮಾಣಗೊಂಡಿದೆ. 'ಓ 2' ಸಿನಿಮಾ ಸಹ ಬಿಡುಗಡೆ ಆಗಬೇಕಿದೆ. ಕೆಲವು ದಿನಗಳ ಹಿಂದೆ 'ಆಚಾರ್ ಆಂಡ್ ಕೊ' ಹೆಸರಿನ ಹೊಸ ಸಿನಿಮಾ ಒಂದು ಸೆಟ್ಟೇರಿದ್ದು, ಬಹುತೇಕ ಮಹಿಳೆಯರೇ ಸೇರಿ ಮಾಡುತ್ತಿರುವ ಸಿನಿಮಾ ಇದಾಗಿದೆ.

  English summary
  PRK production new movie Man Of The Match directed by Satyaprakash releasing on May 05 on Amazon prime video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X